ಶಾಲೆಯಲ್ಲಿ ವಿದ್ಯಾರ್ಥಿಗಳು ಸದಾ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಾರೆ. ಎಷ್ಟೋ ವಿಷಯಗಳನ್ನು ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ.
ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣ ಪಡೆಯುವವರೆಗೆ ವಿದ್ಯಾರ್ಥಿಗಳು ಸ್ನೇಹಿತರನ್ನು ಹೊಂದಿರುತ್ತಾರೆ. ಕೆಲವನ್ನು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ.
ಸ್ನೇಹಿತರಿಂದ ಕಲಿಬಹುದಾದ ಮತ್ತು ಕಲಿಯಲೇ ಬೇಕಾದ ಕೆಲವು ಸಂಗತಿಗಳಿರುತ್ತದೆ. ಅದೇನೆಂದರೆ ಒಳ್ಳೆಯ ನಡತೆ, ಹೊಂದಾಣಿಕೆ, ಕಾಯುವಿಕೆ, ಭರವಸೆ.
ಭದ್ರತೆ ಮತ್ತು ಹೊಂದಾಣಿಕೆಯನ್ನು ನಾವು ನಮ್ಮ ಸ್ನೇಹಿತರಿಂದ ಕಲಿಯುತ್ತೇವೆ. ಪರಸ್ಪರ ಸಹಾಯ ಮಾಡುವ ಮನೊಭಾವ ಸ್ನೇಹಿತರಿಂದ ಬರುತ್ತದೆ.
ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದು ಸ್ನೇಹಿತರಿಂದ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಸ್ನೇಹಿತರಿಂದ ತಿರಸ್ಕಾರಕ್ಕೊಳಗಾದಾಗ ಅದು ಇನ್ನೊಂದು ರೀತಿಯ ಪಾಠ.
ಮನೆಯಲ್ಲಿ ತಂದೆ ತಾಯಿ ಹೇಳಿಕೊಡಲಾಗದ ಮತ್ತು ಮಕ್ಕಳು ತಂದೆ ತಾಯಿಗೆ ಹೇಳಲಾಗದ ಎಷ್ಟೋ ವಿಷಯಗಳನ್ನು ಸ್ನೇಹಿತರಲ್ಲಿ ಹಂಚಿಕೊಳ್ಳಬಹುದು.
ನೀವೂ ನಿಮ್ಮ ಸ್ನೇಹಿತರನ್ನು ನೆನಪಿಸಿಕೊಳ್ಳಿ. ಮತ್ತು ಯಾವ ವಿಷಯವನ್ನು ನೀವು ಅವರಿಂದ ಕಲಿತಿದ್ದೀರಿ ಎಂಬುದನ್ನು ನೆನಪಿಸಿಕೊಂಡು ಇಂದು ಒಂದು ಕರೆ ಮಾಡಿ.