ಬೆಂಗಳೂರು : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಆಯೋಜಿಸಿದ್ದ ತನ್ನ ವಿನೂತನವಾದ ಗ್ರಾಹಕರ ಜೊತೆ ಸಂವಹನ ನಡೆಸುವ ಕಾರ್ಯಕ್ರಮವಾದ ದೇಶ್ ಕಾ ಟ್ರಕ್ ಉತ್ಸವ 2.0 ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಅತ್ಯುನ್ನತ ಮತ್ತು ಇಂಧನ ದಕ್ಷ ವಾಹನ ಉತ್ಪನ್ನವಾದ ಇಂಟರ್ ಮೀಡಿಯೇಟ್ ಲೈಟ್ ಆಂಡ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ಸ್ (ಐಎಲ್ಎಂಸಿವಿ) ಶ್ರೇಣಿಯನ್ನು ಬೆಂಗಳೂರಿನ ಟ್ರಕ್ ಆಸಕ್ತ ಗ್ರಾಹಕರಿಗೆ ಪರಿಚಯಿಸಿತು. 2023ರಲ್ಲಿ ದೇಶ್ ಕಾ ಟ್ರಕ್ ಉತ್ಸವ 2.0 ಕಾರ್ಯಕ್ರಮದ ಉದ್ಘಾಟನಾ ಆವೃತ್ತಿ ನಡೆದಿತ್ತು.
ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ ಸರಕು ಸಾಗಾಣಿಕೆ ವಲಯದ ಆಸಕ್ತರು ಹೊಸ ಉತ್ಪನ್ನಗಳ ವಿಶಿಷ್ಟತೆಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಕುರಿತಾದ ವಿವರವಾದ ಮಾಹಿತಿಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಟ್ರಯಲ್ ನಡೆಯುತ್ತಿರುವ ಹೊಸ ವಾಹನಗಳ ಕುತೂಹಲಕರ ಮಾಹಿತಿಯನ್ನು ನೀಡಲಾಯಿತು. ಜೊತೆಗೆ ಬಿಎಸ್6 ಫೇಸ್ 2 ರೇಂಜ್ ನ ಇಂಧನ ದಕ್ಷತೆ ಮತ್ತು ಲಾಭದಾಯಕ ಪ್ರಯೋಜನಗಳ ಕುರಿತಾದ ಒಳನೋಟಗಳನ್ನು ಹಂಚಲಾಯಿತು. ಎಲ್ಲಕ್ಕಿಂತ ವಿಶೇಷವಾಗಿ ಕಂಪನಿಯು ಹಲವು ಪ್ರಮುಖ ಗ್ರಾಹಕರನ್ನು ಅವರ ಪಾಲುದಾರಿಕೆ, ನೆರವಿಗಾಗಿ ಗೌರವ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವಿನಾಯಕ ಟ್ರಾನ್ಸ್ ಪೋರ್ಟ್ ನ ಮಾಲೀಕರಾದ ಅಂಜಿನಪ್ಪ ಅವರು, “ನಾನು ಕಳೆದ ಒಂದು ದಶಕದಿಂದ ಟಾಟಾ ಟ್ರಕ್ಗಳನ್ನು ಬಳಸುತ್ತಿದ್ದೇನೆ. ಈ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಕ್ಕಾಗಿ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರಕು ಸಾಗಾಣಿಕೆ ವಲಯದಲ್ಲಿ ಆಪರೇಟರ್ ಆಗಿರುವ ನಾನು ಹೊಸ, ಇಂಧನ- ದಕ್ಷ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಫೀಚರ್ ಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನನ್ನ ವ್ಯಾಪಾರವನ್ನು ಮತ್ತಷ್ಟು ಲಾಭದಾಯಕಗೊಳಿಸಲು ಇವೆಲ್ಲವೂ ನನಗೆ ಸಹಾಯ ಮಾಡಲಿವೆ” ಎಂದು ಹೇಳಿದರು.
ಮತ್ತೋರ್ವ ಗ್ರಾಹಕರಾದ ಬಿಸಿಬಿ ಕುಶಾಲ್ ಸರ್ವೀಸಸ್ ಲಿಮಿಟೆಡ್ ನ ಮಾಲೀಕರಾದ ಚಿಕ್ಕೇ ಗೌಡ ಅವರು, “ಟ್ರಕ್ ಉತ್ಸವ 2.0ದಲ್ಲಿ ಭಾಗವಹಿಸಿರುವುದರಿಂದ ನನಗೆ ಲಾಭದಾಯಕ ಅನುಭವ ದೊರಿತಿದೆ. ಕಾರ್ಯಕ್ರಮದಲ್ಲಿ ನಾನು ಟಾಟಾ ಮೋಟಾರ್ಸ್ನ ಹೊಸ ತಾಂತ್ರಿಕ ಪ್ರಗತಿಗಳು ಮತ್ತು ಅವರ ಟ್ರಕ್ ಶ್ರೇಣಿಗಳು ಹೇಗೆ ಇಂಧನ ದಕ್ಷವಾಗಿರುತ್ತವೆ ಎಂಬುದರ ಕುರಿತ ಒಳನೋಟಗಳನ್ನು ಗಳಿಸಿದ್ದೇನೆ. ಅದರ ಜೊತೆಗೆ ಟಾಟಾ ಫ್ಲೀಟ್ ಎಡ್ಜ್, ಕಸ್ಟಮೈಸ್ ಮಾಡಬಹುದಾದ ವಾರ್ಷಿಕ ನಿರ್ವಹಣಾ ಒಪ್ಪಂದಗಳು ಮತ್ತು ಟಾಟಾ ಓಕೆ ಪ್ರೋಗ್ರಾಮ್ ಅಡಿಯಲ್ಲಿ ಎಕ್ಸ್ ಚೇಂಜ್ ಯೋಜನೆಗಳು ಮುಂತಾದ ಕಂಪನಿಯ ಹಲವು ಮೌಲ್ಯವರ್ಧಿತ ವೈಶಿಷ್ಟ್ಯತೆಗಳ ಬಗ್ಗೆ ಕೂಡ ತಿಳಿದುಕೊಂಡಿದ್ದೇನೆ. ನನ್ನಂತಹ ಆಪರೇಟರ್ ಗಳಿಗೆ ಇವೆಲ್ಲಾ ತುಂಬಾ ಮುಖ್ಯವಾದ ಮಾಹಿತಿಗಳಾಗಿವೆ. ಮುಂಬರುವ ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ಜೊತೆಗಿನ ನನ್ನ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಐಎಲ್ಎಂಸಿವಿ ಶ್ರೇಣಿಯಲ್ಲಿ 4ರಿಂದ 19 ಟನ್ ಗಳ ಜಿವಿಡಬ್ಲ್ಯೂ ವರೆಗಿನ ಹಲವಾರು ಶ್ರೇಣಿಯ ಉತ್ಪನ್ನಗಳನ್ನು ಒದಗಿಸುತ್ತದೆ. ಹಲವು ವಿಭಾಗಗಳಲ್ಲಿ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಾಹನಗಳನ್ನು ಸೂಕ್ತವಾಗಿ, ದೃಢವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಠಿಣ ಟೆಸ್ಟ್ ಗಳನ್ನು ಮಾಡಲಾಗಿದೆ. ಐಎಲ್ಎಂಸಿವಿ ಪೋರ್ಟ್ಫೋಲಿಯೊವು ಎಲ್ ಪಿ ಟಿ, ಎಸ್ ಎಫ್ ಸಿ, ಸಿಗ್ನಾ ಮತ್ತು ಅಲ್ಟ್ರಾ ಶ್ರೇಣಿಯಂತಹ ಬಹು ಕ್ಯಾಬಿನ್ ಆಯ್ಕೆಗಳು, ಹಲವು ವಿಧದ ಡೆಕ್ ಗಾತ್ರಗಳು ಮತ್ತು ಬಾಡಿ ಸ್ಟೈಲ್ ಜೊತೆಗೆ ದೊರೆಯುತ್ತವೆ.
ಕರ್ನಾಟಕವೊಂದರಲ್ಲೇ ಟಾಟಾ ಮೋಟಾರ್ಸ್ ನ 250ಕ್ಕೂ ಹೆಚ್ಚು ಸೇಲ್ಸ್ ಆಂಡ್ ಸರ್ವೀಸ್ ಟಚ್ಪಾಯಿಂಟ್ಗಳಿವೆ. ಆ ಮೂಲಕ ರಾಜ್ಯದ ಗ್ರಾಹಕರಿಗೆ ಸಮಗ್ರ ಬೆಂಬಲ ಮತ್ತು ಉತ್ಪನ್ನ ಲಭ್ಯವಾಗಿಸಲಾಗುತ್ತಿದೆ. ದೇಶಾದ್ಯಂತ ಟಾಟಾ ಮೋಟಾರ್ಸ್ 2500ಕ್ಕೂ ಹೆಚ್ಚು ಸೇಲ್ಸ್ ಆಂಡ್ ಸರ್ವೀಸ್ ಸೇವಾ ಟಚ್ಪಾಯಿಂಟ್ಗಳನ್ನು ಹೊಂದಿದ್ದು, ಅಲ್ಲಿ ವಾಹನಗಳ ಬಿಡಿಭಾಗಗಳು ಕೂಡ ಲಭ್ಯವಾಗುತ್ತವೆ.