ಬೆಂಗಳೂರು: ಈ ವರ್ಷದ ವಿಶ್ವ ಪರಿಸರ ಆರೋಗ್ಯ ದಿನದ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಸುದೀರ್ಘ ಸಮಯದಿಂದ ಪರಿಸರ ಸುಸ್ಥಿರತೆಗೆ ಕೆಲಸ ಮಾಡುತ್ತಿರುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾರಿದೆ. ಬಹಳ ಬರ್ಷಗಳಿಂದ ಟಿಕೆಎಂ ಉದ್ದೇಶಪೂರ್ವಕವಾಗಿ ಸುಸ್ಥಿರ ಉದ್ಯಮ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾ ಬಂದಿದೆ. ಆ ಮೂಲಕ ಕಾರು ತಯಾರಕ ಕಂಪನಿಯಿಂದ ಸಾರಿಗೆ ಕಂಪನಿಯಾಗಿ ಬದಲಾವಣೆ ಹೊಂದಿದೆ. ‘ಗ್ರಹಕ್ಕೆ ಗೌರವ ಸಮರ್ಪಣೆ’ ಎಂಬ ತತ್ವವನ್ನು ಇಟ್ಟುಕೊಂಡು ಟೊಯೋಟಾ ಸಂಸ್ಥೆಯು 2015ರ ಅಕ್ಟೋಬರ್ ನಲ್ಲಿ ಜಾಗತಿಕ ಮಟ್ಟದಲ್ಲಿ ‘ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ 2050’ (ಟಿಇಸಿ 2050) ಅನ್ನು ಘೋಷಿಸಿತ್ತು. ಈ ಚಾಲೆಂಜ್ ಒಟ್ಟು ಆರು ಪರಿಸರ ಸವಾಲುಗಳನ್ನು ಒಳಗೊಂಡಿತ್ತು.
ಮೂರು ಸವಾಲುಗಳುಳ್ಳ ಮೊದಲ ಸೆಟ್ ನಮ್ಮ ಉತ್ಪನ್ನಗಳಿಂದ, ಉತ್ಪಾದನಾ ಪ್ರಕ್ರಿಯೆಗಳಿಂದ ಮತ್ತು ಸಂಪೂರ್ಣ ಮೌಲ್ಯ ಸರಪಳಿ ಪ್ರಕ್ರಿಯೆಯಗಳಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ನಿಟ್ಟಿನಲ್ಲಿ ರೂಪುಗೊಂಡಿತ್ತು. ನಂತರದ 3 ಸವಾಲುಗಳು ಒಟ್ಟಾರೆ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
ಟಿಇಸಿ 2025ಕ್ಕೆ ಪೂರಕವಾಗಿ ಟಿಕೆಎಂ ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿಕೊಂಡಿದ್ದು, ತನ್ನ ಉತ್ಪನ್ನಗಳು ಮತ್ತು ಸರ್ವೀಸ್ ಗಳನ್ನು ಮೀರಿದ ನವೀನ ರೀತಿಯ ಕಾರ್ಯಗಳನ್ನು ಮಾಡುತ್ತಿದೆ. ವಿಶೇಷವಾಗಿ ಪರಿಸರ ಸಂರಕ್ಷಣೆ (ಉದಾಹರಣೆಗೆ: ಅರಣ್ಯೀಕರಣ, ಪ್ರಾದೇಶಿಕ ಜೀವವೈವಿಧ್ಯತೆ ಸಂರಕ್ಷಣೆ ಇತ್ಯಾದಿ), ಸಂಪನ್ಮೂಲ ಸಂರಕ್ಷಣೆ (ನೀರು, ಸಾಮಾಗ್ರಿಗಳು ಮತ್ತು ವಿದ್ಯುತ್ ನಿರ್ವಹಣೆ) ಮತ್ತು ಸಂಸ್ಕರಿಸಿದ ವಸ್ತು ಬಳಕೆ, ಮರುಬಳಕೆಯ ಯೋಜನೆಗಳು ಮತ್ತಿತರ ಪರಿಸರಕ್ಕೆ ಒಳಿತು ಮಾಡುವ ಯೋಜನೆಗಳಲ್ಲಿ ತೊಡಗಿಸಿಕೊಂಡು ಮಹತ್ತರ ಸಾಧನೆ ಮಾಡುತ್ತಿದೆ.
ಜೊತೆಗೆ ಕಂಪನಿಯು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದರ ಜೊತೆಗೆ ವಿವಿಧ ಪಾಲುದಾರರು (ಉದ್ಯೋಗಿಗಳು, ಜನ ಸಮುದಾಯ, ಪೂರೈಕೆದಾರರು, ವಿತರಕರು, ಶಾಲಾ ಮಕ್ಕಳು, ಇತ್ಯಾದಿ) ಮರು ಬಳಕೆ ಆಧರಿತ ಸಮಾಜದ ಭಾಗವಾಗುವಂತೆ ಮಾಡುವ ಮೂಲಕ ಮತ್ತು ‘ಪ್ರಕೃತಿಯೊಂದಿಗೆ ಸಾಮರಸ್ಯ’ದ ಜೀವನ ನಡೆಸಲು ಪ್ರೋತ್ಸಾಹಿಸುವ ಮೂಲತ ಸುಸ್ಥಿರ ಬದುಕನ್ನು ಸಾಗಿಸುವಂತೆ ಪ್ರೋತ್ಸಾಹಿಸುತ್ತಿದೆ.
ಉತ್ಪನ್ನ ವಿಭಾಗದಲ್ಲಿ ಟಿಕೆಎಂ ಸಂಸ್ಥೆಯು ದೇಶದ ಪ್ರಸ್ತುತ ಗ್ರಾಹಕರ ಅಗತ್ಯಗಳು, ಮೂಲಸೌಕರ್ಯ ಸೌಲಭ್ಯಗಳು ಮತ್ತು ಇಂಧನೆ ಸಂಯೋಜನೆ ಇತ್ಯಾದಿ ವಿಚಾರಗಳನ್ನು ಆಧರಿಸಿ ಬಹು-ಮಾರ್ಗ ವಿಧಾನವನ್ನು (ಇಎಕ್ಸ್ಇವಿಗಳು – ಹೈಬ್ರಿಡ್ ಎಲೆಕ್ಟ್ರಿಕ್, ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್, ಎನರ್ಜಿ ಸೆಲ್ ಎಲೆಕ್ಟ್ರಿಕ್ ವೆಹಿಕಲ್, ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಇತ್ಯಾದಿ) ಅಳವಡಿಸಿಕೊಳ್ಳುವ ಮೂಲಕ ಇಂಗಾಲದ ತಟಸ್ಥತೆಯ ಗುರಿ ಸಾಧಿಸಲು ಬೇಕಾಗುವ ಪ್ರಾಯೋಗಿಕ ಸಾರಿಗೆ ಉತ್ಪನ್ನಗಳನ್ನು ಒದಗಿಸುತ್ತಿದೆ. ಕಂಪನಿಯು ಜೈವಿಕ ಶಕ್ತಿಯಿಂದ ನಡೆಸಲ್ಪಡುವ ನವೀನ ಅತ್ಯಾಧುನಿಕ ವಾಹನ ತಂತ್ರಜ್ಞಾನಗಳನ್ನು ಕೂಡ ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. (ಉದಾ: ಎಥೆನಾಲ್) ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಬಳಸಲ್ಪಡುವ ಫಾಸಿಲ್ ಇಂಧನ ಬಳಕೆಯನ್ನು ಕಡಿಮೆ ಮಾಡಲಾಗುತ್ತದೆ. ಜೊತೆಗೆ ವೆಲ್-ಟು-ವೀಲ್ (ಡಬ್ಲ್ಯೂ2 ಡಬ್ಲ್ಯೂ) ಆಧಾರದ ಮೇಲೆ ಇಂಗಾಲದ ಹೊರಸೂಸುವಿಕೆಯನ್ನು ಕೂಡ ಕಡಿಮೆ ಮಾಡುತ್ತದೆ. ದೊರೆತಿರುವ ವಿಶಿಷ್ಟವಾದ ಅವಕಾಶವನ್ನು ಬಳಸಿಕೊಂಡು ಟಿಕೆಎಂ ಸಂಸ್ಥೆಯು 2023ರ ಆಗಸ್ಟ್ ನಲ್ಲಿ ಟಿಕೆಎಂ ವಿಶ್ವದ ಮೊದಲ ಬಿಎಸ್6 2ನೇ ಹಂತದ ಎಲೆಕ್ಟ್ರಿಫೈಡ್ ಫ್ಲೆಕ್ಸ್ ಫ್ಯುಯಲ್ ವೆಹಿಕಲ್ ನ ಮೂಲಮಾದರಿಯನ್ನು ಅನಾವರಣಗೊಳಿಸಿತು.
ಇವೆಲ್ಲದರ ಜೊತೆಗೆ ಕಂಪನಿಯು ತನ್ನ ಉತ್ಪಾದನಾ ಪ್ರಕ್ರಿಯೆಯಲ್ಲಿಯೂ ವಿವಿಧ ರೀತಿಯ ಸುಸ್ಥಿರ ಅಭ್ಯಾಸಗಳನ್ನು ಜಾರಿಗೆ ತಂದಿದೆ. 2035ರ ವೇಳೆಗೆ ‘ಉತ್ಪಾದನಾ ಪ್ರಕ್ರಿಯೆಗಳಲ್ಲಿ ಒಟ್ಟಾರೆ ಶೂನ್ಯ ಇಂಗಾಲ’ ಗುರಿ ಸಾಧಿಸುವ ಉದ್ದೇಶ ಇಟ್ಟುಕೊಂಡಿದೆ. ಅದರ ಮೌಲ್ಯ ಸರಪಳಿಯಲ್ಲಿಯೂ ಸುಸ್ಥಿರ ಅಭ್ಯಾಸಗಳನ್ನು ಇಟ್ಟುಕೊಳ್ಳಲು ಪ್ರೋತ್ಸಾಹಿಸಿದೆ.
ಟಿಕೆಎಂ ಇಲ್ಲಿಯವರೆಗೆ ಮಾಡಿರುವ ಪ್ರಮುಖ ಪರಿಸರ ಸ್ನೇಹಿ ಸಾಧನೆಗಳು ಈ ಕೆಳಗಿನಂತಿವೆ:
ನೀರಿನ ನಿರ್ವಹಣೆ: ಕಂಪನಿಯು ನೀರನ್ನು ಸೂಕ್ತರೀತಿಯಲ್ಲಿ ಬಳಸಲು, ಅತ್ಯುತ್ತಮವಾಗಿಸಲು ಮತ್ತು ಸಂರಕ್ಷಿಸಲು 4ಆರ್ (ರೆಡ್ಯೂಸ್ (ಕಡಿಮೆ ಬಳಕೆ), ರೀಯೂಸ್, ರೀಸೈಕಲ್, ರೀಚಾರ್ಜ್) ವಿಧಾನವನ್ನು ಅನುಸರಿಸುತ್ತಿದ್ದು, ‘ವಾಟರ್ ಪಾಸಿಟಿವ್’ ಗುರಿಯನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಉತ್ಪಾದಾನಾ ಪ್ರಕ್ರಿಯೆ ಮತ್ತು ಉತ್ಪಾದನೆ ಹೊರತಾದ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು 55,500 m3 ಸಾಮರ್ಥ್ಯದ ಮಳೆನೀರು ಕೊಯ್ಲು ಕೆರೆಗಳನ್ನು ನಿರ್ಮಾಣ ಮಾಡಿದೆ. ಜೊತೆಗೆ ಶೇ.60ರವರೆಗಿನ ನೀರನ್ನು ರೀಸೈಕಲ್ (ಸಂಸ್ಕರಣೆ) ಬಳಿಕ ಮರುಬಳಕೆ ಮಾಡಬಹುದಾದ ಅತ್ಯಾಧುನಿಕ ತ್ಯಾಜ್ಯನೀರಿನ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ. ಈ ಮೂಲಕ ಉತ್ಪಾದನೆಗೆ ಅವಶ್ಯವಿರುವ ನೀರಿನ ಶೇ.89.3ರಷ್ಟನ್ನು ರೀಸೈಕಲ್ ಮಾಡಿದ ನೀರು ಮತ್ತು ಮಳೆನೀರಿನ ಮೂಲಕ ಪೂರೈಸಲಾಗುತ್ತದೆ. ಮಳೆನೀರು ಕೊಯ್ಲು ಮಾಡಿರುವುದರಿಂದ ಮತ್ತು ಕ್ಯಾಂಪಸ್ ನಲ್ಲಿ 18 ರೀಚಾರ್ಜ್ ಹೊಂಡಗಳನ್ನು ನಿರ್ಮಾಣ ಮಾಡಿರುವ ಪರಿಣಾಮದಿಂದ ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ಪರಿಸರದ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಏರಿಕೆ ಆಗಿರುವುದು ತಿಳಿದು ಬಂದಿದೆ. ವಿಶೇಷವಾಗಿ ಪ್ರಸ್ತುತ ಮಳೆಗಾಲ ಪೂರ್ವ ಮತ್ತು ಮಳೆಗಾಲದ ನಂತರದ ಸಮಯದಲ್ಲಿಯೂ ಸರಾಸರಿ ಅಂತರ್ಜಲ ಮಟ್ಟ 27 ಅಡಿ ಇದೆ. (2009ರಲ್ಲಿ 90 ಅಡಿ ಇತ್ತು).
ಕಸದಿಂದ ರಸ (ಮರುಬಳಕೆ): “ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸುವಿಕೆ ಮತ್ತು ಜವಾಬ್ದಾರಿಯುತ ನಿರ್ವಹಣೆ” ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಟಿಕೆಎಂ ರೀಸೈಕಲ್ ಪದ್ಧತಿ ಆಧರಿತ ಸಮಾಜ ನಿರ್ಮಾಣಕ್ಕೆ ತುಡಿಯುತ್ತಿದೆ. ‘ಶೂನ್ಯ ತ್ಯಾಜ್ಯದಿಂದ ನೆಲಭರ್ತಿ’ ಕಂಪನಿ ಎಂದು ಗುರುತಿಸಿಕೊಳ್ಳುವ ಗುರಿಯನ್ನಿಟ್ಟುಕೊಂಡು ಶೇ. 96ಕ್ಕಿಂತಲೂ ಹೆಚ್ಚು ತ್ಯಾಜ್ಯವನ್ನು ರೀಸೈಕಲ್ ಅಥವಾ ಮರುಬಳಕೆ ಮಾಡಲಾಗುತ್ತದೆ.
ದಕ್ಷ ಶಕ್ತಿ ಬಳಕೆ ಮತ್ತು ನವೀಕರಿಸಬಹುದಾದ ಶಕ್ತಿಯ ಅಳವಡಿಕೆ: ನವೀಕರಿಸಬಹುದಾದ ಶಕ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಇಂಧನ ಉಳಿತಾಯ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಟಿಕೆಎಂ ದಕ್ಷ ಶಕ್ತಿ ಬಳಕೆಯಲ್ಲಿ ನಿರಂತರವಾಗಿ ಸುಧಾರಣೆಗಳನ್ನು ಮಾಡುತ್ತಾ ಬಂದಿದೆ. ಟಿಕೆಎಂ 2021ರ ಜೂನ್ ತಿಂಗಳಿಂದ ಗ್ರಿಡ್ ವಿದ್ಯುತ್ ನಲ್ಲಿ ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯನ್ನು ಬಳಸುತ್ತಿದೆ. ಈ ಬದಲಾವಣೆಯಿಂದ ಆರ್ಥಿಕ ವರ್ಷ 23-24ರಲ್ಲಿ 95,082 ಟನ್ ಇಂಗಾಲದ ಡೈ ಆಕ್ಸೈಡ್ ಕಡಿಮೆಯಾಗಿದೆ. 2023ರ ಏಪ್ರಿಲ್ ಹೊತ್ತಿಗೆ ಕಂಪನಿಯು ತನ್ನ ಕಾರ್ಯಾಚರಣೆಗಳಲ್ಲಿ ಶೇ.100ರಷ್ಟು ಪಿ ಎನ್ ಜಿ ಬಳಕೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದೆ. ಈ ಯೋಜನೆಯಿಂದ ಪ್ರತಿ ವಾಹನದ CO2 ಹೊರಸೂಸುವಿಕೆಯಲ್ಲಿ ಶೇ.33ರಷ್ಟು ಕಡಿಮೆಯಾಗಿದೆ. ಇದರಿಂದ ಒಟ್ಟಾರೆಯಾಗಿ 2,051 ಟನ್ CO2 ಇಳಿಕೆ ಸಾಧ್ಯವಾಗಿದೆ. ಸೌರ ಪ್ರತಿಫಲಕಗಳ (ಸೋಲಾರ್ ರಿಫ್ಲೆಕ್ಟರ್) ಮೂಲಕ ಹೀಟ್ ಪಂಪ್, ಡ್ರೈ ಬೂತ್ ಅಳವಡಿಕೆ ಇತ್ಯಾದಿಯಂತಹ ತಂತ್ರಜ್ಞಾನಗಳು ಮತ್ತು ಆಪ್ಟಿಮೈಸ್ಡ್ ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಗಳ ಕಾರಣದಿಂದ ಅದೇ ಅವಧಿಯಲ್ಲಿ 5000+ ಟನ್ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗಿದೆ.
ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯತೆಯ ಸಂರಕ್ಷಣೆ: ಪರಿಸರ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿರುವ ಕಂಪನಿಯು ಪ್ರಕೃತಿ ಸಂರಕ್ಷಣೆ ವಿಚಾರದಲ್ಲಿ ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಹಲವು ವರ್ಷಗಳಲ್ಲಿ ಟಿಕೆಎಂ ಮಿಯಾವಾಕಿ/ಪ್ರಾದೇಶಿಕ ಪರಿಕಲ್ಪನೆಯನ್ನು ಬಳಸಿಕೊಂಡು ತನ್ನ ಕಾರ್ಖಾನೆಯ ಆವರಣದಲ್ಲಿ 112 ಎಕರೆಗಳಲ್ಲಿ 328,000 ಮರಗಳನ್ನು ನೆಟ್ಟಿದೆ. “ನೈಸರ್ಗಿಕ ಸಸ್ಯವರ್ಗ ಅಭಿವೃದ್ಧಿ” ಎಂಬ ಪರಿಕಲ್ಪನೆಯ ಅಡಿಯಲ್ಲಿ ಕಾಡುಗಳ ಮರು ಸ್ಥಾಪನೆಗೆ ಮತ್ತು ಪುನರ್ನಿರ್ಮಾಣಕ್ಕೆ ಗಮನಹರಿಸುತ್ತಿದೆ. ಈ ಮೂಲಕ ಟಿಕೆಎಂ ಆವರಣದಲ್ಲಿ ‘ನೈಸರ್ಗಿಕ ಅರಣ್ಯ’ ರಚನೆ ಸಾಧ್ಯವಾಗಿದೆ. ಜೀವವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ಆಹಾರ ಸರಪಳಿಗೆ ಹಾಗೂ ಪರಿಸರ ವಿಜ್ಞಾನಕ್ಕೆ ನೆರವಾಗಲು ಸ್ಥಳೀಯ ಜಾತಿಯ ಗಿಡಗಳನ್ನು ನೆಡಲಾಗಿದೆ.ಜೊತೆಗೆ ಟಿಕೆಎಂ ಸಸಿಗಳನ್ನು ವಿತರಿಸುವ ಮತ್ತು ಗಿಡ ನೆಡುವ ಅಭಿಯಾನಗಳನ್ನು ಆಯೋಜಿಸಿ ಆ ಮೂಲಕ ತನ್ನ ಉದ್ಯೋಗಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಜನಸಮುದಾಯದಲ್ಲಿ ವ್ಯಾಪಕ ಜಾಗೃತಿಯನ್ನು ಉಂಟು ಮಾಡಿದೆ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದೆ. (ಈ ವರ್ಷ ಟಿಕೆಎಂ ಆವರಣದ ಹೊರಭಾಗದಲ್ಲಿ 8000ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ ಮತ್ತು ನೆಡಲಾಗಿದೆ).
ಸ್ಥಳೀಯ ಜೀವ ವೈವಿಧ್ಯತೆಯನ್ನು ಮರಳಿ ಸಮೃದ್ಧಗೊಳಿಸುವ ಹಿನ್ನೆಲೆಯಲ್ಲಿ ಟಿಕೆಎಂ ಒಂದು ಅತ್ಯಾಧುನಿಕ ‘ಇಕೋಜೋನ್’ ಅನ್ನು ಸ್ಥಾಪಿಸಿದೆ. ಇದೊಂದು ಟಿಕೆಎಂನ ಉತ್ಪಾದನಾ ಘಟಕದಲ್ಲಿ ಸ್ಥಾಪನೆಗೊಂಡಿರುವ 17 ಥೀಮ್ ಪಾರ್ಕ್ ಗಳುಳ್ಳ ಕಲಿಕಾ ಕೇಂದ್ರವಾಗಿದೆ. ಇಲ್ಲಿ ಹವಾಮಾನ ಬದಲಾವಣೆ, ಕಸದಿಂದ ರಸ, ಪರಿಸರ ಸಮತೋಲನ, ಜಲಸಂಪನ್ಮೂಲ ನಿರ್ವಹಣೆ ಮುಂತಾದ ವಿಚಾರಗಳನ್ನು ಒಳಗೊಂಡಂತೆ ಪ್ರಕೃತಿ ಸಂರಕ್ಷಣೆಯ ವಿವಿಧ ಅಂಶಗಳ ಮೇಲೆ ಬೆಳಕು ಚೆಲ್ಲುವ ಜ್ಞಾನ-ಹಂಚಿಕೆ, ಪರಿಸರ ಜಾಗೃತಿ ಕಾರ್ಯಗಳು ನಡೆಯುತ್ತವೆ. ಇಲ್ಲಿಯವರೆಗೆ 42,000+ (ವಿದ್ಯಾರ್ಥಿಗಳು ಮತ್ತು ಕಂಪನಿಯ ವಿವಿಧ ಪಾಲುದಾರರು) ಜನರು ಇಲ್ಲಿ ಅರಿವು ಗಳಿಸಿಕೊಂಡಿದ್ದಾರೆ ಮತ್ತು ಪ್ರಕೃತಿ ಜೊತೆಗೆ ಸಾಮರಸ್ಯದಿಂದ ಬದುಕುವ ಸಕರಾತ್ಮಕ ಬದಲಾವಣೆ ರೂಢಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನಿರ್ದೇಶಕ ಶ್ರೀ ಬಿ ಪದ್ಮನಾಭ ಅವರು, “ನಿಜವಾದ ಸಾರಿಗೆ ಕಂಪನಿಯಾಗಿ ನಿರಂತರವಾಗಿ ಅಭಿವೃದ್ಧಿ ಹೊಂದುವುದು, ‘ಕಾರ್ಬನ್ ನ್ಯೂಟ್ರಾಲಿಟಿ’ (ಇಂಗಾಲದ ತಟಸ್ಥತೆ) ಸಾಧಿಸಲು ಬೇಕಾಗುವ ಪ್ರತಿಯೊಂದು ಮಾರ್ಗವನ್ನು ಅನ್ವೇಷಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ 2050ಗೆ ಪೂರಕವಾಗಿ ನಾವು ಸುಸ್ಥಿರತೆ ಗುರಿ ಸಾಧಿಸಲು ಬೇಕಾಗಿ ಹಲವಾರು ಕಠಿಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಮೂಲಕ ಹವಾಮಾನಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ದೃಢತೆ ಎರಡನ್ನೂ ಹೆಚ್ಚಿಸಿದ್ದೇವೆ. ಸಂಪನ್ಮೂಲ ಸರಂಕ್ಷಣೆಗಳಿಂದ ಹಿಡಿದು ಹಲವಾರು ಆರ್ಥಿಕ ಯೋಜನೆಗಳವರೆಗೆ ಮತ್ತು ಕಾರ್ಯಾಚರಣೆಗಳಲ್ಲಿ ಹಾಗೂ ಮೌಲ್ಯ ಸರಪಳಿಯಲ್ಲಿ ಪರಿಸರ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವವರೆಗೆ ಹಲವಾರು ಪರಿಸರ ಸುಸ್ಥಿರತೆ ಅಭ್ಯಾಸ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದು, ಆ ಮೂಲಕ ನಮ್ಮ ಇಂಗಾಲ ತಟಸ್ಥತೆ ಕುರಿತಾದ ಬದ್ಧತೆಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲಾ ಪ್ರಯತ್ನಗಳು ಅತ್ಯುತ್ತಮ ಫಲಿತಾಂಶ ನೀಡಿದ್ದು, ನಮ್ಮ ಶ್ರದ್ಧೆಯ ಪ್ರಯತ್ನವನ್ನು ತಿಳಿಸುತ್ತದೆ. ಜೊತೆಗೆ ನಮ್ಮ ಮೌಲ್ಯ ಸರಪಳಿಯಲ್ಲಿರುವ ನಮ್ಮ ಪಾಲುದಾರರನ್ನು ಸುಸ್ಥಿರ ಬದುಕಿನ ಕ್ರಮಗಳನ್ನು ಪಾಲಿಸಲು ನಿರಂತರ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಟಿಕೆಎಂನ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ನಮ್ಮ ಪಾಲುದಾರರ ತೊಡಗಿಸಿಕೊಳ್ಳುವಿಕೆ ಬಹಳ ಮಹತ್ವದ್ದಾಗಿದೆ. ಈ ಸಹಯೋಗದ ವಿಧಾನವನ್ನು ನಾವು ನಮ್ಮ ಸಮಗ್ರ ಪರಿಸರ ನಿರ್ವಹಣಾ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇವೆ ಮತ್ತು ಆ ಮೂಲಕವೇ ಕಂಪನಿಯ ಉದ್ಯಮ ಪರಿಸರ ವ್ಯವಸ್ಥೆಯಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಉದ್ಯೋಗಿಗಳಿಂದ ಹಿಡಿದು ಪೂರೈಕೆದಾರರು, ವಿತರಕರು ಮತ್ತು ಲಾಜಿಸ್ಟಿಕ್ಸ್ ಪಾಲುದಾರರು ಟಿಕೆಎಂನ ಸುಸ್ಥಿರತೆ ಯೋಜನೆಗಳಾದ ಪರಿಸರ ಪ್ರಜ್ಞೆ ಅಭಿಯಾನಗಳು, ಗಿಡ ನೆಡುವ ಅಭಿಯಾನಗಳು, ‘ಪ್ಲಾಸ್ಟಿಕ್ ಮುಕ್ತ’ ಆಂದೋಲನಗಳು, ಜಲ ಸಂರಕ್ಷಣಾ ಅಭಿಯಾನಗಳು ಮುಂತಾದ ಪರಿಸರ ಸಂರಕ್ಷಣೆ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ ಮತ್ತು ನಾವು ಮುಂದೆಯೂ ಪರಿಸರಕ್ಕೆ ಕೊಡುಗೆ ನೀಡುವ ಯೋಜನೆಗಳನ್ನು ಮುಂದುವರೆಸುತ್ತೇವೆ. ಇದಲ್ಲೆದರ ಜೊತೆಗೆ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಐಕೇರ್ (ಟಿಕೆಎಂನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿನ ‘ಐ, ಕಮ್ಯೂನಿಟಿ ಆಕ್ಷನ್ ಟು ರೀಚ್ ಎವೆರಿವನ್’ (ಪ್ರತಿಯೊಬ್ಬರನ್ನು ತಲುಪುವ ಸಮುದಾಯ ಕಾರ್ಯಕ್ರಮ)) ಕಾರ್ಯಕ್ರಮದ ಮೂಲಕ ಟಿಕೆಎಂ ನಡೆಸುತ್ತಿರುವ ವಿವಿಧ ಸಾಮಾಜಿಕ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವು ಇದುವರೆಗೆ 2.3 ಮಿಲಿಯನ್ಗಿಂತಲೂ ಹೆಚ್ಚು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಉಂಟು ಮಾಡಿದೆ. ಈ ಮೂಲಕ ಆರೋಗ್ಯಕರ, ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಸಂಸ್ಥೆಯು ಕೊಡುಗೆ ನೀಡಿದೆ” ಎಂದು ಹೇಳಿದರು.