ಯಲ್ಲಾರೂ ಆರಾಮ ಇದ್ದಿರಿ ಅನಸ್ತದ; ಹಿಂಗೆ ಯಲ್ಲಾರೂ ಆರಾಮ ಇರ್ರಿ. ಹೋದ ವಾರ ಭಾಳ ಸೀರಿಯಸ್ಸಾಗಿ ಬರದು ಯಲ್ಲಾರಿಗೂ ಭಾಳ ಪುಕ್ಕಟ ಉಪದೇಶಾ ಕೊಟ್ಟೆನಿ ಈ ಸಲಾನು ಹಂಗ ಮಾಡಿ ತಲಿ ಕಡಸ್ತೇನಿ ಅನ್ಕೋಬ್ಯಾಡ್ರಿ.
ಪ್ರೀತಿ ಪ್ರೇಮಾ ಪುಸ್ತಕದ ಬದನೇಕಾಯಿ ಅಂತ ಮೊದಲೇ ಹೇಳಿದ್ದೆ ಈಗ ಆಗೀರೋದು ಅದ ಇವೆಲ್ಲಾ ನೋಡ್ರಿ ಪುಸ್ತಕದಾಗ ಛಂದರೀ ಸಲೀಮ ಅನಾರ್ಕಲಿ, ಪಾರೋ ದೇವದಾಸ, ಲೈಲಾ ಮಜನು ರೋಮಿಯೋ ಜೂಲಿಯಟ್ ಇವರ ಕಥಿ ಕೇಳಿಕ್ಕ ಮಸ್ತ ಇರ್ತದ ಆದರ ಇವರ ಕಥಿ ಲಾಸ್ಟಿಗೆ ಇವರ್ಯಾರು ಒಂದ ಆಗಲಿಲ್ಲಾಅದನ್ನ ಮರಿಬ್ಯಾಡ್ರಿ. ಹಂಗ ಅಂತ ನೀವು ನಿಮ್ಮಾವರು ಒಂದು ಅಗೂದಿಲ್ಲ ಅಂತ ನಾ ಹೇಳಿಲ್ಲಿರ್ರೀಪಾ ಮತ್ತ ಯಲ್ಲರೂ ಕೂಡಿ ನಂಗ ಆಮೇಲೆ ಬಂದ ಬಡದೀರಿ. ಹಂಗ ಆಗೋದ ಬ್ಯಾಡಾ ನಿಮ್ಮ ನಿಮ್ಮ ನಶೀಬದಾಗ ಏನ ಏನ ಇರ್ತದ ಅದು ಆಗತ್ತದ ಜಾಸ್ತಿ ವಿಚಾರ ಮಾಡ್ಲಿಕ್ಕೆ ಹೋಗ ಬ್ಯಾಡ್ರಿ. ಜಾಸ್ತಿ ವಿಚಾರ ಮಾಡಿ ನಿಮ್ಮ ತಲ್ಯಾಗಿಂದ ಕೂದ್ಲ ಹೋಗಿ ಮುಂದ ಸಿಗಬೇಕ ಆಗಿದ್ದು ಸಿಗಲಿಲ್ಲಾ ಅಂದ್ರ ಏನ್ ಮಾಡೋದ ಹೇಳ್ರಿ.
ಹುಡಗಾ ಹುಡಗಿ ಒಪ್ಪಗೊಂಡು ಅವ್ರ ಮನ್ಯಾಗ ಯಲ್ಲಾದಕ್ಕೂ ಒಪ್ಪಿಗಿ ಕೊಟ್ಟು ಯಲ್ಲಾ ಆಗೂತನಾ ಭಾಳ ದಿನಾ ಬೇಕಾಗತ್ತದ ಅದಕ್ಕ ಈ ಹೊಸಾ ಹುಡಗೋರ ಏನ ಮಾಡ್ಲಿಕತ್ತಾರಂದ್ರ ಮೊದಲ ಲಗ್ನಾ ಆಗೋದು ಆಮೇಲೆ ಹೋಗಿ ಅಪ್ಪಾ ಅಮ್ಮಾಗ ಹೇಳೊದ ಆಗ ಪಾಪ ಅವ್ವಾ ಅಪ್ಪಂದ್ರಿಗೆ ಈ ಕಡೆ ಹೂ ಅನ್ಲಿಕ್ಕಿಲ್ಲಾ ಬಿಡಲಿಕ್ಕಿಲ್ಲಾ ಹಂಗ ಆಗತ್ತದ. ಇನ್ನ ಅವರು ಏನ್ ಮಾಡತ್ತಾರಂದ ಊರಾಗಿನ ಮಂದಿ ಏನ್ ಅಂತಾರ ಅಂತ ವಿಚಾರ ಮಾಡಿ ತಮ್ಮ ಮರ್ಯಾದಿಗೆ ಹೆದರಿ ಇವರೇನ ಕಟಗೊಂಡ ಬಂದಿರತಾನ ಲಾ ಅವರ ಜೋಡಿನ ಲಗ್ನಾ ಮಾಡಿಕೊಟ್ಟ ಕಳಸ್ತಾರ ಆಗ ಭಾಳ ಎನ್ ಗದ್ಲಾ ಆಗೋದಿಲ್ಲಾ ಅಂತ ಈ ಹುಡಗೋರ್ ತಿಳಕೋತಾರ ಆದ್ರ ಆ ಎರಡು ಕಡೆದ ಅವ್ವಾ ಅಪ್ಪನ ಪರಿಸ್ಥಿತಿ ಯಾರಿಗೂ ಬ್ಯಾಡಾ. ಮ್ಯಾಲೆ ಮ್ಯಾಲೆ ನಕ್ಕೋತ ಇದ್ರು ಅವರ ಒಳಗಿನ ಪರಿಸ್ಥಿತಿ ಬ್ಯಾರೆನ ಇರ್ತದ. ಆದ್ರ ಹಿಂಗ ಮಾಡ್ಲಿಕ್ಕೆ ಹೋಗ ಬ್ಯಾಡ್ರಿ ಅದು ಸರಿಯಲ್ಲಾ. ಅವೆಲ್ಲಾ ಪಿಚ್ಚರ್ ದಾಗ ಅಷ್ಟೇ ಛಂದಾ ಖರೆ ಜೀವನದಾಗ ಹಿಂಗ ಆಗೋದು ಭಾಳ ಕಷ್ಟ.
ಹುಡಗಾ ಹುಡಗಿ ಒಬ್ಬರ ಜೀವನದಾಗ ಒಬ್ಬರೂ ಬರಲ್ಲಿಕತ್ತಾರ ಅಂದ್ರ ನಿಮ್ಮ ನಿಮ್ಮ ಲೈಫ್ ಫುಲ್ ಚೇಂಜ್ ಆಗ್ತದ ಅಂತ ತಿಳಕೊಂಡ ಬಿಡ್ರಿ ಅವನ ಸಲವಾಗಿ ಇಕಿ ಮತ್ತ ಇಕಿ ಸಲವಾಗಿ ಆವ ಫುಲ್ ಚೇಂಜ್ ಆಗ್ಲಿಕ್ಕ ಚಾಲು ಮಾಡತ್ತಾರ. ಲೇಟ್ ಮಾಡಿ ಏಳಾಕಿ/ ಏಳಾವ ಮುಂಜಾನೆ ಐದ ಅಂದ್ರ ಯದ್ದ ಕೂಡ್ಲಿಕ್ಕ ಚಾಲೂ ಮಾಡತಾನ/ಳ. ಲೇಟಾಗಿ ಮಲ್ಕೋಳಾವ ಹತ್ತಾಂದ್ರ ಹಾಶಿಗ್ಯಾಗ ಇರತಾನ /ಇರತಾಳ ಯಂದು ಗುಡಿ ಗುಂಡಾರ ಅಡ್ಯಾಡದಾವರು ಅದನ್ನ ಚಾಲು ಮಾಡತ್ತಾರ ಉಪವಾಸ ವನವಾಸ ಯಲ್ಲಾ ವೃತಾ ನಿಯಮಾಯಲ್ಲಾ ಚಾಲೂ ಆಗತಾವ ಇದು ಚೋಲೊ ಪಾರ್ಟ ಆದ್ರ ಇಷ್ಟ ದಿನಾ ಅವ್ವಾ ಅಪ್ಪಾ ಕೊಟ್ಟದ್ದ ಸಂಸ್ಕಾರ ಬಿಟ್ಟ ಕೆಟ್ಟ ಹಾದಿ ಹಿಡಿಯೋ ಮಕ್ಕ್ಳುಇದ್ದಾರ ಆದರ ಹಂಗ ಮಾಡಕೋಳಿಕ್ಕೆ ಹೋಗಬ್ಯಾಡ್ರಿ ನೀವು ನಿಮ್ಮಗತೆ ನೀವ ನಡಿರಿ ಅವರಗತೆ ಅವರ ನಡಿಲಿ ಯಾವ ವಿಷಯಕ್ಕ ಹೊಂದಾಣಿಕಿ ಆಗಬೇಕು ಅದಕ್ಕ ಆಗ್ರಿ ಅವರು ಆಗ್ಲಿ, ಅದನ್ನ ಬಿಟ್ಟ ಬರೇ ನಾ ಆಗಬೇಕು ಮುಂದಿನಾವರು ಆವದಕ್ಕೂ ಆಗೋದಿಲ್ಲ ಅಂದ್ರ ಅದು ಭಾಳದಿನಾ ಘಟ್ಟಿ ಉಳಿಯೋದಿಲ್ಲಾ ಅದಕ್ಕ ಹಂಗ ಮಾಡ್ಕೋಬ್ಯಾಡ್ರಿ ನಿಮ್ಮತನಾ ನೀವ ಬಿಟ್ಟ ಕೊಡಬ್ಯಾಡ್ರಿ ಹಂಗ ಅಂತ ಮುಂದಿನಾವರ ಮ್ಯಾಲೆ ದಬ್ಬಾಳಿಕಿ ಹಾಕಿ ಅವರು ನಿಮ್ಮಹಂಗ ನಡಕೋಬೇಕು ಅನ್ನೋ ಹಟಾನು ಮಾಡಿ ಇದ್ದದ್ದೂ ಕೆಡಿಸ್ಕೋ ಬ್ಯಾಡ್ರಿ (ಹುಡಗೋರ್ಯಾ ಮೊದ್ಲ ಚೆಂಜ್ ಮಾಡಲ್ಲಿಕ್ಕೆ ಪ್ರಯತ್ನಾ ಮಾಡ್ರಿ ಅದು ಆಗೋದಿಲ್ಲಾ ನಂಗೂ ಗೊತ್ತದ ಯಾಕಂದ್ರ ಅಕಿ ಬಂದು ನಿಮ್ಮನ್ನ ಪೂರಾ ಚೆಂಜ್ ಮಾಡತಾಳ). ಅದೇನ ಆಗತ್ತದ ಮುಂದಿನ ವಾರ ಹೇಳತೇನಿ ಮತ್ತ ಹೊಸಾ ಗದ್ಲಾ ತೊಗೊಂಡ ಬರ್ತೇನಿ ಅಲ್ಲಿತನಾ ನೀವ ಚೆಂಜ್ ಆಗ್ತಿರೋ ಮುಂದಿನಾವ್ರನ ಚೆಂಜ್ ಮಾಡಿತ್ತಿರೋ ನೋಡ್ರಿ.
ಮುಂದವರಿತದ…