ಬೆಂಗಳೂರು : ಹೀರೋ ಮೋಟೋಕಾರ್ಪ್ ನ ಅದ್ಭುತ ಮೋಟಾರ್ಸೈಕಲ್, ಮವ್ರಿಕ್ಸ್ 440 ನ ಲಿಮಿಟೆಡ್ ಎಡಿಷನ್ ಆವೃತ್ತಿಯಾದ ಮವ್ರಿಕ್ಸ್ 440 ತಂಡರ್ವಿಹಿಲ್ಸ್ಅನ್ನು ಪ್ರಸ್ತುತಪಡಿಸಲಿಕ್ಕಾಗಿ ಮೋಟಾರ್ಸೈಕಲ್ಗಳು ಮತ್ತು ಸ್ಕೂಟರ್ಗಳ ವಿಶ್ವದ ಅತಿ ದೊಡ್ಡ ತಯಾರಕರಾದ ಹೀರೋ ಮೋಟೋಕಾರ್ಪ್, ಕೋಕಾ-ಕೋಲಾ ಕಂಪನಿಯ ಅಡಿಯಲ್ಲಿ ಭಾರತದ ಅತಿದೊಡ್ಡ ಸ್ವದೇಶಿ-ಬೆಳೆದ ಪಾನೀಯಗಳ ಬ್ರ್ಯಾಂಡ್ ಆದ ಥಮ್ಸ್ ಅಪ್ನೊಂದಿಗೆ ಒಂದು ಅದ್ಭುತ ಸಹಯೋಗದಲ್ಲಿ ಜೊತೆಗೂಡಿದೆ.
ಹೀರೋ ಮೋಟೋಕಾರ್ಪ್ನ ಸಹಭಾಗಿತ್ವದಲ್ಲಿ ಅತ್ಯಂತ ಶ್ರದ್ಧೆಯಿಂದ ತಯಾರಿಸಲಾದ ಈ ವಿಶೇಷ ಸರಣಿಯ ಮೋಟಾರ್ಸೈಕಲ್ಗಳು ಥಮ್ಸ್ ಅಪ್ನ ಸಾಹಸ ಮತ್ತು ಥ್ರಿಲ್ನ ಪ್ರಮುಖ ಮೌಲ್ಯಗಳನ್ನು ಹೀರೋನ ತಾಂತ್ರಿಕ ಸಾಮರ್ಥ್ಯ ಮತ್ತು ತಂತ್ರಜ್ಞಾನಗಳ ಶ್ರೇಷ್ಠತೆಗಳೊಂದಿಗೆ ಸಂಯೋಜಿಸುತ್ತದೆ. ಎರಡೂ ಬ್ರಾಂಡ್ಗಳು ತಮ್ಮ ಯುವ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ತೂಫಾನಿ ಅನುಭವವನ್ನು ನೀಡಲು ಜೊತೆಗೂಡಿವೆ. ಎರಡೂ ಬ್ರ್ಯಾಂಡ್ಗಳ ಪ್ರಮುಖ ಕಲ್ಪನೆಗಳನ್ನು ಜೀವಂತವಾಗಿ ಪ್ರಸ್ತುತಪಡಿಸಲಿಕ್ಕಾಗಿ ಮವ್ರಿಕ್ಸ್ 440 ತಂಡರ್ವಿಹಿಲ್ಸ್ ಅನ್ನು ರೂಪಿಸಸಲಾಗಿದ್ದು, ಸಾಹಸಿಗಳು ಹಾಗೂ ಧೈರ್ಯಶಾಲಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಥಮ್ಸ್ ಅಪ್ನ ಸ್ಪೆಷಲ್ ಎಡಿಷನ್ ಪ್ಯಾಕ್ಗಳನ್ನು ಖರೀದಿಸುವ ಮತ್ತು ಸ್ಕ್ಯಾನ್ ಮಾಡುವ ಗ್ರಾಹಕರಿಗೆ ನವೆಂಬರ್ 15, 2024 ರವರೆಗೆ ಈ ಲಿಮಿಟೆಡ್ ಎಡಿಷನ್ ಮೋಟಾರ್ಸೈಕಲ್ ವಿಶೇಷವಾಗಿ ಲಭ್ಯವಿರುತ್ತದೆ.
ಥಮ್ಸ್ ಅಪ್ನ ಬ್ರಾಂಡ್ ಅಂಬಾಸಿಡರ್ಗಳಾದ ಭಾರತದ ಅತ್ಯಂತ ಉತ್ಸಾಹಿ ಕ್ರಿಕೆಟ್ ಐಕಾನ್ಗಳಾಗಿರುವ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಇಬ್ಬರೂ ನಟಿಸಿರುವ ರೋಮಾಂಚನಕಾರಿ ಜಾಹೀರಾತುಗಳೊಂದಿಗೆ ಅಭಿಯಾನವು ಪ್ರಾರಂಭವಾಗುತ್ತದೆ. TVC ಗಳು ಬ್ರ್ಯಾಂಡ್ನ ಹೈ ಎನರ್ಜಿ ಎಸೆನ್ಸ್ ಅನ್ನು ಸಂಪೂರ್ಣವಾಗಿ ಸೆರೆಹಿಡಿಯುತ್ತವೆ ಮತ್ತು ಒಂದೊಂದೂ ಅದ್ಭುತ ತಿರುವಿನೊಂದಿಗೆ ಮವ್ರಿಕ್ಸ್ 440 ತಂಡರ್ವಿಹಿಲ್ಸ್ ನ ನಿಖರತೆ ಮತ್ತು ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.
ಸಹಯೋಗದ ಕುರಿತು ಮಾತನಾಡುತ್ತಾ, ಹೀರೋ ಮೋಟೋಕಾರ್ಪ್ನ ಇಂಡಿಯಾ BU ನ ಮುಖ್ಯ ವ್ಯವಹಾರಗಳ ಅಧಿಕಾರಿ ರಂಜಿವ್ಜಿತ್ ಸಿಂಗ್ ಹೇಳಿದರು, “ಈ ವಿಶಿಷ್ಟ ರೀತಿಯ ಪಾಲುದಾರಿಕೆಯು ವಿಭಾಗದಲ್ಲಿ ಅದ್ಭುತ ಬದಲಾವಣೆಯನ್ನು ತರಲಿದೆ. ಎರಡು ಐಕಾನಿಕ್ ಬ್ರ್ಯಾಂಡ್ಗಳ ಸಹಯೋಗದಿಂದಾಗಿ ಗ್ರಾಹಕರಿಗೆ ಸಾಟಿಯಿಲ್ಲದ ಉತ್ಪನ್ನವು ದೊರೆಯುತ್ತಿದೆ. ನಮ್ಮ ಫ್ಲ್ಯಾಗ್ಶಿಪ್ ಮವ್ರಿಕ್ಸ್ 440 ಮೋಟಾರ್ಸೈಕಲ್ನ ಮಧ್ಯಂತರ-ವೇರಿಯಂಟ್ ಅನ್ನು ಆಧರಿಸಿದ ಮವ್ರಿಕ್ಸ್ 440 ತಂಡರ್ವಿಹಿಲ್ಸ್ ಥಮ್ಸ್ ಅಪ್ನೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಉತ್ಪನ್ನ ಮೌಲ್ಯಗಳಾದ ವಿಶ್ವಾಸಾರ್ಹತೆ, ಸಾರ್ವಭೌಮತ್ವ, ಧೈರ್ಯ ಮತ್ತು ಸಾಹಸಗಳನ್ನು ಸಂಯೋಜಿಸಿದೆ. ಥಮ್ಸ್ ಅಪ್ನಿಂದ ಪ್ರೇರಿತವಾದ ನವೀನ ಬಣ್ಣ ಮತ್ತು ಗ್ರಾಫಿಕ್ಸ್ಗಳಿಂದಾಗಿ ಈ ಮೋಟಾರ್ಸೈಕಲ್ ಗಮನ ಸೆಳೆಯುತ್ತದೆ ಮತ್ತು ರಾಷ್ಟ್ರದಾದ್ಯಂತ ಯುವಜನತೆಯನ್ನು ಆಕರ್ಷಿಸುತ್ತದೆ.”
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಕೋಕಾ-ಕೋಲಾದ ಭಾರತ ಮತ್ತು ನೈಋತ್ಯ ಏಷ್ಯಾದ ಮಾರ್ಕೆಟಿಂಗ್ ಉಪಾಧ್ಯಕ್ಷೆ, ಗ್ರೀಷ್ಮಾ ಸಿಂಗ್, “ಮವ್ರಿಕ್ಸ್ 440 ತಂಡರ್ವಿಹಿಲ್ಸ್ ಅನ್ನು ಪ್ರಾರಂಭಿಸುವಲ್ಲಿ ಹೀರೋ ಮೋಟೋಕಾರ್ಪ್ನೊಂದಿಗೆ ಕೈಜೋಡಿಸಲು ನಾವು ಉತ್ಸುಕರಾಗಿದ್ದೇವೆ. ಥಮ್ಸ್ ಅಪ್ನ ನಾವೀನ್ಯತೆ ಮತ್ತು ದಿಟ್ಟತತ್ವಗಳನ್ನು ಮೈಗೂಡಿಸಿಕೊಂಡಿರುವ ಈ ಬೈಕ್, ರೋಮಾಂಚಕ ಅನುಭವಗಳನ್ನು ನೀಡುವ ನಮ್ಮ ಸಮಾನಮನಸ್ಥಿತಿಗಳ ಉತ್ಸಾಹವನ್ನು ಜೀವಂತವಾಗಿಸುತ್ತದೆ. ಜೊತೆಯಾಗಿ, ನಾವು ನಮ್ಮ ಗ್ರಾಹಕರಿಗೆ ನಿಜವಾಗಿಯೂ ಅತ್ಯಂತ ಅಸಾಧಾರಣವಾದುದರ ಭಾಗವಾಗಲು ಅವಕಾಶವನ್ನು ನೀಡುತ್ತಿದ್ದೇವೆ. ” ಎಂದರು.
Link to the campaign video – https://www.youtube.com/watch?v=wnxbb75O4y8