ಬೆಂಗಳೂರು : ಭಾರತದ ಪ್ರಮುಖ ಎಸ್ಯುವಿ ತಯಾರಕರಾದ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಪಂಚ್ ಕೇವಲ 34 ತಿಂಗಳುಗಳಲ್ಲಿ ಎಸ್ಯುವಿ ಗಳಲ್ಲಿಯೇ ವೇಗವಾಗಿ 4 ಲಕ್ಷ ಮಾರಾಟ ವನ್ನು ದಾಟಿರುವ ದಾಖಲೆ ಮಾಡಿದೆ ಎಂದು ಘೋಷಿಸಿದೆ.
2021ರ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಟಾಟಾ ಪಂಚ್ ಭಾರತಕ್ಕೆ ಸಬ್ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗವನ್ನು ಪರಿಚಯಿಸಿತ್ತು. ಅದರ ಎತ್ತರ, ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಮತ್ತು ಸೊಗಸಾದ ಡ್ರೈವಿಂಗ್ ಗುಣದಿಂದಾಗಿ ಪಂಚ್ ಒಂದು ಅದ್ಭುತವಾದ ಎಸ್ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ವೈವಿಧ್ಯಮಯ ರಸ್ತೆಗಳಲ್ಲಿ ಸರಾಗವಾಗಿ ಚಲಿಸುವ ಪಂಚ್ ಆಹ್ಲಾದಕರ ಡ್ರೈವಿಂಗ್ ಅನುಭವ ಒದಗಿಸುತ್ತದೆ. ಸಂಡಕ್ಫು ಬೆಟ್ಟವನ್ನು ಏರುವ ಮೂಲಕ ಟಾಟಾ ಪಂಚ್ ಮೊತ್ತ ಮೊದಲ ಫ್ರಂಟ್-ವೀಲ್ ಡ್ರೈವ್ ಎಸ್ಯುವಿ ಆಗಿ ಹೊರಹೊಮ್ಮಿದೆ. ಕಡಿದಾದ ಇಳಿಜಾರುಗಳ ಮೂಲಕ ಸರಾಗವಾಗಿ ಇಳಿದು ಬಂದ ಪಂಚ್ ತನ್ನ ಎಸ್ಯುವಿ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿತ್ತು.
ಬಿಡುಗಡೆಯ ಬಳಿಕ ಟಾಟಾ ಪಂಚ್, ಆ ಸಮಯದಲ್ಲಿ ಬೇರೆ ಯಾವುದೇ ವಾಹನಕ್ಕಿಂತ ಅತಿ ಹೆಚ್ಚು ಅಡಲ್ಟ್ ಆಕ್ಯುಪೆಂಟ್ ಪ್ರೊಟೆಕ್ಷನ್ ರೇಟಿಂಗ್ (ವಯಸ್ಕರ ಸುರಕ್ಷತಾ ರೇಟಿಂಗ್) ಅನ್ನು ಪಡೆಯುವುದರ ಜೊತೆಗೆ ಜಿಎನ್ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿತ್ತು. 2022ರ ಆಗಸ್ಟ್ ನಲ್ಲಿ ಟಾಟಾ ಪಂಚ್, ಕೇವಲ 10 ತಿಂಗಳಲ್ಲಿಯೇ 1 ಲಕ್ಷ ಮಾರಾಟ ಮೈಲಿಗಲ್ಲನ್ನು ದಾಟುವ ಮೂಲಕ ಉದ್ಯಮದಲ್ಲಿಯೇ ಹೊಸ ಮಾನದಂಡವನ್ನು ಸ್ಥಾಪಿಸಿತು. ಅಲ್ಲಿಂದ ಮುಂದಿನ 1 ಲಕ್ಷ ಅಂದ್ರೆ ಒಟ್ಟು 2 ಲಕ್ಷ ವಾಹನ ಮಾರಾಟವನ್ನು ಮುಂದಿನ 9 ತಿಂಗಳಲ್ಲಿಯೇ ಸಾಧಿಸಿತ್ತು. ಮುಂದಿನ 7 ತಿಂಗಳಲ್ಲಿ 3 ಲಕ್ಷ ಮಾರಾಟ ಸಾಧನೆ ಮಾಡಿತ್ತು.
2023ರಲ್ಲಿ ಬಿಡುಗಡೆಯಾದ ಪಂಚ್ ಐಸಿಎನ್ಜಿ, ಬೂಟ್ ಸ್ಪೇಸ್ ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಟಾಟಾ ಮೋಟಾರ್ಸ್ನ ವಿನೂತನ ಟ್ವಿನ್-ಸಿಲಿಂಡರ್ ತಂತ್ರಜ್ಞಾನ ಹೊಂದಿರುವ ಮೊದಲ ಎಸ್ಯುವಿ ಎಂಬ ಕೀರ್ತಿ ಗಳಿಸಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. 2024ರ ಜನವರಿಯಲ್ಲಿ ಪಂಚ್.ಇವಿ ಬಿಡುಗಡೆಯಾಗಿತ್ತು, ಮಾರಾಟವನ್ನು ಮತ್ತಷ್ಟು ಹೆಚ್ಚಿಸಿತು. ಜೊತೆಗೆ ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಅತಿ ಹೆಚ್ಚು ಗ್ರಾಹಕರ ನೆಲೆಯನ್ನು ಸಂಪಾದಿಸಿತು.
ಈ ಸಾಧನೆಯ ಕುರಿತು ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ವಿವೇಕ್ ಶ್ರೀವತ್ಸ ಅವರು, “ಟಾಟಾ ಮೋಟಾರ್ಸ್ ಯಾವಾಗಲೂ ಭಾರತೀಯ ಗ್ರಾಹಕರನ್ನು ಹೆಚ್ಚು ಅರ್ಥಮಾಡಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದೆ. ಇದರಿಂದಾಗಿ ನಮಗೆ ವಿಶಿಷ್ಟವಾದ ಮತ್ತು ಹೆಚ್ಚು ಕ್ರಿಯಾಸೀಲ ಉತ್ಪನ್ನಗಳನ್ನು ರಚಿಸಲು ನಮಗೆ ಸಾಧ್ಯವಾಗುತ್ತದೆ. ಟಾಟಾ ಪಂಚ್ ಮೂಲಕ ನಾವು ಭಾರತೀಯ ಮಾರುಕಟ್ಟೆಗೆ ಹೊಸ ಉಪ-ವಿಭಾಗವನ್ನು ಪರಿಚಯ ಮಾಡಿವೆ. ಜೊತೆಗೆ ಕಾಂಪಾಕ್ಟ್ ರೂಪದಲ್ಲಿ ಎಸ್ಯುವಿ ಗುಣಲಕ್ಷಣಗಳ ಸಮಗ್ರ ಪ್ಯಾಕೇಜ್ ಅನ್ನು ನೀಡುವ ಮೂಲಕ ಹೊಸ ಸಾಧನೆ ಮಾಡಿದ್ದೇವೆ. ಪಂಚ್ ಭಾರತೀಯ ಗ್ರಾಹಕರ ಜೊತೆ ತುಂಬಾ ಚೆನ್ನಾಗಿ ಹೊಂದಿಕೊಂಡಿರುವುದಕ್ಕೆ ನಮಗೆ ಖುಷಿ ಇದೆ. ಪಂಚ್ ಹಂತಹಂತವಾಗಿ ನಿಷ್ಠಾವಂತ ಗ್ರಾಹಕರ ನೆಲೆಯನ್ನು ಹೊಂದಿದೆ. ಆ ಗ್ರಾಹಕರೆಲ್ಲಾ ಬ್ರ್ಯಾಂಡ್ ನ ದೊಡ್ಡ ರಾಯಭಾರಿಗಳಾಗಿ ರೂಪುಗೊಂಡಿದ್ದಾರೆ. ಈ ಸಾಧನೆ ಮಾಡಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ಮುಂದಿನ 1 ಲಕ್ಷ ಮಾರಾಟವನ್ನು ಮತ್ತಷ್ಟು ವೇಗವಾಗಿ ಸಾಧಿಸುವ ವಿಶ್ವಾಸ ಹೊಂದಿದ್ದೇವೆ” ಎಂದು ಹೇಳಿದರು.