ಒಂದು ಮನೆಯಲ್ಲಿ ಹೆಣ್ಣು ಮಗಳು ಇದ್ದಾಳೆ ಎಂದು ಗೊತ್ತಾಗುವುದೇ ಆಕೆಯ ಕಾಲಿನ ಸಪ್ಪಳದಿಂದ ಅಂದರೆ ಕಾಲಿನ ಗೆಜ್ಜೆಯ ಸದ್ದಿನಿಂದ. ಕೆಲವರು ಮನದಲ್ಲೇ ಆಕೆಯನ್ನು ವರ್ಣಿಸಲು ಪ್ರಯತ್ನಿಸುತ್ತಾರೆ. ಅಷ್ಟೊಂದು ಆಕರ್ಷಕ ಈ ಕಾಲಿನ ಗೆಜ್ಜೆ ಮತ್ತು ಅದರ ಸದ್ದು.
ಭಾರತೀಯ ಸಂಸ್ಕೃತಿಯಲ್ಲಿ ಪಾಯಲ್ ಎಂದೂ ಕರೆಯಲ್ಪಡುವ ಗೆಜ್ಜೆಗಳು ಹೆಚ್ಚಿನ ಸಾಮಾಜಿಕ ಪ್ರಾಮುಖ್ಯತೆಯನ್ನು ಹೊಂದಿವೆ, ಬೆಳ್ಳಿಯ ಗೆಜ್ಜೆಗಳು ಹೆಚ್ಚಿನ ಜನರಿಗೆ ಅತ್ಯಂತ ಸಾಮಾನ್ಯ ಆಯ್ಕೆಯಾಗಿದೆ. ಬೆಳ್ಳಿಯ ಗೆಜ್ಜೆಗಳನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ಗೆಜ್ಜೆಗಳನ್ನು ಧರಿಸುವುದರಿಂದ ತಮ್ಮ ದೇಹಕ್ಕೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.
ಗೆಜ್ಜೆಯ ಮೂಲದ ಬಗ್ಗೆ ಯೋಚಿಸುವುದಾದರೆ ಕೆಲವು ಕಥೆಗಳಲ್ಲಿ ಪ್ರಾಚೀನ ಈಜಿಪ್ಟಿನವರೆಗೂ ವಿಸ್ತರಿಸಿದೆ. 8,000 ವರ್ಷಗಳ ಹಿಂದಿನAತೆ ಇತಿಹಾಸವನ್ನು ಹೊಂದಿದೆ. ಆ ಸಮಯದಲ್ಲಿ, ಗೆಜ್ಜೆಗಳನ್ನು ಅಲಂಕಾರ ಮತ್ತು ಸಂಪತ್ತಿನ ಸಂಕೇತವಾಗಿ ಧರಿಸಲಾಗುತ್ತಿತ್ತು.
ಗೆಜ್ಜೆಗಳು ಬ್ರಹ್ಮಾಂಡ ದಿಂದ ಶಕ್ತಿ (ದೈವಿಕ ಶಕ್ತಿ) ಮತ್ತು ಕ್ರಿಯಾ-ಶಕ್ತಿ (ಕ್ರಿಯೆಯ ಶಕ್ತಿ) ತರಂಗಗಳನ್ನು ಸಹ ಆಕರ್ಷಿಸುತ್ತವೆ. ಹೀಗಾಗಿ, ಗೆಜ್ಜೆಗಳನ್ನು ಧರಿಸುವ ಮಹಿಳೆಯ ದೇಹದ ಸುತ್ತಲೂ ರಾಜ ಪ್ರಧಾನ ಕವಚವನ್ನು ರಚಿಸಲಾಗುತ್ತದೆ. ಗೆಜ್ಜೆಗಳಿಂದ ಹೊರಸೂಸುವ ಸಾತ್ವಿಕ ಶಬ್ದ ತರಂಗಗಳು ಪರಿಸರವನ್ನು ಶುದ್ಧೀಕರಿಸುತ್ತವೆ ಎಂಬ ನಂಬಿಕೆ ಇದೆ.
ವೈಜ್ಞಾನಿಕವಾಗಿ ಪರಿಗಣಿಸುವುದಾದರೆ ಬೆಳ್ಳಿಯ ಗೆಜ್ಜೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ, ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಕಾಲುಗಳಿಗೆ ಬೆಳ್ಳಿಯ ಗೆಜ್ಜೆಗಳನ್ನು ಧರಿಸುವ ಮೂಲಕ, ದೇಹದ ತಾಪಮಾನವು ಸಮತೋಲನವಾಗಿರಿಸುತ್ತದೆ. ಆದ್ದರಿಂದ ಬೆಳ್ಳಿಯನ್ನು ಸೊಂಟದ ಕೆಳಭಾಗದಲ್ಲಿ ಧರಿಸಲಾಗುತ್ತದೆ. ಇದು ವೈಜ್ಞಾನಿಕ ಕಾರಣವಾಗಿದೆ.