ಮಂಗಳೂರು : ಕೊಂಕಣಿಯನ್ನು ಕ್ರೈಸ್ತ, ಮುಸ್ಲಿಂ, ಹಿಂದು ಕುಡುಮಿ, ಜಿಎಸ್ ಬಿ, ಖಾರ್ವಿ, ಸಿದ್ದಿ, ಹೀಗೆ ಎಲ್ಲರೂ ಮಾತೃಭಾಷೆ ಆಗಿ ಮಾತನಾಡುತ್ತಾರೆ. ಆದುದರಿಂದ ನಿಜವಾದ ಅರ್ಥದಲ್ಲಿ ವಸುಧೈವ ಕುಟುಂಬ ಕೊಂಕಣಿ ಮಾತನಾಡುವ ಜನರು ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಕೊಂಕಣಿ ಮಾನ್ಯತಾ ದಿನದ ಆಚರಣೆಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷರಾಗಿ ಬೆಂಗಳೂರಿನ ಜಾಲಹಳ್ಳಿ ಕುವೆಂಪು ನಗರದ ಕ್ಲಬ್ ಹೌಸ್ ಸಭಾಂಗಣದಲ್ಲಿ ಮಾತನಾಡಿದರು.
1992 ಆಗಸ್ಟ್ ಇಪ್ಪತ್ತು ಕೊಂಕಣಿಗೆ ಸಂವಿಧಾನದ ಎಂಟನೆಯ ಪರಿಚ್ಛೇದದ ಮಾನ್ಯತೆ ದೊರೆತ ದಿನವಾಗಿದೆ. ಇಡೀ ವಿಶ್ವದಲ್ಲೇ ಅತ್ಯಂತ ಅಭಿಮಾನ ಸಂಭ್ರಮದಿಂದ ಕೊಂಕಣಿ ಜನರು ಆಚರಣೆ ಮಾಡುತ್ತಾರೆ ಎಂದರು.
ಫೆಡರೇಷನ್ ಆಫ್ ಕೊಂಕಣಿ ಕೆಥೊಲಿಕ್ ಅಸೊಶಿಯೇಶನ್ ಬೆಂಗಳೂರು ಇದರ ಅಧ್ಯಕ್ಷರಾದ ರೋಬರ್ಟ ಕುತಿನೊ ಮಾತನಾಡಿ ಆಖಿಲ ಭಾರತ ಚಾರೊಳಿ ಸಾಹಿತ್ಯ ಪರಿಷತ್ತಿನ ಆದ್ಯಕ್ಷರಾದ ರೇಮಂಡ್ ಬೆಂಗಳೂರು ಬಂದು ಇಂದಿನ ಮಾನ್ಯತಾ ದಿನ ಆಚರಣೆ ಮಾಡಬೇಕಾಯಿತು. ಮುಂದಿನ ವರ್ಷದಿಂದ ನಾವು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಕೊಂಕಣಿ ಸಾಹಿತಿ ಜೆನೆಟ್ ವಾಸ್ ಅವರು ಕೊಂಕಣಿಗೆ ಭಾಷಾಂತರ ಮಾಡಿದ ಬಂಗಾಳಿ ಭಾಷೆಯ ಪುಸ್ತಕ ಮಕ್ಕಳ ಕಥೆಗಳ ಪುಸ್ತಕ “ಏಕ್ ದಾಕ್ಟುಲೆಂ ಇಸ್ಕಾಲ್” ಲೋಕಾರ್ಪಣೆ ಮಾಡಲಾಯಿತು.
ಜಾಲಹಳ್ಳಿ ಚರ್ಚಿನ ಸಹಾಯಕ ಫಾ ಲಾಜರ್ ಚೇತನ್ ಅವರು ಪ್ರಾರ್ಥನೆ ನಡೆಸಿದರು ನಂತರ ಅವರ್ ಲೇಡಿ ಆಫ್ ಫಾತಿಮ ಚರ್ಚ್ ಜಾಲಹಳ್ಳಿ ಇಲ್ಲಿನ ಕೊಂಕಣಿ ಕುಟುಂಬದ ಸದಸ್ಯರು ಮತ್ತು ಇತರ ಕಡೆಗಳ ಕೊಂಕಣಿ ಮಾತೃಭಾಷೆ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.
ಸಂಚಾಲಕರಾದ ಜೆನೆಟ್ ವಾಸ್ ಸ್ವಾಗತಿಸಿ ನಿತಿನ್ ಡಿಸೋಜ ವಂದಿಸಿದರು. ಜೋಯಲ್ ಅರಾನ್ನಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಲಿಲ್ಲಿ ಮಿರಾಂದ ಸಹಕರಿಸಿದರು.