ನಟ ರಿಷಬ್ ಶೆಟ್ಟಿ ಓರ್ವ ಫ್ಯಾಮಿಲಿ ಮ್ಯಾನ್. ಕುಟುಂಬದ ಜತೆ ಸಮಯ ಕಳೆಯೋಕೆ ತುಂಬ ಇಷ್ಟಪಡುವ ವ್ಯಕ್ತಿ. ಸಂಪ್ರದಾಯ, ಆಚಾರ ವಿಚಾರದಲ್ಲಿಯೂ ಅವರು ಮುಂದು. ಮಕ್ಕಳ ಸಣ್ಣ ಕಾರ್ಯಕ್ರಮಗಳನ್ನೂ ಸಂಪ್ರದಾಯಬದ್ಧವಾಗಿ ಕೊಂಚ ಅದ್ದೂರಿಯಾಗಿಯೇ ನೆರವೇರಿಸುತ್ತಾರೆ. ಇದೀಗ ಹುಟ್ಟೂರು ಕೆರಾಡಿಯಲ್ಲಿ ಮಗಳು ರಾದ್ಯಾಳ ಕಿವಿ ಚುಚ್ಚುವ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದಾರೆ.
ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ಮೊದಲ ಭಾಗದ ಯಶಸ್ಸಿನ ಬಳಿಕ ಎರಡನೇ ಭಾಗದ ಸಿನಿಮಾ ಕೆಲಸಗಳಲ್ಲಿಯೂ ಅವರು ಬಿಜಿಯಾಗಿದ್ದಾರೆ. ಅದಕ್ಕಾಗಿ ತಯಾರಿಯನ್ನೂ ಶುರು ಮಾಡಿದ್ದಾರೆ.
ಮನೆಯಲ್ಲಿನ ಸಣ್ಣ ಸಣ್ಣ ಕಾರ್ಯಕ್ರಮವನ್ನೂ ಅದ್ದೂರಿಯಾಗಿ, ಸಂಪ್ರದಾಯ ಬದ್ಧವಾಗಿಯೇ ನೆರವೇರಿಸುತ್ತಾರೆ ರಿಷಬ್ ಶೆಟ್ಟಿ.
ಇದೀಗ ಮಗಳು ರಾದ್ಯಾಳ ಕಿವಿ ಚುಚ್ಚುವ ಶಾಸ್ತ್ರವನ್ನು ರಿಷಬ್ ಶೆಟ್ಟಿ ಕುಟುಂಬ ಹುಟ್ಟೂರು ಕೆರಾಡಿಯಲ್ಲಿ ಆಯೋಜಿಸಿತ್ತು.
ಸಂಪ್ರದಾಯ ಬದ್ಧವಾಗಿ ಆಚಾರ ವಿಚಾರ ಎಲ್ಲವನ್ನೂ ಅರಿತು ಶಾಸ್ತ್ರೋಕ್ತವಾಗಿ ಮಗ ರಣ್ವಿತ್ ಮತ್ತು ಮಗಳು ರಾದ್ಯಾಳ ಕೇಶ ಮುಂಡನ ಮಾಡಿಸಿ, ಮುದ್ದು ಮಗಳ ಕಿವಿ ಚುಚ್ಚುವ ಶಾಸ್ತ್ರ ಮುಗಿಸಿದ್ದಾರೆ.
ಹಸಿರು ಬಣ್ಣದ ಸಿಲ್ಕ್ ಶರ್ಟ್ ಗೋಲ್ಡನ್ ವರ್ಣದ ರೇಷ್ಮೇ ಪಂಚೆಯಲ್ಲಿ ರಿಷಬ್ ಕಾಣಿಸಿಕೊಂಡರೆ, ಹಸಿರು ಬಣ್ಣದ ಸೀರೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ ಪೂಜೆಯಲ್ಲಿ ಭಾಗವಹಿಸಿದ್ದರು.
ಈ ವಿಶೇಷ ಪೂಜಾ ಕ್ಷಣದ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ನಟ ರಿಷಬ್ ಶೆಟ್ಟಿ ಶೇರ್ ಮಾಡಿಕೊಳ್ಳುತ್ತಿದ್ದಂತೆ, ಹೃದಯ ತುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು.
ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ.
ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ.The home where I grew up is filled with memories, and now Radhya’s ear piercing ceremony added another special moment to it. pic.twitter.com/PnJDtZG4vy
— Rishab Shetty (@shetty_rishab) June 25, 2023
ಪ್ರತಿಯೊಂದು ಸಣ್ಣ ಸಣ್ಣ ವಿಚಾರಗಳನ್ನೂ ಶಾಸ್ತ್ರೋಕ್ತವಾಗಿ ಪಾಲಿಸುವ ರಿಷಬ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಯಾವತ್ತೂ ನಮ್ಮ ಬೇರನ್ನು ಮರೆಯಬಾರದು, ಶೆಟ್ರು ಸಂಪ್ರದಾಯದ ವಿಚಾರದಲ್ಲಿ ಸದಾ ಮುಂದು ಎಂಬ ಕಾಮೆಂಟ್ಗಳೂ ಈ ಪೋಸ್ಟ್ಗೆ ಹರಿದು ಬಂದಿವೆ.