ಭಾರತ : ವೃತ್ತಿಪರರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಉತ್ತಮ ವೃತ್ತಿ ಅವಕಾಶಗಳನ್ನು ದೊರಕಿಸಿಕೊಳ್ಳಲು ಸಹಾಯ ಮಾಡುವ ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್ವರ್ಕ್ ಆಗಿರುವ ಲಿಂಕ್ಡ್ ಇನ್ ವೃತ್ತಿಪರರು ತಮ್ಮ ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದಲು ನೆರವಾಗುವ ಉನ್ನತ ಬಿಸಿನೆಸ್ ಸ್ಕೂಲ್ ಗಳ ಕುರಿತು ತಿಳಿಯಲು ಸಹಾಯ ಮಾಡಲು ಟಾಪ್ 20 ಎಂಬಿಎ ಸಂಸ್ಥೆಗಳ ಪಟ್ಟಿ ಬಿಡುಗಡೆ ಮಾಡಿದೆ.
ಈ ಟಾಪ್ 20 ಪಟ್ಟಿಯಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (#6) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ (#19) ಸ್ಥಾನ ಪಡೆದಿವೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇನ್ಸ್ಟಿಟ್ಯೂಟ್ ಯುರೋಪಿನ್ ಡೀ ಅಡ್ಮಿನಿಸ್ಟ್ರೇಷನ್ ಡೆಸ್ ಅಫೇರ್ಸ್ (ಇಎನ್ಎಸ್ಇಡಿ), ಫ್ರಾನ್ಸ್ ಮತ್ತು ಯುಎಸ್ಎಯ ಹಾರ್ವರ್ಡ್ ವಿಶ್ವವಿದ್ಯಾನಿಲಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ತಮ್ಮ ಹಳೆಯ ವಿದ್ಯಾರ್ಥಿಗಳಿಗೆ ವೃತ್ತಿಜೀವನದಲ್ಲಿ ದೀರ್ಘಾವಧಿಯ ಯಶಸ್ಸು ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುವ ಉದ್ಯೋಗ ಅವಕಾಶ, ಅಭಿವೃದ್ಧಿ ಹೊಂದುವ ಶಕ್ತಿ, ನೆಟ್ ವರ್ಕ್ ಸಾಮರ್ಥ್ಯ, ನಾಯಕತ್ವ ಗುಣ ಮತ್ತು ಲಿಂಗ ವೈವಿಧ್ಯತೆ ಎಂಬ ಐದು ವಿಷಯಗಳನ್ನು ಆಧಾರವಾಗಿ ಇಟ್ಟುಕೊಂಡು ಅತ್ಯುತ್ತಮ ಸಂಸ್ಥೆಗಳ ಪಟ್ಟಿ ಮಾಡಲಾಗಿದೆ.
ಈ ಕುರಿತು ಲಿಂಕ್ಡ್ ಇನ್ ನ್ಯೂಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಸಂಪಾದಕಿ ಮತ್ತು ಕರಿಯರ್ ಎಕ್ಸ್ ಪರ್ಟ್ ನಿರಜಿತಾ ಬ್ಯಾನರ್ಜಿ ಅವರು, “ವೃತ್ತಿ ಬದುಕಿನಲ್ಲಿ ಅಭಿವೃದ್ಧಿ ಹೊಂದಲು ಬಯಸುವ ವೃತ್ತಿಪರರಿಗೆ ಎಂಬಿಎ ಒಂದು ಶಕ್ತಿಶಾಲಿ ಸಾಧನ ಆಗಬಹುದಾಗಿದೆ. ಅವರು ಉನ್ನತ ಸ್ಥಾನಕ್ಕೆ ಏರಲು ಬಯಸುತ್ತಿದ್ದರೂ ಹೊಸ ಉದ್ಯಮದ ಅನ್ವೇಷಣೆಯಲ್ಲಿದ್ದರೂ ಅಥವಾ ಅವರದೇ ಸ್ವಂತ ಉದ್ದಿಮೆ ಆರಂಭಿಸುವ ಆಲೋಚನೆಯಲ್ಲಿದ್ದರೂ ಎಂಬಿಎ ನೆರವಾಗುತ್ತದೆ. ಪದವಿ ಗಳಿಸುವುದರ ಜೊತೆಗೆ ಬೇಡಿಕೆಯಲ್ಲಿರುವ ಕೌಶಲಗಳಾದ ಕಾರ್ಯತಂತ್ರದ ಚಿಂತನೆ, ನಾಯಕತ್ವ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶ ಒದಗಿಸುತ್ತದೆ. ಪದವಿಯ ನಂತರ ಹೊಸ ಉದ್ಯೋಗ ಅವಕಾಶಗಳಿಗೆ ಬಾಗಿಲು ತೆರೆಯಬಹುದಾದ ಹೊಸ ವ್ಯಕ್ತಿಗಳ ಸಂಪರ್ಕವನ್ನೂ ಗಳಿಸಿಕೊಳ್ಳಬಹುದಾಗಿದೆ. ಲಿಂಕ್ಡ್ ಇನ್ನ ಟಾಪ್ ಎಂಬಿಎ ಪಟ್ಟಿಯು ಮಹತ್ವಾಕಾಂಕ್ಷಿ ವೃತ್ತಿಪರರು ಸರಿಯಾದ ದಾರಿಯನ್ನು, ಕೋರ್ಸ್ ಅನ್ನು ಕಂಡುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅವರ ವೃತ್ತಿಜೀವನದ ಗುರಿ ಸಾಧಿಸಲು ಸಹಾಯ ಮಾಡುವ ಕೋರ್ಸ್ ಗಳ ಕುರಿತು ಅವರಿಗೆ ತಿಳಿಸುವ ಮೂಲಕ ಅವರ ಪ್ರಯತ್ನವನ್ನು ಪರಿಣಾಮಕಾರಿಯಾಗಿಸುವ ಉದ್ದೇಶ ಈ ಪಟ್ಟಿಯ ಹಿಂದಿದೆ” ಎಂದು ಹೇಳಿದರು.
ವಿಶೇಷವಾಗಿ ನೆಟ್ ವರ್ಕ್ ಹೆಚ್ಚಿಸುವ ಸಾಮರ್ಥ್ಯ ಒದಗಿಸುವ ಭಾರತೀಯ ಸಂಸ್ಥೆಗಳ ಟಾಪ್ 10 ಎಂಬಿಎ ಕೋರ್ಸ್ ಗಳ ಪಟ್ಟಿಯನ್ನು ಕೂಡ ಲಿಂಕ್ಡ್ ಇನ್ ಪ್ರಕಟಿಸಿದೆ. ತಮ್ಮ ನೆಟ್ವರ್ಕಿಂಗ್ ಒದಗಿಸಿಕೊಡುವ ಸಾಮರ್ಥ್ಯದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ಟಾಪ್ 10 ಸಂಸ್ಥೆಗಳಲ್ಲಿ ಎಂಟು ಭಾರತದಲ್ಲಿವೆ ಅನ್ನುವುದು ವಿಶೇಷವಾಗಿದೆ. ಈ ಪಟ್ಟಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ #1ನೇ ಸ್ಥಾನದಲ್ಲಿದೆ. ನಂತರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂದೋರ್ #2ನೇ ಸ್ಥಾನದಲ್ಲಿದೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಲಕ್ನೋ #3 ನೇ ಸ್ಥಾನದಲ್ಲಿದೆ. ಈ ಸಂಸ್ಥೆಗಳು ವೃತಿಪರರಿಗೆ ಅಮೂಲ್ಯ ನೆಟ್ ವರ್ಕಿಂಗ್ ಅವಕಾಶ ಒದಗಿಸುವ ಭಾರತೀಯ ಸಂಸ್ಥೆಗಳ ಮಹತ್ವದ ಪಾತ್ರವನ್ನು ವಿಶೇಷವಾಗಿ ಸಾರಿವೆ.
ಎಂಬಿಎ ಓದುತ್ತಿರುವ ವೃತ್ತಿಪರರು ತಮ್ಮ ವೃತ್ತಿ ಭವಿಷ್ಯವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ನಿರಾಜಿತಾ ಅವರು ನೀಡಿರುವ ಸಲಹೆಗಳು ಇಲ್ಲಿವೆ:
ನೆಟ್ವರ್ಕ್, ನೆಟ್ವರ್ಕ್, ನೆಟ್ವರ್ಕ್. ನೀವು ಸಮಯ ಇದ್ದಾಗಲೆಲ್ಲಾ ಸಾಧ್ಯವಿರುವ ಪ್ರತಿಯೊಬ್ಬರನ್ನು ಭೇಟಿ ಮಾಡಬೇಕು. ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಹಾಜರಾಗಿ, ನೀವು ಭೇಟಿ ಆಗುತ್ತಾ ಹೋದಂತೆ ಅವರನ್ನೆಲ್ಲಾ ನಿಮ್ಮ ಲಿಂಕ್ಡ್ ಇನ್ ನೆಟ್ವರ್ಕ್ ನಲ್ಲಿ ಸೇರಿಸಿಕೊಳ್ಳಿ. (ನೀವು ಭೇಟಿಯಾಗುವ ಜನರನ್ನು ಲಿಂಕ್ಡ್ ಇನ್ ನಲ್ಲಿ ಸೇರಿಸಿ).
ಟೀಮ್ ವರ್ಕ್ ಕೆಲಸ, ಸಹಯೋಗ, ಸಂವಹನ ನಿಮ್ಮಲ್ಲಿ ವಿಶೇಷ ಮಾನವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ –ಬಿಸಿನೆಸ್ ಸ್ಕೂಲ್ ನಲ್ಲಿನ ಮಹತ್ವ ಇರುವುದು ಟೀಮ್ ಪ್ರಾಜೆಕ್ಟ್ ಗಳ ಮೇಲೆ. ನಿಮ್ಮ ನಾಯಕತ್ವ ಮತ್ತು ಸಹಯೋಗ ಕೌಶಲ್ಯಗಳನ್ನು ಹೆಚ್ಚಿಸಲು ಈ ಸ್ಕೂಲ್ ಗಳು ನಿಮಗೆ ಉತ್ತಮ ಅವಕಾಶವನ್ನು ನೀಡುತ್ತದೆ.
ನಿಮ್ಮ ಕೋರ್ಸ್ನಲ್ಲಿ ನೀವು ಕಲಿತ ವಿಚಾರಗಳನ್ನು ಲಿಂಕ್ಡ್ ಇನ್ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿ ಮತ್ತು ನೀವು ಆಸಕ್ತಿ ಹೊಂದಿರುವ ಯಾವುದೇ ಉದ್ಯಮ ವಿಷಯದ ಕುರಿತು ಕೇಸ್ ಸ್ಟಡಿ ಅಭ್ಯಾಸಗಳನ್ನು ಮಾಡಿ. ಅದು ನಿಮ್ಮ ನೆಟ್ವರ್ಕ್ ಅನ್ನು ಬೆಳೆಸಲು ಮತ್ತು ನಿಮ್ಮ ಬ್ರ್ಯಾಂಡ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಎಂಬಿಎ ನಂತರ ನೀವು ಏನು ಮಾಡಲು ಬಯಸುತ್ತೀರಿ ಎಂಬುದರ ಕುರಿತು ಯೋಚಿಸಿ. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ಹುದ್ದೆ ಇದ್ದರೆ, ಆ ಹುದ್ದೆಗೆ ಅಗತ್ಯವಿರುವ ಕೌಶಲ್ಯಗಳನ್ನು ಗಳಿಸಿಕೊಳ್ಳಿ ಮತ್ತು ಕೋರ್ಸ್ ಕಲಿಯುವ ಸಂದರ್ಭದಲ್ಲಿ ನಿಮ್ಮ ಅಧ್ಯಯನದಲ್ಲಿ ಆ ಹುದ್ದೆಗೆ ಸಂಬಂಧಿಸಿದ ಕೌಶಲ್ಯಗಳನ್ನು ಗಳಿಸಿಕೊಳ್ಳುವ ಹಾಗೆ ನೋಡಿಕೊಳ್ಳಿ.
ಕ್ಲಬ್ ಕಾರ್ಯಕ್ರಮಗಳು, ಪಿಚ್ ಈವೆಂಟ್ಗಳು ಮತ್ತು ಕೇಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ. ನಿಮ್ಮ ಪ್ರೆಸೆಂಟೇಷನ್ ಮತ್ತು ಮನವೊಲಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಳು ಇಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಜೊತೆಗೆ ಈ ಕಾರ್ಯಕ್ರಮಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಅಥವಾ ಭಾಗವಹಿಸುವಿಕೆ ತೋರುವುದರಿಂದ ಅದು ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಅಥವಾ ಹೊಸ ಕಂಪನಿಯನ್ನು ಪ್ರಾರಂಭಿಸುವಾಗ ನಿಮ್ಮ ಸಾಧನೆಯ ಪಟ್ಟಿಯಲ್ಲಿ ಹೆಚ್ಚು ಮೌಲ್ಯ ಒದಗಿಸುತ್ತದೆ.
ನಿಮ್ಮ ಕೋರ್ಸ್ ಸಮಯದಲ್ಲಿಯೇ ನೀವು ಇಂಟರ್ನ್ಶಿಪ್ಗಳು, ಉದ್ಯೋಗಗಳು ಅಥವಾ ಕ್ಯಾಂಪಸ್ ನಾಯಕತ್ವ ಹುದ್ದೆಗಳನ್ನು ಪಡೆದುಕೊಳ್ಳಲು ನೋಡಿ. ಇದರಿಂದ ನೀವು ಪದವಿ ಗಳಿಸುವ ಸಮಯ ಹತ್ತಿರ ಬರುವಾಗ ಅತ್ಯುತ್ತಮ ಉದ್ಯಗಾವಕಾಶ ಹೊಂದಲು ಸಹಾಯ ಆಗುತ್ತದೆ.