ಮಂಗಳೂರು : ಕಲ್ಲಚ್ಚು ಪ್ರಕಾಶನ ಹೊರತಂದಿರುವ ಕೃಷಿ ಇಲಾಖೆಯ ಉನ್ನತ ಅಧಿಕಾರಿ ಮೋಹನದಾಸ್ ಕೆ ಎಸ್ ಅವರ” ಚಿದಂಬರ “ಕವನ ಸಂಕಲನ, ಅಗಸ್ಟ್ 24 ಶನಿವಾರ 2024 ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ.
ಇದಕ್ಕೆ ಪೂರ್ವಭಾವಿಯಾಗಿ ಇಂದು ರಾಜ್ಯಸಭಾ ಸದಸ್ಯರು ಮತ್ತು ಧರ್ಮಸ್ಥಳ ದೇವಸ್ಥಾನದ ಡಾ ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಲೇಖಕರು ಮೊದಲ ಪ್ರತಿ ಸಮರ್ಪಿದರು.
ಈ ಸಂದರ್ಭದಲ್ಲಿ ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ಉಪಸ್ಥಿತರಿದ್ದು ಪ್ರಕಾಶನದ ಪರವಾಗಿ ನಟರಾಜ ವಿಗ್ರಹ ನೀಡಿ ಲೇಖಕರಿಗೆ ಗೌರವಿಸಿದರು ಮತ್ತು ಕಲಾವಿದರು ಆಗಿರುವ ಬೆಂಗಳೂರಿನ ಮೋಹನ್ ದಾಸ್ ಕೆ ಎಸ್ ಅವರು ತಾವು ಸ್ವತಃ ರಚಿಸಿದ ಡಾ ಹೆಗ್ಗಡೆಯವರ ಆಕರ್ಷಕ ತೈಲವವರ್ಣದ ಭಾವಚಿತ್ರವನ್ನು ಅವರಿಗೆ ಸಮರ್ಪಿಸಿದರು.