ಬೆಂಗಳೂರು : ಸ್ಯಾಮ್ಸಂಗ್ ತನ್ನ ಪ್ರಮುಖ ಸಿಎಸ್ಆರ್ ಯೋಜನೆಯಾದ ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಮೂಲಕ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ಮೊದಲ ಬ್ಯಾಚ್ನ 250 ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಪದವಿ ಪ್ರಮಾಣಪತ್ರಗಳನ್ನು ವಿತರಿಸಿದೆ. ಈ ಯೋಜನೆಯ ಮೂಲಕ ಸ್ಯಾಮ್ಸಂಗ್ ಕಂಪನಿಯು ದೇಶದ ಯುವಜನತೆ ಮತ್ತು ಡಿಜಿಟಲ್ ಇಂಡಿಯಾ ಕ್ರಮವನ್ನು ಬೆಳೆಸುವ ಕೇಂದ್ರ ಸರ್ಕಾರದ ಮಹತ್ತರ ಉದ್ದೇಶಕ್ಕೆ ಉತ್ತಮ ಕೊಡುಗೆ ನೀಡಿದೆ.
ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಮತ್ತು ಮಾರ್ಗದರ್ಶನ ಪಡೆದ ಈ ವಿದ್ಯಾರ್ಥಿಗಳು ಹ್ಯಾಕಥಾನ್ನಲ್ಲಿ ಭಾಗವಹಿಸಿದರು. ಜೊತೆಗೆ ವಾಸ್ತವ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ತಂತ್ರಜ್ಞಾನ ಆಧರಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದರು. ಆಯೋಜಿಸಲಾಗಿದ್ದ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ಸಹಯೋಗ ಮಾಡಲು, ಹೊಸ ಆವಿಷ್ಕಾರ ಮಾಡಲು ಮತ್ತು ಸಮಸ್ಯೆ ಪರಿಹರಿಸುವ ಮನೋಭಾವವನ್ನು ಬೆಳೆಸಲು ಪ್ರೇರೇಪಣೆ ನೀಡಿತು.
ಪದವಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಕೆ.ಎಂ.ಸುರೇಶ್ ಕುಮಾರ್, ಇಎಸ್ಎಸ್ಸಿಐ ಸಿಇಓ ಡಾ. ಅಭಿಲಾಷ ಗೌರ್, ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಯೂನಿವರ್ಸಿಟಿಯ (ಯುವಿಸಿಇ) ಪ್ರಾಂಶುಪಾಲ ಡಾ.ಪಾಲ್ ವಿಜಿಯನ್ ಎಸ್. ಮತ್ತು ಎಸ್ಕೆಎಸ್ಜೆಟಿಐ ಪ್ರಾಂಶುಪಾಲರಾದ ಡಾ. ವಿಜಯ ಜಿಎಸ್ ಉಪಸ್ಥಿತರಿದ್ದರು.
ಈ ಯೋಜನೆಯ ಕುರಿತು ಮಾತನಾಡಿದ ಸ್ಯಾಮ್ಸಂಗ್ ನೈರುತ್ಯ ಏಷ್ಯಾದ ಕಾರ್ಪೊರೇಟ್ ಉಪಾಧ್ಯಕ್ಷ ಎಸ್.ಪಿ. ಚುನ್ , “ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಯೋಜನೆಯ ಮೂಲಕ ಯುವಜನತೆಯ ಕೌಶಲ್ಯ ಅಭಿವೃದ್ಧಿಗೊಳಇಸುವ ಮತ್ತು ಅವರಿಗೆ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಒದಗಿಸಿ ಗಟ್ಟಿಗೊಳಿಸುವ ಭಾರತ ಸರ್ಕಾರದ ಉದ್ದೇಶದ ಜೊತೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಯುವ ಜನತೆ ವೇಗವಾಗಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ನೋಡುವುದು ಹರ್ಷದಾಯಕ ಸಂಗತಿಯಾಗಿದೆ. ಯುವಜನತೆಯ ಕೌಶಲ್ಯಾಭಿವೃದ್ಧಿ ಪ್ರಯಾಣದ ಭಾಗವಾಗಲು ನಾವು ಹೆಮ್ಮೆ ಪಡುತ್ತಿದ್ದೇವೆ. ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಆ ಮೂಲಕ ಅರ್ಥಪೂರ್ಣ ಬದಲಾವಣೆ ಸಾಧ್ಯವಾಗಿಸುವ ಕೌಶಲ್ಯ ಆಧರಿತ ಕಲಿಕೆಯ ವಾತಾವರಣವನ್ನು ನಿರ್ಮಿಸಲು ಸ್ಯಾಮ್ಸಂಗ್ ಬದ್ಧವಾಗಿದೆ” ಎಂದು ಹೇಳಿದರು.
ಈ ವರ್ಷದ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹದಾಯಕ ಅವಕಾಶಗಳನ್ನು ಒದಗಿಸಲಾಗಿತ್ತು. ಪ್ರತೀ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳು ಒಂದು ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ. ಜೊತೆಗೆ ದೆಹಲಿ/ಎನ್ಸಿಆರ್ನಲ್ಲಿರುವ ಸ್ಯಾಮ್ಸಂಗ್ ಘಟಕಗಳಿಗೆ ಭೇಟಿ ನೀಡುವ ಅವಕಾಶ ಹೊಂದಲಿದ್ದಾರೆ. ಸ್ಯಾಮ್ ಸಂಗ್ ಘಟಕಗಳಿಗೆ ಭೇಟಿ ನೀಡುವ ಅವಕಾಶ ಗಳಿಸುವ ವಿದ್ಯಾರ್ಥಿಗಳು ಅಲ್ಲಿ ಸ್ಯಾಮ್ ಸಂಗ್ ನ ನಾಯಕತ್ವ ತಂಡದ ಜೊತೆ ಸಂವಹನ ನಡೆಸಲಿದ್ದಾರೆ. ಜೊತೆಗೆ ರಾಷ್ಟ್ರೀಯ ಕೋರ್ಸ್ನ ಅಗ್ರಸ್ಥಾನ ಗಳಿಸಿದ ವಿದ್ಯಾರ್ಥಿಗಳು ಆಕರ್ಷಕವಾದ ಸ್ಯಾಮ್ಸಂಗ್ ಉತ್ಪನ್ನಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳು ದೇಶಾದ್ಯಂತ ಇರುವ ಇಎಸ್ಎಸ್ಸಿಐ ಅನುಮೋದಿತ ತರಬೇತಿ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಬೋಧಕರಿಂದ ನಡೆಸಲ್ಪಡುವ ತರಗತಿ ಮತ್ತು ಆನ್ಲೈನ್ ತರಬೇತಿಯನ್ನು ಪಡೆಯುತ್ತಾರೆ.
ಉದ್ಯೋಗಾವಕಾಶ ಪಡೆಯುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಾಫ್ಟ್ ಸ್ಕಿಲ್ಸ್ ತರಬೇತಿಯನ್ನೂ ನೀಡಲಾಗುತ್ತದೆ. ಭಾರತದಾದ್ಯಂತ ಇರುವ ಇಎಸ್ಎಸ್ಸಿಐಯ ತರಬೇತಿ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲಾಗುತ್ತಿದೆ. ಈ ವಿಧಾನವು ಆಫ್ಲೈನ್ ಮತ್ತು ಆನ್ಲೈನ್ ಕಲಿಕಾ ಕ್ರಮಗಳು, ಕುತೂಹಲಕರ ಹ್ಯಾಕಥಾನ್ಗಳು ಮತ್ತು ಕ್ಯಾಪ್ಸ್ಟೋನ್ ಯೋಜನೆಗಳ ಸಂಯೋಜನೆಯನ್ನು ಹೊಂದಿದೆ. ಜೊತೆಗೆ ಸ್ಯಾಮ್ಸಂಗ್ ಉದ್ಯೋಗಿಗಳು ನಡೆಸಿಕೊಡುವ ಪರಿಣಿತರ ಮಾರ್ಗದರ್ಶನ ಕಾರ್ಯಕ್ರಮವನ್ನು ಕೂಡ ಒಳಗೊಂಡಿದೆ.
ವಿದ್ಯಾರ್ಥಿಗಳು ಆಯ್ಕೆ ಮಾಡಿರುವ ಕೋರ್ಸ್ ಟ್ರ್ಯಾಕ್ ಗೆ ಅನುಗುಣವಾಗಿ ಪಠ್ಯಕ್ರಮ ರಚನೆ ಬದಲಾಗುತ್ತದೆ. ಉದಾಹರಣೆಗೆ ವಿದ್ಯಾರ್ಥಿ ಎಐ ಕೋರ್ಸ್ ಅನ್ನು ಆಯ್ಕೆಮಾಡಿದ್ದರೆ 270 ಗಂಟೆಗಳ ಕಾಲ ಥಿಯರಿಟಿಕಲ್ ತರಬೇತಿ ಪಡೆಯಬೇಕು ಮತ್ತು 80 ಗಂಟೆಗಳಲ್ಲಿ ಪ್ರಾಜೆಕ್ಟ್ ಕೆಲಸವನ್ನು ಪೂರ್ಣಗೊಳಿಸಬೇಕಿರುತ್ತದೆ. ಒಂದು ವೇಳೆ ವಿದ್ಯಾರ್ಥಿ ಐಓಟಿ ಅಥವಾ ಬಿಗ್ ಡೇಟಾ ಕೋರ್ಸ್ಗಳನ್ನು ಆಯ್ಕೆ ಮಾಡಿದ್ದರೆ 160 ಗಂಟೆಗಳ ಥಿಯರಿಟಿಕಲ್ ತರಗತಿಗಳಿಗೆ ಹಾಜರಾಗಬೇಕು ಮತ್ತು 80 ಗಂಟೆಗಳ ಪ್ರಾಯೋಗಿಕ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿಕೊಳ್ಳಬೇಕಿರುತ್ತದೆ. ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕೋರ್ಸ್ನಲ್ಲಿ ಭಾಗವಹಿಸುವವರು 80 ಗಂಟೆಗಳ ಕಾಲ ತರಬೇತಿ ಪಡೆಯುತ್ತಾರೆ ಮತ್ತು 3-ದಿನದ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ನಾಲ್ಕು ರಾಜ್ಯಗಳ ಎಂಟು ಶಿಕ್ಷಣ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಲಕ್ನೋ ಮತ್ತು ಗೋರಖ್ಪುರದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ದೆಹಲಿ/ಎನ್ಸಿಆರ್ನಲ್ಲಿ ಎರಡು ತರಬೇತಿ ಕೇಂದ್ರಗಳಿವೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಚೆನ್ನೈ ಮತ್ತು ಶ್ರೀಪೆರಂಬದೂರಿನಲ್ಲಿ ಎರಡು ತರಬೇತಿ ಕೇಂದ್ರಗಳಿವೆ. ಕರ್ನಾಟಕ ರಾಜ್ಯ ಬೆಂಗಳೂರಿನಲ್ಲಿಯೂ ತರಬೇತಿ ಕೇಂದ್ರಗಳನ್ನು ಹೊಂದಲಾಗಿದೆ.