ಬೆಂಗಳೂರು : ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (“ಕೆಎಂಬಿಎಲ್” / “ಕೋಟಕ್”) ಮತ್ತು ಜಿಓಕ್ಯೂಐಐ ಸಹಯೋಗದಲ್ಲಿ ಕೋಟಕ್ – ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್ವಾಚ್ ಬಿಡುಗಡೆ ಮಾಡಲಾಗಿದೆ. ರುಪೇ ಆನ್-ದ-ಗೋ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ವಾಚ್ ಮೂಲಕ ಪಿನ್ ಹಾಕದೆಯೇ ರೂ. 5000 ವರೆಗಿನ ಕಾಂಟಾಕ್ಟ್ ಲೆಸ್ ಪೇಮೆಂಟ್ ಗಳನ್ನು ಮಾಡಬಹುದು ಅನ್ನುವುದು ವಿಶೇಷ. ಈ ವಿಶಿಷ್ಟವಾದ ಸ್ಮಾರ್ಟ್ ವಾಚ್ ಸಾಧನದ ಬೆಲೆ ರೂ. 3499.
ಈ ಸ್ಮಾರ್ಟ್ ವಾಚ್ ಉತ್ಪನ್ನವನ್ನು ಬಿಡುಗಡೆ ಮಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್ನ ರಿಟೇಲ್ ಲಯಬಿಲಿಟೀಸ್ ಪ್ರೊಡಕ್ಟ್ ಹೆಡ್ ಆಂಡ್ ಚೀಫ್ ಮಾರ್ಕೆಟಿಂಗ್ ಆಫೀಸರ್ ರೋಹಿತ್ ಭಾಸಿನ್ ಅವರು, “ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ ಉಂಟಾಗಿದೆ. ಗ್ರಾಹಕರು ಪದೇ ಪದೇ ಕಡಿಮೆ ಮೊತ್ತಗಳನ್ನು ಪಾವತಿ ಮಾಡಲು ನಗದು ರಹಿತ ಪೇಮೆಂಟ್ ವಿಧಾನವನ್ನೇ ಇಷ್ಟ ಪಡುತ್ತಾರೆ. ಅದಕ್ಕಾಗಿತೇ ಕೋಟಕ್ – ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದ್ದು, ಈ ಸಾಧನ ಇದ್ದರೆ ನಗದು, ಕಾರ್ಡ್ಗಳು ಅಥವಾ ಸ್ಮಾರ್ಟ್ಫೋನ್ಗಳು ಬೇಕಾಗಿಯೇ ಇಲ್ಲ. ಈ ಮೂಲಕ ಸುರಕ್ಷಿತ ಮತ್ತು ಸುಲಭ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.
ಕೋಟಕ್ – ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ವಾಚ್ ಅನ್ನು ಬಳಸುವ ಬಳಕೆದಾರರು ತಮ್ಮ ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ಎಸ್ ಪಿ ಓ2 ಮಟ್ಟವನ್ನು ತಮ್ಮ ಮಣಿಕಟ್ಟಿನಲ್ಲಿಯೇ ಚೆಕ್ ಮಾಡಬಹುದು. ಜೊತೆಗೆ ಈ ಸ್ಮಾರ್ಟ್ ವಾಚ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಹೊಂದಿದ್ದು, ಸುಲಭವಾಗಿ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ಗ್ರಾಹಕರು ತಮ್ಮ ಕೋಟಕ್ ಖಾತೆಗಳಿಗೆ ಸುಲಭವಾಗಿ ಸೈನ್ ಇನ್ ಆಗಬಹುದು ಮತ್ತು ಸ್ಮಾರ್ಟ್ ವಾಚ್ ಅನ್ನು ಬಳಸಿಕೊಂಡು ಕಾಂಟಾಕ್ಟ್ ಲೆಸ್ ಪೇಮೆಂಟ್ ಅನ್ನು ಮಾಡಬಹುದು. ಈ ವಿಧಾನವು ಸಾಂಪ್ರದಾಯಿಕ ಕಾಂಟಾಕ್ಟ್ ಲೆಸ್ ಕಾರ್ಡ್ಗಳು ಮತ್ತು ಮೊಬೈಲ್ ಸಾಧನಗಳಂತೆಯೇ ಅದೇ ಮಟ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುತ್ತದೆ.
ಈ ಕುರಿತು ಜಿಓಕ್ಯೂಐಐ ಸಂಸ್ಥಾಪಕ ಮತ್ತು ಸಿಇಓ ವಿಶಾಲ್ ಗೊಂಡಲ್ ಮಾತನಾಡಿ, “ಆರೋಗ್ಯವೇ ಭಾಗ್ಯ ಎಂಬುದು ಎಲ್ಲಾ ಕಾಲದಲ್ಲೂ ಪ್ರಸ್ತುತ ಅನ್ನಿಸುವ ಒಂದು ಗಾದೆ. ಮೊದಲೇ ರೋಗ ತಡೆಗಟ್ಟುವ ಪ್ರಕ್ರಿಯೆ ಮತ್ತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಜಿಓಕ್ಯೂಐಐ ಯಾವಾಗಲೂ ನಂಬುತ್ತದೆ. ಅದಕ್ಕೆ ಪೂರಕವಾಗಿರುವ ಜಿಓಕ್ಯೂಐಐನ ಅತ್ಯಾಧುನಿಕ ಆರೋಗ್ಯ ಫೀಚರ್ ಗಳ ಜೊತೆಗೆ ಕೋಟಕ್ ಬ್ಯಾಂಕ್ ನ ಕಾಂಟಾಕ್ಟ್ ಲೆಸ್ ಪೇಮೆಂಟ್ ಫೀಚರ್ ಅನ್ನು ಸಂಯೋಜಿತಗೊಳಿಸಿರುವ ಸ್ಮಾರ್ಟ್ ವಾಚ್ ಅನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ಈ ಒಟ್ಟುಗೂಡುವಿಕೆ ಬಹಳ ಮುಖ್ಯವಾಗಿದೆ. ಯಾಕೆಂದರೆ ಈ ಸಹಯೋಗವು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ, ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ಪ್ರೇರೇಪಿಸುತ್ತದೆ, ಸುರಕ್ಷಿತ ವಹಿವಾಟು ಮಾಡುವ ಸೌಲಭ್ಯಗಳನ್ನು ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಾಧನವು ಈ ಕಾಲಕ್ಕೆ ಅವಶ್ಯವಾಗಿ ಬೇಕಾದ ಆರೋಗ್ಯಕರ ಮತ್ತು ಪರಿಣಾಮಕಾರಿ ಜೀವನಶೈಲಿ ಕಾಪಾಡಿಕೊಳ್ಳಲು ಬೆಂಬಲ ಒದಗಿಸುತ್ತದೆ” ಎಂದು ಹೇಳಿದರು.
ಎನ್ ಪಿ ಸಿ ಐನ ಚೀಫ್ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್ ರಾಜೀತ್ ಪಿಳ್ಳೈ ಅವರು, “ಎನ್ ಪಿ ಸಿ ಐ ಪರಿಚಯಿಸಿರುವ ಹೊಸ ರುಪೇ ಆನ್-ದ-ಗೋ ಅನ್ನು ಬಳಸಿಕೊಂಡು ಕಾಂಟಾಕ್ಟ್ ಲೆಸ್ ಪೇಮೆಂಟ್ ಸೌಲಭ್ಯ ಒದಗಿಸುವ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿರುವುದು ನಮಗೆ ಸಂತೋಷದ ವಿಚಾರವಾಗಿದೆ. ಈ ಸಹಯೋಗವು ಬಳಕೆದಾರರಿಗೆ ತಮ್ಮ ದೈನಂದಿನ ವಹಿವಾಟುಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ವೈಶಿಷ್ಟ್ಯಗಳು ಕಾಂಟಾಕ್ಟ್ ಲೆಸ್ ಪೇಮೆಂಟ್ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ. ಜೊತೆಗೆ ವಹಿವಾಟು ಮಾಡಲು ಸುಲಭವಾಗುವುದರಿಂದ ಬಳಕೆದಾರರ ಅನುಭವವನ್ನು ಉತ್ತಮಗೊಳಿಸುತ್ತದೆ. ಟೆಕ್ ಸ್ಯಾವಿ ಗ್ರಾಹಕರ ಕಾರಣದಿಂದ ಕಾಂಟಾಕ್ಟ್ ಲೆಸ್ ಪೇಮೆಂಟ್ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ” ಎಂದು ಹೇಳಿದರು.
ಕೋಟಕ್ ಬ್ಯಾಂಕ್ ಗ್ರಾಹಕರು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದು. ಕೋಟಕ್ ಗ್ರಾಹಕರಲ್ಲದವರು ಈ ಸೌಲಭ್ಯವನ್ನು ಪಡೆಯಲು ಕೋಟಕ್ ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ.