ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಸಂತೋಷ ಒದಗಿಸುವ ಉದ್ದೇಶದಿಂದ ‘ಬಿಗ್ ಟಿವಿ ಫೆಸ್ಟಿವಲ್’ ಪ್ರಾರಂಭಿಸಿದೆ. ಈ ಫೆಸ್ಟಿವಲ್ ನಲ್ಲಿ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ, ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿಗಳಂತಹ ಪ್ರೀಮಿಯಂ ಎಐ ಚಾಲಿತ ದೊಡ್ಡ ಪರದೆಯ ಟೆಲಿವಿಷನ್ಗಳ ಮೇಲೆ ಅತ್ಯುತ್ತಮ ಆಫರ್ ಗಳನ್ನು ಒದಗಿಸಲಾಗುತ್ತಿದೆ. ಸೀಮಿತ ಅವಧಿಯ ಈ ಫೆಸ್ಟಿವಲ್ ಸೆಪ್ಟೆಂಬರ್ 14ರಂದು ಆರಂಭಗೊಂಡಿದ್ದು, ನವೆಂಬರ್ 10ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಅತ್ಯಾಕರ್ಷಕ ಉಚಿತ ಕೊಡುಗೆಗಳು, ಕ್ಯಾಶ್ಬ್ಯಾಕ್ ಆಫರ್, 3- ವರ್ಷದ ವಾರಂಟಿ ಮತ್ತು ವಿಶೇಷ ಇಎಂಐ ಕೊಡುಗೆಗಳು ದೊರೆಯಲಿದೆ.
ಎಐ ಚಾಲಿತ ಫೀಚರ್ ಗಳ ಮೂಲಕ ಅತ್ಯುತ್ತಮ ದೃಶ್ಯ ವೈಭವ ಮತ್ತು ಅದ್ಭುತ ಗುಣಮಟ್ಟದ ಧ್ವನಿ ವ್ಯವಸ್ಥೆ ಒದಗಿಸುವ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಉದ್ದೇಶವನ್ನು ಸ್ಯಾಮ್ಸಂಗ್ ಬಿಗ್ ಟಿವಿ ಫೆಸ್ಟಿವಲ್ ಹೊಂದಿದೆ. ನಿಯೋ ಕ್ಯೂಎಲ್ಇಡಿ, ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿ ಶ್ರೇಣಿಗಳ ಆಯ್ದ ಮಾದರಿಗಳ ಮೇಲೆ ಕೊಡುಗೆಗಳು ಲಭ್ಯವಿವೆ.
ಈ ಅವಧಿಯಲ್ಲಿ ಗ್ರಾಹಕರು ಆಯ್ದ ಟಿವಿ ಖರೀದಿಗಳ ಜೊತೆಗೆ ರೂ. 290000 ಮೌಲ್ಯದ ಉಚಿತ ಸ್ಯಾಮ್ಸಂಗ್ ಟಿವಿ ಮಾಡೆಲ್ಗಳನ್ನು ಪಡೆಯಬಹುದು ಮತ್ತು ರೂ. 100000 ಮೌಲ್ಯದ ಉಚಿತ ಸೌಂಡ್ ಬಾರ್ ಅನ್ನು ಪಡೆಯಬಹುದು. ಸ್ಯಾಮ್ಸಂಗ್ ಶೇ.20ವರೆಗಿನ ಅತ್ಯಾಕರ್ಷಕ ಕ್ಯಾಶ್ ಬ್ಯಾಕ್ ಗಳನ್ನು ಸಹ ನೀಡುತ್ತಿದೆ. ಜೊತೆಗೆ 3-ವರ್ಷಗಳ ಸಮಗ್ರ ವಾರಂಟಿ ಒದಗಿಸಲಾಗುತ್ತದೆ. ಪ್ರೀಮಿಯಂ ದೊಡ್ಡ ಗಾತ್ರದ ಟಿವಿಗಳ ಮೇಲೆ ರೂ. 2777ರಿಂದ ಪ್ರಾರಂಭವಾಗುವ ಸುಲಭ ಇಎಂಐ ಸೌಲಭ್ಯಗಳನ್ನು ನೀಡುತ್ತದೆ. 36 ತಿಂಗಳವರೆಗಿನ ದೀರ್ಘಾವಧಿಯ ಇಎಂಐ ಸೌಲಭ್ಯ ಕೂಡ ಇದೆ. ಈ ಆಕರ್ಷಕ ಡೀಲ್ಗಳು samsung.com ನಲ್ಲಿ ಲಭ್ಯವಿರುತ್ತವೆ ಮತ್ತು ಭಾರತದಾದ್ಯಂತ ಇರುವ ಸ್ಯಾಮ್ಸಂಗ್ ಮಳಿಗೆಗಳಲ್ಲಿಯೂ ದೊರೆಯುತ್ತದೆ.
ಅಪ್ರತಿಮ ದೃಶ್ಯಾವಳಿ ಮತ್ತು ಅದ್ಭುತ ಧ್ವನಿ ಸೌಲಭ್ಯ ಒದಗಿಸಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಸ್ಯಾಮ್ಸಂಗ್ ನ ಈ ಕೊಡುಗೆಗಳು ಎಐ ತಂತ್ರಜ್ಞಾನವನ್ನು ಎಲ್ಲರಿಗೂ ಒದಗಿಸುವ ಮತ್ತು ಅದರ ಇತ್ತೀಚಿನ ಪ್ರೀಮಿಯಂ ಶ್ರೇಣಿಯ ಟಿವಿಗಳನ್ನು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಎಐ ಅಪ್ಸ್ಕೇಲಿಂಗ್ ಮತ್ತು ಎಐ ಆಪ್ಟಿಮೈಸೇಶನ್ನಿಂದ ಚಾಲಿತವಾಗಿರುವ ಈ ಪ್ರೀಮಿಯಂ ಎಐ ಟಿವಿಗಳು ಪ್ರಸಾರವಾಗುವ ಕಂಟೆಂಟ್ ಗಳಿಗೆ ಜೀವ ತುಂಬುತ್ತವೆ. ಕ್ಯೂ-ಸಿಂಫನಿ ಮತ್ತು ಡಾಲ್ಬಿ ಅಟ್ಮಾಸ್ ಸೌಲಭ್ಯದ ಮೂಲಕ ಪ್ರತೀ ದೃಶ್ಯವನ್ನು ಆಸ್ವಾದಿಸುವಂತೆ ಮಾಡುತ್ತದೆ. ಜೊತೆಗೆ ಇದರಲ್ಲಿ ಮಲ್ಟಿ ಡೈಮೆನ್ಷನಲ್ ಅಂದ್ರೆ ಬಹು ಆಯಾಮದ ಧ್ವನಿ ವ್ಯವಸ್ಥೆ ಲಭ್ಯವಿದ್ದು, ಡಿಸ್ ಪ್ಲೇಯ ಪ್ರತಿಯೊಂದು ಮೂಲೆಯಿಂದಲೂ ಧ್ವನಿ ಕೇಳಿಸುತ್ತದೆ. ಆ ಮೂಲಕ ಸಿನಿಮಾ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುವಂಥ ಅನುಭವವನ್ನು ಒದಗಿಸುತ್ತದೆ. ಜೊತೆಗೆ ಬಳಕೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸ್ಯಾಮ್ಸಂಗ್ ನಾಕ್ಸ್ ಭದ್ರತಾ ವ್ಯವಸ್ಥೆ ಹೊಂದಿದ್ದು, ಅನಧಿಕೃತ ಚಟುವಟಿಕೆಗಳಿಂದ ಟಿವಿ ಮತ್ತು ಅದಕ್ಕೆ ಸಂಪರ್ಕಗೊಂಡ ಇತರ ಸಾಧನಗಳಿಗೆ ರಕ್ಷಣೆ ಒದಗಿಸುತ್ತದೆ.
ಈ ಕುರಿತು ಮಾತನಾಡಿರುವ ಸ್ಯಾಮ್ಸಂಗ್ ಇಂಡಿಯಾದ ವಿಷುವಲ್ ಡಿಸ್ ಪ್ಲೇ ಬಿಸಿನೆಸ್ನ ಹಿರಿಯ ನಿರ್ದೇಶಕ ವಿಪ್ಲೇಶ್ ಡ್ಯಾಂಗ್ ಅವರು, “ಈ ಕಾಲದ ಆಧುನಿಕ ಭಾರತೀಯ ಮನೆಗಳಲ್ಲಿ ಟೆಲಿವಿಷನ್ ಗಳು ಲಿವಿಂಗ್ ರೂಮಿನ ಕೇಂದ್ರ ಸ್ಥಾನದಲ್ಲಿ ಕಾಣಿಸುತ್ತವೆ. ಈ ಟಿವಿಗಳು ತಂತ್ರಜ್ಞಾನ ಮತ್ತು ಜೀವನಶೈಲಿಯನ್ನು ಸೊಗಸಾಗಿ ಸಂಯೋಜಿಸಿವೆ. ಭಾರತದಲ್ಲಿ ದೊಡ್ಡ ಗಾತ್ರದ ಪರದೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಮತ್ತು ಗ್ರಾಹಕರಿಗೆ ಪ್ರೀಮಿಯಂ ಎಐ ಅನುಭವವನ್ನು ಒದಗಿಸುವ ಕಾರಣದಿಂದ ಸ್ಯಾಮ್ಸಂಗ್ ಬಿಗ್ ಟಿವಿ ಫೆಸ್ಟಿವಲ್ ಅನ್ನು ಆಯೋಜಿಸಲು ನಾವು ಹೆಮ್ಮೆ ಪಡುತ್ತೇವೆ. ಎಐ ಚಾಲಿತ ಫೀಚರ್ ಗಳ ಮೂಲಕ ಅತ್ಯುತ್ತಮ ದೃಶ್ಯ ವೈಭವ ಮತ್ತು ಅದ್ಭುತ ಗುಣಮಟ್ಟದ ಧ್ವನಿ ವ್ಯವಸ್ಥೆ ಒದಗಿಸುವ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿರುವ ಈ ಟೆಲಿವಿಷನ್ಗಳು ಸ್ಯಾಮ್ಸಂಗ್ ನಾಕ್ಸ್ ಭದ್ರತಾ ಫೀಚರ್ ಹೊಂದಿದ್ದು, ಆ ಮೂಲಕ ಅತ್ಯುತ್ತಮ ಸುರಕ್ಷತೆಯನ್ನು ಒದಗಿಸಲಾಗುತ್ತದೆ. ಬಿಗ್ ಟಿವಿ ಫೆಸ್ಟಿವಲ್ ಕಾರ್ಯಕ್ರಮನು ಸ್ಯಾಮ್ಸಂಗ್ ಎಐ ಟಿವಿ ಶ್ರೇಣಿಗೆ ಅಪ್ಗ್ರೇಡ್ ಹೊಂದುವ ಮೂಲಕ ಹಬ್ಬದ ಸೀಸನ್ಗೆ ಮುಂಚಿತವಾಗಿ ಮನೆಯ ಮನರಂಜನಾ ವ್ಯವಸ್ಥೆಯನ್ನು ಅಪ್ ಗ್ರೇಡ್ ಮಾಡಲು ಗ್ರಾಹಕರಿಗೆ ಪ್ರೋತ್ಸಾಹ ನೀಡುತ್ತದೆ” ಎಂದು ಹೇಳಿದ್ದಾರೆ.
ನಿಯೋ ಕ್ಯೂಎಲ್ಇಡಿ 8ಕೆ
ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಎನ್ ಕ್ಯೂ8 ಎಐ ಜೆನ್2 ಪ್ರೊಸೆಸರ್ ಹೊಂದಿದ್ದು, ಇದು ಎಐ ಆಧರಿತ ಕಂಟೆಂಟ್ ವೀಕ್ಷಣೆಯ ಅದ್ಭುತ ಅನುಭವವನ್ನು ಒದಗಿಸುತ್ತದೆ. ವಾಸ್ತವ ಜೀವನದಂತೆ ಕಾಣಿಸುವ ಗುಣಮಟ್ಟದ ಚಿತ್ರವನ್ನು ಕಾಣಿಸುತ್ತದೆ. ಎನ್ ಕ್ಯೂ8 ಎಐ ಜೆನ್2 ಪ್ರೊಸೆಸರ್ 256 ಎಐ ನ್ಯೂರಲ್ ನೆಟ್ ವರ್ಕ್ ಗಳಿಂದ ಕಾರ್ಯ ನಿರ್ವಹಿಸುತ್ತದೆ. ಈ ನ್ಯೂರಲ್ ನೆಟ್ ವರ್ಕ್ ಗಳು ಓಟಿಟಿ ಸ್ಟ್ರೀಮಿಂಗ್ ಆಗುವಾಗ, ವೀಡಿಯೊ ಆಟಗಳನ್ನು ಆಡುವಾಗ ಅಥವಾ ಕ್ರೀಡೆಗಳ ನೇರಪ್ರಸಾರವನ್ನು ವೀಕ್ಷಿಸುವಾಗ 8ಕೆ ದೃಶ್ಯ ಅನುಭವವನ್ನು ಒದಗಿಸಲು ಚಿತ್ರ ಮತ್ತು ಧ್ವನಿ ಎರಡನ್ನೂ 8ಕೆಗೆ ಪರಿವರ್ತಿಸಲು ಸಹಾಯ ಮಾಡುತ್ತದೆ. ಸ್ಯಾಮ್ಸಂಗ್ನ ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಅತ್ಯುತ್ತಮ ದೃಶ್ಯಾವಳಿಗಳನ್ನು ರಚಿಸಲು ಮತ್ತು ಹೈ-ಸ್ಪೀಡ್ ಗೇಮಿಂಗ್ ಗಾಗಿ ಸಿಕ್ಕಾಪಟ್ಟೆ ವೇಗವನ್ನು ಒದಗಿಸಲು ಮೋಷನ್ ಆಕ್ಸಲರೇಟರ್ ಟರ್ಬೋ ಪ್ರೊ ಫೀಚರ್ ಹೊಂದಿದೆ.
ನಿಯೋ ಕ್ಯೂಎಲ್ಇಡಿ 4ಕೆ
2024 ನಿಯೋ ಕ್ಯೂಎಲ್ಇಡಿ 4ಕೆ ಉತ್ಪನ್ನವು ಎನ್ ಕ್ಯೂ4 ಎಐ ಜೆನ್2 ಪ್ರೊಸೆಸರ್ನಿಂದ ಚಾಲಿತವಾಗಿದ್ದು, ಈ ಪ್ರೊಸೆಸರ್ ಯಾವುದೇ ರೀತಿಯ ಕಂಟೆಂಟ್ ಗೆ ಜೀವ ತುಂಬುತ್ತದೆ ಮತ್ತು ಅದನ್ನು ಅದ್ಭುತವಾದ 4ಕೆ ರೆಸೆಲ್ಯೂಷನ್ ನಲ್ಲಿ ವೀಕ್ಷರಿಗೆ ತಲುಪಿಸುತ್ತದೆ. ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಉನ್ನತಿಗೇರಿಸಿದ ಸ್ಕ್ರೀನ್ ಸಂಕೀರ್ಣ ದೃಶ್ಯಗಳ ಸಂದರ್ಭದಲ್ಲಿಯೂ ಅತ್ಯುತ್ತಮ ಕಾಂಟ್ರಾಸ್ಟ್ ಒದಗಿಸುತ್ತದೆ. ನಿಖರವಾಗಿ ಬಣ್ಣವನ್ನು ತೋರಿಸಲು ವಿಶ್ವದ ಮೊದಲ ಪ್ಯಾನ್ ಟೋನ್ ವ್ಯಾಲಿಡೇಟೆಡ್ ಡಿಸ್ ಪ್ಲೇ ಹೊಂದಿದೆ ಮತ್ತು ಅದ್ಭುತ ಆಡಿಯೋ ಅನುಭವ ಒದಗಿಸಲು ಡಾಲ್ಬಿ ಅಟ್ಮೋಸ್ ಸೌಲಭ್ಯ ಹೊಂದಿದೆ. ಜೊತೆಗೆ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಗಳು ಅಂತಿಮ 4ಕೆ ವೀಕ್ಷಣಾ ಅನುಭವವನ್ನು ನೀಡುತ್ತದೆ.
ಓಎಲ್ಇಡಿ ಟಿವಿ
ಪ್ರಪಂಚದ ಮೊದಲ ಗ್ಲೇರ್- ಪ್ರೀ ಓಎಲ್ಇಡಿ ಟಿವಿ ಆಗಿದ್ದು, ಯಾವುದೇ ರೀತಿಯ ಬೆಳಕಿನ ಸ್ಥಿತಿಯಲ್ಲಿಯೂ ಅನವಶ್ಯ ರಿಫ್ಲೆಕ್ಷನ್ ಉಂಟಾಗದಂತೆ ನೋಡಿಕೊಳ್ಳುತ್ತದೆ ಮತ್ತೆ ಕಡು ಕಪ್ಪು ಹಾಗೂ ಸ್ಪಷ್ಟ ಚಿತ್ರಗಳನ್ನು ಕಾಣಿಸುವಂತೆ ಮಾಡುತ್ತದೆ. ಅಸಾಧಾರಣ ಎನ್ ಕ್ಯೂ4 ಎಐ ಜೆನ್2 ಪ್ರೊಸೆಸರ್ ನಿಂದ ನಡೆಸಲ್ಪಡುವ ಈ ಸ್ಯಾಮ್ಸಂಗ್ನ ಓಎಲ್ಇಡಿ ಟಿವಿ ರಿಯಲ್ ಡೆಪ್ತ್ ಎನ್ಹಾನ್ಸರ್ ಮತ್ತು ಓಎಲ್ಇಡಿ ಎಚ್ ಡಿ ಆರ್ ಪ್ರೊ ನಂತಹ ಫೀಚರ್ ಗಳನ್ನು ಹೊಂದಿದೆ. ಆ ಮೂಲಕ ಚಿತ್ರದ ಗುಣಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಜೊತೆಗೆ ಮೋಷನ್ ಆಕ್ಸಲರೇಟರ್ ಎಂಬ ಫೀಚರ್ ಸುಗಮ ಚಲನೆ ಮತ್ತು ತ್ವರಿತ ರೆಸ್ಪಾನ್ಸ್ ರೇಟ್ ಒದಗಿಸುತ್ತದೆ. ಸ್ಯಾಮ್ ಸಂಗ್ ಓಎಲ್ಇಡಿ ಗೇಮಿಂಗ್ ಗೆ ಅಂತಿಮ ಆಯ್ಕೆಯಾಗಿದೆ. ಸಪೂರ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ವೀಕ್ಷಣಾ ಸ್ಥಳದ ಅಂದವನ್ನು ಹೆಚ್ಚಿಸುತ್ತವೆ.
ಕ್ಯೂಎಲ್ಇಡಿ ಟಿವಿ
ಸ್ಯಾಮ್ಸಂಗ್ನ ಕ್ಯೂಎಲ್ಇಡಿ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನ ಹೊಂದಿದ್ದು, ಅತ್ಯದ್ಭುತ ಚಿತ್ರ ಗುಣಮಟ್ಟವನ್ನು ಒದಗಿಸುತ್ತದೆ. ಶೇ.100 ಬಣ್ಣದ ಪರಿಮಾಣವನ್ನು ಒದಗಿಸುವ ಈ ಟಿವಿ, ಯಾವುದೇ ಬ್ರೈಟ್ ನೆಸ್ ಲೆವೆಲ್ ನಲ್ಲಿದ್ದರೂ ನಿಜವಾದ ಬಣ್ಣಗಳನ್ನು ಕಾಣಿಸುತ್ತವೆ ಮತ್ತು ವೈಬ್ರೆಂಟ್ ಆಗಿ ದೃಶ್ಯಗಳನ್ನು ತೋರಿಸುತ್ತವೆ. ಇದರ ಅಲ್ಟ್ರಾ- ಸ್ಲಿಮ್ ವಿನ್ಯಾಸವು ಯಾವುದೇ ಮನೆಯೊಳಗೆ ಸೊಗಸಾಗಿ ಬೆರೆಯುತ್ತದೆ. ಲಿವಿಂಗ್ ರೂಮ್ ಗೆ ಚಂದವನ್ನು ಸೇರಿಸುತ್ತದೆ.
ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿ
ಸ್ಯಾಮ್ಸಂಗ್ನ ಯು ಎಚ್ ಡಿ ಟಿವಿ ಡೈನಾಮಿಕ್ ಕ್ರಿಸ್ಟಲ್ ಕಲರ್ ತಂತ್ರಜ್ಞಾನ ಹೊಂದಿದ್ದು, ಬಣ್ಣಗಳಿಗೆ ಜೀವ ತುಂಬುತ್ತದೆ. ಪ್ರತಿ ಶೇಡ್ ನಲ್ಲಿಯೂ ಅತ್ಯುತ್ತಮ ವೇರಿಯೇಷನ ಗಳು ಮತ್ತು ಸೂಕ್ಷ್ಮ ವಿವರಗಳನ್ನು ಕಾಣಿಸುತ್ತವೆ. 4ಕೆ ಅಪ್ಸ್ಕೇಲಿಂಗ್ ತಂತ್ರಜ್ಞಾನವು ಚಿತ್ರವನ್ನು ಡಿಸ್ ಪ್ಲೇಯಲ್ಲಿ 4ಕೆ ಗುಣಮಟ್ಟದಲ್ಲಿ ತೋರಿಸುತ್ತದೆ. ಆಕರ್ಷಕವಾದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ಮೋಷನ್ ಆಕ್ಸಲರೇಟರ್ ಫೀಚರ್ ವೇಗವಾಗಿ ಚಲಿಸುವ ದೃಶ್ಯಗಳನ್ನು ಕೂಡ ಸುಗಮವಾಗಿಸುತ್ತದೆ ಮತ್ತು ಸ್ಪಷ್ಟವಾಗಿರಿಸುತ್ತದೆ, ಹಾಗಾಗಿ ಪ್ರತಿ ಗೇಮ್, ಚಲನಚಿತ್ರ ಅಥವಾ ಶೋ ಅನ್ನು ಆನಂದಿಸುವಂತೆ ಮಾಡುತ್ತದೆ.