ಬೆಂಗಳೂರು : ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (“ಕೆಎಂಬಿಎಲ್” ಅಥವಾ “ಕೋಟಕ್”)ನ ವಿಭಾಗವಾಗಿರುವ ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಭಾರತೀಯ ಖಾಸಗಿ ಬ್ಯಾಂಕಿಂಗ್ ಉದ್ಯಮದಲ್ಲಿ ತನ್ನ ಎರಡು ದಶಕಗಳ ಗೆಲುವಿನ ಪ್ರಯಾಣವನ್ನು ಮೊತ್ತ ಮೊದಲ ಬಹುಮಾಧ್ಯಮ ಜಾಹೀರಾತು ಅಭಿಯಾನದ ಮೂಲಕ ಹೆಮ್ಮೆಯಿಂದ ಸ್ಮರಿಸಿಕೊಂಡಿದೆ.
ಎರಡು ದಶಕಗಳ ಸಾಧನೆ ಮಾಡುವ ಮೂಲಕ ಕಂಪನಿಯು ಭಾರತದ ಪ್ರಧಾನ ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಜಾಹೀರಾತುಗಳು ಮುದ್ರಣ ಮಾಧ್ಯಮ, ಹೊರಾಂಗಣ ಡಿಸ್ ಪ್ಲೇಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ಅಭಿಯಾನವು ಕೋಟಕ್ನ ಹೂಡಿಕೆಯ ಗೆಲುವನ್ನು ಮತ್ತು ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ 58%* ವ್ಯಕ್ತಿಗಳು ಸೇರಿದಂತೆ ಭಾರತದ ಹಲವು ಅತ್ಯಂತ ಶ್ರೀಮಂತ ಕುಟುಂಬಗಳ ಮೇಲೆ ಸಂಸ್ಥೆ ಉಂಟು ಮಾಡಿರುವ ಅದರ ಪ್ರಭಾವದ ಗೆಲುವನ್ನು ತೋರಿಸುತ್ತದೆ.
ಕೋಟಕ್ ಪ್ರೈವೇಟ್ ಸಂಸ್ಥೆಯು ಮೂಲಭೂತ ಹೂಡಿಕೆ ಮಾರ್ಗಗಳನ್ನು ಮೀರಿ, ಯುಎಚ್ಎನ್ಐ (ಅಲ್ಟ್ರಾ ಹೈ ನೆಟ್ ವರ್ತ್ ಇಂಡಿವಿಜುವಲ್ಸ್) ಮತ್ತು ಎಚ್ಎನ್ಐ (ಹೈ ನೆಟ್ ವರ್ತ್ ಇಂಡಿವಿಜುವಲ್ಸ್) ಅಂದ್ರೆ ಅತಿ ಶ್ರೀಮಂತ ಮತ್ತು ಶ್ರೀಮಂತ ಗ್ರಾಹಕರಿಗೆ ಅವರು ತಮ್ಮ ಸಂಪತ್ತನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಅವರ ಉದ್ದೇಶ ಸಾಧನೆಯಲ್ಲಿ ನೆರವಾಗುತ್ತದೆ. ಹೊಸ ಜಾಹೀರಾತು ಕೋಟಕ್ ಪ್ರೈವೇಟ್ ಸಂಸ್ಥೆ ಒದಗಿಸುವ ಬೀಸ್ಪೋಕ್ ಸೇವೆಗಳು (ವ್ಯಕ್ತಿಗತವಾಗಿ ಒದಗಿಸುವ ಸೇವೆಗಳು) ಮತ್ತು ಸಮಗ್ರ ಉತ್ಪನ್ನಗಳನ್ನು ಆಕರ್ಷಕ ದೃಶ್ಯಗಳಲ್ಲಿ ಪ್ರದರ್ಶಿಸುತ್ತದೆ. ಅತ್ಯಾಧುನಿಕ, ಈ ಕಾಲದ ಉತ್ಪನ್ನಗಳ ಮೂಲಕ ಕೋಟಕ್ ಪ್ರೈವೇಟ್ ಕಂಪನಿಯು ಹೊಸ ರೀತಿಯ ಹೂಡಿಕೆ ಅವಕಾಶಗಳನ್ನು ಒದಗಿಸುವುದಕ್ಕೆ ಹೆಸರಾಗಿದೆ.
ಜಾಹೀರಾತು ಬಿಡುಗಡೆ ಮಾಡಿ ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್ನ ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಸಿಇಓ ಓಯಿಶರ್ಯ ದಾಸ್, “ಗ್ರಾಹಕರಿಗೆ ಅತ್ಯಾಧುನಿಕ ಹೂಡಿಕೆ ಉತ್ಪನ್ನಗಳನ್ನು ನೀಡುವ ಮೂಲಕ ಎರಡು ದಶಕಗಳ ಕಾಲ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದಕ್ಕೆ ನಾನು ಸಂಭ್ರಮಾಚರಿಸುತ್ತಿದ್ದೇವೆ. ಪ್ರಮುಖ ಖಾಸಗಿ ಬ್ಯಾಂಕಿಂಗ್ ಸಂಸ್ಥೆಯಾಗಿ ನಾವು ನಮ್ಮ ಗ್ರಾಹಕರ ವಿವಿಧ ರೀತಿಯ ಅಗತ್ಯತೆಗಳಿಗೆ ತಕ್ಕಂತೆ ಉತ್ಪನ್ನ ರೂಪಿಸುತ್ತಾ ಬಂದಿದ್ದೇವೆ. ನಮ್ಮ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಮತ್ತು ಭಾರತದ ಪ್ರಖ್ಯಾತ ಖಾಸಗಿ ಬ್ಯಾಂಕರ್ ಎಂಬ ಸ್ಥಾನವನ್ನು ಗಟ್ಟಿಗೊಳಿಸಲು ಕಾರಣಕರ್ತರಾದ ನಮ್ಮ ಗ್ರಾಹಕರಿಗೆ ನಮ್ಮ ಈ ಹೊಸ ಬಹುಮಾಧ್ಯಮ ಜಾಹೀರಾತು ಅಭಿಯಾನದ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ” ಎಂದು ಹೇಳಿದರು.
ಖಾಸಗಿ ಬ್ಯಾಂಕಿಂಗ್ ಸಂಸ್ಥೆಯಾಗಿ ಕೋಟಕ್ ಪ್ರೈವೇಟ್ ಕಂಪನಿಯು ವ್ಯಕ್ತಿಗಳಿಗೆ ತಮ್ಮ ಸಂಪತ್ತು ನಿರ್ವಹಣೆ, ಅದರ ಬೆಳವಣಿಗೆ ಮತ್ತು ಸಂರಕ್ಷಣೆಯಂತಹ ಮಹತ್ವದ ವಿಚಾರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ವ್ಯಕ್ತಿಗಳಿಗೆ ನೆರವು ಒದಗಿಸಿ ಅವರು ಮತ್ತಷ್ಟು ಮಹತ್ವದ ಕಾರ್ಯ ನೋಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉದ್ಯಮಿಗಳು, ಬಿಸಿನೆಸ್ ಕುಟುಂಬಗಳು ಮತ್ತು ವೃತ್ತಿಪರರು ಸೇರಿದಂತೆ ಭಾರತದ ಅರ್ಧದಷ್ಟು ಗಣ್ಯ ಕುಟುಂಬಗಳಿಗೆ ಕೋಟಕ್ ಪ್ರೈವೇಟ್ ಸೇವೆ ಸಲ್ಲಿಸುತ್ತಿದೆ. ಅವರಲ್ಲಿ ಭಾರತೀಯ ನಿವಾಸಿಗಳು ಮತ್ತು ಎನ್ಆರ್ಐಗಳು ಕೂಡ ಸೇರಿದ್ದಾರೆ. ವಿಶೇಷವೆಂದರೆ ಕೋಟಕ್ ಪ್ರೈವೇಟ್ ವಿವಿಧ ಪೀಳಿಗೆಗಳಿಗೆ ತಮ್ಮ ಸೇವೆ ಒದಗಿಸುತ್ತದೆ. ಕಂಪನಿಯು ತನ್ನ ಹೂಡಿಕೆ ಉತ್ಪನ್ನಗಳಾದ ಆರ್ಇಐಟಿಗಳು (ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಗಳು)# ಮತ್ತು ಐಎನ್ವಿಐಟಿಗಳು # (ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಗಳು), ವಿಶೇಷ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಎಸ್ಟೇಟ್ ಪ್ಲಾನಿಂಗ್# ಹಾಗೂ ಫ್ಯಾಮಿಲಿ ಆಫೀಸ್$ ಮ್ಯಾನೇಜ್ ಮೆಂಟ್ ನಂತಹ ಹಲವಾರು ಸೇವೆಗಳನ್ನು ಒದಗಿಸುತ್ತದೆ.
ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್ನ ರೀಟೇಲ್ ಲಯಬಿಲಿಟೀಸ್ ಪ್ರೊಡಕ್ಟ್ ಆಂಡ್ ಚೀಫ್ ಮಾರ್ಕೆಟಿಂಗ್ ಆಫೀಸರ್ ರೋಹಿತ್ ಭಾಸಿನ್, “ನಮ್ಮ ಬಹುಮಾಧ್ಯಮ ಅಭಿಯಾನವು ನಮ್ಮ ನವೀನ ವಿಧಾನ ಮತ್ತು ಉದ್ಯಮದ ಟ್ರೆಂಡ್ ಗಳಿಗಿಂತ ಸದಾ ಮುಂಚೂಣಿಯಲ್ಲಿರುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಮ್ಮ ಟಾರ್ಗೆಟ್ ಗ್ರಾಹಕರ ವಿಚಾರಕ್ಕೆ ಬಂದರೆ ನಾವು ಈ ಅಭಿಯಾನದ ಮೂಲಕ ಅವರು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಪ್ರೀಮಿಯಂ ಪ್ಲಾಟ್ಫಾರ್ಮ್ಗಳ ಮೇಲೆ ಗಮನ ಹರಿಸುತ್ತೇವೆ. ನಮ್ಮ ಈ ಅಭಿಯಾನವು ಅತಿ ಶ್ರೀಮಂತ ಮತ್ತು ಶ್ರೀಮಂತ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳಲಿದ್ದೇವೆ. ಈ ನಿರ್ದಿಷ್ಟ ಚಾನಲ್ಗಳಿಗೆ ಸೂಕ್ತವಾಗಿ ಸಿದ್ಧಗೊಳಿಸಿರುವ ಅಭಿಯಾನದ ಮೂಲಕ ನಮ್ಮ ಬೀಸ್ಪೋಕ್ ಸೇವೆಗಳನ್ನು (ವ್ಯಕ್ತಿಗತ ಸೇವೆ) ಪ್ರದರ್ಶಿಸುವ ಮತ್ತು ನಮ್ಮ ಹೂಡಿಕೆ ಪರಿಣತಿಯನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಈ ಜಾಹೀರಾತು ಖಾಸಗಿ ಬ್ಯಾಂಕಿಂಗ್ನಲ್ಲಿ ಶ್ರೇಷ್ಠತೆ ಸಾಧಿಸಿರುವ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ಹೇಳಿದರು.
ಜಾಹೀರಾತು ನೋಡಲು ಲಿಂಕ್ ಗಳು: https://images.kotak.com/bank/mailers/2024/files/KP%203%20print%20ads%20link%20for%20mailer.pdf
ಈ ಜಾಹೀರಾತು ಅಭಿಯಾನವು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಐಷಾರಾಮಿ ಮತ್ತು ಲೈಫ್ ಸ್ಟೈಲ್ ವೇದಿಕೆಗಳಲ್ಲಿ ಘನತೆವೆತ್ತ ಪ್ರೇಕ್ಷಕವರ್ಗಕ್ಕೆ ತಲುಪಲಿದೆ. ಸೌಂದರ್ಯ ಮತ್ತು ಸಂದೇಶ ಒದಗಿಸುವ ಕಡೆಗೆ ಹೆಚ್ಚು ಗಮನ ಹರಿಸುವ ಮೂಲಕ ಸಿದ್ಧವಾಗಿರುವ ಈ ಜಾಹೀರಾತು ಅಭಿಯಾನ ಯುಎಚ್ಎನ್ಐ /ಎಚ್ಎನ್ಐ ಗ್ರಾಹಕರ ಅಭಿರುಚಿ ಮತ್ತು ಮಹಾತ್ವಾಕಾಂಕ್ಷೆಗೆ ತಕ್ಕಂತೆ ವಿನ್ಯಾಸಗೊಂಡಿದೆ.