ಭಾರತದಲ್ಲಿ ಪ್ರತಿ 10 ವರ್ಷಕೊಮ್ಮೆ ನಡೆಸುವ ಜನಗಣತಿಯನ್ನು ಡಿಜಿಟಲೀಕರಣ ಮಾಡುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಮುಂಬರುವ ಸಂಸತ್ ಮುಂಗಾರು ಅಧಿವೇಶದಲ್ಲಿ ಹೊಸ ವಿಧೇಯಕ ಮಂಡಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
2011ರ ಬಳಿಕ ದೇಶದಲ್ಲಿ ಜನಗಣತಿ ನಡೆದಿಲ್ಲ 2020 ರಲ್ಲಿ ಮತ್ತು 2021 ರಲ್ಲಿ ಎರಡು ಹಂತಗಳಲ್ಲಿ ಜನಗಣತಿ ನಡೆಯಬೇಕಿತ್ತು ಆದರೆ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಹೊಸ ವಿಧೇಯಕದ ಮೂಲಕ ಜನಗಣತಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.
ಡಿಜಿಟಲ್ ಜನಗಣತಿಯ ವಿಶೇಷತೆ:
* ನಿಖರ ಹಾಗೂ ತ್ವರಿತಗತಿಯಲ್ಲಿ ಮಾಹಿತಿ ದಾಖಲಿಸಬಹುದು.
* ಜನಗಣತಿಗೆ ಬಜೆಟ್ ನಲ್ಲಿ 87,54.23ಕೋಟಿ ಅನುವಾದ ನೀಡಲಾಗಿದೆ.
* 30 ಲಕ್ಷ ಸಿಬ್ಬಂದಿಗಳನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸುವ ಸಾಧ್ಯತೆ.
* ಟ್ಯಾಬ್ ಮತ್ತಿತರ ಡಿಜಿಟಲ್ ಪರಿಕರಗಳಲ್ಲಿ ಮಾಹಿತಿ ಸಂಗ್ರಹ.
* 35ಕ್ಕೂ ಹೆಚ್ಚು ಸಾಮಾಜಿಕ ಆರ್ಥಿಕ ಮಾನದಂಡಗಳನ್ನು ಬಳಸಿ ಸರ್ವೆ ಮಾಡಲಾಗುವುದು.
ತಪ್ಪು ಮಾಹಿತಿ ತಡೆಯಲು ಜಿಯೋ ಫಿನ್ಸಿಂಗ್:
ಈ ಬಾರಿಯ ಜನಗಣತಿಗೆ ಸರ್ಕಾರ ತಾಂತ್ರಿಕತೆಯನ್ನು ಬಳಸಲಿತು ತಪ್ಪು ಮಾಹಿತಿ ಸಂಗ್ರಹವನ್ನು ತಡೆಯಲು ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಬಳಸಲಿದೆ.
ಮಾಹಿತಿ ಸಂಗ್ರಹಿಸಲು ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಅಡಿಯಲ್ಲಿ ನಿಗದಿಪಡಿಸಲಾಗದು. ಬ್ಲಾಕ್ ಗಳಿಗೆ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಲಾಗುವುದು ಇದರಿಂದ ಮಾಹಿತಿ ಸಂಗ್ರಹಿಸಿದ ವ್ಯಕ್ತಿಯು ಆ ಬ್ಲಾಕ್ ನಿಂದ ಹೊರಗಿದ್ದು ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರು ಅದು ತಪ್ಪು ಮಾಹಿತಿ ಎಂದು ತೋರಿಸುತ್ತದೆ. ಅಲ್ಲದೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಗೆ ಸಂದೇಶ ರವಾನಿಸಲಾಗುತ್ತದೆ. ಆಗ ಅಂತಹ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಡಿಜಿಟಲ್ ಜನಗಣತಿ ಹೇಗೆ:
ಗಣತಿದಾರರು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ನೇರವಾಗಿ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾದ ಪೋರ್ಟಲ್ ಗೆ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುವುದು.