ಸರಿಯಾಗಿ ಸಮಯಕ್ಕೆ ನಿದ್ರೆಯು ಆಗದಿದ್ದರೆ, ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ನೆನಪಿನ ಶಕ್ತಿ ಕಳೆದುಕೊಳ್ಳುವ ಅಪಾಯವೂ ಇದೆ. ಇವುಗಳ ಜತೆಗೆ ಕಿಡ್ನಿ, ಹೃದಯ, ಬಿಪಿ, ಖಿನ್ನತೆಯಂತಹ ಸಮಸ್ಯೆಗಳೂ ಬರುವ ಸಾಧ್ಯತೆ ಉಂಟಾಗುತ್ತದೆ.
ನಿದ್ರೆ ದೇಹಕ್ಕೆ ಔಷಧವಿದ್ದಂತೆ. ಬಿಡುವಿಲ್ಲದ ಜೀವನದಲ್ಲಿ ದಿನವಿಡೀ ಕಷ್ಟಪಟ್ಟು ದುಡಿಯುವವರಿಗೆ ನಿದ್ರೆ ಬಹಳ ಮುಖ್ಯ. ದಿನಕ್ಕೆ ಕನಿಷ್ಠ 7 ಗಂಟೆಗಳ ನಿದ್ದೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಈಗ ಅನೇಕರು ಅದನ್ನು ಅನುಸರಿಸುತ್ತಿಲ್ಲ. ನಿದ್ದೆ ಸರಿಯಾಗಿ ಆಗದಿದ್ದರೆ ಅವರಿಗೆ ಕಿರಿಕಿರಿ ಉಂಟಾಗುತ್ತದೆ. ಒಂದು ಅಥವಾ ಎರಡು ದಿನ ಸರಿಯಾಗಿ ನಿದ್ದೆ ಮಾಡದಿದ್ದರೂ ತೊಂದರೆಯಿಲ್ಲ. ಆದರೆ ತಿಂಗಳುಗಟ್ಟಲೆ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾತ್ರ ನಿಜವಾದ ಸಮಸ್ಯೆ ಶುರುವಾಗುತ್ತದೆ. ಪ್ರತಿ ಸಣ್ಣ ವಿಷಯಕ್ಕೂ ಅವರು ಕಿರಿಕಿರಿಗೊಳ್ಳುತ್ತಾರೆ.
ಮನೆ, ಕಚೇರಿ ಹೀಗೆ ಎಲ್ಲೆಂದರಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳುತ್ತಾರೆ. ಇತರರು ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಹೊಂದಲು ಆರಂಭಿಸುತ್ತಾರೆ. ಯಾವುದೇ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನೀವು ವಿವೇಚನೆಯನ್ನು ಮೀರಿ ವರ್ತಿಸಲು ಆರಂಭಿಸುತ್ತೀರಾ.
ಏಳು ಗಂಟೆಗಳ ನಿದ್ರೆ ಸರಿಯಾಗಿ ಸಿಗದಿದ್ದರೆ ಮನಸ್ಸಿಗೆ ತುಂಬಾ ನೆಗಟಿವ್ ಆಲೋಚನೆ ಬರುತ್ತದೆ. ನಿದ್ರೆಯ ಕೊರತೆಯು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದು. ನೆನಪಿನ ಶಕ್ತಿ ಕಳೆದುಕೊಳ್ಳುವ ಅಪಾಯವೂ ಇದೆ. ಸಮಸ್ಯೆಯನ್ನು ಜಯಿಸಲು ಕೆಲಸ ಮುಗಿಸಿ ಮನೆಗೆ ಬಂದ ನಂತರ ಚೆನ್ನಾಗಿ ಸ್ನಾನ ಮಾಡಿ. ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದು ಊಟ ಮಾಡಿ ಸ್ವಲ್ಪ ಹೊತ್ತು ಟಿವಿ ನೋಡಿ ಬೇಗ ನಿದ್ದೆ ಮಾಡಿಬಿಡಿ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ರಿಲಾಕ್ಸ್ ಮೈಂಡ್ ಕೂಡ ಸಿಗುತ್ತದೆ.