ಮಂಗಳೂರು : ಎದುರುಪದವು ಟೈಗರ್ಸ್ ಇದರ ಲೋಗೋ ಮತ್ತು ಪ್ರಥಮ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ 18 ರಂದು ಕೊರ್ಧಬ್ಬು ದೈವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪೆರ್ಮುದೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರೀಶ್ ಕೆ., ಸಂಘಟನೆಯ ಹಿರಿಯರಾದ ಜಯರಾಮ್ ಕೊಟ್ಟಾರಿ, ಮೋಹನದಾಸ್ ಬಂಗೇರಾ ದೇವಿದೀಪ ವಾಮಂಜೂರು, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿಲ್ ಕುಮಾರ್, ಬಿಜೆಪಿ ಮೂಡಬಿದ್ರೆ ಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಭಾಗವಹಿಸಿದರು.
ಕೊರ್ದಬ್ಬು ದೈವಸ್ಥಾನ ಎದುರುಪದವು ಇದರ ಗೌರವ ಅಧ್ಯಕ್ಷರಾದ ಶರಣ್ ಶೆಟ್ಟಿ,ಹಾಗೂ ಅಧ್ಯಕ್ಷರಾದ ರವೀಂದ್ರ ಪೂಜಾರಿ, ಮೂಡುಶೆಡ್ಡೆ ಪಂಚಾಯತ್ ಸದಸ್ಯರಾದ, ಶಾರದ, ಸುಖೇಶ್, ಕಿರಣ್ ಶೆಟ್ಟಿ, ಪದ್ಮನಾಭ ಕುಂದರ್, ಆಡಳಿತ ಮುಕ್ತೇಸರರು ಶ್ರೀ ದುರ್ಗಾ ಚಾಮುಂಡೇಶ್ವರಿ ಕ್ಷೇತ್ರ ಎದುರುಪದವು ಮತ್ತು ಟೀಮ್ ಅಶ್ವತ್ಥಾಮ ಇದರ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಲೋಗೋ ಮತ್ತು ಆಮಂತ್ರಣ ಬಿಡುಗಡೆಯ ನಂತರ ಜಯರಾಮ್ ಕೊಟ್ಟಾರಿ ಇವರು ತಂಡಕ್ಕೆ ಶುಭ ಹಾರೈಸಿದರು