ನಟಿ ಶಾಲಿನಿ ಡಿವೋರ್ಸ್ ವಿಚಾರಕ್ಕೆ ಭಾರೀ ಸುದ್ದಿಯಾಗಿದ್ದಾರೆ. ಡಿವೋರ್ಸ್ ಸಿಕ್ಕ ಖುಷಿಯನ್ನು ಸೆಲೆಬ್ರೇಟ್ ಮಾಡುತ್ತಾ, ಪತಿಯೊಂದಿಗಿನ ಫೋಟೋಗಳನ್ನು ಹರಿದು ಹಾಕಿದ ನಟಿ ಕಾಲಿನಿಂದ ಫೋಟೋವನ್ನು ತುಳಿದಿದ್ದಾರೆ.
ತಮಿಳು ಸೀರಿಯಲ್ ನಟಿ ಶಾಲಿನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ನಂತರ ವಿಚ್ಛೇದನದ ಫೋಟೋಶೂಟ್ ಮಾಡಿಸಿದ್ದಾರೆ. ತಮಿಳು ಧಾರಾವಾಹಿ ‘ಮುಳ್ಳುಂ ಮಲರುಂ’ ಮೂಲಕ ಗಮನ ಸೆಳೆದ ನಟಿ ಶಾಲಿನಿಗೆ, ಒಬ್ಬ ಮಗಳಿದ್ದಾಳೆ. ಡಿವೋರ್ಸ್ ಬಳಿಕ ಮಗಳ ಸಂಪೂರ್ಣ ಹೊಣೆ ತಾನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಫೋಟೋಶೂಟ್ನಲ್ಲಿ ಶಾಲಿನಿ ರೆಡ್ ಡ್ರೆಸ್ ಧರಿಸಿಕೊಂಡು ಡೈವೋರ್ಸ್ ಎಂಬ ಬೋರ್ಡ್ ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಷ್ಟಸಾಧ್ಯವಾದ ದಾಂಪತ್ಯ ಜೀವನವನ್ನು ತ್ಯಜಿಸುವುದು ಉತ್ತಮ ಎಂದು ಶಾಲಿನಿ ಹೇಳಿದ್ದಾರೆ.
ಈ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಟ್ಟ ದಾಂಪತ್ಯ ಮುರಿಯುವುದರಲ್ಲಿ ತಪ್ಪೇನಿಲ್ಲ. ನಿಮ್ಮ ಜೀವನದಲ್ಲಿ ನೀವು ಸಂತೋಷವಾಗಿರಲು ಏನು ಬೇಕು ಅದನ್ನು ಮಾಡಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ನಿರ್ಧಾರ ಬದಲಾವಣೆ ಅಗತ್ಯ ಎಂದಿದ್ದಾರೆ. ನಾನು ಇದನ್ನು ಎಲ್ಲಾ ಧೈರ್ಯಶಾಲಿಗಳಿಗೆ ಅರ್ಪಿಸುತ್ತೇನೆ ಎಂದು ಶಾಲಿನಿ ಅವರ ಪ್ರೊಫೈಲ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.