ಇತ್ತೀಚಿನ ದಿನಗಳಲ್ಲಿ ಹಿರಿಯರಿಂದ ಸಣ್ಣ ಮಕ್ಕಳವರೆಗೂ ಮೊಬೈಲ್ ಬಳಸುವವರ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಇನ್ನೂ ಆನ್ಲೈನ್ ಕ್ಲಾಸ್, ಗೇಮಿಂಗ್, ರೈಮಿಂಗ್ ಹೀಗೆ ನಾನಾ ಕಾರಣಗಳಿಂದ ಮಕ್ಕಳಿಗೆ ಮೊಬೈಲ್ ಗೀಳು ಹಿಡಿದು ಬಿಟ್ಟಿದೆ. ಮಕ್ಕಳು ಮೊಬೈಲ್ ದಾಸರಾಗಿದ್ದಾರೆ. ಮೊದಲು ತಾವೇ ಮೊಬೈಲ್ ಕೊಟ್ಟು ಅಭ್ಯಾಸ ಮಾಡಿಸಿದ ತಂದೆ ತಾಯಿ ನಂತರ ತಮ್ಮ ಮಕ್ಕಳ ಕೈಯಿಂದ ಮೊಬೈಲ್ ದೂರ ಇಡಲು ಪ್ರಯತ್ನಿಸಿ ಹೈರಾಣಾಗುತ್ತಿದ್ದಾರೆ ಅಂತವರಿಗೆ ಇಲ್ಲಿದೆ ಸಲಹೆ.
ಮಕ್ಕಳೊಂದಿಗೆ ಸಮಯ ಕಳೆಯಿರಿ:
ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಬಿಡಿ. ತಂದೆ ಮತ್ತು ತಾಯಿ ಜೊತೆಗೆ ಕುಟುಂಬದಲ್ಲಿನ ಇತರೆ ಸಂಬಂಧಿಕರ ಜೊತೆ ಬಿಡಿ. ಅಜ್ಜ, ಅಜ್ಜಿ ಹೀಗೆ ಪ್ರತಿಯೊಬ್ಬರ ಜೊತೆಗೂ ಬೆರೆಯುವುದರಿಂದ ನಿಮ್ಮ ಮಗು ಮೊಬೈಲ್ ಕಡೆ ಗಮನ ಕಡಿಮೆ ಮಾಡುತ್ತಾರೆ.
ಹೊರಾಂಗಣ ಆಟಕ್ಕೆ ಪ್ರೋತ್ಸಾಹ ನೀಡಿ:
ಮೈದಾನದ ಚಟುವಟಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸಿ. ಹೋಮ್ವರ್ಕ್ಗಳೆಲ್ಲಾ ಮುಗಿದ ನಂತರ ಮೈದಾನದಲ್ಲಿ ಆಡಲು ಬಿಡಿ. ನಗರ ಪ್ರದೇಶಗಳಲ್ಲಿ ಮಕ್ಕಳಿಗಾಗಿಯೇ ಉದ್ಯಾನವನಗಳು ನಿರ್ಮಿಸಿರುತ್ತಾರೆ. ಪೋಷಕರು ಇದಕ್ಕೆ ಹೆಚ್ಚು ಆದ್ಯತೆಯನ್ನು ನೀಡಬೇಕು.
ಮೊಬೈಲ್ ಮಕ್ಕಳಿಗೆ ಎಟುಕದಂತೆ ಇಡಿ:
ಮೊಬೈಲ್ ಕಣ್ಣಿಗೆ ಕಾಣುವಂತೆ ಇಡಬೇಡಿ ಕಣ್ಣಿಗೆ ಕಾಣುವ ಹಾಗೆ ಮೊಬೈಲ್ಗಳನ್ನು ಇಟ್ಟರೆ ಅದಕ್ಕೆ ಮಕ್ಕಳು ಮೊರೆ ಹೋಗುತ್ತಾರೆ. ಹೀಗಾಗಿ ಮೊದಲು ಕೈಗೆ ಮತ್ತು ಕಣ್ಣಿಗೆ ಕಾಣದಂತೆ, ಎಟುಕದಂತೆ ಇಡಬಾರದು.
ರೋಲ್ ಮಾಡೆಲ್ಗಳಾಗಿ:
ನಿಮ್ಮನ್ನ ನೋಡಿ ಮಕ್ಕಳು ಕಲಿಯುತ್ತಾರೆ. ಹೀಗಾಗಿ ನೀವು ಮೊದಲು ಅವರ ಮುಂದೆ ಹೆಚ್ಚು ಹೊತ್ತು ಮೊಬೈಲ್ ಬಳಸುವುದನ್ನು ಕಮ್ಮಿ ಮಾಡಿ . ಉತ್ತಮ ಮಾತುಗಳನ್ನು ಆಡುತ್ತಾ, ಸ್ಫೂರ್ತಿದಾಯಕ ಕಥೆಗಳನ್ನು ಹೇಳಿ. ಆಗ ನಿಮ್ಮನ್ನು ನಿಮ್ಮ ಮಕ್ಕಳು ಫಾಲೋ ಮಾಡುತ್ತಾರೆ.
ಪುಸ್ತಕ ಓದುವುದಕ್ಕೆ ಆದ್ಯತೆ ನೀಡಿ:
ಪೋಷಕರು ನಿಮ್ಮ ಮೊಬೈಲ್ ಪಕ್ಕದಲ್ಲಿಟ್ಟು ಪುಸ್ತಕಗಳನ್ನು ಓದಿ. ಮತ್ತು ಮಕ್ಕಳಿಗೂ ಓದುವಂತೆ ಪ್ರೇರೆಪಿಸಿ ಅವರಿಗೆ ಇಷ್ಟವಾಗುವ ಪುಸ್ತಕಗಳನ್ನು ತಂದು ಕೊಡಿ.
ಮೊಬೈಲ್ ಬಳಕೆಯ ಕೆಟ್ಟ ಪರಿಣಾಮವನ್ನು ತಿಳಿಸಿ:
ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಆಗುವ ಕೆಟ್ಟ ಪರಿಣಾಮವನ್ನು ಮಕ್ಕಳಿಗೆ ಹಂತ ಹಂತವಾಗಿ ತಿಳಿಸಬೇಕು. ಜಾಸ್ತಿ ಮೊಬೈಲ್ ಬಳಕೆಯಿಂದ ಕಣ್ಣು ಬೇಗ ಹಾಳಾಗುತ್ತದೆ, ಮೆದುಳು ಹಾಳಾಗುವುದರ ಬಗ್ಗೆ ಹೀಗೆ ಇನ್ನಿತರ ಉದಾಹರಣೆಗಳ ಮೂಲಕ ಮಕ್ಕಳಿಗೆ ತಿಳಿಸಬೇಕು.