ಯುವಕ-ಯುವತಿಯರಲ್ಲಿ ತಲೆ ಹೊಟ್ಟಿನ ಸಮಸ್ಯೆ ಈಗ ಹೆಚ್ಚಾಗಿದೆ. ಕಲುಶಿತ ನೀರು, ಆಹಾರ, ಧೂಳಿನಿಂದ ಕೂದಲ ಆರೋಗ್ಯ ಹಾಳಾಗಿದೆ. ಇದರಿಂದ ಕೂದಲುದುರುವಿಕೆ, ತುರಿಕೆ ಹಾಗೂ ಮುಖದ ಮೇಲೆ ಮೊಡವೆಗಳು ಬರುತ್ತವೆ.
ಈ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ಸಿದ್ದ ಮಾಡಿಕೊಳ್ಳಬಹುದಾದ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಮೆಂತ್ಯೆ ನೀರು: ರಾತ್ರಿ ನೆನೆಸಿಟ್ಟ ಮೆಂತ್ಯೆಯನ್ನು ಬೆಳಗ್ಗೆ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆ ಹೊಟ್ಟು ಕ್ರಮೇಣ ಕಡಿಮೆಯಾಗುತ್ತದೆ.
ಬೇವು ನೀರು: ತಲೆಗೆ ಸ್ನಾನ ಮಾಡುವಾಗ ಶಾಂಪೂ ಬಳಸಿದ ಬಳಿಕ ಕೂದಲನ್ನು ಬೇವಿನ ನೀರಿನಿಂದ ತೊಳೆಯುವುದರಿಂದ ತಲೆ ಹೊಟ್ಟು ಕಡಿಮೆ ಆಗುತ್ತದೆ.
ನಿಂಬೆ ರಸ: ನಿಮ್ಮ ಕೂದಲು ಜಿಟ್ಟುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ.
ಅರಿಶಿನ ನೀರು: ಅರಿಶಿನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳಿವೆ. ಅರಿಶಿನವನ್ನು ಪುಡಿ ಮಾಡಿ ನೀರಿನಲ್ಲಿ ಕುದಿಸಿ, ತಣ್ಣಗಾದ ಬಳಿಕ ಕೂದಲಿಗೆ ಹಚ್ಚಿ ತೊಳೆಯಿರಿ. ಇದರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ.
ಕರಿಬೇವಿನ ನೀರು: ಕೂದಲಿನ ಬೆಳವಣಿಗೆಗೆ ಹಾಗೂ ಕೂದಲು ಕಪ್ಪಾಗಿಸಲು ಕರಿಬೇವು ಸೂಕ್ತವಾಗಿದೆ. ಕರಿಬೇವಿನ ಎಣ್ಣೆ ಅಥವಾ ಕರಿಬೇವನ್ನು ನೀರಿನಲ್ಲಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ.