ಮೆಟ್ರೋ ನೀರಿನ ಮೇಲೆ ಚಲಿಸುತ್ತೆ ಅಂದರೆ ನಿಮಗೆ ಅಚ್ಚರಿಯಾಗಬಹುದು ಆದರೆ ಇದು ನಿಜ . ಕೇರಳದಲ್ಲಿ ಇಂದಿನಿಂದ ವಾಟರ್ ಮೆಟ್ರೋ ಸೇವೆ ಆರಂಭವಾಗಲಿದೆ. ಇದು ದೇಶದ ಮೊದಲ ನೀರಿನ ಮೆಟ್ರೋವಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದಕ್ಕೆ ಚಾಲನೆಯನ್ನು ನೀಡಿದ್ದಾರೆ.
ಸಾಂಪ್ರದಾಯಿಕ ಮೆಟ್ರೋದಲ್ಲಿ ಚಲಿಸುವ ಅನುಭವವನ್ನು ನೀಡುವ ವಾಟರ್ ಮೆಟ್ರೋ ಎಂಟು ಎಲೆಕ್ಟ್ರಿಕ್ ಹೈಬಿಡ್ ಬೋಟ್ಗಳೊಂದಿಗೆ ಎರಡು ಮಾರ್ಗಗಳಲ್ಲಿ ಹೈಕೋರ್ಟ್ನಿಂದ ವೈಪಿನ್ ವೈಟ್ಟಿಲಾದಿಂದ ಕಾಕ್ಕನಾಡ್ಗೆ ಸೇವೆಯನ್ನು ಪ್ರಾರಂಭಿಸುತ್ತಿದೆ.
ವಾಟರ್ ಮೆಟ್ರೋ ಕೊಚ್ಚಿಯ ಸುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸಲಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೆ ಇದು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ಕೊಚ್ಚಿಯ ಸುತ್ತಮುತ್ತಲಿನ ಜನರಿಗೆ ಸುರಕ್ಷಿತ ಮತ್ತು ಕೈಗೆ ಎಟುಕುವ ದರದಲ್ಲಿ ಪ್ರಯಾಣಿಸಲು ನೆರವಾಗುತ್ತದೆ.
ವಾಟರ್ ಮೆಟ್ರೋ ವಿಶೇಷತೆ:
* ಪ್ರಯಾಣಿಕರಿಗೆ ಅನುಕೂಲವಾಗುವಂತೆ ದರ ಸ್ಲಾಟ್ನ್ನು ವಿನ್ಯಾಸ ಗೊಳಿಸಲಾಗಿದೆ.
*ಹೈಕೋರ್ಟ್ನಿಂದ ವೈಪಿನ್ ಗೆ ಒಂದೇ ಪ್ರಯಾಣ ಟಿಕೆಟ್ ದರ 20ರೂವನ್ನು ನಿಗದಿಪಡಿಸಲಾಗಿದೆ. ವೈಟ್ಟಿಲಾದಿಂದ ಕಾಕ್ಕನಾಡ್ ಮಾರ್ಗಕ್ಕೆ 30ರೂ ನಿಗದಿ ಪಡಿಸಲಾಗಿದೆ.
* ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಬಹುದು. ಕೊಚ್ಚಿ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಲು ‘ಕೊಚ್ಚಿ 1’ ಕಾರ್ಡ್ ಅನ್ನು ಸಹ ಬಳಸಬಹುದು.
*ವಾಟರ್ ಮೆಟ್ರೋ ಮೂಲಕ ಪ್ರಯಾಣಿಕರು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳದೆ ಹೈಕೋರ್ಟ್ ಟರ್ಮಿನಲ್ನಿಂದ 20 ನಿಮಿಷಗಳಲ್ಲಿ ಮತ್ತು ಕಾಕ್ಕನಾಡ್ನಿಂದ ವೈಪಿನ್ನಿಂದ 25 ನಿಮಿಷಗಳಲ್ಲಿ ವೈಪಿನ್ ಟರ್ಮಿನಲ್ ತಲುಪಬಹುದು.
* ಆರಂಭಿಕ ಕೊಡುಗೆಯಾಗಿ ಪ್ರಯಾಣಿಕರು ವಿವಿಧ ಟ್ರಿಪ್ ಪಾಸ್ಗಳನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು.
*ಕೇರಳ ಸರಕಾರ ಮತ್ತು ಜರ್ಮನ್ ಸಂಸ್ಥೆ ಕೆಎಫ್ಡಬ್ಲ್ಯುನಿಂದ ಧನಸಹಾಯ ಪಡೆದು ಈ ದೋಣಿಗಳನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ತಯಾರಿಸಿದೆ.
* 38 ಟರ್ಮಿನಲ್ಗಳೊಂದಿಗೆ 78 ಎಲೆಕ್ಟ್ರಿಕ್ ಬೋಟ್ಗಳನ್ನು ಒಳಗೊಂಡಿದೆ.
ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ದೋಣಿಗಳ ಮೂಲಕ ಮಲಬಾರ್ ಕರಾವಳಿಯ ನಗರದ ಸುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುವ ಭಾರತದ ಮೊದಲ ಜಲ ಮೆಟ್ರೋ ಸಾರಿಗೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.