ಬೆಂಗಳೂರು: ಭಾರತೀಯ ಸೇನೆಯು ಎಫ್ಐಸಿಸಿಐ (ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ) ಜೊತೆ ಸೇರಿಕೊಂಡು ಜಂಟಿಯಾಗಿ ಆಯೋಜಿಸಿದ್ದ ಹಿಮ್ಟೆಕ್ 2024 ಸಮಾವೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ವಿಶೇಷ ಉದ್ದೇಶಕ್ಕಾಗಿ ಸಿದ್ಧಪಡಿಸಿದ ಹೈಲಕ್ಸ್ (ಅಧಿಕೃತ ಬಾಹ್ಯ ಮಾರಾಟಗಾರರ ನೆರವಿನಿಂದ ಮಾರ್ಪಡು ಗೊಳಿಸಲಾಗಿರುವ ವಾಹನ) ಅನ್ನು ಪ್ರದರ್ಶಿಸಿದೆ.
‘ರಕ್ಷಣೆಯಲ್ಲಿ ಆತ್ಮನಿರ್ಭರತೆ’ಯ ಗುರಿ ಸಾಧನೆ ಮಾಡಲು ಮತ್ತು ರಕ್ಷಣಾ ಪಡೆಗಳಿಗೆ ಲಭ್ಯವಿರುವ ಅತ್ಯುತ್ತಮ ಉಪಕರಣಗಳು ಮತ್ತು ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಎರಡು ಸಂಸ್ಥೆಗಳು (ಭಾರತೀಯ ಸೇನೆ ಮತ್ತು ಎಫ್ಐಸಿಸಿಐ) “ಹಿಮ್ಟೆಕ್ 2024” ಸಮಾವೇಶವನ್ನು ಆಯೋಜಿಸಿದ್ದವು. ಈ ಸಮಾವೇಶ ಆಯೋಜನೆಯ ಹಿಂದೆ ಹೈ ಆಲ್ಟಿಟ್ಯೂಡ್ ಏರಿಯಾಗಳಲ್ಲಿ (ಎಚ್ಎಎ) ಅಂದ್ರೆ ಬಹು ಎತ್ತರದ ಪ್ರದೇಶಗಳಲ್ಲಿ ಮಿಲಿಟರಿ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುವ ಸಾಧ್ಯತೆಗಳ ಕುರಿತು ಚರ್ಚಿಸುವ ಉದ್ದೇಶವೂ ಇತ್ತು. 2024ರ ಸೆಪ್ಟೆಂಬರ್ 20 ಮತ್ತು 21ರಂದು ಲಡಾಖ್ನ ಲೇಹ್ನ ರಿಂಚೆನ್ ಆಡಿಟೋರಿಯಂ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರ್ಮಿ ಕಮಾಂಡ್ಗಳು, ಏರ್ ಫೋರ್ಸ್, ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್) ಸಿಬ್ಬಂದಿ, ಟಿಕೆಎಂ ಪ್ರತಿನಿಧಿಗಳು ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.
ಟೊಯೋಟಾದ ಜನಪ್ರಿಯ ಕ್ಯೂಡಿಆರ್ (ಕ್ವಾಲಿಟಿ, ಡ್ಯುರೇಬಿಲಿಟಿ, ರಿಲಯಬಿಲಿಟಿ ಅಂದ್ರೆ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆ) ಎಂಬ ತತ್ವದ ಮೂಲಕ ಕಾರ್ಯ ನಿರ್ವಹಿಸುವ ಈ 4×4 ಆಲ್ ಟೆರೇನ್, ಆಫ್ ರೋಡ್ ವಾಹನವನ್ನು ಅತ್ಯಂತ ಸಂಕೀರ್ಣ ಪರಿಸರದಲ್ಲಿ ಕಾರ್ಯ ನಿರ್ವಹಿಸುವಂತೆ ವಿನ್ಯಾಸ ಮಾಡಲಾಗಿದೆ. ಇದು ನಿರ್ದಿಷ್ಟ ಅಗತ್ಯಗಳನ್ನು ಹೊಂದಿರುವ ಗ್ರಾಹಕರಿಗೆ ಪರಿಪೂರ್ಣವಾಗಿ ಹೊಂದಿಕೆಯಾಗುತ್ತದೆ. ವಿಶೇಷವಾಗಿ ಅಧಿಕೃತ ಬಾಹ್ಯ ಮಾರಾಟಗಾರರ ನೆರವಿನಿಂದ ಭಾರತೀಯ ಸೇನೆಯ ಉದ್ದೇಶಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.
ವಿಶೇಷವಾಗಿ ಸಿದ್ಧಪಡಿಸಿದ ಈ ವಾಹನಗಳು ವಿವಿಧ ಮಾರುಕಟ್ಟೆಗಳು ಮತ್ತು ಪ್ರದೇಶಗಳ ವಿವಿಧ ಹಿನ್ನೆಲೆಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಂಡಿದ್ದು, ‘ಎಲ್ಲರಿಗೂ ಸಾರಿಗೆ’ ಸೌಲಭ್ಯ ಒದಗಿಸುವ ಟಿಕೆಎಂನ ಬದ್ಧತೆಗೆ ಸಾಕ್ಷಿಯಾಗಿದೆ. ಸಮಾವೇಶದಲ್ಲಿ ಟಿಕೆಎಂ ರಕ್ಷಣಾ ಕಾರ್ಯಕ್ಕೆ ಮತ್ತು ವಾಣಿಜ್ಯ ವಿಚಾರದ ಬಳಕೆಗೆ ಸೂಕ್ತವಾಗುವಂತೆ ಕಸ್ಟಮೈಸ್ ಮಾಡಿದ ಹೈಲಕ್ಸ್ ವಾಹನವನ್ನು ಪ್ರದರ್ಶಿಸಿತು. ಇಲ್ಲಿ ಪ್ರದರ್ಶಿಸಲಾದ ಹೈಲಕ್ಸ್ ವಾಹನಗಳ ಕುರಿತ ಮಾಹಿತಿ ಈ ಕೆಳಗಿನಂತಿದೆ:
ಹೈಲಕ್ಸ್ ಎಫ್ ಡಿ ವಿ (ಫೀಲ್ಡ್ ಡಿಪ್ಲಾಯ್ಮೆಂಟ್ ವೆಹಿಕಲ್): ಈ ಮಾಡೆಲ್ ಭಾರಿ- ಕಾರ್ಯನಿರ್ವಹಣೆಯನ್ನು ಪ್ರದರ್ಶಿಸುವ ಮೂಲಕ ಅದರ ವಾಣಿಜ್ಯ ಕಾರ್ಯಸಾಧ್ಯತೆಯನ್ನು ತೋರಿಸಿಕೊಟ್ಟಿತು. ಈ ಮಾಡೆಲ್ ಈ ಹಿಂದೆ ಉತ್ತರ ಭಾರತೀಯ ಸೇನಾ ಕಮಾಂಡ್ ನಡೆಸಿದ ಅನೇಕ ಯಶಸ್ವಿ ಪ್ರಯೋಗಗಳಲ್ಲಿ ಬಳಕೆಯಾಗಿತ್ತು. ಈ ನಿಟ್ಟಿನಲ್ಲಿ ಸಂಕೀರ್ಣ ಮಿಲಿಟರಿ ಕಾರ್ಯಾಚರಣೆಗಳಿಗೆ ಅದು ಸೂಕ್ತವಾಗಿ ಹೊಂದಿಕೊಳ್ಳುವ ಗುಣ ಹೊಂದಿರುವುದನ್ನು ಸಾಬೀತು ಮಾಡಿದೆ. ಇದನ್ನು ಅತ್ಯಂತ ಕಠಿಣ ಪ್ರದೇಶಗಳಲ್ಲಿ ಬಳಸುವಂತೆ ಮತ್ತು ಸುಲಭವಾಗಿ ರಿಪೇರಿ ಮಾಡುವಂತೆ, ಜೊತೆಗೆ ಸುಲಭವಾಗಿ ಬಿಡಿಭಾಗಗಳ ಪೂರೈಕೆ ಆಗುವಂತೆ ವಿನ್ಯಾಸ ಮಾಡಲಾಗಿದೆ. ಹಾಗಾಗಿ ಇದು ಕಠಿಣ ಪ್ರದೇಶಗಳಿಗೆ ಬೇಕಾದ ವಾಹನವಾಗಿ ರೂಪುಗೊಂಡಿದೆ.
ಮಾಡಿಫೈ ಮಾಡಿದ ಅಥವಾ ಮಾರ್ಪಾಡು ಗೊಳಿಸಿದ ಹೈಲಕ್ಸ್: ಈ ಮಾಡೆಲ್ ಅನ್ನು ಆಫ್ ರೋಡ್ ನಲ್ಲಿ ಅದ್ಭುತವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಸಸ್ಪೆನ್ಷನ್ ಅನ್ನು ಅಪ್ ಗ್ರೇಡ್ ಮಾಡಲಾಗಿದೆ, ವಿಶೇಷ ಟೈರ್ ಗಳನ್ನು ಮತ್ತು ಕಷ್ಟಕರ ರಸ್ತೆಯಲ್ಲಿಯೂ ಸುಲಭವಾಗಿ ಸಾಗಲು ಸ್ನಾರ್ಕೆಲ್ ಅನ್ನು ಬಳಸಲಾಗಿದೆ. ಮಾರ್ಪಡು ಮಾಡಿದ ಅಂಶಗಳು ಕಠಿಣ ರಸ್ತೆಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ ತೋರುವಂತೆ ಮಾಡುತ್ತದೆ. ಜೊತೆಗೆ ಸಂಕೀರ್ಣ ಸಂದರ್ಭಗಳಲ್ಲಿಯೂ ವಿಶ್ವಾಸಾರ್ಹವಾಗಿ ಕೆಲಸ ಮಾಡುತ್ತದೆ.
ಕಳೆದ ವರ್ಷ ಭಾರತೀಯ ಸೇನೆಯ ಉತ್ತರ ಭಾಗದ ಕಮಾಂಡ್ ಆಯೋಜಿಸಿದ್ದ ನಾರ್ತ್ ಟೆಕ್ ಸಮಾವೇಶದಲ್ಲಿ ಟಿಕೆಎಂ ಫೀಲ್ಡ್ ಡಯಾಗ್ನಾಸಿಸ್ ವೆಹಿಕಲ್ (ಎಫ್ ಡಿ ವಿ) ಮತ್ತು ರಾಪಿಡ್ ಇಂಟರ್ವೆನ್ಶನ್ ವೆಹಿಕಲ್ (ಆರ್ ಆ ವಿ) ಎಂಬ ಎರಡು ಹೈಲಕ್ಸ್ ಮಾಡೆಲ್ ಅನ್ನು ಪ್ರದರ್ಶಿಸಿತ್ತು. ಅಲ್ಲದೇ ಟಿಕೆಎಂ ಹಲವು ಹೈಲಕ್ಸ್ ವಾಹನಗಳನ್ನು ಒದಗಿಸುವ ಮೂಲಕ, ಇದೇ ಮೊದಲ ಬಾರಿಗೆ ಭಾರತೀಯ ಸೇನೆಗೆ ವಾಹನಗಳನ್ನು ವಿತರಣೆ ಮಾಡಿದ ಹೆಗ್ಗಳಿಕೆ ಗಳಿಸಿಕೊಂಡಿತ್ತು. ವಿಶೇಷವಾಗಿ ಕಂಪನಿಯು ಭಾರತೀಯ ಸೇನೆಯ ಉತ್ತರ ಭಾಗದ ಕಮಾಂಡ್ ನಲ್ಲಿನ ವಾಹನ ಚಾಲಕರು ಮತ್ತು ಸೇವಾ ತಂತ್ರಜ್ಞರಿಗೆ ಅಗತ್ಯವಾಗಿ ಬೇಕಾಗಿರುವ ಆಫ್- ರೋಡ್ ಡ್ರೈವಿಂಗ್ ಕೌಶಲ ಮತ್ತು ವಾಹನ ನಿರ್ವಹಣೆ ತರಬೇತಿಯನ್ನು ಕೂಡ ಒದಗಿಸಿದೆ. ಈ ಅತ್ಯುನ್ನತ ವೇದಿಕೆಗಳಲ್ಲಿ ಟೊಯೋಟಾದ ಸಂಸ್ಥೆಯ ಭಾಗವಹಿಸುವಿಕೆ ಮತ್ತು ಸಾರಿಗೆ ಕ್ಷೇತ್ರದಲ್ಲಿನ ತನ್ನ ತಾಂತ್ರಿಕ ಪರಿಣತಿಯನ್ನು ಒದಗಿಸುವ ಕ್ರಮವು ದೇಶದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಉಂಟು ಮಾಡಲು ನೆರವಾಗುವ ಸಂಸ್ಥೆಯ ಬದ್ಧತೆಯನ್ನು ಸಾರುತ್ತದೆ.
ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಸ್ಟ್ರಾಟೆಜಿಕ್ ಬಿಸಿನೆಸ್ ಯುನಿಟ್ (ಉತ್ತರ) ಉಪಾಧ್ಯಕ್ಷ ಶ್ರೀ ವಿ ವೈಸ್ಲೈನ್ ಸಿಗಮಣಿ ಅವರು, “ನಾವು ಹಿಮ್ಟೆಕ್ 2024 ಸಮಾವೇಶದಲ್ಲಿ ಹೆಮ್ಮೆಯಿಂದ ಭಾಗವಹಿಸಿದ್ದೇವೆ. ಜೊತೆಗೆ ವಿಶೇಷ ಉದ್ದೇಶಗಳಿಗೆ ಸಿದ್ಧಪಡಿಸಲಾದ ಹೈಲಕ್ಸ್ ನ (ಅಧಿಕೃತ ಬಾಹ್ಯ ಮಾರಾಟಗಾರ ನೆರವಿನಿಂದ ಮಾರ್ಪಡಿಸಲಾದ ವಾಹನ) ವಿಶಿಷ್ಟ ಫೀಚರ್ ಗಳನ್ನು ಗೌರವದಿಂದ ಪ್ರದರ್ಶನ ಮಾಡಿದ್ದೇವೆ. ಹೈಲಕ್ಸ್ ಅದ್ಭುತವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದು, ಸಂಸ್ಥೆಯ ಇನ್ನೋವೇಟಿವ್ ಮಲ್ಟಿ ಪರ್ಪಸ್ ವೆಹಿಕಲ್ (ಐಎಂವಿ) ಪ್ಲಾಟ್ ಫಾರ್ಮ್ ಮತ್ತು ಅತ್ಯುತ್ತಮ ಪವರ್ಟ್ರೇನ್ ಸಿಸ್ಟಮ್ ನಿಂದ ಆ ಅದ್ಭುತ ಕಾರ್ಯನಿರ್ವಹಣೆ ಸಾಧ್ಯವಾಗಿದೆ. ಈ ಮಾರ್ಪಾಡು ಗೊಳಿಸಿದ ವಾಹನಗಳು ವಿಶಿಷ್ಟ ಗ್ರಾಹಕರ ಅಗತ್ಯಗಳನ್ನು (ಉದಾ. ಸೇನೆಯ ಉದ್ದೇಶಗಳು) ಮತ್ತು ವಿವಿಧ ರೀತಿಯ ವಾಣಿಜ್ಯ ಬಳಕೆಗಳಿಗೆ ಬಳಸಬಹುದಾದ ವಾಹನಗಳಾಗಿವೆ. ಈ ಮೂಲಕ ಕಸ್ಟಮೈಸ್ ಮಾಡಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಟೊಯೋಟಾದ ತಾಂತ್ರಿಕ ಸಾಮರ್ಥ್ಯವನ್ನು ಸಂಸ್ಥೆ ಪ್ರದರ್ಶಿಸಿದೆ. ಇದರ ಜೊತೆಗೆ ಸೇನಾ ಪಡೆಗಳ ಕಾರ್ಯಾಚರಣೆಗಳನ್ನು ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದ್ದು, ಈ ವಾಹನಗಳು ಕಠಿಣ ರಸ್ತೆಗಳಲ್ಲಿಯೂ ಸುಲಭವಾಗಿ ಚಾಲನೆ ಮಾಡುವ ಶಕ್ತಿ, ಗಸ್ತು ತಿರುಗುವಿಕೆ ಸಾಮರ್ಥ್ಯ, ರಾತ್ರಿ ಸಮಯದಲ್ಲಿಯೂ ಅತ್ಯುತ್ತಮ ಗೋಚರತೆ, ರೆಕಾರ್ಡಿಂಗ್ ಮಾಡಲು ಡಿಜಿಟಲ್ ವೀಡಿಯೋ, ತುರ್ತು ಸಂದರ್ಭಗಳಲ್ಲಿನ ರಕ್ಷಣಾ ಕಾರ್ಯಾಚರಣೆಗಾಗಿ ವಿಂಚ್ ಮತ್ತು ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ನಾವು ಮುಂದೆಯೂ ನಮ್ಮ ಉತ್ಪನ್ನಗಳ ಶ್ರೇಣಿಗೆ ಹೊಸತನ ಸೇರಿಸಲು, ಅತ್ಯುತ್ತಮ ಕಾರ್ಯನಿರ್ವಹಣೆ ತೋರುವಂತೆ ಮಾಡಲು ಕಾರ್ಯ ನಿರ್ವಹಿಸಲಿದ್ದೇವೆ. ಆ ಮೂಲಕ ವಿಶಿಷ್ಟ ಅಗತ್ಯಗಳನ್ನು ಪೂರೈಸುವಂತ ವಾಹನ ಒದಗಿಸುವ ನಿಟ್ಟಿನಲ್ಲಿ ನೆರವಾಗಲು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಐದು ದಶಕಗಳಿಗಿಂತಲೂ ಹೆಚ್ಚಿನ ಮತ್ತು ಎಂಟು ತಲೆಮಾರುಗಳ ಪರಂಪರೆಯನ್ನು ಹೊಂದಿರುವ ಹೈಲಕ್ಸ್ ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸುವುದನ್ನು ಮುಂದುವರೆಸಿದೆ. ರೋಮಾಂಚಕ ಡ್ರೈವ್ ಅನ್ನು ಆನಂದಿಸುವವರ ಜೊತೆಗೆ ಅತ್ಯುತ್ತಮ ಬಂಧವನ್ನು ಹೊಂದಿದೆ. ಗ್ರಾಹಕರ ವಿವಿಧ ಮತ್ತು ವಿಶಿಷ್ಟ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೈಲಕ್ಸ್ ಕಠಿಣ ಪ್ರದೇಶಗಳಲ್ಲಿ ಆಫ್ ರೋಡ್ ಸಾಹಸಗಳನ್ನು ಮಾಡಲು ಬಹು ಉಪಯುಕ್ತ ವಾಹನವಾಗಿದೆ. ಅಲ್ಲದೇ ದೈನಂದಿನ ನಗರ ಸಂಚಾರ ಬಳಕೆಗೂ ಉತ್ತಮವಾಗಿದೆ. ಜೊತೆಗೆ ಹೈಲಕ್ಸ್ ವಾಹನವು, ಕೃಷಿ, ರಕ್ಷಣೆ, ಗಣಿಗಾರಿಕೆ, ನಿರ್ಮಾಣ ಮತ್ತು ಇತ್ಯಾದಿ ಕ್ಷೇತ್ರಗಳು ಒಳಗೊಂಡು ಹಲವಾರು ಕ್ಷೇತ್ರಗಳಲ್ಲಿ ಬಹಳ ಉಪಯೋಗಕರವಾಗಿ ಬಳಕೆಯಾಗುತ್ತಿವೆ.
ವಿಶ್ವಾಸಾರ್ಹ ಕ್ಯಾಂಪರ್ ವಾನ್ ಅಥವಾ ರೆಸ್ಕ್ಯೂ ವೆಹಿಕಲ್ ಆಗಿಯೂ ಹೊಸ ರೀತಿಯ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಅತ್ಯುತ್ತಮವಾದ 2.8-ಲೀಟರ್ ಫೋರ್ ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್ ಹೊಂದಿರುವ ಹೈಲಕ್ಸ್, 6-ಸ್ಪೀಡ್ ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಶಕ್ತಿಯುತ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆ ಒದಗಿಸುತ್ತದೆ. 700 ಎಂಎಂನಷ್ಟು ವಾಟರ್ ವೇಡಿಂಗ್ ಸಾಮರ್ಥ್ಯ ಹೊಂದಿರುವ ಈ ವಾಹನವು ಅದ್ಭುತವಾದ ಆಫ್ ರೋಡ್ ಸಾಮರ್ಥ್ಯ ಇರುವ ವಾಹನವಾಗಿದೆ. ಎಂಥಾ ಕಠಿಣ ರಸ್ತೆಗಳಲ್ಲೂ ಮುಂದಕ್ಕೆ ಸಾಗಲು ಸಮರ್ಥವಾಗಿದೆ. ಬಾಳಿಕೆ, ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಹೊಂದಿಕೊಳ್ಳುವ ಗುಣಗಳಿಗೆ ಹೆಸರುವಾಸಿಯಾಗಿರುವ ಹೈಲಕ್ಸ್, ಸಾಮಾನ್ಯ ಗ್ರಾಹಕರ ವ್ಯಾಪಾರಕ್ಕೆ ಅಥವಾ ಕುಟುಂಬದ ಅಗತ್ಯಗಳಿಗೆ ಸೂಕ್ತವಾಗಿ ಒದಗಿ ಬರುತ್ತದೆ.