ಮುಂಬೈ: ಎಸ್ಯುವಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಅಧಿಕೃತವಾಗಿ ಕರ್ವ್.ಇವಿ ಅನ್ನು ಬಿಡುಗಡೆ ಮಾಡಿದೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಹೊಂದಿರುವ ಟಾಟಾ ಕರ್ವ್ ಅನ್ನು ಅನಾವರಣ ಮಾಡಿದೆ.
‘ಅಚ್ಚರಿಗೊಳಿಸಲು ರೂಪಿಸಲಾಗಿದೆ’, ‘ಅದ್ದೂರಿತನಕ್ಕಾಗಿ ರೂಪಿಸಲಾಗಿದೆ’, ‘ಕಾರ್ಯಕ್ಷಮತೆಗಾಗಿ ರೂಪಿಸಲಾಗಿದೆ’, ‘ಅತ್ಯಾಧುನಕ ತಂತ್ರಜ್ಞಾನಕ್ಕಾಗಿ ರೂಪಿಸಲಾಗಿದೆ’ ಮತ್ತು ‘ಅತ್ಯುತ್ತಮ ಸುರಕ್ಷತೆಗಾಗಿ ರೂಪಿಸಲಾಗಿದೆ’ ಎಂಬ 5 ಪ್ರಮುಖ ಉದ್ದೇಶಗಳ ಆಧಾರದ ಮೇಲೆ ನಿರ್ಮಿಸಲಾಗಿರುವ ಕರ್ವ್ ಅನ್ನು ಪರಿಚಯಿಸುವ ಮೂಲಕ ಕಂಪನಿಯು ಅತ್ಯಂತ ಸ್ಪರ್ಧಾತ್ಮಕ ವಿಭಾಗವಾದ ಮಿಡ್ ಎಸ್ಯುವಿ ವಿಭಾಗಕ್ಕೆ ಪ್ರವೇಶ ಮಾಡಿದೆ. ಎಸ್ಯುವಿಯ ದೃಢತೆ ಮತ್ತು ಕೂಪ್ ನ ಸೊಬಗಿನ ಮಿಶ್ರಣವಾಗಿರುವ ಈ ಹೊಸ ವಾಹನವು ಟಾಟಾ ಮೋಟಾರ್ಸ್ನ ಎಸ್ಯುವಿ ಶ್ರೇಣಿಗೆ ಹೊಸ ಸೇರ್ಪಡೆಯಾಗಿದೆ. ಚೌಕಟ್ಟಿನ ಎಸ್ಯುವಿ ಬಾಡಿ ಸ್ಟೈಲ್ಗಳು ಪ್ರಾಬಲ್ಯ ಸಾಧಿಸಿರುವ ಈ ಸಂದರ್ಭದಲ್ಲಿ ಅ ಸಂಪ್ರದಾಯವನ್ನು ಮುರಿದು ವಿಶಿಷ್ಟ ದೇಹ ಶೈಲಿಯ ಭಾರತದ ಮೊದಲ ಎಸ್ಯುವಿ ಕೂಪ್ ಅನ್ನು ದೇಶಕ್ಕೆ ಪರಿಚಯಿಸಿದ ಮೊದಲ ಓಇಎಂ ಎಂಬ ಹೆಗ್ಗಳಿಕೆಯನ್ನು ಟಾಟಾ ಮೋಟಾರ್ಸ್ ಕಂಪನಿ ತನ್ನ ಮುಡಿಗೇರಿಸಿಕೊಂಡಿದೆ.
2022ರಲ್ಲಿಯೇ ಭರವಸೆ ನೀಡಿದ ಪ್ರಕಾರ ಕಂಪನಿಯು ಇಂದು ಮೊದಲು ಕರ್ವ್.ಇವಿ ಅನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಶೀಘ್ರವಾಗಿ ಐಸಿಇ ಆವೃತ್ತಿಗಳು ಬಿಡುಗಡೆ ಆಗಲಿವೆ. ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ (ಟಿಪಿಇಎಂ) ಅತ್ಯಾಧುನಿಕ ಶುದ್ಧ ಇವಿ ಆರ್ಕಿಟೆಕ್ಚರ್ ಆದ ಆಕ್ಟಿ.ಇವಿಯಲ್ಲಿ ಸಿದ್ಧಗೊಂಡಿರುವ ಎರಡನೇ ಉತ್ಪನ್ನವಾಗಿರುವ ಕರ್ವ್.ಇವಿ ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಕ್ರಿಯೇಟಿವ್, ಅಕಂಪ್ಲಿಶ್ಡ್ ಮತ್ತು ಎಂಪವರ್ಡ್+ ಎಂಬ ಮೂರು ವಿಭಿನ್ನ ರೂಪಗಳಲ್ಲಿ ಲಭ್ಯವಿರುವ ಕರ್ವ್.ಇವಿ ಆರಾಮದಾಯಕತೆ, ವಿಶಾಲವಾದ ಸ್ಥಳಾವಕಾಶ, ವಿಶೇಷ ಫೀಚರ್ ಗಳು, ಅತ್ಯುತ್ತಮ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಪೂರ್ಣ ಸಮ್ಮಿಶ್ರಣವಾಗಿದೆ. ವಿಶೇಷವೆಂದರೆ ಈ ಇವಿಗಳು ಸುದೀರ್ಘವಾದ ರೇಂಜ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು, ಕರ್ವ್ ನ ಐಸಿಇ ವೇರಿಯಂಟ್ ಗಳಿಗೆ ಸಮಾನ ಬೆಲೆಯನ್ನು ಹೊಂದಿರುವುದು ಅಚ್ಚರಿಯ ವಿಚಾರ. 55kWh ಬ್ಯಾಟರಿ ಪ್ಯಾಕ್ ನ ಇವಿಯನ್ನು ಒಂದು ಸಲ ಪೂರ್ತಿ ಚಾರ್ಜ್ ಮಾಡಿದರೆ ಸುದೀರ್ಘ 585 ಕಿಮೀ ಮತ್ತು 45kWh (ಎ ಆರ್ ಎ ಐ ಪ್ರಮಾಣೀಕೃತ, ಎಂಐಡಿಸಿ ಭಾಗ 1) ಬ್ಯಾಟರಿ ಆಯ್ಕೆಯಲ್ಲಿ 502 ಕಿಮೀ ನಷ್ಟು ದೀರ್ಘ ಡ್ರೈವಿಂಗ್ ರೇಂಜ್ ಒದಗಿಸುತ್ತದೆ. ಟಾಟಾ ಕರ್ವ್.ಇವಿ45ನ ಆರಂಭಿಕ ಬೆಲೆ ₹ 17.49 ಲಕ್ಷ. ಟಾಟಾ ಕರ್ವ್.ಇವಿ55 ಆರಂಭಿಕ ಬೆಲೆ ₹ 19.25.
ಕರ್ವ್.ಇವಿಯ ಪರಿಚಯಾತ್ಮಕ ಬೆಲೆಗಳು (₹ ಲಕ್ಷ)*
ವಿಶೇಷ ಎಂದರೆ ಈ ಪ್ರೀಮಿಯಂ ಎಸ್ಯುವಿ ಯ ಬಿಡುಗಡೆಯ ಜೊತೆಗೆ ಕಂಪನಿಯು ವೈಯಕ್ತೀಕರಿಸಿದ ಕಸ್ಟಮೈಸೇಷನ್ ಸೇರಿದಂತೆ ಇವಿ ಪರಿಕರಗಳನ್ನು ಒದಗಿಸುವ ಹೊಸ ವಿಭಾಗವಾದ ಟಾಟಾ.ಇವಿ ಒರಿಜಿನ್ಸ್ ಅನ್ನು ಆರಂಭಿಸಿದೆ. ಜೊತೆಗೆ ಟಿಪಿಐಎಂ ಕಂಪನಿಯು ಗ್ರಾಹಕರಿಗೆ ಟಾಟಾ.ಇವಿ ಚಾರ್ಜ್ ಪಾಯಿಂಟ್ ಅಗ್ರಿಗೇಟರ್ ಆಗಿರುವ ಕನೆಕ್ಟೆಡ್ ಕಾರ್ ಆಪ್ iRA.ev ಅನ್ನು ಪರಿಚಯಿಸುತ್ತಿದೆ. ಈ ಸಂಸ್ಥೆಯ ಭಾರತದಾದ್ಯಂತ 9000+ ಚಾರ್ಜಿಂಗ್ ಪಾಯಿಂಟ್ಗಳ ಅತಿ ದೊಡ್ಡ ನೆಟ್ ವರ್ಕ್ ಅನ್ನು ಹೊಂದಿದ್ದು, ಲೈವ್ ಸ್ಟೇಟಸ್ ಕೂಡ ತೋರಿಸುತ್ತದೆ.
ಕರ್ವ್.ಇವಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶೈಲೇಶ್ ಚಂದ್ರ ಅವರು, “ವೇಗವಾಗಿ ಬೆಳೆಯುತ್ತಿರುವ ಮಿಡ್ ಎಸ್ಯುವಿ ವಿಭಾಗಕ್ಕೆ ಪ್ರವೇಶ ಮಾಡುವ ಮೂಲಕ ನಾವು ಎಸ್ಯುವಿ ಪ್ರಯಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದೇವೆ. ಭಾರತದ ಮೊಟ್ಟಮೊದಲ ಎಸ್ಯುವಿ ಕೂಪ್ ಮೂಲಕ ನಮ್ಮ ಅತಿ ನವೀನ ಎಸ್ಯುವಿ ಅನ್ನು ಹೊಸ ಶೈಲಿಯಲ್ಲಿ ಬಿಡುಗಡೆ ಮಾಡಲು ನಮಗೆ ತುಂಬಾ ಹೆಮ್ಮೆ ಇದೆ.. ಕರ್ವ್ ಮೂಲಕ ನಾವು ವಿನ್ಯಾಸ, ಸುರಕ್ಷತೆ ಮತ್ತು ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದೇವೆ. ಇವಿ, ಪೆಟ್ರೋಲ್ ಮತ್ತು ಡೀಸೆಲ್ ನ ಬಹು ಪವರ್ಟ್ರೇನ್ ಆಯ್ಕೆಗಳ ಕರ್ವ್ ಅನ್ನು ನಮ್ಮ ಗ್ರಾಹಕರಿಗೆ ಒದಗಿಸುವ ಮೂಲಕ ಒಂದು ಹೆಜ್ಜೆ ಮುಂದಕ್ಕೆ ಇಡುತ್ತಿದ್ದೇವೆ. ಕರ್ವ್.ಇವಿ ಇಂದು ಬಿಡುಗಡೆ ಆಗಿದ್ದು, ಅದರ ದೊಡ್ಡ ಬ್ಯಾಟರಿ ಪ್ಯಾಕ್ 55kWh ಹೊಂದಿರುವ ವೇರಿಯಂಟ್ 400-425ಕಿಮೀಗಳ ನೈಜ ರೇಂಜ್ ಅನ್ನು ಒದಗಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಅದರ ವೇಗದ ಚಾರ್ಜಿಂಗ್ ಸಾಮರ್ಥ್ಯದಿಂದಾಗಿ ಕೇವಲ 15-ನಿಮಿಷಗಳಲ್ಲಿ 150 ಕಿಮೀ ರೇಂಜ್ ನಷ್ಟು ಚಾರ್ಜ್ ಮಾಡಬಹುದಾಗಿದೆ. ಕರ್ವ್.ಇವಿ45 ನ ಆರಂಭಿಕ ಬೆಲೆ ₹17.49 ಲಕ್ಷ ಆಗಿದ್ದು, ನಾವು ಇವಿಗಳು ಮತ್ತು ಐಸಿಇ ವಾಹನಗಳ ನಡುವೆ ಬೆಲೆ ಸಮಾನತೆ ಉಂಟು ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.
ಕರ್ವ್.ಇವಿ ಕುರಿತು
ಅಚ್ಚರಿಗೊಳಿಸಲು ರೂಪಿಸಲಾಗಿದೆ:
ಕರ್ವ್.ಇವಿ ಒಂದು ಅಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದೆ. ಕೂಪ್ ನ ಸೊಗಸಾದ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಎಸ್ಯುವಿಯ ದೃಢತೆ ಮತ್ತು ಬಾಳಿಕೆಯ ಜೊತೆ ಸಂಯೋಜಿಸಿ ಸಿದ್ಧಗೊಳಿಸಲಾಗಿರುವ ಕರ್ವ್.ಇವಿ ಸೊಬಗು, ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆಯ ಮಧ್ಯೆ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ಉತ್ತಮ ವಿನ್ಯಾಸವನ್ನು ಹೊಂದಿರುವ ಉನ್ನತ ಉತ್ಪನ್ನವಾಗಿರುವ ಇದು ಮಿಡ್ ಎಸ್ಯುವಿ ವಿಭಾಗದ ಅಚ್ಚರಿಯ ಎಸ್ಯುವಿ ಆಗಿದೆ.
ಫ್ಲಶ್ ಡೋರ್ ಹ್ಯಾಂಡಲ್ಗಳು ಈ ವಾಹನವನ್ನು ಹೆಚ್ಚು ಪ್ರೀಮಿಯಂ ಆಗಿ ಕಾಣಿಸುವಂತೆ ಮಾಡುತ್ತವೆ. ವಿಭಿನ್ನವಾದ ಕೂಪ್ ವಿನ್ಯಾಸವು ಈ ಕಾರಿನ ಎಕ್ಸ್ ಟೀರಿಯರನ್ನು ಸೊಗಸಾಗಿಸಿದೆ. ಏರೋ ಇನ್ಸರ್ಟ್ಗಳ ಜೊತೆಗೆ ಆರ್18 ಅಲಾಯ್ ವೀಲ್ ಗಳು ಮತ್ತು ಚೌಕಾಕಾರದ ವೀಲ್ ಆರ್ಕ್ ಗಳು ಪ್ರೀಮಿಯಂ ವಿನ್ಯಾಸಕ್ಕೆ ಸ್ಪೋರ್ಟಿ ಲುಕ್ ಅನ್ನು ಒದಗಿಸಿವೆ. ಅತ್ಯಪೂರ್ವ ವಿನ್ಯಾಸದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಕರ್ವ್.ಇವಿ, ಸ್ಮಾರ್ಟ್ ಡಿಜಿಟಲ್ ಕನೆಕ್ಟೆಡ್ ಡಿ ಆರ್ ಲ್ ಗಳಂತಹ ಸ್ಮಾರ್ಟ್ ಡಿಜಿಟಲ್ ಲೈಟಿಂಗ್ ಜೊತೆಗೆ ವೆಲ್ಕಮ್ & ಗುಡ್ ಬೈ ಅನಿಮೇಷನ್, ಸ್ಮಾರ್ಟ್ ಚಾರ್ಜಿಂಗ್ ಅನಿಮೇಷನ್, ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್ಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಕಾರ್ನರಿಂಗ್ ಫಂಕ್ಷನ್ ಜೊತೆಗೆ ಎಲಿಇಡಿ ಫ್ರಂಟ್ ಫಾಗ್ ಲ್ಯಾಂಪ್ಗಳು, ಸ್ಮಾರ್ಟ್ ಡಿಜಿಟಲ್ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ಸ್ ಅನಿಮೇಷನ್, ಸ್ಮಾರ್ಟ್ ಡಿಜಿಟಲ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಫ್ರಂಟ್ ಚಾರ್ಜಿಂಗ್ ಲಿಡ್ ಜೊತೆಗೆ ಆಟೋ ಓಪನ್/ಕ್ಲೋಸಿಂಗ್, ಡಿಜಿಟಲ್ ಡ್ಯಾಶ್ಬೋರ್ಡ್, ಫಿಜಿಟಲ್ ಕಂಟ್ರೋಲ್ ಪ್ಯಾನಲ್, ಮೂಡ್ ಲೈಟಿಂಗ್ ಜೊತೆಗೆ ವಾಯ್ಸ್ ಅಸಿಸ್ಟೆಡ್ ಪ್ಯಾನೋರಮಿಕ್ ಸನ್ರೂಫ್ ಮತ್ತು ಸ್ಮಾರ್ಟ್ ಡಿಜಿಟಲ್ ಶಿಫ್ಟರ್ ಗಳನ್ನು ಹೊಂದಿದೆ.
ಪ್ಯಾನೋರಮಿಕ್ ಸನ್ರೂಫ್ ಒಳಾಂಗಣದಲ್ಲಿ ಇರುವವರಿಗೆ ಖುಷಿಯನ್ನು ಮತ್ತು ಹಗಲಿನಲ್ಲಿ ಸಾಕಷ್ಟು ನೈಸರ್ಗಿಕ ಬೆಳಕನ್ನು ಒದಗಿಸುತ್ತದೆ. ಮಲ್ಟಿ ಮೂಡ್ ಆಂಬಿಯೆಂಟ್ ಲೈಟಿಂಗ್ ವ್ಯವಸ್ಥೆಯು ಪ್ರಯಾಣಿಕರಿಗೆ ಆರಾಮದಾಯಕತೆ ಒದಗಿಸುತ್ತದೆ. ಕರ್ವ್.ಇವಿ ವಿಭಾಗದಲ್ಲಿ ಅತ್ಯುತ್ತಮವಾದ 500 ಲೀಟರ್ಗಳಷ್ಟು ದೊಡ್ಡ ಬೂಟ್ ಸ್ಪೇಸ್ ಹೊಂದಿದೆ, ಫ್ರಂಕ್ ಅಪ್ ಫ್ರಂಟ್ ನಲ್ಲಿ 11.6 ಲೀಟರ್ಗಳ ಹೆಚ್ಚುವರಿ ಸ್ಥಳಾವಕಾಶ ಒದಗಿಸಲಾಗಿದ್ದು. ಇದು ಈ ವರ್ಗದ ಗ್ರಾಹಕರ ಮೂಲಭೂತ ಅವಶ್ಯಕತೆಯಾಗಿದೆ.
ಕರ್ವ್.ಇವಿ ಅವರು ಆಯ್ಕೆ ಮಾಡುವ ವೇರಿಯಂಟ್ ಗಳಿಗೆ ತಕ್ಕಂತೆ ವರ್ಚುವಲ್ ಸನ್ರೈಸ್, ಪ್ಯೂರ್ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್ ಮತ್ತು ಎಂಪವರ್ಡ್ ಆಕ್ಸೈಡ್ ಎಂಬೆಲ್ಲಾ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಅದ್ದೂರಿತನಕ್ಕಾಗಿ ರೂಪಿಸಲಾಗಿದೆ:
ಕರ್ವ್.ಇವಿ ಸಾಮಾನ್ಯವಾಗಿ ಪ್ರೀಮಿಯಂ ವಿಭಾಗಗಳಲ್ಲಿ ಕಂಡುಬರುವ ಫೀಚರ್ ಗಳನ್ನು ಒದಗಿಸುತ್ತದೆ. ಆರಾಮದಾಯಕತೆ ಮತ್ತು ಅನುಕೂಲತೆಯ ಕಡೆಗೆ ಗಮನಹರಿಸುವ ಮೂಲಕ ಒಳಾಂಗಣವನ್ನು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಐಷಾರಾಮಿ ಅನುಭವವನ್ನು ಒದಗಿಸುವಂತೆ ರೂಪಿಸಲಾಗಿದೆ. ಅತ್ಯಾಧುನಿಕ ಆರಾಮದಾಯಕ ಸೀಟ್ಗಳು, ಫ್ರಂಟ್ ಸೀಟ್ ವೆಂಟಿಲೇಷನ್, 6 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 6 ವೇ ಅಡ್ಜಸ್ಟಬಲ್ ಕೋ-ಡ್ರೈವರ್ ಸೀಟ್, ಗ್ರ್ಯಾಂಡ್ ಸೆಂಟರ್ ಕನ್ಸೋಲ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು ಫ್ರಂಟ್ ಆಂಡ್ ರೇರ್ ಫಾಸ್ಟ್ ಚಾರ್ಜ್ ಸಿ ಟೈಪ್ 45ವ್ಯಾಟ್ ಇತ್ಯಾದಿ ಸೌಕರ್ಯಗಳನ್ನು ಮುಂಭಾಗದಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ ಸೆಂಟರ್ ಆರ್ಮ್ರೆಸ್ಟ್ ಜೊತೆಗೆ 60:40 ರೇರ್ ಸೀಟುಗಳು ದೊರೆಯಲಿದ್ದು, 2 ಸ್ಟೇಜ್ ರೇರ್ ಸೀಟ್ ರಿಕ್ಲೈನಿಂಗ್ ಮತ್ತು ರೇರ್ ಏಸಿ ವೆಂಟ್ಗಳು ಲಭ್ಯವಿದೆ.
ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ರೈನ್ ಸೆನ್ಸಿಂಗ್ ವೈಪರ್ಗಳು, ಎಕ್ಸ್ ಪ್ರೆಸ್ ಕೂಲಿಂಗ್ ಜೊತೆಗೆ ಫುಲ್ ಅಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೌಲಭ್ಯಗಳನ್ನು ಹೊಂದಿದೆ.
ಕಾರ್ಯಕ್ಷಮತೆಗಾಗಿ ರೂಪಿಸಲಾಗಿದೆ:
ಅತ್ಯಾಧುನಿಕ ಆಕ್ಟಿ.ಇವಿ ಆರ್ಕಿಟೆಕ್ಚರ್ನಲ್ಲಿ ನಿರ್ಮಿಸಲಾಗಿರುವ ಕರ್ವ್.ಇವಿ 123kW/167PS ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 8.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ. 45 kWh (502 ಎ ಆರ್ ಎ ಐ ಪ್ರಮಾಣೀಕೃತ ಶ್ರೇಣಿ) ಮತ್ತು 55 kWh (585 ಎ ಐ ಎ ಐ ಪ್ರಮಾಣೀಕೃತ ಶ್ರೇಣಿ)ಯ ದೊಡ್ಡ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುವ ಕರ್ವ್.ಇವಿ ನಿಮ್ಮ ದೈನಂದಿನ ಅಗತ್ಯಗಳ ರೈಡಿಂಗ್ ಗೆ ಮತ್ತು ನಿಮ್ಮ ಪ್ರೀತಿಪಾತ್ರರ ಜೊಗೆ ಲಾಂಗ್ ಡ್ರೈವ್ ಹೋಗುವುದಕ್ಕೂ ಸೂಕ್ತವಾಗಿದೆ. 55kWh ಬ್ಯಾಟರಿ ಪ್ಯಾಕ್ ವಿಶೇಷವಾಗಿ ವೇಗದ ಚಾರ್ಜಿಂಗ್ ಸೌಲಭ್ಯಕ್ಕಾಗಿ ಪ್ರಿಸ್ಮಾಟಿಕ್ ಸೆಲ್ಗಳನ್ನು (1.2C ರೇಟ್) ಹೊಂದಿದ್ದು, ಆ ಕಾರಣದಿಂದ ಕೇವಲ 40 ನಿಮಿಷಗಳಲ್ಲಿ 10 – 80% ವರೆಗೆ ಚಾರ್ಜಿಂಗ್ ಅನ್ನು ಮಾಡಬಹುದಾಗಿದೆ ಅಥವಾ ಕೇವಲ 15 ನಿಮಿಷಗಳಲ್ಲಿ 150 ಕಿಮೀ ರೇಂಜ್ ಪಡೆಯುವಷ್ಟು ಚಾರ್ಜ್ ಆಗುತ್ತದೆ.
ಸ್ಟ್ಯಾಂಡರ್ಡ್ ಆಗಿ 3 ಡ್ರೈವ್ ಮೋಡ್ (ಇಕೋ, ಸಿಟಿ ಮತ್ತು ಸ್ಪೋರ್ಟ್) ಹೊಂದಿದ್ದು, ಪೆಡಲ್ ಶಿಫ್ಟರ್ಗಳ ಮೂಲಕ ಮಲ್ಟಿ-ಮೋಡ್ ರೀಜೆನ್ ಬಳಸಬಹುದಾಗಿದೆ. ಕರ್ವ್.ಇವಿ45 190ಎಂಎಂನ ಹೈ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕರ್ವ್.ಇವಿ55 186ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸ್ಮಾರ್ಟ್ ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಬಹು ಚಾರ್ಜಿಂಗ್ ಆಯ್ಕೆಗಳು ಹೊಂದಿರುವ ಕರ್ವ್.ಇವಿ ಅತ್ಯುತ್ತಮ ಕಾರ್ಯಕ್ಷಮತೆ ಒದಗುವಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ರೂಪಿಸಲಾಗಿದೆ:
ಕ್ವಾಲ್ ಕಮ್ ನ ಸ್ನ್ಯಾಪ್ ಡ್ರಾಗನ್ ಡಿಜಿಟಲ್ ಚಾಸಿಸ್ ಪ್ಲಾಟ್ಫಾರ್ಮ್ ಮೂಲಕ ನಡೆಸಲ್ಪಡುವ ಕರ್ವ್.ಇವಿ ಈ ವಿಭಾಗದಲ್ಲಿ ನಾವೀನ್ಯತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ. ಹರ್ಮಾನ್™ ನ 31.24ಸೆಂಮೀನ ಸಿನಿಮ್ಯಾಟಿಕ್ ಟಚ್ಸ್ಕ್ರೀನ್, 26.03 ಸೆಂಮೀನ ಡಿಜಿಟಲ್ ಕಾಕ್ಪಿಟ್, ಸಿನಿಮ್ಯಾಟಿಕ್ ಅನುಭವ ಒದಗಿಸುವ ಆರ್ಕೇಡ್.ಇವಿ, ಅದರ 20ಕ್ಕೂ ಹೆಚ್ಚು ಆಪ್ ಗಳು, ಸಿನಿಮೀಯ ಜೆಬಿಎಲ್ ಧ್ವನಿ ವ್ಯವಸ್ಥೆ, ಅತ್ಯಾಧುನಿಕ ಓಟಿಎ ಸಾಮರ್ಥ್ಯಗಳು, ವಿ2ಎಲ್ ಮತ್ತು ವಿ2ವಿಯಂತಹ ಫೀಚರ್ ಗಳು ಎಲ್ಲಾ ವೇರಿಯಂಟ್ ಗಳಲ್ಲೂ ಸ್ಟಾಂಡರ್ಡ್ ಆಗಿ ಲಭ್ಯವಿದೆ. ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಮತ್ತು ಗೆಶ್ಚರ್ ಆಕ್ಟಿವೇಷನ್ ಜೊತೆಗೆ ಪವರ್ಡ್ ಟೈಲ್ಗೇಟ್ ಕೂಡ ಲಭ್ಯವಿದೆ.
ಹೊಸದಾಗಿ ಪರಿಚಯಿಸಲಾಗಿರುವ iRA.ev ಮೂಲಕ ಗ್ರಾಹಕರಿಗೆ ಹಲವಾರು ಹೆಚ್ಚುವರಿ ಹೊಸ ಫೀಚರ್ ಗಳನ್ನು ಒದಗಿಸುತ್ತದೆ. ಕನೆಕ್ಟೆಡ್ ಕಾರ ಕಾರ್ ಆಪ್ ಜೊತೆ ಸಂಯೋಜಿತವಾಗಿರುವ ಉದ್ಯಮದಲ್ಲಿಯೇ ಮೊದಲ ಚಾರ್ಜಿಂಗ್ ಅಗ್ರಿಗೇಟರ್ ಆಗಿರುವ iRA.ev ತನ್ನ ಆಪ್ ಮೂಲಕ ಆ ಕ್ಷಣದಲ್ಲಿಯೇ ಸುತ್ತಮುತ್ತ ಚಾರ್ಜರ್ ಗಳ ಲಭ್ಯತೆಯನ್ನು ತೋರಿಸುತ್ತದೆ (9000+ ಚಾರ್ಜರ್ಗಳ ಲಭ್ಯತೆ ಹೊಂದಿದ್ದು, ನೇರ ಲಭ್ಯತೆ ಸೂಚನೆ ನೀಡಲಾಗುತ್ತದೆ ಮತ್ತು ಏಕೀಕೃತ ಚಾರ್ಜಿಂಗ್ ಲೊಕೇಟರ್ ಹೊಂದಿದೆ) ಮತ್ತು ಸುಲಭವಾಗಿ ಚಾರ್ಜ್ ಮಾಡುವ ಅಕಾಶ ಒದಗಿಸುತ್ತದೆ. ಭಾರತದ ಉದ್ದ ಮತ್ತು ಅಗಲ ಎಲ್ಲಿಯೇ ಆದರೂ ಯಾವುದೇ ಆತಂಕವಿಲ್ಲದೆ ಅಥವಾ ಶುಲ್ಕದ ಬಗ್ಗೆ ಯೋಚನೆ ಇಲ್ಲದೆ ಪ್ರಯಾಣಿಸಬಹುದಾಗಿದೆ.
ಅತ್ಯುತ್ತಮ ಸುರಕ್ಷತೆಗಾಗಿ ರೂಪಿಸಲಾಗಿದೆ:
ಪ್ರತೀ ಸಲ ಪ್ರಯಾಣ ಮಾಡುವಾಗಲೂ ನಿಮ್ಮ ಪ್ರೀತಿಪಾತ್ರರಿಗೆ ಸಂಪೂರ್ಣ ಸುರಕ್ಷತೆ ಒದಗಿಸಲು ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳನ್ನು ಒದಗಿಸಲಾಗಿದೆ. ಕರ್ವ್.ಇವಿ ಅತ್ಯಾಧುನಿಕ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಲೆವೆಲ್ 2 ಹೊಂದಿದ್ದು, ಅದು 20ಕ್ಕೂ ಹೆಚ್ಚು ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ. ಜೊತೆಗೆ ಈ ಎಸ್ಯುವಿ ಕೂಪ್ ತನ್ನ ಗ್ರಾಹಕರಿಗೆ ಎಲ್ಲಾ 6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸುತ್ತದೆ. ಬ್ರೇಕ್ ಡಿಸ್ಕ್ ವೈಪಿಂಗ್ ಜೊತೆಗೆ ಆಲ್ ವೀಲ್ ಡಿಸ್ಕ್ ಬ್ರೇಕ್ ಗಳು, ಅಕೌಸ್ಟಿಕ್ ವೆಹಿಕಲ್ ಅಲರ್ಟ್ ಸಿಸ್ಟಮ್ (ಎವಿಎಎಶ್), ಎಸ್ಓಎಸ್ ಕಾಲ್ ಫಂಕ್ಷನ್, ಇ ಎಸ್ ಪಿ ಜೊತೆಗೆ ಇ-ವಿಬಿಏಸಿ ಸ್ಟಾಂಡರ್ಡ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಆಟೋ ಹೋಲ್ಡ್ ಫಂಕ್ಷನ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಸೌಲಭ್ಯವನ್ನು ಹೊಂದಿದೆ. 1.6 ಲಕ್ಷ ಕಿಮೀ ಅಥವಾ 8 ವರ್ಷಗಳ ಹೈ ವೋಲ್ಟೇಜ್ (ಹೆಚ್ ವಿ) ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ವಾರಂಟಿ ಮತ್ತು ವಾಹನ (1.25 ಲಕ್ಷ ಕಿಮೀ ಅಥವಾ 3 ವರ್ಷಗಳು) ವಾರಂಟಿ ಒದಗಿಸಲಾಗುತ್ತದೆ.