ಬೆಂಗಳೂರು : ಭಾರತದ ಇವಿ ಕ್ರಾಂತಿಯ ಪ್ರವರ್ತಕರು ಮತ್ತು ಟಾಟಾ ಮೋಟಾರ್ಸ್ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ಇಂದು ಕೇರಳದ ಕೊಚ್ಚಿಯ ಎಡಪಲ್ಲಿ ಮತ್ತು ಕಲಮಸ್ಸೆರಿಯಲ್ಲಿ ಟಾಟಾ.ಇವಿ ಬ್ರ್ಯಾಂಡ್ ನ ಎರಡು ಹೊಸ ಇವಿ- ರಿಟೇಲ್ ಮಳಿಗೆಗಳನ್ನು ಉದ್ಘಾಟನೆ ಮಾಡಿದೆ. ಈ ಮಳಿಗೆಗಳಲ್ಲಿ ವಿಶೇಷವಾಗಿ ಟಾಟಾದ ಇವಿ ವಾಹನಗಳನ್ನು ಮಾರಾಟ ಮಾಡಲಾಗುತ್ತದೆ ಮತ್ತು ಇವಿ ಜಗತ್ತಿನ ವಿಶೇಷತೆಗಳನ್ನು ತಿಳಿಸಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ಅತ್ಯುನ್ನತ ಅನುಭವ ಒದಗಿಸಲಾಗುತ್ತದೆ.
ದೇಶದಲ್ಲಿ ನಿಧಾನಕ್ಕೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಹೆಚ್ಚುತ್ತಾ ಹೋದಂತೆ ಎಲೆಕ್ಟ್ರಿಕ್ ವಾಹನಗಳ ಕುರಿತಾದ ಗ್ರಾಹಕರ ಖರೀದಿ ನಡವಳಿಕೆ ಕೂಡ ಬದಲಾಗುತ್ತಿದ್ದು, ಹೆಚ್ಚು ಪ್ರಬುದ್ಧವಾಗಿದೆ ಮತ್ತು ಯೋಚನಾ ವಿಧಾನ ಬೆಳೆಯುತ್ತಿದೆ. ಇವಿ ಗ್ರಾಹಕರು ಈಗ ಉತ್ಪನ್ನವನ್ನು ಖರೀದಿಸುವ ಸಮಯದಿಂದ ಹಿಡಿದು ಅದರ ಮಾಲೀಕತ್ವ ಹೊಂದಿದ ಬಳಿಕದ ದಿನಗಳವರೆಗೆ ಬ್ರ್ಯಾಂಡ್ ನಿಂದ ವಿಶೇಷ ಅನುಭವ, ಸೇವೆಯನ್ನು ನಿರೀಕ್ಷೆ ಮಾಡುತ್ತಾರೆ. ಹಾಗಾಗಿ ಗ್ರಾಹಕರಿಗೆ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಮೌಲ್ಯಗಳಿಂದ ನಡೆಸಲ್ಪಡುವ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಗ್ರಾಹಕ ಕೇಂದ್ರಿತ ಬ್ರಾಂಡ್ ಐಡೆಂಟಿಟಿ ಅವಶ್ಯವಾಗಿದೆ. ಈ ಕಾರಣಕ್ಕೆ ಟಾಟಾ.ಇವಿ ಅತ್ಯಾಧುನಿಕ ರಿಟೇಲ್ ಮಳಿಗೆಗಳನ್ನು ಆರಂಭ ಮಾಡಿದ್ದು, ಇವಿ ಗ್ರಾಹಕರ ವಿಭಿನ್ನ ನಿರೀಕ್ಷೆಗಳನ್ನು ಪೂರೈಸುವ ಆಲೋಚನೆ ಹೊಂದಿದೆ. ಈ ಮಳಿಗೆಗಳನ್ನು ಮಾಹಿತಿ, ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನ ನೀಡಲು ವಿನ್ಯಾಸ ಮಾಡಲಾಗಿದ್ದು, ಗ್ರಾಹಕ ಸ್ನೇಹಿ ವಾತಾವರಣವನ್ನು ಹೊಂದಿದೆ. ಅತ್ಯುತ್ತಮ ರಿಟೇಲ್ ಅನುಭವ ಒದಗಿಸಲೆಂದೇ ಅನಾವರಣಗೊಂಡಿರುವ ಟಾಟಾ.ಇವಿ ಮಳಿಗೆಗಳು ಸ್ನೇಹಮಯ, ಸಂತೋಷಕರ, ಬೆಚ್ಚಗಿನ ವಾತಾವರಣದಲ್ಲಿ ಟಾಟಾ.ಇವಿ ಬ್ರಾಂಡ್ ನ ಸೊಗಸನ್ನು ಸವಿಯುವಂತೆ ರೂಪುಗೊಂಡಿವೆ.
ಈ ಕುರಿತು ಮಾತನಾಡಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು, “ದೇಶದಲ್ಲಿನ ಇವಿ ಮಾರುಕಟ್ಟೆಯ ಶೇ.5.6ರಷ್ಟು ಭಾಗವನ್ನು ಹೊಂದಿದ್ದು, ಬ್ರಾಂಡ್ ಎಲೆಕ್ಟ್ರಿಕ್ ಸಾರಿಗೆ ಮಾರುಕಟ್ಟೆಯ ಮುಂಚೂಣಿಯಲ್ಲಿದೆ. ಕೇರಳದ ಜನರು ಭವಿಷ್ಯದ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಾರಾದ್ದರಿಂದ ನಾವು ಕೇರಳ ರಾಜ್ಯದಲ್ಲಿ ಎರಡು ಹೊಸ ಪ್ರೀಮಿಯಂ ಟಾಟಾ.ಇವಿ ಮಳಿಗೆಗಳನ್ನು ಸ್ಥಾಪಿಸಿದ್ದೇವೆ. ಇವಿ ಗ್ರಾಹಕರು ಈಗ ಹೆಚ್ಚು ಪ್ರಬುದ್ಧರಾಗಿದ್ದಾರೆ ಮತ್ತು ಅವರು ಅತ್ಯುನ್ನತ ಮಾಲೀಕತ್ವದ ಅನುಭವವನ್ನು ಬಯಸುತ್ತಾರೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಹಾಗಾಗಿ ಈ ಬೇಸಿಕ್ ಅಗತ್ಯವನ್ನು ಪೂರೈಸಲು, ಟಾಟಾ ಮೋಟಾರ್ಸ್ ಬದ್ಧವಾಗಿದೆ. ಗ್ರಾಹಕರ ನಿರೀಕ್ಷೆ ಮತ್ತು ಅಗತ್ಯಗಳನ್ನು ಪೂರೈಸುತ್ತಲೇ ಇವಿಗಳನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ನಾವು ಅತ್ಯಾಧುನಿಕ ಮತ್ತು ಡಿಜಿಟಲ್ ಸೌಕರ್ಯವುಳ್ಳ ಮಾಲೀಕತ್ವದ ಅನುಭವ ಒದಗಿಸುವುದರ ಕಡೆಗೆ ಗಮನ ಹರಿಸಿದ್ದೇವೆ. ಇದರ ಜೊತೆಗೆ ನಾವು ಶೀಘ್ರದಲ್ಲೇ ಕೇರಳದ ಪ್ರಮುಖ ನಗರಗಳಲ್ಲಿ 5 ವಿಶೇಷ ಇವಿ ಸರ್ವೀಸ್ ಸೆಂಟರ್ ಗಳನ್ನು ತೆರೆಯಲಿದ್ದೇವೆ. ಟಾಟಾ.ಇವಿ ಸ್ಟೋರ್ಗಳು ಮತ್ತು ಸರ್ವೀಸ್ ಸೆಂಟರ್ ಗಳ ಮೂಲಕ ಖರೀದಿ ಅನುಭವವನ್ನು ಉತ್ತಮಗೊಳಿಸುವುದು ಮತ್ತು ಇವಿ ಮಾಲೀಕತ್ವದ ಅನುಭವವನ್ನು ಸುಮಧುರಗೊಳಿಸುವುದು ನಮ್ಮ ಉದ್ದೇಶವಾಗಿದೆ. ಆ ಮೂಲಕ ಭಾರತದ ವಿದ್ಯುತ್ ಕ್ರಾಂತಿಯಲ್ಲಿ ಒಂದು ಪ್ರಮುಖ ಭಾಗವಾಗಲಿದ್ದೇವೆ. ದೇಶದಲ್ಲಿ ಇವಿ ಅಳವಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢವಾಗಿ ಚಲಿಸುತ್ತಿರುವ ನಮಗೆ ಇವೆಲ್ಲವೂ ಮಹತ್ವದ ಮೈಲುಗಲ್ಲಾಗಿವೆ” ಎಂದು ಹೇಳಿದರು.