ಹದಿಹರೆಯದ ವಯಸ್ಸಿನಲ್ಲಿ ಸಾಮಾನ್ಯವಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಮೊಡವೆಗಳು ಕಾಣಿಸಿಕೊಂಡಾಗ ಕೆಲವೊಮ್ಮೆ ಅದು ಒಂದೆರಡು ದಿನಗಳಲ್ಲಿ ಕಡಿಮೆ ಆದರೂ, ಅದರ ನೋವು ಹತ್ತು ಹದಿನೈದು ದಿನಗಳ ವರೆಗೆ ಇರುತ್ತದೆ. ಈ ರೀತಿಯಾಗಿ ಅದರಿಂದ ನೋವನ್ನು ಅನುಭವಿಸುವಾಗ ಕಷ್ಟವಾಗುತ್ತದೆ. ಹಾಗಾದರೆ ಈ ನೋವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಉಪಯೋಗಿಸಬಹುದು.
ಕ್ಲೆನ್ಸರ್ ಬಳಸಿ:
ಮುಖದ ಮೇಲೆ ಅತಿ ಹೆಚ್ಚು ಮೊಡವೆಗಳು ಕಾಣಿಸಿಕೊಂಡಾಗ ಮತ್ತು ನೋವು ಕಾಣಿಸಿಕೊಂಡಾಗ, ನಿಮ್ಮ ಮುಖದ ಸ್ವಚ್ಛತೆಯ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುವುದು ಬಹಳ ಮುಖ್ಯ. ಮುಖವನ್ನು ಸ್ವಚ್ಛ ನೀರಿನಿಂದ ಪದೇಪದೇ ತೊಳೆದುಕೊಳ್ಳುತ್ತಾ ಇರಬೇಕು, ಅದಕ್ಕಾಗಿ ಕ್ಲೆನ್ಸರ್ ಬಳಸಿ.
ಮೊಡವೆಗಳ ಮೇಲೆ ಐಸ್ ಇಡಬೇಕು:
ಮೊಡವೆಯಾದ ಭಾಗಕ್ಕೆ, ನೀವು ಐಸ್ ಅನ್ನು ಇಡಬಹುದು. ಯಾವ ಮೊಡವೆಯ ಇಂದ ನಿಮಗೆ ನೋವು ಕಾಣಿಸಿಕೊಳ್ಳುತ್ತದೆಯೋ ಅದರ ಮೇಲೆ ಐಸ್ ಇಡುವುದರಿಂದ ತಕ್ಕಮಟ್ಟಿಗೆ ಅದರ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ಬಿಸಿ ಸಂಕೋಚನ:
ಮೊಡವೆ ನೋವಿನಿಂದ ಪರಿಹಾರವನ್ನು ಪಡೆಯಲು ನೀವು ಬಿಸಿ ನೀರಿನ ಶಾಖವನ್ನು ನೀಡಬಹುದು. ಹಾಟ್ ಫೋಮೆಂಟೇಶನ್ ಎಂದರೆ ತುಂಬಾ ಬಿಸಿ ನೀರಿನಿಂದ ಮುಖ ತೊಳೆಯುವುದು ಎಂದಲ್ಲ. ಬೆಚ್ಚಗಿನ ನೀರಿನಿಂದ ಮುಖ ತೊಳಿಯುವುದು ಉತ್ತಮ.
ಜೊಜೊಬಾ ಎಣ್ಣೆಯನ್ನು ಬಳಸಿ:
ಜೊಜೊಬಾ ಎಣ್ಣೆಯನ್ನು ಬಳಸುವುದರಿಂದ ಮೊಡವೆಗಳ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ನೈಸರ್ಗಿಕ ವಿಧಾನವಾಗಿದೆ.
ಇವು ಯಾವುದೇ ಮನೆಮದ್ದುಗಳ ಉಪಯೋಗ ಸಿಗದಿರುವಾಗ ನೇರವಾಗಿ ಚರ್ಮದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.