ಆರೋಗ್ಯದ ವಿಚಾರದಲ್ಲಿ ನಾವು ಕೆಲವೊಮ್ಮೆ ಅಲಕ್ಷತನ ತೋರುತ್ತೇವೆ. ನಿಮಗೆ 40 ವರ್ಷ ಆಗಿದ್ದರೆ ತಪ್ಪದೇ ಈ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ನಮಗೆ ವಯಸ್ಸಾದಂತೆಲ್ಲ ನಮ್ಮ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಏಕೆಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ತರಹದ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುವುದು ಅಂತು ಸತ್ಯ.
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ಬಿಪಿ ಜನರನ್ನು ಹೆಚ್ಚಾಗಿ ಕಾಡುತ್ತಿದೆ. ಸಕ್ಕರೆ ಕಾಯಿಲೆಯಿಂದ ತೊಂದರೆಗೆ ಒಳಗಾಗಿರುವ ಜನರಿಗೆ ಅವರ ಸಂಪೂರ್ಣ ಜೀವನಶೈಲಿ ಬದಲಾಗಿ ಬೇರೆಯಾಗಿ ಬಿಡುತ್ತದೆ. ಅದೇ ರೀತಿ ರಕ್ತದ ಒತ್ತಡ ಇರುವವರು ಕೂಡ ಪ್ರತಿದಿನ ಮಾತ್ರೆ ತೆಗೆದುಕೊಳ್ಳಬೇಕಾಗಿರುತ್ತದೆ.
ಅದಕ್ಕಾಗಿ ನಾವು 40ವರ್ಷದ ದಾಟಿದ ಮೇಲೆ ಆಗಾಗ ಕೆಲವು ರಕ್ತ ಪರೀಕ್ಷೆಗಳನ್ನು ಮಾಡಿಕೊಂಡರೆ ನಮ್ಮ ದೇಹದಲ್ಲಿ ಯಾವೆಲ್ಲ ಕಾಯಿಲೆಗಳಿದೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕ ಮಾತ್ರೆಗಳನ್ನು, ಚಿಕಿತ್ಸೆಯನ್ನು ಪಡೆದು ಸುಧಾರಿಸಿಕೊಳ್ಳಬಹುದು.
40 ವರ್ಷ ಕಳೆದ ನಂತರದಲ್ಲಿ ಯಾವ ಯಾವ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು.
ಅನಿಮಿಯಾ ಪರೀಕ್ಷೆ : ಕಬ್ಬಿಣದ ಅಂಶದ ಕೊರತೆ ಮತ್ತು ವಿಟಮಿನ್ ಬಿ12 ಕೊರತೆಯಿಂದ ಅನಿಮಿಯಾ ಎದುರಾಗುತ್ತದೆ. ಇಂತಹ ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಸಿಗುವುದು ಕಡಿಮೆಯಾದರೆ ಅದು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. 40 ವರ್ಷ ಕಳೆದ ನಂತರದಲ್ಲಿ ದೇಹದಲ್ಲಿ ಬದಲಾಗುವ ಹಾರ್ಮೋನ್ ಗಳು ಸಹ ಅನೀಮಿಯ ತೊಂದರೆಯನ್ನು ಹೆಚ್ಚು ಮಾಡುತ್ತವೆ.
ಸಕ್ಕರೆ ಕಾಯಿಲೆ ಪರೀಕ್ಷೆ : ಅನಾರೋಗ್ಯಕರ ಆಹಾರ ಪದ್ಧತಿಯಿಂದ ಜನರು ಟೈಪ್ 2 ಮಧುಮೇಹ ಹೊಂದುತ್ತಿದ್ದಾರೆ. ಅದರಲ್ಲೂ 30 ವರ್ಷ ಕಳೆದ ನಂತರವೇ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಸಕ್ಕರೆ ಕಾಯಿಲೆ ಪರೀಕ್ಷೆಯನ್ನು ಆಗಾಗ ಮಾಡಿಸಿಕೊಳ್ಳುವುದು ಉತ್ತಮ.
ವಿಶೇಷವಾಗಿ ಗರ್ಭಿಣಿ ಮಹಿಳೆಯರು ಒಂದು ವೇಳೆ ತಮ್ಮ ಕೌಟುಂಬಿಕ ಹಿನ್ನೆಲೆಯಲ್ಲಿ ಮಧುಮೇಹ ಹೊಂದಿದ್ದರೆ, ದೇಹದ ತೂಕ ಮತ್ತು ಬೊಜ್ಜು ಹೆಚ್ಚಾಗಿದ್ದರೆ ಮಧು ಮೇಹ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಕೊಳ್ಳುಬೇಕಾಗುತ್ತದೆ.
ಥೈರಾಯಿಡ್ ಪರೀಕ್ಷೆ : ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗಿದ್ದರೆ, 40 ವರ್ಷ ಕಳೆದ ನಂತರದಲ್ಲಿ ಥೈರೊಯ್ಡ್ ಪರೀಕ್ಷೆ ಕೂಡ ಅವಶ್ಯಕ. ಇದು ಬೇರೆ ಬೇರೆ ಥೈರಾಯ್ಡ್ ಸಮಸ್ಯೆಗಳ ರೋಗ ನಿರ್ಣಯ ಮಾಡಲು ಅನುಕೂಲ ಮಾಡಿಕೊಡುತ್ತದೆ ಮತ್ತು ಥೈರಾಯಿಡ್ ಕ್ಯಾನ್ಸರ್ ಸಹ ಇದರಿಂದ ಗೊತ್ತಾಗುತ್ತದೆ. ಹಾಗಾಗಿ 40 ವರ್ಷ ದಾಟಿದ ಮೇಲೆ ಥೈರಾಯಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
ಲೈಂಗಿಕವಾಗಿ ಹರಡುವ ಕಾಯಿಲೆಗಳು: ಒಂದು ವೇಳೆ ಹೆಪಟೈಟಿಸ್ ಬಿ ಅಥವಾ ಸಿ ಅಥವಾ ಎಚ್ಐವಿ ಸಮಸ್ಯೆಯ ಬಗ್ಗೆ ನಿಮಗೆ ಅನುಮಾನವಿದ್ದರೆ 40 ವರ್ಷದ ಆಸುಪಾಸಿನಲ್ಲಿ ಈ ಪರೀಕ್ಷೆಗಳನ್ನು ಸಹ ಮಾಡಿಸಬಹುದು.
ಮಲೇರಿಯಾ ಅಥವಾ ಟಿಬಿ ಕಾಯಿಲೆಗಳನ್ನು ಪತ್ತೆ ಹಚ್ಚುವ ಅಥವಾ ವೈರಲ್ ಸೋಂಕುಗಳನ್ನು ಕಂಡುಹಿಡಿಯುವ ಪರೀಕ್ಷೆ: ಇದು. ಬಹಳ ಕಡಿಮೆ ಹಣಕ್ಕೆ ನೀವು ಈ ಪರೀಕ್ಷೆಯನ್ನು ಮಾಡಿಸ ಬಹುದು. ಹೆಲ್ತ್ ಪ್ಯಾಕೇಜ್ ನಲ್ಲಿ ಕೂಡ ಈ ಪರೀಕ್ಷೆ ಲಭ್ಯವಿರುತ್ತದೆ. ಹಾಗಾಗಿ ಇದನ್ನು ಸಹ ತಿಳಿದುಕೊಳ್ಳಲು ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಾ ಇರಿ.