ಭಾರತ ತನ್ನ 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನೊಂದಿಗೆ ಪ್ರತಿಭೆ, ಸ್ಥಿತಿಸ್ಥಾಪಕತ್ವ ಮತ್ತು ಮಿತಿಯಿಲ್ಲದ ಮಹತ್ವಾಕಾಂಕ್ಷೆಯಿಂದ ತುಂಬಿರುವ ರಾಷ್ಟ್ರದ ಗಮನಾರ್ಹ ಪ್ರಯಾಣವನ್ನು ನಾವು ಪ್ರತಿಬಿಂಬಿಸುತ್ತಿದ್ದೇವೆ. ವೈವಿಧ್ಯಮಯ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಗೆ ಸಾಕ್ಷಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಶ್ಲಾಘನೀಯ ದಾಖಲೆಗಳ ಯಶಸ್ಸಿನ ಹೊಸ ಉತ್ತುಂಗವನ್ನು ಏರಿರುವ ವ್ಯಕ್ತಿಗಳ ಸಾಧನೆಯನ್ನು ಅನಾವರಣಗೊಳಿಸುತ್ತಿದ್ದೇವೆ. ಭಾರತದ ಮೊಟ್ಟ ಮೊದಲ ದಾಖಲೆ ಪುಸ್ತಕವಾಗಿ ತನ್ನದೇ ಆದ ಪರಂಪರೆಗೆ ಬದ್ಧವಾಗಿರುವ ಈ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಇದೀಗ ತನ್ನ 33 ನೇ ಆವೃತ್ತಿಯನ್ನು ಹೊರತಂದಿದ್ದು, ಭಾರತೀಯರ ಅಸಾಧಾರಣ ಸಾಧನೆಗಳು, ದಾಖಲೆಗಳನ್ನು ನೀಡುವ ಮೂಲಕ ಓದುಗರ ಜ್ಞಾನ ಹೆಚ್ಚಳಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ; ಭಾರತದ ಪ್ರತಿಯೊಂದು ಮೂಲೆಯ ಜನರೂ ಈ ಸಾಧನೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಸಾಧನೆಯ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಮತ್ತು ಅದರ ಅಸಾಮಾನ್ಯ ಸಾಧನೆಗಳ ಆಚರಣೆಯಲ್ಲಿ ಒಂದು ದೇಶದ ಎದ್ದು ಕಾಣುವ ಪೋಟ್ರೇಟ್ ಅನ್ನು ನೀಡುತ್ತದೆ. ನಮ್ಮ ರಾಷ್ಟ್ರವನ್ನು ವ್ಯಾಖ್ಯಾನಿಸುವ ಅದಮ್ಯ ಮನೋಭಾವವನ್ನು ಎತ್ತಿ ತೋರಿಸುವ ಇತ್ತೀಚಿನ ಆವೃತ್ತಿಯಲ್ಲಿ ದಾಖಲಿಸಲಾದ ಕೆಲವು ಅಸಾಮಾನ್ಯ ಸಾಹಸಗಳನ್ನು ನಾವು ಅನ್ವೇಷಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ನೀವು ನಮ್ಮೊಂದಿಗೆ ಕೈಜೋಡಿಸಿ.
ಕ್ರೀಡಾ ತಾರೆಗಳು
ಭಾರತದ ಅಥ್ಲೀಟ್ ಗಳು ತಮ್ಮ ನಿರ್ಭೀತ ಮನೋಭಾವ, ಅಚಲವಾದ ಸಮರ್ಪಣೆ ಮತ್ತು ಅದ್ಭುತ ಸಾಹಸಗಳಿಂದ ಕ್ರೀಡಾ ಜಗತ್ತಿನಲ್ಲಿ ರಾಕಿಂಗ್ ಸ್ಟಾರ್ ಗಳೆನಿಸಿದ್ದಾರೆ. ಇಂತಹ ಸಾಹಸಮಯ ಮತ್ತು ದಾಖಲೆಗಳನ್ನು ಮಾಡಿದ ಕ್ರೀಡಾಪಟುಗಳ ಸಾಧನೆಗಳ ಮಾಹಿತಿ ಇಲ್ಲಿದೆ:
ವಿಶ್ವಕಪ್ ಕ್ರಿಕೆಟ್ ನ ಒಂದು ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಕೆ
2023 ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 765 ರನ್ ಗಳಿಸುವ ಮೂಲಕ ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕೊಹ್ಲಿ ಅವರು 2003 ರಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದ 673 ರನ್ ಗಳ ದಾಖಲೆಯನ್ನು ಮುರಿದಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಮಿಶ್ರ ಡಬಲ್ಸ್ ನ ಸ್ಕ್ವಾಷ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಜೋಡಿ
2022 ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರೀಂದರ್ ಪಾಲ್ ಸಿಂಗ್ ಸಂಧು ಅವರು ಚಿನ್ನದ ಪದಕ ಗಳಿಸುವ ಮೂಲಕ ಮಿಶ್ರ ಡಬಲ್ಸ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿಯಾಗಿ ಹೊರಹೊಮ್ಮಿದ್ದಾರೆ.
ಅಡ್ವೆಂಚರ್ (WR): ಓಶನ್ಸ್ ಸೆವೆನ್ ಚಾಲೆಂಜ್ ನಲ್ಲಿ ವಿಶ್ವದಾಖಲೆ ಮಾಡಿದ ಕಿರಿಯ ಕ್ರೀಡಾಪಟು
ಪ್ರಭಾತ್ ಕೋಲಿ (ಜನನ 27 ಜುಲೈ 1999), ಮಹಾರಾಷ್ಟ್ರದ ನವಿ ಮುಂಬೈನ ಇವರು, 1 ಮಾರ್ಚ್ 2023 ರಂದು ನಡೆದ ಓಶನ್ಸ್ ಸೆವೆನ್ ಚಾಲೆಂಜ್ ಅನ್ನು ಪೂರ್ಣಗೊಳಿಸಿ ವಿಶ್ವದಾಖಲೆ ಮಾಡಿದ್ದಾರೆ. ತನ್ನ 23 ನೇ ವಯಸ್ಸಿನಲ್ಲಿ ಕೋಲಿ ಈ ಸಾಧನೆ ಮಾಡುವ ಮೂಲಕ ಇಂತಹ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಸಾಹಸಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಚಾಲೆಂಜ್ ಅನ್ನು ಅವರು 8 ಗಂಟೆ 41 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ. ಕೆಟ್ಟ ಹವಾಮಾನ ಇದ್ದಾಗ್ಯೂ ಕೋಲಿ ಅವರು ನ್ಯೂಜೆಲೆಂಡ್ ನ ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವಿನ ಕುಕ್ ಜಲಸಂಧಿಯನ್ನು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಿ ಅವರಿಗೆ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯೂ ಲಭಿಸಿದೆ.
ನಾಲೆಜ್ ನೈಟ್ಸ್
ಜ್ಞಾನದ ವಿಭಾಗದಲ್ಲಿ ಭಾರತೀಯ ವಿದ್ವಾಂಸರು ಮತ್ತು ಸಂಸ್ಥೆಗಳು ಸತತವಾಗಿ ಹೊಸ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿವೆ. ಈ ಕೆಳಗಿನ ದಾಖಲೆಗಳು ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಬುದ್ಧಿಶಕ್ತಿಯ ನಿರಂತರ ಅನ್ವೇಷಣೆಯನ್ನು ವಿವರಿಸುತ್ತವೆ.
ವರ್ಷದಲ್ಲಿ ಅತಿ ಹೆಚ್ಚು ಪಿಎಚ್.ಡಿ ನೀಡಿದ ವಿಶ್ವವಿದ್ಯಾಲಯ: 25 ಫೆಬ್ರವರಿ 2023 ರಲ್ಲಿ ನಡೆದ ತನ್ನ 99 ನೇ ಘಟಿಕೋತ್ಸವದಲ್ಲಿ ದೆಹಲಿ ವಿಶ್ವವಿದ್ಯಾಲಯ ಬರೋಬ್ಬರಿ ದಾಖಲೆಯ 910 ಪಿಎಚ್.ಡಿ ಪದವಿಗಳನ್ನು(512 ಮಹಿಳೆಯರು ಮತ್ತು 398 ಪುರುಷರು) ನೀಡಿದೆ. ಇದು ವಿಶ್ವವಿದ್ಯಾಲಯವೊಂದು ಒಂದು ವರ್ಷದಲ್ಲಿ ನೀಡಿದ ಅತ್ಯಧಿಕ ಪಿಎಚ್.ಡಿ ಪದವಿ ಸಂಖ್ಯೆಯಾಗಿದೆ.
ಪ್ರಧಾನಮಂತ್ರಿಗಳ ಮೊದಲ ಮ್ಯೂಸಿಯಂ: ಪ್ರಧಾನಮಂತ್ರಿ ಸಂಗ್ರಹಾಲಯ. ಇದು ನವದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿದೆ. ಇಲ್ಲಿ ಭಾರತದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಇದನ್ನು ಅರ್ಪಣೆ ಮಾಡಲಾಗಿದೆ. 14 ಏಪ್ರಿಲ್ 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು 75 ನೇ ಸ್ವಾತಂತ್ರ್ಯೋತ್ಸವದ ಜ್ಞಾಪಕಾರ್ಥ ಈ ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದ್ದರು. ಇಲ್ಲಿ 43 ಗ್ಯಾಲರಿಗಳಿದ್ದು, ಮಾಜಿ ಪ್ರಧಾನಮಂತ್ರಿಗಳ ಜೀವನಗಾಥೆ ಮತ್ತು ಅವರ ಆಡಳಿತಾವಧಿ ಸೇರಿದಂತೆ ಪೂರಕ ಮಾಹಿತಿಗಳನ್ನು ನೀಡಲಾಗಿದೆ. ಇದು ಹೋಲೋಗ್ರಾಂಗಳು, ವರ್ಚುವಲ್ ರಿಯಾಲಿಟಿ, ವರ್ಧಿತ ರಿಯಾಲಿಟಿ ಮತ್ತು ಇನ್ನೂ ಹೆಚ್ಚಿನ ವಿವಿಧ ಸಂವಾದಾತ್ಮಕ ಅನುಭವಗಳನ್ನು ನೀಡುತ್ತದೆ. ಇಲ್ಲಿ ಹಿಂದಿನ ಪ್ರಧಾನಮಂತ್ರಿಗಳು ಬಳಸುತ್ತಿದ್ದ ವೈಯಕ್ತಿಕ ವಸ್ತುಗಳು, ಅವರಿಗೆ ಬಂದಿದ್ದ ಉಡುಗೊರೆಗಳು ಮತ್ತು ಸ್ಮರಣಿಕೆಗಳು, ಪ್ರಧಾನಮಂತ್ರಿಗಳ ಕುಟುಂಬಗಳು ನೀಡಿರುವ ಪದಕಗಳು, ಹತ್ತು ಹಲವಾರು ಸ್ಮರಣಾರ್ಥದ ಅಂಚೆಚೀಟಿಗಳನ್ನು ಪ್ರದರ್ಶಿಸಲಾಗಿದೆ.
ಏಸ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಸೂಪರ್ ಹೀರೋಸ್
ಭಾರತವು ಕಲಾತ್ಮಕ ಪ್ರತಿಭೆ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಸಮ್ಮಿಳಿತ ರಾಷ್ಟ್ರವಾಗಿದೆ. ಇದು ಟ್ರಯಲ್ ಬ್ಲೇಜಿಂಗ್ ವಿಜಯಗಳ ಪ್ರತೀಕವಾಗಿದ್ದು, ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ:-
ಒಂದು ದಿನದಲ್ಲಿ ಪ್ರದರ್ಶಿಸಲಾದ ಅತಿ ಹೆಚ್ಚು ನಾಟಕಗಳು- ಏಕವ್ಯಕ್ತಿ: ಆಕಾಶ್ ಭಾಡಸಾವ್ಲೆ, 9 ಫೆಬ್ರವರಿ 1996 ರಲ್ಲಿ ಜನಿಸಿದ ಇವರು, ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು 9 ಅಕ್ಟೋಬರ್ 2022 ರಂದು ಮೂರು ವಿಭಿನ್ನ ನಾಟಕಗಳಲ್ಲಿ 45 ನಿಮಿಷಗಳ ಅವಧಿಯಲ್ಲಿ ಒಟ್ಟು 12 ಪ್ರದರ್ಶನಗಳನ್ನು ನೀಡುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಖಗೋಳ ವೀಕ್ಷಣೆಗೆ ಸಿದ್ಧಗೊಂಡ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ : ಆರ್ಯಭಟ ರೀಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES), ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯು ಖಗೋಳ ವೀಕ್ಷಣೆಗಾಗಿ ಮೊಟ್ಟ ಮೊದಲ ಬಾರಿಗೆ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಅನ್ನು ಆವಿಷ್ಕಾರ ಮಾಡಿದೆ. ಇಂಟರ್ ನ್ಯಾಷನಲ್ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ (ILMT) ಎಂದು ಕರೆಯಲ್ಪಡುವ ಇದು ಏಷ್ಯಾದಲ್ಲಿಯೇ ದೊಡ್ಡದಾಗಿದ್ದು, ಇದನ್ನು 22 ಮಾರ್ಚ್ 2023 ರಂದು ಉದ್ಘಾಟನೆ ಮಾಡಲಾಗಿದೆ.
ಆದಿತ್ಯಾ- ಎಲ್1: ಮೊದಲ ಸೌರ ಶೋಧಕ: ಆದಿತ್ಯಾ-ಎಲ್1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲು ಮೀಸಲಾಗಿರುವ ಭಾರತದ ಮೊದಲ ಉಪಗ್ರಹವಾಗಿದೆ. ಇದನ್ನು ಇಸ್ರೋ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದು, ಇದನ್ನು 2 ಸೆಪ್ಟೆಂಬರ್ 2023 ರಂದು ಉಡಾವಣೆ ಮಾಡಲಾಗಿದೆ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರಲಿದ್ದು, ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ ಶೇ.1 ರಷ್ಟಿದೆ.
ಮೊದಲ ಕ್ಲೋನ್ ಮಾಡಿದ ಹಸು: ಭಾರತದಲ್ಲಿ ಮೊದಲ ಕ್ಲೋನ್ ಮಾಡಿದ ಹಸು ಗಂಗಾ 16 ಮಾರ್ಚ್ 2023 ರಂದು ಜನಿಸಿದೆ. ಹರ್ಯಾಣದ ಕರ್ನಾಲ್ ನಲ್ಲಿರುವ ಎನ್ ಡಿಆರ್ ಐ ವಿಜ್ಞಾನಿಗಳು 2018 ರಲ್ಲಿ `ಓವಂ ಪಿಕ್-ಅಪ್’ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಈ ಹಸುವನ್ನು ಕ್ಲೋನ್ ಮಾಡಿ ಜನಿಸುವಂತೆ ಮಾಡಿದ್ದಾರೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಪ್ರಕಾಶಕ ಸಂಸ್ಥೆ ಹರ್ಷೆಟ್ಟೆ ಇಂಡಿಯಾದ ಕನ್ಸಲ್ಟಿಂಗ್ ಎಡಿಟರ್ ವತ್ಸಲಾ ಕೌಲ್ ಬ್ಯಾನರ್ಜಿ ಅವರು ಮಾತನಾಡಿ, “ಭಾರತದ ಸಾಧನೆಗಳ ವೇದಿಕೆಯ ಮೇಲೆ ಹೆಮ್ಮೆಯ ಸ್ಥಾನವನ್ನು ಹೊಂದಿರುವ ವಿವಿಧ ಕ್ಷೇತ್ರಗಳ ಅತ್ಯುತ್ತಮ ಸಾಧಕರನ್ನು ಗೌರವಿಸಲು ಸ್ವಾತಂತ್ರ್ಯ ಮಾಸವಾದ ಆಗಸ್ಟ್ ಗಿಂತ ಬೇರೆ ಯಾವುದೇ ಸಮಯವಿಲ್ಲ. ಕಳೆದ ಹಲವು ದಶಕಗಳಿಂದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಮ್ಮ ದೇಶವನ್ನು ಗೌರವಿಸುವ ಮತ್ತು ಅದರ ಜನರಿಗೆ ಸ್ಫೂರ್ತಿಯನ್ನು ನೀಡುತ್ತಿರುವ ಸಾಧಕರನ್ನು ಹೆಮ್ಮೆಯಿಂದ ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದೆ’’ ಎಂದರು.
ಕೋಕಾಕೋಲಾ ಕಂಪನಿಯ ಇಂಡಿಯಾ ಅಂಡ್ ಸೌತ್-ವೆಸ್ಟ್ ಏಷ್ಯಾದ ಆಪರೇಟಿಂಗ್ ಯೂನಿಟ್ ನ ಹೈಡ್ರೇಶನ್, ಸ್ಪೋರ್ಟ್ಸ್ ಅಂಡ್ ಟೀ ವಿಭಾಗದ ಮಾರ್ಕೆಟಿಂಗ್ ನ ಸೀನಿಯರ್ ಡೈರೆಕ್ಟರ್ ರುಚಿರಾ ಭಟ್ಟಾಚಾರ್ಯ ಅವರು ಮಾತನಾಡಿ, “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನೊಂದಿಗೆ ಕೋಕಾ-ಕೋಲಾದ ಸಹಭಾಗಿತ್ವವು ಭಾರತದ ರೋಮಾಂಚನಾಕಾರಿ ಮತ್ತು ವೈವಿಧ್ಯಮಯ ಸಂಸ್ಕೃತಿಯ ಆಚರಣೆಯಾಗಿದೆ. ಈ ಅಪ್ರತಿಮ ದಾಖಲೆ ಪುಸ್ತಕದಲ್ಲಿ ದಾಖಲಾದ ಮೈಲಿಗಲ್ಲುಗಳನ್ನು ನಾವು ದಾಖಲಿಸುವಾಗ ಮೇರೆಮೀರಿದ ಮತ್ತು ಇತಿಹಾಸ ಸೃಷ್ಟಿಸಿದ ವ್ಯಕ್ತಿಗಳ ಅಸಾಧಾರಣ ಕಥೆಗಳಿಂದ ಸ್ಪೂರ್ತಿಯನ್ನು ಪಡೆದಿದ್ದೇವೆ ಮತ್ತು ಈ ಕಥೆಗಳನ್ನು ಮತ್ತಷ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಹಲವು ಸಾಧನೆಗಳನ್ನು ದಾಖಲಿಸಲು ನಮಗೆ ಹೆಮ್ಮೆ ಎನಿಸುತ್ತಿದೆ’’ ಎಂದು ಹೇಳಿದರು.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಇನ್ ಕ್ರೆಡಿಬಲ್ ಇಂಡಿಯಾದಲ್ಲಿ ಸ್ಪಾಟ್ ಲೈಟ್ ರೀತಿಯಲ್ಲಿ ಬೆಳಗುತ್ತದೆ. ಇಂತಹ ಅನೇಕ ಆಕರ್ಷಕ ಸಾಹಸಗಳನ್ನು ಭಾರತೀಯ ಓದುಗರ ಕೈಗಿಡುತ್ತಿದೆ. ವಾಯುಯಾನ, ಆಹಾರ, ಸಿನಿಮಾ ಮತ್ತು ಸಂಗೀತ ಸೇರಿದಂತೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ದಾಖಲೆಗಳೊಂದಿಗೆ 2024 ರಲ್ಲಿ ಹೊರ ತಂದಿರುವ 33 ನೇ ಆವೃತ್ತಿಯು ಜ್ಞಾನಾರ್ಜನೆಯನ್ನು ಮಾಡುತ್ತದೆ. ಎಲ್ಲರನ್ನೂ ಬೆರಗುಗೊಳಿಸುವ 49 ಅಡಿ ಉದ್ದದ ಕಬಾಬ್ ನ ದಾಖಲೆಯಿರಲಿ ಅಥವಾ ಒಬ್ಬ ವ್ಯಕ್ತಿಯು ಸಂಗ್ರಹಿಸಿರುವ ವಿವಿಧ ನಗರಗಳು ಮತ್ತು ದೇಶಗಳ 365 ನಕ್ಷೆಗಳ ಮಾಹಿತಿ ಹೀಗೆ ಅಸಾಧ್ಯವಾದುದನ್ನು ಸಾಧಿಸಿದ ಯಶೋಗಾಥೆಗಳನ್ನು ಈ ಪುಸ್ತಕದಲ್ಲಿ ಓದಬಹುದಾಗಿದೆ. ಈ ಜ್ಞಾನ ಪುಸ್ತಕದ 2024 ರ ಪ್ರತಿಯನ್ನು ಪಡೆದುಕೊಳ್ಳಿ. ಪುಸ್ತಕವನ್ನು ಆನ್ ಲೈನ್ ಖರೀದಿಸಬಯಸುವವರಿಗೆ ಲಿಂಕ್: https://www.amazon.in/LIMCA-BOOK-RECORDS-Hachette-India/dp/9357318453
Available at all leading stores and online.