ಬೆಂಗಳೂರು : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಅಧೀನದಲ್ಲಿರುವ ಖಾಸಗಿ ವಲಯದ ಪಿಂಚಣಿ ನಿಧಿ ನಿರ್ವಾಹಕರಾದ ಹೆಚ್ಡಿಎಫ್ಸಿ ಪೆನ್ಷನ್ ಫಂಡ್ ಮ್ಯಾನೇಜ್ಮೆಂಟ್ ಲಿಮಿಟೆಡ್ (ಹೆಚ್ಡಿಎಫ್ಸಿ ಪೆನ್ಷನ್) ಮಹತ್ವದ ಸಾಧನೆ ಮಾಡಿದ್ದು, 2024ರ ಸೆಪ್ಟೆಂಬರ್ 12ರ ಹೊತ್ತಿಗೆ ರೂ. 1,00,000 ಕೋಟಿಗೂ ಹೆಚ್ಚಿನ ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್ (ಎಯುಎಂ) ಗಳಿಸಿ ದಾಖಲೆ ಮಾಡಿದೆ. 2023ರ ಮೇ ತಿಂಗಳಲ್ಲಿ ರೂ.50,000 ಕೋಟಿ ಎಯುಎಂ ಇದ್ದಿದ್ದನ್ನು ಕೇವಲ 16 ತಿಂಗಳಲ್ಲಿ ದುಪ್ಪಟ್ಟು ಗೊಳಿಸಿದ ಕೀರ್ತಿ ಕಂಪನಿಯ ಪಾಲಾಗಿದೆ. ಈ ಮೂಲಕ ಸಂಸ್ಥೆಯು ಕಂಪನಿಯ ಚಂದಾದಾರರ ನೆಲೆಯಲ್ಲಿ ಶೇ.34.1ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿದೆ.
ಹೆಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಹೆಚ್ಡಿಎಫ್ಸಿ ಪೆನ್ಷನ್ ನ ವೇಗವಾದ ಅಭಿವೃದ್ಧಿಯು ಪೆನ್ಷನ್ ಫಂಡ್ ಕ್ಷೇತ್ರದಲ್ಲಿ ಆ ಸಂಸ್ಥೆಯ ಹೊಂದಿರುವ ನಾಯಕತ್ವವನ್ನು ಸಾರುತ್ತದೆ. ಜೊತೆಗೆ ವ್ಯಕ್ತಿಗಳು ಭವಿಷ್ಯದಲ್ಲಿ ಉತ್ತಮ ಆರ್ಥಿಕ ಸೌಲಭ್ಯ ಹೊಂದುವಂತೆ ಮಾಡಲು ನೆರವಾಗುವ ಕಂಪನಿಯ ಬದ್ಧತೆಗೆ ಪುರಾವೆಯಾಗಿದೆ.
ಹೆಚ್ಡಿಎಫ್ಸಿ ಪೆನ್ಷನ್ ಇತ್ತೀಚೆಗೆ ತನ್ನ 11ನೇ ವರ್ಷದ ಯಶಸ್ವಿ ವಾರ್ಷಿಕೋತ್ಸವವನ್ನು ಆಚರಿಸಿದೆ. ಪ್ರಸ್ತುತ ರಿಟೇಲ್ ಮತ್ತು ಕಾರ್ಪೊರೇಟ್ ವಿಭಾಗದಲ್ಲಿ ಒಟ್ಟು ಶೇ.43.6ರಷ್ಟು ಎನ್ಪಿಎಸ್ ಎಯುಎಂ ಎನ್ನು ನಿರ್ವಹಣೆ ಮಾಡುತ್ತದೆ. ಈ ವಿಭಾಗದಲ್ಲಿರುವ ಒಟ್ಟು ಶೇ.36.8ಕ್ಕಿಂತ ಹೆಚ್ಚು ಚಂದಾದಾರರು ಹೆಚ್ಡಿಎಫ್ಸಿ ಪೆನ್ಷನ್ ಅನ್ನು ತಮ್ಮ ಆದ್ಯತೆಯ ಪೆನ್ಷನ್ ಫಂಡ್ ಮ್ಯಾನೇಜರ್ (ಪಿಎಫ್ಎಂ) ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕಂಪನಿಯು ಬಲವಾದ ಮಾರುಕಟ್ಟೆ ನಾಯಕತ್ವ ಹೊಂದಿರುವುದನ್ನು ತೋರಿಸುತ್ತದೆ ಮತ್ತು ಹೂಡಿಕೆದಾರರು ಸಂಸ್ಥೆಯ ಮೇಲೆ ಹೊಂದಿರುವ ನಂಬಿಕೆಯನ್ನು ಸೂಚಿಸುತ್ತದೆ. ಕಂಪನಿಯು 5000ಕ್ಕೂ ಹೆಚ್ಚು ಶ್ರದ್ಧಾವಂತ ಪೆನ್ಷನ್ ಏಜೆಂಟ್ಗಳನ್ನು ಹೊಂದಿದೆ ಮತ್ತು ಈ ಕಾರ್ಪೊರೇಟ್ ವಲಯದಲ್ಲಿ ಮೂರು ಲಕ್ಷ ಉದ್ಯೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ 2800ಕ್ಕೂ ಹೆಚ್ಚು ಕಂಪನಿಗಳ ಜೊತೆ ಕೆಲಸ ಮಾಡುವ ಅತಿದೊಡ್ಡ ಕಾರ್ಪೊರೇಟ್ ಎನ್ಪಿಎಸ್ ಪಾಯಿಂಟ್ ಆಗಿದೆ.
ಈ ಕುರಿತು ಹೆಚ್ಡಿಎಫ್ಸಿ ಪೆನ್ಷನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀರಾಮ್ ಅಯ್ಯರ್ ಅವರು, “ಬಹಳಷ್ಟು ವ್ಯಕ್ತಿಗಳು ಮತ್ತು ಹಲವಾರು ಸಂಸ್ಥೆಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಕೃತಜ್ಞರಾಗಿದ್ದೇವೆ. ಹೆಚ್ಡಿಎಫ್ಸಿ ಪೆನ್ಷನ್ ನ ನಮ್ಮ ಚಂದಾದಾರರು, ಪಾಲುದಾರರು, ಪೆನ್ಷನ್ ಏಜೆಂಟ್ಗಳು ಮತ್ತು ವಿತರಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ನೀಡುವುದರ ಮೇಲೆ ನಾವು ಗಮನ ಹರಿಸುತ್ತಿದ್ದೇವೆ. ರೂ. 1,00,000 ಕೋಟಿಯಷ್ಟು ಎಯುಎಂ ಗಳಿಕೆ ಮಾಡಿರುವುದು ಮಹತ್ವದ ಸಾಧನೆಯಾಗಿದೆ. ಈ ಸಾಧನೆಯು ನಮ್ಮ ತಂಡದ ಸಾಮೂಹಿಕ ಶ್ರಮ ಮತ್ತು ನಮ್ಮ ಪಾಲುದಾರರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯ ಫಲವಾಗಿದೆ. ಅದಕ್ಕಾಗಿ ನಾವು ನಮ್ಮ ಗ್ರಾಹಕರಿಗೆ, ರೆಗ್ಯುಲೇಟರ್ ಆದ ಪೆನ್ಷನ್ ಫಂಡ್ ರೆಗ್ಯುಲೇಟರ್ ಆಂಡ್ ಡೆವಲಪ್ಮೆಂಟ್ ಅಥಾರಿಟಿ (ಪಿ ಎಫ್ ಆರ್ ಡಿ ಎ), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ ಮತ್ತು ಸಿ ಆರ್ ಎಪಾಲುದಾರರು- ಪ್ರೊಟೀಯಾನ್ ಇಗವರ್ನ್ ಮೆಂಟ್ ಟೆಕ್ನಾಲಜೀಸ್, ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಸಿಎಎಂಎಸ್ ಎನ್ಪಿಎಸ್ ನೆರವಿಗಾಗಿ ನಾವು ಪ್ರಾಮಾಣಿಕವಾದ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇವೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಒಂದು ಅಮೂಲ್ಯವಾದ ಆರ್ಥಿಕ ಸಾಧನವಾಗಿದೆ. ವ್ಯಕ್ತಿಗಳಿಗೆ ಹೊಂದಾಣಿಕೆಯಿಂದ ಮತ್ತು ಸೂಕ್ತ ವೆಚ್ಚದಲ್ಲಿ ತಮ್ಮ ನಿವೃತ್ತಿ ಪ್ಲಾನ್ ಅನ್ನು ಮಾಡಲು ಅನುವು ಮಾಡಿಕೊಡುತ್ತದೆ. ನಾವು ನಮ್ಮ ಚಂದಾದಾರರ ಜೊತೆ ಜೊತೆಗೆ ಬೆಳೆಯಲು ಬದ್ಧರಾಗಿದ್ದೇವೆ ಮತ್ತು ಎನ್ಪಿಎಸ್ ಹೆಚ್ಚಿನ ವ್ಯಕ್ತಿಗಳಿಗೆ ತಮ್ಮ ಭವಿಷ್ಯವನ್ನು ಎದುರುಗೊಳ್ಳಲು ಆತ್ಮವಿಶ್ವಾಸದಿಂದ ಸಿದ್ಧರಾಗುವ ಅವಕಾಶ ನೀಡುವುದನ್ನು ಮುಂದುವರಿಸಲಿದೆ ಎಂಬ ಕುರಿತು ನಮಗೆ ವಿಶ್ವಾಸವಿದೆ” ಎಂದು ಹೇಳಿದರು.
ಮಾರುಕಟ್ಟೆ ನಾಯಕತ್ವ: ಶ್ರೇಷ್ಠತೆ ಸಾಧಿಸುವ ಬದ್ಧತೆ
ತಾಂತ್ರಿಕ ಪ್ರಗತಿ: ಹೆಚ್ಡಿಎಫ್ಸಿ ಪೆನ್ಷನ್ ತನ್ನ ಪ್ರಸ್ತುತ ಚಂದಾದಾರರು ಮತ್ತು ಪಾಲುದಾರರಿಗೆ ಅತ್ಯುತ್ತಮ ಎನ್ಪಿಎಸ್ ಅನುಭವ ಒದಗಿಸುಲ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ಮುಂಚೂಣಿಯಲ್ಲಿದೆ. ಡಿಜಿಟಲ್ ಸೌಲಭ್ಯ ಒದಗಿಸಲು ಗಮನ ನೀಡುವ ಮೂಲಕ ಮತ್ತು ವಾಟ್ಸ್ ಆಪ್ ಬಾಟ್ ಸೇವೆಯನ್ನು ಪರಿಚಯಿಸುವ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು, ಸರಳಗೊಳಿಸಲು ಒತ್ತು ನೀಡಿದೆ. ಈ ಮೂಲಕ ಅಸಾಧಾರಣ ಗ್ರಾಹಕ ಸೇವೆ ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ.
ಉತ್ಕೃಷ್ಟ ಕಾರ್ಯಾಚರಣೆ: ಹೆಚ್ಡಿಎಫ್ಸಿ ಪೆನ್ಷನ್ ಅತ್ಯುತ್ತಮ ಕಾರ್ಯಾಚರಣೆಯ ಚೌಕಟ್ಟು ಹೊಂದಿದೆ. ನಿರರ್ಗಳ, ಸುಗಮ ಮತ್ತು ಪರಿಣಾಮಕಾರಿಯಾಗಿ ಸೇವೆ ಒದಗಿಸುತ್ತದೆ. ಇಂಡಿಯಾ ಇನ್ಶೂರೆನ್ಸ್ ಸಮ್ಮಿಟ್ 2024ರಲ್ಲಿ ಕಂಪನಿಯು ‘ಅತ್ಯುತ್ತಮ ಪಿಂಚಣಿ ಗ್ರಾಹಕ ಸೇವಾ ಪೂರೈಕೆದಾರ’ ಎಂಬ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿತ್ತು. ಈ ಮೂಲಕ ಸಂಸ್ಥೆಯ ಶ್ರೇಷ್ಠ ಕಾರ್ಯಾಚರಣೆಗೆ ಗೌರವ ಸಂದಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಡಿಎಫ್ಸಿ ಪೆನ್ಷನ್ ಸಂಸ್ಥೆಯು ಮನಿ ಟುಡೇ ನೀಡುವ ‘ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಿಎಫ್ಎಂ’ (ಬೆಸ್ಟ್ ಪರ್ಫಾರ್ಮಿಂಗ್ ಪಿಎಫ್ಎಂ) ಎಂಬ ಪುರಸ್ಕಾರವನ್ನು 2019ರಿಂದ 2022 ರವರೆಗೆ ಸತತ ಮೂರು ವರ್ಷ ಪಡೆದಿತ್ತು. ಇದು ಫಂಡ್ ಮ್ಯಾನೇಜ್ಮೆಂಟ್ ವಲಯದಲ್ಲಿ ಸಂಸ್ಥೆಯು ಹೊಂದಿರುವ ಗಟ್ಟಿಯಾದ ನಾಯಕತ್ವಕ್ಕೆ ಸಾಕ್ಷಿಯಾಗಿದೆ.