ಸತತವಾಗಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರಧಾನಿಯವರ ಮೌನ ಎಲ್ಲರನ್ನು ಕೆಣಕಿದೆ. ಪ್ರಧಾನಿಯವರ ಈ ನಡೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತ್ತು.
ಎರಡು ತಿಂಗಳಿಗಿಂತ ಹೆಚ್ಚಿನ ಸಮಯದಿಂದ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರಧಾನಿ ಪ್ರತಿಕ್ರಿಯೆ ನೀಡದ ಕಾರಣ ವಿರೋಧ ಪಕ್ಷದವರು ಪ್ರದಾನಿಯವರನ್ನು ತರಾಟೆಗೆ ತೆಗೆದುಕೊಳ್ಳಾರಂಭಿಸಿದ್ದಾರೆ.
ಈ ಕುರಿತು ಪ್ರಧಾನಿ ಹೇಳಿಕೆ ನೀಡಬೇಕೆಂದು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎನ್ಸಿಪಿ ವರಿಷ್ಠ ಶರದ್ ಪವಾರ್, ತಮಿಳುನಾಡು ಮುಖ್ಯ ಮಂತ್ರಿ ಎಂ ಕೆ. ಸ್ಟಾಲಿನ್ ಸಹಿತ ಕೆಲವು ನಾಯಕರು ಒತ್ತಾಯಿಸಿದ್ದಾರೆ.
ವಿರೋದ ಪಕ್ಷಗಳು ತಮ್ಮ ಮಾತಿನಲ್ಲಿ ಪ್ರಧಾನಿಯವರನ್ನು ತಿವಿಯುತ್ತಾಲೆ ಇದ್ದಾರೆ. ಜೆಡಿಯು ಮಣಿಪುರದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದ್ದರು ಮಣಿಪುರ ಎರಡು ತಿಂಗಳಿಗಿಂತ ಹೆಚ್ಚು ಸಮಯದಿಂದ ಹೊತ್ತಿ ಉರಿಯುತ್ತಿದೆ.
ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀವೃ ಕಳವಳ ವ್ಯಕ್ತಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಸರ್ಕಾರಕ್ಕೆ ಸ್ವಲ್ಪ ಸಮಯ ನೀಡುತ್ತೇವೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ನಾವು ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಹೇಳಿದೆ.
ಕಡೆಗೂ ಪ್ರಧಾನಿ ಇಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದೊಂದಿಗೆ ಮತ್ತಾನಾಡಿದ್ದಾರೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೊವನ್ನು ನೋಡಿ ಆಘಾತಗೊಳಗಾಗಿದ್ದೇನೆ. ನನ್ನ ಹೃದಯ ತುಂಬಾ ನೋವು ತುಂಬಿ ಸಿಟ್ಟಿನಿಂದ ಕುದಿಯುತ್ತಿದೆ. ತಪ್ಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿ ಕೂಟವು ‘ಇಂಡಿಯಾ’ ಆಗಿ ಹೊರಹೊಮ್ಮಿದಾಗ ತರಾತುರಿಯಲ್ಲಿ ಎನ್ಡಿಎ ಕೂಟ ಸಭೆ ನಡೆಸಿರುವ ಪ್ರಧಾನಿ ಬಳಗ ಮಣಿಪುರ ಹಿಂಸಾಚಾರದ ವಿಷಯದಲ್ಲಿ ಮಾತ್ರ ಯಾಕೆ ಇಂತಹ ನಡೆ ಎನ್ನುವುದು ಇನ್ನು ಕೂಡ ಕಾಡುವ ಪ್ರಶ್ನೆ. ಪ್ರಧಾನಿಯವರ ಮುಂದಿನ ನಡೆ ಏನು ಎಂಬುದು ಗೌಪ್ಯವಾಗಿದೆ ಮತ್ತು ಎಲ್ಲರ ಕುತೂಹಲ ಕೂಡ ಆಗಿದೆ.