ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ನೈತಿಕ ಪೊಲೀಸ್ ಗಿರಿಯ ಆರ್ಭಟ. ದುಡಿದು ತಿನ್ನುವ ಬಡ ಜೀವದ ಮೇಲೆ ಈಗ ತನ್ನ ಅಟ್ಟಹಾಸ ಮೆರೆದಿದ್ದಾರೆ. ಯುವತಿಯೊಬ್ಬಳನ್ನು ಆಟೋದಲ್ಲಿ ಧರ್ಮಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಯುವಕರ ತಂಡವೊಂದು ರಿಕ್ಷಾ ಚಾಲಕನ ಮೇಲೆ ಹಲ್ಲೆ ಮಾಡಿದೆ.
ಬಸ್ಸಾಗಲಿ ಅಟೋ ಆಗಲಿ ಹತ್ತಿ ಕುಳಿತುಕೊಳ್ಳುವಾಗ ಯಾರು ಜಾತಿ ಧರ್ಮ ಕೇಳಿ ಕುಳಿತು ಕೊಳ್ಳುವುದಿಲ್ಲ. ತಮ್ಮ ಸಮಯಕ್ಕೆ ಸಂದರ್ಭಕ್ಕೆ ಸವಾರಿಯನ್ನು ಏರಿ ಜನರು ತಾವು ತಲುಪ ಬೇಕಾಗಿರುವ ಸ್ಥಳ ತಲುಪುತ್ತಾರೆ.
ಇನ್ನು ಸವಾರಿಯು ಅಥಾವ ಚಾಲಕನಿಗೆ ತನ್ನ ಪ್ರಯಾಣಿಕ ಯಾವ ಧರ್ಮದವನೆಂಬ ಒಂದು ಸಣ್ಣ ಸುಳಿವು ಕೂಡ ಇರುವುದಿಲ್ಲ. ಹಾಗೆನೇ ಪ್ರಯಾಣಿಕರಿಗೂ ತಮ್ಮ ಚಾಲಕನಿಗೂ ಯಾವ ಧರ್ಮದವರು ಎಂದು ತಿಳಿದಿರುವುದಿಲ್ಲ. ಆದರೆ ಕೌರ್ಯ ಮೆರೆಯುವರಿಗೆ ಮಾತ್ರ ಮುಂಚಿತವಾಗಿಯೇ ಎಲ್ಲವೂ ತಿಳಿದಿರುತ್ತದೆ.
ಈ ಆರೋಪಿಗಳು ಮಾಡುವ ಕೆಲಸಗಳು ಸಮಾಜದ ಒಳಿತಿಗೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಇದು ಸಮಾಜದ ಸ್ವಾಸ್ಥ್ಯ ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಎಲ್ಲ ಘಟನೆಗಳಿಂದ ಸಾರ್ವಜನಿಕರು ಇನ್ನುಮುಂದೆ ಹಣೆಪಟ್ಟಿಯಲ್ಲಿ ತಮ್ಮ ಧರ್ಮವನ್ನು ನಮೂದಿಸಿ ಬಹುಶಃ ಓಡಾಡಬೇಕು. ಇಲ್ಲಿ ವಾಹನ ಚಾಲಕರು ತಮ್ಮ ಗಾಡಿಯಲ್ಲಿ ಇಂತಹ ಧರ್ಮದವರಿಗೆ ಮಾತ್ರ ಪ್ರಯಾಣ ಎಂದು ನಮೂದಿಸಬೇಕು ಎನ್ನುವಂತಿದೆ.
ತುರ್ತಾ ಸಂದರ್ಭದಲ್ಲಿ ನಾವು ನಮ್ಮ ಧರ್ಮದವರ ಗಾಡಿಗಾಗಿಯೇ ಕಾಯಬೇಕು. ಇಲ್ಲಿ ಯಾರ ಪ್ರಾಣ ಹೋದರು ಅಡ್ಡಿ ಇಲ್ಲ ಅಂತ ಅನಿಸುತ್ತೆ. ಸ್ವಲ್ಪನೂ ಸಾಮಾನ್ಯ ಪರಿಜ್ಞಾನವಿಲ್ಲದೆ ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದರೆ. ಇವರ ಮನಸ್ಸಿನ ಮಂಕು ಬುದ್ದಿಗೆ ಯಾವಗ ಅರ್ಥವಾಗುವುದು.
ಆಗು ಹೋಗುಗಳು, ನಡೆಯುವಂತಹ ಸಾಧ್ಯತೆಗಳು ಕಣ್ಣಮುಂದೆ ಇದ್ದರು ಇದನ್ನು ಕಾಣದಂತಿರುವ ಇವರು ಎಂತಹ ಅಂದರು. ಅಂತೂ ನೈತಿಕ ಪೊಲೀಸ್ ಗಿರಿಯಿಂದ ಜನಸಾಮಾನ್ಯರಿಗೂ ಕಿರಿ ಕಿರಿ ತಪ್ಪಿದಲ್ಲ.