ಬೆಂಗಳೂರು : ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿ ಅಸಾಧಾರಣ ಅನುಭವ ನೀಡಲು ಸದಾ ಸಿದ್ಧರಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಆ ಹಿನ್ನೆಲೆಯಲ್ಲಿ ತಮ್ಮ ಗೌರವಾನ್ವಿತ ಗ್ರಾಹಕರಿಗೆ ಅತ್ಯುತ್ತಮ ಮಾಲೀಕತ್ವದ ಅನುಭವ, ಸಂತೋಷ ಒದಗಿಸುವ ಉದ್ದೇಶದಿಂದ “ಟಿ ಕೇರ್” ಸೌಲಭ್ಯವನ್ನು ಪರಿಚಯಿಸಿದೆ. ಟಿ ಕೇರ್ ಮೂಲಕ ಒಂದೇ ಬ್ರಾಂಡ್ ಅಡಿಯಲ್ಲಿ ಮೌಲ್ಯವರ್ಧಿತ ಸೌಕರ್ಯಗಳ ಜೊತೆಗೆ ವಿವಿಧ ರೀತಿಯ ನೆರವನ್ನು ಒದಗಿಸುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಆ ಮೂಲಕ ಗ್ರಾಹಕರಿಗೆ ಒದಗಿಸುವ ಸೇವೆಗಳಲ್ಲಿ ಟೊಯೋಟಾದ ಮೂಲ ಉದ್ದೇಶಗಳಾದ ವಿಶ್ವಾಸಾರ್ಹತೆ, ಗುಣಮಟ್ಟ ಮತ್ತು ಅತ್ಯುತ್ಕೃಷ್ಟ ಕಾಳಜಿ ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ.
ಗ್ರಾಹಕ ಕೇಂದ್ರಿತ ವಿಧಾನದಿಂದ ನಡೆಸಲ್ಪಡುವ “ಟಿ ಕೇರ್” ಗ್ರಾಹಕರಿಗೆ ಸಮಗ್ರ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಆ ಮೂಲಕ ಗ್ರಾಹಕರ ಸಂತೋಷವನ್ನು ಹೆಚ್ಚಿಸುವ ಮತ್ತು ಅವರೊಂದಿಗೆ ದೀರ್ಘಾವಧಿಯ ಸಂಬಂಧಗಳನ್ನು ಬೆಳೆಸುವ ಕಂಪನಿಯ ಬದ್ಧತೆಯನ್ನು ಹೊಂದಲಾಗಿದೆ. ಮಾರಾಟ ಪೂರ್ವದಿಂದ ಹಿಡಿದು ಮಾರಾಟ ನಂತರದ ಸೇವೆ ಮತ್ತು ಮರು ಖರೀದಿ ಸೇವೆಗಳವರೆಗೆ ಟಿ ಕೇರ್ ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ-
ಟಿ ಡೆಲಿವರ್ ಫ್ಲಾಟ್ಬೆಡ್ ಟ್ರಕ್ಗಳ ಮೂಲಕ ಹೊಸ ಕಾರು ವಿತರಣೆ ಮಾಡುವ ಮೂಲ ಅತ್ಯುತ್ತಮ ವಿತರಣಾ ಸೇವೆ ಒದಗಿಸುತ್ತದೆ. ಆ ಮೂಲಕ ಅಂತಿಮವಾಗಿ ವಾಹನಗಳು ಹೊಚ್ಚ ಹೊಸತಾದ ಸ್ಥಿತಿಯಲ್ಲಿ ಟೊಯೋಟಾ ಟಚ್ ಪಾಯಿಂಟ್ ಅನ್ನು ತಲುಪುವಂತೆ ನೋಡಿಕೊಳ್ಳಲಾಗುತ್ತದೆ.
ಟಿ ಗ್ಲಾಸ್ ಸಂಪೂರ್ಣ ಕಾರ್ ಡಿಟೇಲಿಂಗ್ ಸೇವೆಗಳನ್ನು ಒದಗಿಸುತ್ತದೆ. ಗ್ರಾಹಕರ ಕಾರುಗಳು ಯಾವಾಗಲೂ ಉನ್ನತ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ.
ಟಿವೆಬ್ ಟೊಯೋಟಾ ವಾಹನಗಳನ್ನು ಖರೀದಿಸಲು ಗ್ರಾಹಕ ಸ್ನೇಹಿ ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಹೆಚ್ಚು ಅನುಕೂಲವನ್ನು ಒದಗಿಸುತ್ತದೆ.
ಟಿ ಅಸಿಸ್ಟ್ 5 ವರ್ಷಗಳವರೆಗೆ 24/7 ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು ನೀಡುತ್ತದೆ. ಆ ಮೂಲಕ ಗ್ರಾಹಕರಿಗೆ ಸಕಾಲಿಕವಾಗಿ ನೆರವು ಒದಗಿಸುತ್ತದೆ.
ಟಿ ಸೆಕ್ಯೂರ್ ಹೆಚ್ಚುವರಿ 2 ವರ್ಷಗಳವರೆಗಿನ ಎಕ್ಸ್ ಟೆಂಡೆಡ್ ವಾರಂಟಿ ನೀಡಿ ಮಾನಸಿಕ ಶಾಂತಿ ಒದಗಿಸುತ್ತದೆ.
ಟಿಸ್ಮೈಲ್ ಕಸ್ಟಮೈಸ್ ಮಾಡಬಹುದಾದ, ತೊಂದರೆ ಮುಕ್ತ ಮತ್ತು ವೆಚ್ಚ-ಪರಿಣಾಮಕಾರಿ ಪ್ರಿ-ಪೇಯ್ಡ್ ಮೇಂಟೇನೆನ್ಸ್ ಪ್ಯಾಕೇಜ್ ಅನ್ನು ನೀಡುತ್ತದೆ.
ಟಿ ಸಾಥ್ ಸರ್ವೀಸ್ ಪಾರ್ಟ್ ಅಥವಾ ಭಾಗಗಳು ಸೂಕ್ತ ರೀತಿಯಲ್ಲಿ ವಿತರಣೆ ಆಗುವಂತೆ ಮತ್ತು ಗ್ರಾಹಕರ ಹತ್ತಿರ ತಲುಪುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ಗ್ರಾಹಕರಿಗೆ ಅನುಕೂಲತೆ ಒದಗಿಸುತ್ತದೆ.
ಟಿ ಚಾಯ್ಸ್ ಮೌಲ್ಯಯುತ ಗ್ರಾಹಕರಿಗೆ ಮಲ್ಟಿಪಲ್ ಸರ್ವೀಸ್ ಪಾರ್ಟ್ ಗಳ ಆಯ್ಕೆಯನ್ನು ಒದಗಿಸುತ್ತದೆ.
ಟಿ ಇನ್ ಸ್ಪೆಕ್ಟ್ ಬಳಸಿದ ಕಾರುಗಳ ಮಾರಾಟ, ಬಳಸಿದ ಕಾರುಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು, ವಿಮೆ ರಿನೀವಲ್ ಬ್ರೇಕ್ ಇತ್ಯಾದಿಗಳಂತಹ ವಿವಿಧ ರೀತಿಯ ಬಳಸಿದ ಕಾರಿಗೆ ಸಂಬಂಧಿಸಿದ ವಾಹನ ತಪಾಸಣಾ ಸೇವೆಗಳನ್ನು ಒದಗಿಸುತ್ತದೆ.
ಟಿ ಸ್ಪರ್ಶ್ ಇದು ಏಕ- ನಿಲುಗಡೆ ಪರಿಹಾರ ಸೌಲಭ್ಯವಾಗಿ ಮೂಡಿ ಬಂದಿದ್ದು, ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ. ಇಲ್ಲಿ ವಾಹನ ಆಯ್ಕೆಯ ಕುರಿತು ಪರಿಣಿತ ಮಾರ್ಗದರ್ಶನವನ್ನು ನೀಡಲಾಗುತ್ತದೆ, ಟೆಸ್ಟ್ ಡ್ರೈವ್ಗಳನ್ನು ಒದಗಿಸಲಾಗುತ್ತದೆ ಮತ್ತು ಟೊಯೋಟಾದ ವೈವಿಧ್ಯಮಯ ಶ್ರೇಣಿಯ ಮಾದರಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತದೆ.
ಟಿ ಸರ್ವ್ ಮಲ್ಟಿಬ್ರಾಂಡ್ ಕಾರ್ ಸರ್ವಿಸ್ ನೆಟ್ವರ್ಕ್ನ ಸೌಲಭ್ಯ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಗ್ರಾಹಕರ ತೃಪ್ತಿ ಮತ್ತು ವಾಹನಗಳ ಬಾಳಿಕೆ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ ವಿಶೇಷವಾಗಿ ಗುಣಮಟ್ಟದ ಸೇವೆಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತದೆ.
ಟಿ ಕೇರ್ ಗ್ರಾಹಕರ ಅನುಭವ, ಸಂತೋಷ ಹೆಚ್ಚು ಮಾಡುವುದರ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಟೊಯೋಟಾ ಜೊತೆಗಿನ ಅವರ ಮಾಲೀಕತ್ವದ ಪ್ರಯಾಣದ ಉದ್ದಕ್ಕೂ ಅತ್ಯುತ್ತಮ ಸಹಾಯ ಮತ್ತು ಉತ್ತಮ ಬೆಂಬಲ ನೀಡಲು ಸಿದ್ಧವಾಗಿರುತ್ತದೆ.
ಈ ಹೊಸ ಯೋಜನೆ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಸೇಲ್ಸ್, ಸರ್ವೀಸ್ ಮತ್ತು ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷರಾದ ಶ್ರೀ. ಶಬರಿ ಮನೋಹರ್ ಅವರು, “ಟೊಯೋಟಾದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸದ ಹೃದಯದಲ್ಲಿಯೂ ನಮ್ಮ ಗ್ರಾಹಕರು ಇರುತ್ತಾರೆ. ಪ್ರತಿ ಟಚ್ಪಾಯಿಂಟ್ನಲ್ಲಿಯೂ ಮಾರಾಟ ಪೂರ್ವ, ಮಾರಾಟ ಸಮಯ ಮತ್ತು ಮಾರಾಟ ನಂತರದ ಸೇವೆಗಳನ್ನು ಒದಗಿಸುವ ಗ್ರಾಹಕರ ಅನುಭವವನ್ನು ಉತ್ತಮಗೊಳಿಸುವ ಕಡೆ ನಾವು ಯಾಯಾಗಲೂ ಗಮನ ನೀಡುತ್ತೇವೆ. ನಾವು ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಜೊತೆಗೆ ಟೊಯೋಟಾ ಜೊತೆಗಿನ ಮಾಲೀಕತ್ವದ ಅವಧಿಯ ಉದ್ದಕ್ಕೂ ನಮ್ಮ ಗ್ರಾಹಕರ ಜೊತೆಗೆ ಗಾಢವಾದ, ಶಾಶ್ವತವಾದ ಸಂಪರ್ಕವನ್ನು ಬೆಳೆಸಲು ಪ್ರಯತ್ನಿಸುತ್ತೇವೆ. ಹೊಸದಾಗಿ ಪರಿಚಯಿಸಲಾದ ಟಿ ಕೇರ್ ಯೋಜನೆಯ ಮೂಲಕ ಟಿ ಡೆಲಿವರ್, ಟಿ ಗ್ಲಾಸ್, ಟಿ ಅಸಿಸ್ಟ್, ಟಿ ಸಾತ್, ಟಿ ಸೆಕ್ಯೂರ್, ಟಿ ಚಾಯ್ಸ್ ಮತ್ತು ಇತರ ಕೊಡುಗೆಗಳ ವ್ಯಾಪಕ ಶ್ರೇಣಿಯನ್ನು ಒಂದು ಗೂಡಿಸಲಾಗಿದೆ. ಈ ಮೂಲಕ ಒಂದೇ ಬ್ರ್ಯಾಂಡ್ನ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ನಮ್ಮ ಮೌಲ್ಯಯುತ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿವಿಧ ಸೇವೆಗಳನ್ನು ಒದಗಿಸಲು ಮತ್ತು ವೈಯಕ್ತೀಕರಿಸಿದ ನೆರವನ್ನು ನೀಡಲು ನಮಗೆ ಅವಕಾಶ ನೀಡುತ್ತದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಟಿ ಕೇರ್ ನಮ್ಮ ಗ್ರಾಹಕರ ಜೊತೆಗಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಾವು ನಂಬಿದ್ದೇವೆ. ಆ ಮೂಲಕ ಟೊಯೋಟಾದ ಅತ್ಯುತ್ತಮ ಸಾರಿಗೆ ಕಂಪನಿಯಾಗುವ ಉದ್ದೇಶವನ್ನು ಸಾಕಾರಗೊಳಿಸುತ್ತದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ತೃಪ್ತಿಕರ ಅನುಭವವನ್ನು ಒದಗಿಸುವುದು ಮತ್ತು ಅವರ ಸದಾ ಬೆಳೆಯುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುವ ಅತ್ಯಂತ ವಿಶ್ವಾಸಾರ್ಹ ಕಂಪನಿ ಆಗಿ ಮುಂದುವರಿಯುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಟಿಕೆಎಂ ಪ್ರಸ್ತುತ 685 ಗ್ರಾಹಕ ಟಚ್ ಪಾಯಿಂಟ್ಗಳು ಮತ್ತು 360 ಟಿ ಸ್ಪರ್ಶ್ ಔಟ್ಲೆಟ್ಗಳನ್ನು ಹೊಂದಿದೆ. ಆ ಮೂಲಕ ಭಾರತದಾದ್ಯಂತ ಇರುವ ಒಟ್ಟು ಟಚ್ ಪಾಯಿಂಟ್ಗಳ ಸಂಖ್ಯೆ 1045ಕ್ಕೆ ಏರಿದೆ. ಈ ಎಲ್ಲಾ ಟಚ್ ಪಾಯಿಂಟ್ ಗಳು ಟೊಯೋಟಾದ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಲಭವಾಗಿ ಒದಗಿಸುತ್ತದೆ ಮತ್ತು ಆ ಮೂಲಕ ಗ್ರಾಹಕರಿಗೆ ಅನುಕೂಲಕ ಒದಗಿಸುತ್ತದೆ.