ಬೆಂಗಳೂರು : ಲಿಂಬೆ ಹಣ್ಣಿನ ಫ್ಲೇವರನ್ನು ಹೊಂದಿರುವ ಐತಿಹಾಸಿಕ ಪಾನೀಯವಾಗಿರುವ ಸ್ಪ್ರೈಟ್ ವೇದಾಂಗ್ ರೈನಾ ಅಭಿನಯಿಸಿರುವ ‘ಚಿಲ್ ಅಟ್ ಹೋಮ್’ ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ಈ ಅಭಿಯಾನದಲ್ಲಿ ಬ್ಯುಸಿ ದಿನದ ಅಂತ್ಯಕ್ಕೆ ಸ್ಪ್ರೈಟ್ ಅನ್ನು ಬಳಸಿಕೊಂಡು ಆನಂದಿಸುವ ಕುರಿತು ತಿಳಿಸಲಾಗಿದೆ.
ಈ ಕಾಲದ ಯುವ ಜನತೆಯ ದೈನಂದಿನ ಜೀವನದಲ್ಲಿ ಇನ್ನೂ ಹೆಚ್ಚಿನ ಅನುಭವ ಪಡೆಯಲು ನಿರಂತರವಾಗಿ ಆಸೆ ಪಡುತ್ತಿರುತ್ತಾರೆ. ಅಧ್ಯಯನದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಮಾಡಿಕೊಂಡು, ಸಾಮಾಜಿಕ ನಿರೀಕ್ಷೆಗಗೆ ತಕ್ಕುದಾಗಿ ನಡೆದುಕೊಂಡು ಮತ್ತು ವೈವಯಕ್ತಿಕ ಗುರಿ ಸಾಧನೆ ಮಾಡಿಕೊಂಡು ಹೀಗೆ ಎಲ್ಲದರ ಸಮತೋಲನ ನಡೆಸಿಕೊಂಡು ಸಾಗುವುದು ಕೊಂಚ ಒತ್ತಡದಾಯಕವೇ ಆಗಿದೆ. ಪ್ರತೀ ದಿನ ಇತರರ ನಿರೀಕ್ಷೆಗಳನ್ನು ಪೂರೈಸುತ್ತಾ, ನಿಮ್ಮ ಸುತ್ತಮುತ್ತಲಿನ ಜನರ ಮಾನದಂಡಗಳಿಗೆ ಅನುಗುಣವಾಗಿ ಜೀವಿಸುತ್ತಾ ದಿನ ಕಳೆದು ಸುಸ್ತಾಗಿರುತ್ತದೆ. ಸಂಜೆ ಹೊತ್ತು ಕೂಡ ತಮ್ಮ ಮನೆಗೆ ಬ್ಯಾಕ್ ಪ್ಯಾಕ್ ಗಳ ಜೊತೆಗೆ ಈ ಮಣಭಾರದ ನಿರೀಕ್ಷೆಯ ಭಾರಗಳನ್ನು ಕೂಡ ಹೊತ್ತೊಯ್ಯಬೇಕಿರುತ್ತದೆ. ಅಂತ್ಯವೇ ಆಗದ ಜೀವನದ ಒತ್ತಡಗಳ ಮಧ್ಯೆ ಈ ಕಾಲದ ಯುವ ಜನತೆ ಫ್ರೆಶ್ ಆಗಲು, ಚಿಲ್ ಆಗಲು ಮತ್ತು ಆಹ್ಲಾದಕರ ಸಮಯ ಕಳೆಯಲು ದಾರಿ ಹುಡುಕಿಕೊಳ್ಳಬೇಕಿರುತ್ತದೆ. ಆ ಅಗತ್ಯವನ್ನು ಗುರುತಿಸಿರುವ ಸ್ಪ್ರೈಟ್ ಈ ನಿಟ್ಟಿನಲ್ಲಿ ಯುವಜನರ ಸಂಗಾತಿಯಾಗುವತ್ತ ಹೆಜ್ಜೆ ಇಟ್ಟಿದೆ. ಹದಿಹರೆಯದ ಮಂದಿ ದಿನಾಂತ್ಯಕ್ಕೆ ಸ್ಪ್ರೈಟ್ ಬಳಸಿಕೊಂಡು ಆಹ್ಲಾದ ಗಳಿಸಲು ಸ್ಪ್ರೈಟ್ ನ ಹೊಸ ಅಭಿಯಾನ ಸೂಚಿಸುತ್ತದೆ.
ಉದಯೋನ್ಮುಖ ತಾರೆ ವೇದಾಂಗ್ ರೈನಾ ಅಭಿನಯಿಸಿರುವ ಈ ಜಾಹೀರಾತು ಅಭಿಯಾನವು ಬ್ಯುಸಿ ದಿನದ ಅಂತ್ಯಕ್ಕೆ ವಿಶ್ರಾಂತಿ ಪಡೆಯುವ ಅಗತ್ಯದ ಕುರಿತು ಯುವ ಪೀಳಿಗೆಗೆ ತಿಳಿಸುತ್ತದೆ ಮತ್ತು ದೈನಂದಿನ ಜೀವನದ ಭಾಗವಾಗಿ ಹೋಗಿರುವ ಅನಿವಾರ್ಯ ಹಾಗೂ ಸಂಭಾವ್ಯ ಕಿರಿಕಿರಿಗಳಿಂದ ಮುಕ್ತರಾಗಿ ಆಹ್ಲಾದಕರ ಕ್ಷಣಗಳನ್ನು ಅನುಭವಿಸಲು ಸ್ಪ್ರೈಟ್ ಪಾನೀಯವು ಸೂಕ್ತವಾಗಿದೆ ಎಂದು ತಿಳಿಸುತ್ತದೆ.
ಹದಿಹರೆಯದವರ ಕಾಲೇಜು ಜೀವನ, ಸೋಷಿಯಲ್ ಸರ್ಕಲ್ ಗಳು, ಸ್ನೇಹಿತರ ಗುಂಪುಗಳು, ಸಾಮಾಜಿಕ ಕಿರಿಕಿರಿಗಳು ಇತ್ಯಾದಿಗಳು ಎಲ್ಲವನ್ನೂ ಜೊತೆಯಾಗಿಸಿ ರೂಪುಗೊಳಿಸಲಾಗಿರುವ ಜಾಹೀರಾತು ಸರಣಿಗಳನ್ನು ಸ್ಪ್ರೈಟ್ ನ ಈ ಹೊಸ ಅಭಿಯಾನವು ಹೊಂದಿದೆ. ಜನರು ಬ್ಯಾಗ್ಗಳಿಂದ ಹೊರಬರುವುದು, ರೆಫ್ರಿಜರೇಟರ್ಗಳು ಮಾತನಾಡುವುದು ಇತ್ಯಾದಿ ಹಾಸ್ಯಮಯ ದೃಶ್ಯಗಳನ್ನು ಹೊಂದಿರುವ ಈ ಜಾಹೀರಾತುಗಳು ಗಮನ ಸೆಳೆಯುತ್ತವೆ. ಈ ಅಭಿಯಾನದ ಮೂಲಕ ಎಐ ಅನ್ನು ಬಳಸಿಕೊಂಡು ಯುವಜನತೆಗೆ ಹೆಚ್ಚು ತಾಕುವ ವಿಚಾರಗಳಿಗೆ ಅನುಗುಣವಾಗಿ 200ಕ್ಕೂ ಹೆಚ್ಚು ವಿಶಿಷ್ಟ ಸಂದೇಶಗಳನ್ನು ಸರಿಯಾದ ಸಮಯ, ಸಂದರ್ಭಕ್ಕೆ ಒದಗಿಸಲಾಗುತ್ತದೆ.
ಈ ಅಭಿಯಾನದ ಕುರಿತು ಮಾತನಾಡಿರುವ ಉದಯೋನ್ಮುಖ ತಾರೆ ಮತ್ತು ಜೆನ್ ಝೀ ವರ್ಗದ ಜನಪ್ರಿಯ ಸ್ಟಾರ್ ಆಗಿರುವ ವೇದಾಂಗ್ ರೈನಾ ಅವರು, “ನಾನು ಸ್ಪ್ರೈಟ್ ಜಗತ್ತಿನ ಭಾಗವಾಗಲು ಸಂತೋಷ ಹೊಂದಿದ್ದೇನೆ. ಈ ಕಾಲದ ಯುವಜನತೆಯ ಕೂಲ್ ವ್ಯಕ್ತಿತ್ವ ಮತ್ತು ಅದ್ಭುತ ಎನರ್ಜಿಯನ್ನು ಪ್ರತಿನಿಧಿಸುವ ಐತಿಹಾಸಿಕ ಬ್ರ್ಯಾಂಡ್ ಆದ ಸ್ಪ್ರೈಟ್ ಜೊತೆ ಕೆಲಸ ಮಾಡುವುದು ನನಗೆ ದೊರೆತ ಉತ್ತಮ ಅವಕಾಶವಾಗಿದೆ. ನನ್ನನ್ನೂ ಸೇರಿದಂತೆ ಯುವ ಪೀಳಿಗೆಗೆ ದಿನಾಂತ್ಯದ ಆಹ್ಲಾದಕರ ಕ್ಷಣಗಳು ಬಹಳ ಮುಖ್ಯವಾಗಿವೆ ಮತ್ತು ಅದನ್ನು ಅಭಿಯಾನದಲ್ಲಿ ಸೂಕ್ತ ರೀತಿಯಲ್ಲಿ ತಿಳಿಸಲಾಗಿದೆ. ಸ್ಪ್ರೈಟ್ ಕೂಲ್ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಈ ಅಭಿಯಾನವನ್ನು ಪ್ರಸ್ತುತ ಪಡಿಸಿದ್ದು, ಸ್ಪ್ರೈಟ್ ಪ್ರಾಮುಖ್ಯತೆ ತಿಳಿಸುತ್ತದೆ” ಎಂದು ಹೇಳಿದರು.
ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಸ್ಪಾರ್ಕ್ಲಿಂಗ್ ಫ್ಲೇವರ್ಸ್ನ ಸೀನಿಯರ್ ಕೆಟಗರಿ ಡೈರೆಕ್ಟರ್ ಆಗಿರುವ ಸುಮೇಲಿ ಚಟರ್ಜಿ, “ಸಾಧನೆಯ ಪಥದಲ್ಲಿ ಸಾಗುವಾಗ ಪ್ರತಿದಿನವೂ ಸವಾಲಿನದ್ದಾಗಿದೆ. ಹಾಗಾಗಿ ಪ್ರತಿದಿನದ ಕೊನೆಗೆ ಪ್ರತಿಯೊಬ್ಬ ಯವಪೀಳಿಗೆಯ ಮಂದಿ ವಿಶ್ರಾಂತಿಯನ್ನು ಬಯಸುತ್ತಾರೆ. ಆದರೆ ಅವರು ಆ ದಿನದ ಒತ್ತಡ ಮತ್ತು ಬ್ಯಾಗೇಜ್ ಅನ್ನು ತಮ್ಮೊಂದಿಗೆ ಮನೆಗೆ ಹೊತ್ತೊಯ್ಯುತ್ತಾರೆ. ಜಾಹೀರಾತು ಬ್ಯಾಗ್ ಅನ್ನು ರೂಪಕವಾಗಿ ಬಳಸಿಕೊಂಡಿದ್ದು, ಅದರಿಂದ ಮುಕ್ತಿ ಹೊಂದಲು ಪ್ರೇರೇಪಿಸುತ್ತದೆ. ಚಿಲ್ ಅಟ್ ಹೋಮ್ ಅಭಿಯಾನವು ಸ್ಪ್ರೈಟ್ ನ ವಿಡಂಬನಾತ್ಮಹ ಜಾಹೀರಾತು ಪ್ರಯತ್ನವಾಗಿದ್ದು, ದಿನಾಂತ್ಯಕ್ಕೆ ಯುವಪೀಳಿಗೆ ಆಹ್ಲಾದಕರ ಸ್ಪ್ರೈಟ್ ಪಾನೀಯವನ್ನು ಸೇವಿಸಲು ಸ್ಫೂರ್ತಿ ನೀಡುತ್ತದೆ. ವೇದಾಂಗ್ ತನ್ನ ವ್ಯಕ್ತಿತ್ವದ ಆಕರ್ಷಣೆಯನ್ನು ಈ ಜಾಹೀರಾತಿನಲ್ಲಿ ದ್ವನಿಸಿದ್ದು, ಅವರು ಈ ಕಾಲದ ಯುವಪೀಳಿಗೆಯ ಸಮರ್ಥ ಧ್ವನಿಯಾಗಿ ಹೊರಹೊಮ್ಮಿದ್ದಾರೆ” ಎಂದು ಹೇಳಿದರು.
ಕಾರ್ಕೋಯಿಸ್ ಫಿಲ್ಮ್ಸ್ ನ ನಿರ್ದೇಶಕ ವಿಶ್ವೇಶ್ ಕೃಷ್ಣಮೂರ್ತಿ ಅವರು, “ಇಂದಿನ ಡಿಜಿಟಲ್ ಯುಗದಲ್ಲಿ ದಿನ ನಿಜವಾಗಲೂ ಮುಗಿಯುವುದಿಲ್ಲ. ನಿಮ್ಮ ಫೋನ್ ಮೂಲಕ, ನಿಮ್ಮ ಬ್ಯಾಗ್ ಮೂಲಕ, ನಿಮ್ಮ ತಲೆಯಲ್ಲಿ ಎಲ್ಲರೂ ನಿಮ್ಮನ್ನು ಹಿಂಬಾಲಿಸುತ್ತಾ ಬರುತ್ತಾರೆ. ಈ ಪರಿಕಲ್ಪನೆ ಉತ್ತಮ ದೃಶ್ಯರೂಪಕವಾಗಿ ಮೂಡಿ ಬಂದಿದೆ. ಬ್ಯಾಕ್ ಪ್ಯಾಕ್ ನಿಂದ ಜನರು ತಲೆ ಹೊರಗೆ ಹಾಕುವ ದೃಶ್ಯವು ತಮಾಷೆಯಾಗಿತ್ತು ಮತ್ತು ಸವಾಲಿನ ಸನ್ನಿವೇಶವಾಗಿತ್ತು. ಮಾತನಾಡುವ ಫ್ರಿಜ್ಗಳು, ಜನರು ಬ್ಯಾಕ್ ಪ್ಯಾಕ್ ನಿಂದ ಹೊರಗೆ ಜಿಗಿಯುವುದು ಮತ್ತು ಕೋಣೆಯ ಸುತ್ತಲೂ ಸ್ಪ್ರೈಟ್ ಬಾಟಲಿಗಳು ಮುಂತಾದ ದೃಶ್ಯಗಳು ಸ್ಪ್ರೈಟ್ನ ಆಸಕ್ತಿದಾಯಕ ಅಂಶಗಳನ್ನು ವೀಕ್ಷಕರಿಗೆ ದಾಟಿಸುತ್ತದೆ. ಇದೊಂದು ವಿಶಿಷ್ಟ ಮನರಂಜನಾತ್ಮಕ ಚಿತ್ರವಾಗಿ ಮೂಡಿ ಬಂದಿದೆ” ಎಂದರು.
ಓಗಿಲ್ವಿ ಇಂಡಿಯಾದ (ಉತ್ತರ) ಚೀಫ್ ಕ್ರಿಯೇಟಿವ್ ಆಫೀಸರ್ ರಿತು ಶಾರದಾ ಮಾತನಾಡಿ, “ಸ್ಪ್ರೈಟ್ ಯುವಕರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ಸಂಸ್ಥೆ. ಈ ಜಾಹೀರಾತು ಕಾಲೇಜು ವಿದ್ಯಾರ್ಥಿಗಳ ದೈನಂದಿನ ಕಿರಿಕಿರಿಗಳನ್ನು ದಾಟಿಸುತ್ತದೆ. ಆ ಒತ್ತಡವನ್ನು ಬ್ಯಾಕ್ ಪ್ಯಾಕ್ ರೂಪಕದ ಮೂಲತ ತೋರಿಸುತ್ತದೆ. ಆ ಬ್ಯಾಕ್ ಪ್ಯಾಕ್ ಅವರು ದಿನವಿಡೀ ಎದುರಿಸುವ ಒತ್ತಡ ಮತ್ತು ಹೊರೆಗಳನ್ನು ಸಂಕೇತಿಸುತ್ತದೆ. ದಿನದ ಅಂತ್ಯಕ್ಕೆ ಆಹ್ಲಾದಕರ ಕ್ಷಣಗಳನ್ನು ಕಳೆಯಲು ನಿಜಕ್ಕೂ ಸ್ಪ್ರೈಟ್ ಸೂಕ್ತ ಎಂಬುದನ್ನು ಪ್ರಚುರ ಪಡಿಸುತ್ತದೆ” ಎಂದು ಹೇಳಿದರು.
ಸ್ಪ್ರೈಟ್ ‘ಚಿಲ್ ಅಟ್ ಹೋಮ್’ ಅಭಿಯಾನದ ಮೂಲಕ ಭಾರತದಾದ್ಯಂತ ಇರುವ ಯುವ ಪೀಳಿಗೆಗೆ ತಮ್ಮ ಬ್ಯುಸಿನ ದಿನದ ಅಂತ್ಯಕ್ಕೆ ಸ್ಪ್ರೈಟ್ ಅನ್ನು ಬಳಸಿಕೊಂಡು ವಿರಾಮ ಪಡೆಯಲು ಸೂಚಿಸುತ್ತದೆ. ದೈನಂದಿನ ಜೀವನದ ಒತ್ತಡಗಳು ಹೆಚ್ಚಾದಂತೆ ವಿಶ್ರಾಂತಿಯ ಅಗತ್ಯ ಕೂಡ ಹೆಚ್ಚಾಗುತ್ತದೆ. ನೀವು ಬ್ಯುಸಿ ದಿನದ ಅಂತ್ಯಕ್ಕೆ ತಣ್ಣಗಿನ ಕ್ಷಣಗಳನ್ನು ಕಳೆಯಲು ಅಥವಾ ಶಾಂತಿಯ ಕ್ಷಣವನ್ನು ಆನಂದಿಸಲು ನಿಂಬೆಹಣ್ಣಿನ ಫ್ಲೇವರ್ ಇರುವ ಸ್ಪ್ರೈಟ್ ಪಾನೀಯ ಸೂಕ್ತವಾಗಿದೆ ಮತ್ತು ಅಹ್ಲಾದಕರ ಅನುಭವ ಒದಗಿಸುತ್ತದೆ. ಹಾಗಾಗಿ, ಮನೆಗೆ ಹಿಂತಿರುಗಿ, ರಿಲ್ಯಾಕ್ಸ್ ಆಗಿ ಮತ್ತು ಮನೆಯಲ್ಲಿ ಚಿಲ್ ಮಾಡಲು ಸ್ಪ್ರೈಟ್ ಅನ್ನು ಬಳಸಿ.
ಜಾಹೀರಾತು ಫಿಲ್ಮ್ ನ ಲಿಂಕ್: Sprite – Thand Rakh at Home (youtube.com)