ಬೆಂಗಳೂರು: ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ ನೆಟ್ವರ್ಕ್(GSTN), ಅಕ್ಟೋಬರ್ 1, 2024ರಿಂದ ಜಾರಿಗೆ ಬರುವಂತೆ, ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್(IMS)ನ ಪರಿಚಯವನ್ನು ಪ್ರಸ್ತಾವಿಸಿದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್(ITC) ಕ್ಲೇಮು ಪ್ರಕ್ರಿಯೆಯನ್ನು ಕ್ರಮಪಡಿಸುವುದು ಐಎಮ್ಎಸ್ ಉದ್ದೇಶವಾಗಿದ್ದರೂ, ಸರಿಯಾದ ತಯಾರಿಯ ಕೊರತೆಯು, ಅನುಸರಣಾ ಹೊರೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಬಂಡವಾಳದ ಸಮರ್ಥ ಅನುಷ್ಠಾನಕ್ಕೂ ಭಂಗತರಬಲ್ಲದು. ಈ ಹೊಸ ಸಿಸ್ಟಮ್ ಅಡಿ, ಸ್ವೀಕರಿಸುವ ತೆರಿಗೆದಾರರು, ಪ್ರತಿ ಇನ್ವಾಯ್ಸ್ ಅಥವಾ ಕ್ರೆಡಿಟ್ ನೋಟ್ಅನ್ನು ಸ್ವೀಕರಿಸಬೇಕಾಗುತ್ತದೆ ಅಥವಾ ತಿರಸ್ಕರಿಸಬೇಕಾಗುತ್ತದೆ ಅಥವಾ, ಪ್ರಸ್ತುತ ವ್ಯಾಪಾರ ಸಂಸ್ಥೆಗಳು ತಾವೇ ಸ್ವತಃ ಐಟಿಸಿ ಕ್ಲೇಮು ಮಾಡಬಹುದಾದ ವ್ಯವಸ್ಥೆಯ ಬದಲು ಅದನ್ನು ಬಾಕಿ ಇದೆ(ಪೆಂಡಿಂಗ್) ಎಂದು ಇರಿಸಿಕೊಳ್ಳಬೇಕಾಗುತ್ತದೆ. ಸೈದ್ಧಾಂತಿಕವಾಗಿ, ರೋಲ್ ಔಟ್ ನಂತರ, ಐಎಮ್ಎಸ್, ನೋಂದಾಯಿತ ಸ್ವೀಕೃತಿದಾರರು(ಫಲಾನುಭವಿಗಳು), ತಮ್ಮ GSTR-1ದಲ್ಲಿ ಸರಬರಾಜುದಾರರು ನೀಡಿರುವ ಇನ್ವಾಯ್ಸ್ಗಳೊಂದಿಗೆ ತಮ್ಮ ದಾಖಲೆಗಳನ್ನು ಸರಿಹೊಂದಿಸಿಕೊಳ್ಳುವ ಅವಕಾಶ ಒದಗಿಸಿದರೂ, ತೆರಿಗೆದಾರರು ಪ್ರಸ್ತುತ ಸ್ವ-ಮೌಲ್ಯಮಾಪನ ಮಾಡಿ ತಮ್ಮ ಜಿಎಸ್ಟಿ ರಿಟರ್ನ್ಗಳಲ್ಲಿ ಐಟಿಸಿ ಕ್ಲೇಮು ಮಾಡುತ್ತಿರುವುದರಿಂದ, ಐಎಮ್ಎಸ್ ಪ್ರಸ್ತಾವನೆಗೆ ಕಾನೂನು ಬೆಂಬಲದ ಕೊರತೆಯು ಒಂದು ದೊಡ್ಡ ಆತಂಕವಾಗಿದೆ.
ಎಂಪವರ್ ಇಂಡಿಯಾದ ಮಹಾನಿರ್ದೇಶಕ(ಡೈರೆಕ್ಟರ್ ಜನರಲ್) ಕೆ ಗಿರಿ, “ಸಾಮಾನ್ಯವಾಗಿ ವ್ಯಾಪಾರ ಸಂಸ್ಥೆಗಳು, ತಮ್ಮ ವಾರ್ಷಿಕ ಮಾರಾಟದ 30-35% ಮಾರಾಟವನ್ನು ಅಂತಿಮಗೊಳಿಸುವಂತಹ ಹಬ್ಬದ ಋತುವಿನ ಸಮಯದಲ್ಲಿ ಐಎಮ್ಎಸ್ ಪರಿಚಯವು ರೀಟೇಲ್ ಪರಿಸರವ್ಯವಸ್ಥೆಯ ಮೇಲೆ ಪ್ರಭಾವ ಬೀರಬಲ್ಲುದಾದ್ದರಿಂದ, ಅದರ ಪರಿಚಯವನ್ನು ಮುಂದೂಡುವುದು ವಿವೇಚನಾಯುಕ್ತವಾಗಿರುತ್ತದೆ. ಜೊತೆಗೆ, ರೀಟೇಲ್ ಪರಿಸರವ್ಯವಸ್ಥೆಗೆ, ಬ್ಯುಸಿಯಾಗಿರುವ ಮಾರಾಟ ಸಮಯದ ಮಧ್ಯದಲ್ಲಿ ಹೊಸ ಮಾರ್ಗಸೂಚಿಯನ್ನು ಅನುಸರಿಸುವುದು ಅನಿರೀಕ್ಷಿತ ಕಾರ್ಯಭಂಗವೂ ಆಗಬಹುದು. ಫಲಾನುಭವಿಯ ಕಾರ್ಯಾಚರಣೆಗಳ ಮೇಲೆ ಗೋಚರತೆ ಒದಗಿಸಬಲ್ಲ ಕಾರ್ಯಸ್ಥ ಸರಬರಾಜುದಾರ ಡ್ಯಾಶ್ಬೋರ್ಡ್ನ ಕೊರತೆಯು, ಅನುಷ್ಠಾನವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು.” ಎಂದು ಹೇಳಿದರು.
ಸುಧಾರಣೆಯ ಕ್ಷೇತ್ರಗಳು :
ಭಾಗೀದಾರರು, ಐಎಮ್ಎಸ್ನಲ್ಲಿ ಕೆಲವು ಸುಧಾರಣೆಗಳ ಅಗತ್ಯವನ್ನು ಗುರುತಿಸಿದ್ದಾರೆ. ಉದಾ: ಸರಬರಾಜುದಾರರಿಗೆ GSTR-1 ಮತ್ತು GSTR-3B ಫೈಲಿಂಗ್ ಸ್ಥಿತಿಗತಿಯ ಸೇರ್ಪಡೆ ಮತ್ತು ದರದ ಮಟ್ಟದಲ್ಲಿರುವ ಬದಲು ಇನ್ವಾಯ್ಸ್ ಮಟ್ಟದಲ್ಲಿ ಡೇಟಾವನ್ನು ಮಾನ್ಯಗೊಳಿಸುವ ಸಾಮರ್ಥ್ಯ.
ಗ್ರಾಹಕರು ಕ್ರೆಡಿಟ್ ನೋಟ್ಗಳನ್ನು ತಿರಸ್ಕರಿಸಿದಾಗ ಅದು ಸರಬರಾಜುದಾರರ ತೆರಿಗೆ ಬಾಧ್ಯತೆಗೆ ಸೇರಿಕೊಳ್ಳುವುದರಿಂದ, ಅದರ ಪರಿಗಣನೆಯು ಒಂದು ಪ್ರಮುಖ ಸಮಸ್ಯೆಯಾಗಿದೆ.
ಎಲ್ಲವನ್ನೂ ವ್ಯಾಪಿಸಿರುವ ಇಂತಹ ಒಂದು ಉಪಕ್ರಮದ ಯಶಸ್ಸಿಗೆ ಸಣ್ಣ ವ್ಯಾಪಾರ ಸಂಸ್ಥೆಗಳು ಹಾಗೂ ಕೊನೆ ರೀಟೇಲರ್ ನೊಂದಿಗೆ ಸಮಾಲೋಚನೆಯು ಬಹಳ ಮುಖ್ಯ.
ತೆರಿಗೆದಾರರಿಂದ ಬಂದಿರುವ ಕೆಲವು ಶಿಫಾರಸುಗಳೆಂದರೆ, ಕ್ರೆಡಿಟ್ ನೋಟ್ಗಳನ್ನು ಪೆಂಡಿಂಗ್ನಲ್ಲಿ ಇಡುವುದಕ್ಕೆ ಅನುಮತಿ, ಸ್ವಯಂಚಾಲಿತ ತೆರಿಗೆ ಬಾಧ್ಯತೆಯ ಸೇರ್ಪಡೆಗೆ ಮುನ್ನ ಸಾಕಷ್ಟು ಕಾಲಾವಕಾಶ ಒದಗಿಸುವುದು ಮತ್ತು ತಿರಸ್ಕರಿಸಲ್ಪಟ್ಟ ಕ್ರೆಡಿಟ್ನೋಟ್ಗಳನ್ನು ಆಫ್ಸೆಟ್ ಮಾಡಲು, ಡೆಬಿಟ್ ನೋಟ್ಗಳನ್ನು ನೀಡುವುದಕ್ಕೆ ಸರಬರಾಜುದಾರರಿಗೆ ಅವಕಾಶ ನೀಡುವುದು.
ಪ್ರಸ್ತುತದ ಪ್ರಸ್ತಾವನೆಯಲ್ಲಿ, ತಮ್ಮ ಗ್ರಾಹಕರಿಂದ ಕ್ರೆಡಿಟ್ ನೋಟ್ಗಳ ಯಾವುದೇ ತಪ್ಪಾದ ಅಥವಾ ವಂಚನಾಪೂರ್ವಕ ತಿರಸ್ಕರಣೆಯ ಕುರಿತಾದ ಯಾವುದೇ ವ್ಯಾಜ್ಯಕ್ಕೆ ಸರಬರಾಜ್ಯುದಾರರಿಗೆ ಯಾವುದೇ ಸ್ಪಷ್ಟ ಕಾರ್ಯತಂತ್ರವಿಲ್ಲ.
ಸರ್ಕಾರವು, ಐಎಮ್ಎಸ್ಅನ್ನು ಸೂಕ್ಷ್ಮಗೊಳಿಸುವುದನ್ನು ಮುಂದುವರಿಸುತ್ತಿರುವ ಸಮಯದಲ್ಲೇ, ಈ ಮೇಲಿನ ಆತಂಕಗಳನ್ನು ನಿವಾರಿಸಲು ಮತ್ತು ಹೊಸ ಅನುಸರಣಾ ಕ್ರಮಕ್ಕೆ ಸರಳವಾಗಿ ಪರಿವರ್ತಿತಗೊಳ್ಳಲು, ನೀತಿರಚನಕಾರರು ವ್ಯಾಪಾರ ಸಂಸ್ಥೆಗಳೊಂದಿಗೆ ನಿಕಟವಾಗಿ ತೊಡಗಿಕೊಳ್ಳುವುಉ ಅತ್ಯಾವಶ್ಯಕ. ಮುಂದಿನ ಹಣಕಾಸು ವರ್ಷದಿಂದ ಇನ್ಪುಟ್ ಸರ್ವಿಸ್ ವಿತರಣೆಯ ರೂಪದಲ್ಲಿ ಪ್ರಮುಖ ಜಿಎಸ್ಟಿ ಬದಲಾವಣೆಯನ್ನು ಸಂಸ್ಥೆಗಳು ಈಗಾಗಲೇ ನಿರ್ವಹಿಸುತ್ತಿದ್ದು, ಈ ಅಘೋಷಿತ ಬದಲಾವಣೆಯು, ಅನುಸರಣಾ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಹೊಸ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸಿಸಿಟಮ್ನ ಸಂಕೀರ್ಣತೆಗಳನ್ನು ನಿವಾರಿಸಲು ಸರ್ಕಾರ ಹಾಗೂ ವ್ಯಾಪಾರ ಸಮುದಾಯದ ನಡುವೆ ಒಂದು ಸಹಯೋಗಾತ್ಮಕ ದೃಷ್ಟಿಕೋನ ಏರ್ಪಡಬೇಕಾದುದು ಅತ್ಯಾವಶ್ಯಕ. ಐಎಮ್ಎಸ್ ಅನುಷ್ಠಾನಕ್ಕೆ ತಯಾರಿ ಮಾಡಿಕೊಳ್ಳಲು ವ್ಯಾಪಾರ ಸಂಸ್ಥೆಗಳಿಗೆ ಕನಿಷ್ಟ 12 ತಿಂಗಳ ಕಾಲಾವಕಾಶ ಒದಗಿಸಬೇಕು.