ಮುಂಬೈ : ಏಪ್ರಿಲ್ 22 ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಈದ್ ಪ್ರಯುಕ್ತ ಇಂದು ಬಿಡುಗಡೆಯಾಗಿದ್ದು, ಮೊದಲ ದಿನದಲ್ಲಿ ಕಳಪೆ ಪ್ರದರ್ಶನ ಕಂಡಿದ್ದು, ಕೇವಲ 15.81 ಕೋಟಿ ರೂ ಗಳಿಸುವಲ್ಲಿ ಶಕ್ತವಾಗಿದೆ.
ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಕುರಿತು ಟ್ವೀಟ್ ಮಾಡಿದ್ದು,. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಮೊದಲ ದಿನದಂದು ದುರ್ಬಲವಾಗಿದೆ. 2010 ರಿಂದ 2019 ರವರೆಗಿನ ಸಲ್ಮಾನ್ ಖಾನ್ ಅವರ ಈದ ಗೆ ಬಿಡುಗಡೆಯಾದ ಚಿತ್ರಗಳೊಂದಿಗೆ ಇದನ್ನು ಹೋಲಿಸಿದಾಗ ಹೆಚ್ಚು ದುರ್ಬಲವಾಗಿದೆ, ಮಾಸ್ ಪಾಕೆಟ್ಸ್ ಉತ್ತಮವಾಗಿದೆ, ಆದರೆ ತಂಬಾ ಹೆಸರು ಮಡುವ ಹಾಗೆ ಕಾಣಿಸುತ್ತಿಲ್ಲ ಎಂದಿದ್ದಾರೆ.
ಆದರ್ಶ್ ಎಂಬುವವರ ಮತ್ತೊಂದು ಟ್ವೀಟ್ ಹೀಗಿದೆ: ಸಲ್ಮಾನ್ ಖಾನ್ ಮತ್ತು ಈದ್ ದಿನ ಒಂದು ಬಿಝಾ 2010: #ದಬಾಂಗ, 14.50 cr 2011: ಬಾಡಿಗಾರ್ಡ್ , 21.60 cr 2012: ಈಕ ತಾ ಟೈಗರ್ 32.60 cr 2012: ಕೋಟಿ 2016: ಸುಲ್ತಾನ್, 36.54 ಕೋಟಿ 2017: ಟ್ಯೂಬ್ಲೈಟ್, 21.15 ಕೋಟಿ 2018: ರೇಸ್3, 29.17 ಕೋಟಿ 2019: ಭಾರತ್, 42.30 ಕೋಟಿ 2023:’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ 15.81 cr ಮೊತ್ತವನ್ನು ಗಳಿಸಿರುತ್ತದೆ.
2021 ರಲ್ಲಿ ಬಿಡುಗಡೆಯಾದ ‘ರಾಧೆ’ ನಂತರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ವೆಂಕಟೇಶ್, ಪೂಜಾ ಹೆಗ್ಡೆ, ಜಗಪತಿ ಬಾಬು ಮತ್ತು ಭೂಮಿಕಾ ಚಾವ್ಲಾ ನಟಿಸಿದ್ದಾರೆ. ಅಲ್ಲದೆ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಸಹ ನಟರಾಗಿ ಅಭಿನಯಿಸಿದ್ದಾರೆ.