ಸದ್ಯದ ಪರಿಸ್ಥಿತಿಯಲ್ಲಿ ಟೊಮೆಟೋ ಬೆಲೆಯು ಗಗನ್ಕೇರುತ್ತಿದೆ. ಹೀಗಿರುವಾಗ ಮಾರುಕಟ್ಟೆಯಿಂದ ದುಬಾರಿ ಬೆಲೆ ಕೊಟ್ಟು ತಂದ ಟೊಮೆಟೋ ಹಾಳಾದರೆ ಬೇಸರವಾಗುವುದು ಖಂಡಿತ. ಇದನ್ನು ಯಾವ ರೀತಿ ಸಂರಕ್ಷಿಸುವುದು ಎಂಬುದನ್ನು ನೋಡೋಣ.
ಟೊಮೆಟ್ಯೋ ಹಣ್ಣು ಹಾಳಾಗುವುದು ಬೇಗ. ಅದಕ್ಕಾಗಿ ಈ ವಿಧಾನವನ್ನು ನೀವು ಪಾಲಿಸಿದರೆ ಟೊಮೆಟ್ಯೋವನ್ನು ಎರಡು ವಾರಗಳ ವರೆಗೆ ತಾಜಾವಾಗಿರಿಸಬಹುದಾಗಿದೆ.
ವಿಪರೀತ ಶಾಖ ಮತ್ತು ತಡವಾದ ಮಾನ್ಸೂನ್ ಟೊಮ್ಯಾಟೊ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರಿ ಬೇಲೆ ಏರಿಕೆ ಆಗುತ್ತಿದೆ. ಅದಕ್ಕಾಗಿ ನಾವಿಂದು ಟೊಮೆಟೊಗಳನ್ನು ಸಂಗ್ರಹಿಸಲು ಕೆಲವು ಆರೋಗ್ಯಕರ ವಿಧಾನಗಳನ್ನು ತಿಳಿದುಕೊಳ್ಳಬೇಕಾಗಿದೆ.
ಟೊಮೆಟೊಗಳನ್ನು ಫ್ರಿಜ್ನಲ್ಲಿ ಇಡಬಾರದು ಎಂದು ಯಾವಾಗಲೂ ಮಾತಾಡಿ ಕೊಳ್ಳುತ್ತೇವೆ ಆದರೆ ರೆಫ್ರಿಜರೇಟರ್ ಟೊಮೆಟೊಗಳಿಗೆ ತಂಪಾದ ಶೇಖರಣಾ ಸ್ಥಳವಾಗಿದೆ. ಆದ್ದರಿಂದ, ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಟೊಮೆಟೊಗಳನ್ನು ಇರಿಸುವುದು ಮುಖ್ಯವಾಗಿದೆ.
ಟೊಮೆಟೋವನ್ನು ಅಡುಗೆಗೆ ಬಳಸುವ ಮೊದಲು ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಬಳಸಿ. ನೀವು ಸಾಕಷ್ಟು ಮಾಗಿದ ಟೊಮೆಟೊಗಳನ್ನು ಹೊಂದಿದ್ದರೆ ಮಾತ್ರ, ನೀವು ಅವುಗಳನ್ನು ಫ್ರಿಡ್ಜ್ನಲ್ಲಿಡಬಹುದು. ಟೊಮೆಟೊಗಳು ಬೇಗನೆ ಕೊಳೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವುಗಳು ಹೆಚ್ಚು ದಿನಗಳವರೆಗೆ ಇರುವಂತೆ ಮಾಡಲು ಅವುಗಳ ಕಾಂಡದ ಬದಿಯನ್ನು ಕೆಳಗೆ ಇರಿಸಬೇಕು.
ಟೊಮೆಟ್ಯೋವನ್ನು ಸೂರ್ಯನ ಬೆಳಕಿನಿಂದ ದೂರ ಇಡುವುದು ದೀರ್ಘಕಾಲದವರೆಗೆ ತಾಜಾ ಮತ್ತು ತಿನ್ನಲು ಯೋಗ್ಯವಾಗಿರುವಂತೆ ಮಾಡಲು ಸಹಕಾರಿಯಾಗಿದೆ. ಯಾವಾಗಲೂ ಟೊಮೆಟ್ಯೋ ಖರೀದಿಸುವಾಗ ಹಸಿರು ಬಣ್ಣವಿರುವ ಅಂದರೆ ಸರಿಯಾಗಿ ಹಣ್ಣಾಗಿರದ ಟೊಮೆಟ್ಯೋ ಖರೀದಿಸಿ. ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದಾಗಿದೆ.
ಹಸಿರು ಟೊಮೆಟೊಗಳು ಕೋಣೆಯ ಉಷ್ಣಾಂಶದಲ್ಲಿ ಸುಮಾರು ಒಂದು ವಾರದವರೆಗೆ ತಾಜಾವಾಗಿರಸಬಹುದು. ಟೊಮೆಟ್ಯೋ ಶೇಖರಿಸಿಡುವ ಸ್ಥಳದಲ್ಲಿ ಯಾವುದೇ ರೀತಿಯ ತೇವಾಂಶವಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ ಟೊಮೆಟೊಗಳು ಬೇಗ ಹಾಳಾಗಬಹುದು. ಇದನ್ನು ನಿಯಮಿತವಾಗಿ ಪರಿಶೀಲಿಸುವುದು.
ಕೊಳೆಯುವ ಗುರುತುಗಳು ನಿಮಗೆ ಕಾಣಿಸಿದರೆ ತಕ್ಷಣ ಆ ಟೊಮ್ಯಾಟೊ ತೆಗೆಯಿರಿ. ಒಂದು ವೇಳೆ ನೀವು ಹೆಚ್ಚು ಟೊಮೆಟ್ಯೋ ಖರೀದಿಸಿದ್ದರೆ, ಅದರಲ್ಲೂ ಹೆಚ್ಚಿನವು ಹಣ್ಣಾಗಿದ್ದರೆ ಟೊಮೆಟೊಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ಬಟ್ಟೆಯಿಂದ ಒಣಗಿಸಿ. ಟೊಮೆಟೊ ಚರ್ಮದಿಂದ ತೇವಾಂಶವನ್ನು ತೆಗೆದುಹಾಕಿ ಸಂಗ್ರಹಿಸಿ ಇಟ್ಟುಕೊಂಡಿದ್ದರೆ, ಅದನ್ನು ತುಂಬಾ ದಿನಗಳವರೆಗೆ ಉಪಯೋಗಿಸಬಹುದಾಗಿದೆ.