ಕೆಲ ದಿನಗಳ ಹಿಂದೆ ಫ್ರಾನ್ಸ್ ದೇಶದಲ್ಲಿನ ಚೀನಾ ರಾಯಭಾರಿ, ಸೋವಿಯತ್ ಒಕ್ಕೂಟ ಒಡೆದ ನಂತರ ಉಗಮವಾದ ಎಲ್ಲಾ ದೇಶಗಳ ಸಾರ್ವಭೌಮತ್ವವನ್ನು ಪ್ರಶ್ನಿಸಿ ಯುರೋಪ ಒಕ್ಕೂಟದ ಕೆಂಗಣ್ಣಿಗೆ ಚೀನಾ ಗುರಿಯಾಗಿತ್ತು.
ಸೋವಿಯತ್ ಒಕ್ಕೂಟದ ಪತನದ ನಂತರ ಹೊರಹೊಮ್ಮಿದ ದೇಶಗಳು “ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಪರಿಣಾಮಕಾರಿ ಸ್ಥಾನಮಾನವನ್ನು ಹೊಂದಿಲ್ಲ ಏಕೆಂದರೆ ಅವರ ಸಾರ್ವಭೌಮ ರಾಷ್ಟ್ರಗಳ ಸ್ಥಾನಮಾನವನ್ನು ದೃಢೀಕರಿಸುವ ಅಂತರರಾಷ್ಟ್ರೀಯ ಒಪ್ಪಂದವಿಲ್ಲ” ಎಂದು ಫ್ರಾನ್ಸ್ಗೆ ಚೀನಾನ ರಾಯಭಾರಿ ಲು ಶಾಯ್ ಹೇಳಿಕೆಯು ವಿವಾದವನ್ನು ಉಂಟುಮಾಡಿತ್ತು.
ಚೀನಾ ರಾಯಭಾರಿ ನೀಡಿದ್ದ ಹೇಳಿಕೆ ಪರಿಣಾಮ ಯುರೋಪ್ ಒಕ್ಕೂಟ ಹಾಗೂ ಚೀನಾ ನಡುವಿನ ಸಂಬಂಧ ಹಾಳಾಗಿ ಹೋಗುವ ಪರಿಸ್ಥಿತ ನಿರ್ಮಾಣವಾಗಿತ್ತು.
ಯುರೋಪ್ ಒಕ್ಕೂಟದ ಆಕ್ರೋಶಕ್ಕೆ ತುತ್ತಾಗುವ ಭಯದಲ್ಲಿ ಚೀನಾ ತಮ್ಮ ರಾಯಭಾರಿ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಸೋವಿಯತ್ ಒಕ್ಕೂಟ ಒಡೆದ ನಂತರ ಉಗಮವಾದ ಎಲ್ಲಾ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ವಿದೇಶಾಂಗ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ. ಈ ಮೂಲಕ ಸೋವಿಯೆತ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ಹೇಳಿದೆ. ಇದರಿಂದಾಗಿ ಯುರೋಪ ತಣ್ಣಗಾದಂತೆ ಕಂಡು ಬರುತ್ತಿದೆ.
ಸೋವಿಯತ್ ಒಕ್ಕೂಟ:
ರಷ್ಯಾ ಕ್ರಾಂತಿಯ ನಂತರ ಸಮಾಜವಾದಿ ಸಿದ್ದಾಂತದೊಂದಿಗೆ ಡಿಸೆಂಬರ್ 30, 1922 ರಂದು, , ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ (ಯುಎಸ್ಎಸ್ಆರ್) ಸ್ಥಾಪನೆಗೊಂಡಿತು. ಇದು ರಷ್ಯಾ, ಬೆಲೋರುಸಿಯಾ, ಉಕ್ರೇನ್ ಮತ್ತು ಟ್ರಾನ್ಸ್ಕಾಕೇಶಿಯನ್ ಸೇರಿ ಸೋವಿಯತ್ ಯೂನಿಯನ್ ಎಂದೂ ಕರೆಯಲ್ಪಡುವ ಹೊಸ ಕಮ್ಯುನಿಸ್ಟ್ ಒಕ್ಕೂಟ ರಚನೆಗೊಂಡಿತು.
ಇದು ರಚನೆಗೊಂಡು ದಶಕಗಳ ನಂತರ, ರಷ್ಯಾದ ಪ್ರಾಬಲ್ಯದ ಸೋವಿಯತ್ ಒಕ್ಕೂಟವು ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾಗಿ ಬೆಳೆದು ನಿಂತಿತು. ಎರಡನೇ ಮಹಾಯುದ್ದದ ನಂತರ 1991 ರಲ್ಲಿ, ಸೋವಿಯತ್ ಒಕ್ಕೂಟವು ಪತನಗೊಂಡು ನಂತರ ಸೋವಿಯತ್ ಒಕ್ಕೂಟ ಒಡೆದು ರಷ್ಯಾ, ಉಕ್ರೇನ್, ಜಾರ್ಜಿಯಾ, ಬೆಲೋರುಸ್ಸಿಯಾ, ಉಜ್ಬೇಕಿಸ್ತಾನ್, ಅರ್ಮೇನಿಯಾ, ಅಜೆರ್ಬೈಜಾನ್, ಕಝಾಕಿಸ್ತಾನ್, ಕಿರ್ಗ್ಸ್ತಾನ್ , ತುರ್ಕಮೆನಿಸ್ತಾನ್, ತಜಿಕಿಸ್ತಾನ್, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಹೀಗೆ 15 ಗಣರಾಜ್ಯ ದೇಶವಾಗಿ ರೂಪುಗೊಂಡವು.