ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿಯ ನೂತನ ಸದಸ್ಯರನ್ನಾಗಿ ಮಂಗಳೂರಿನ ಇಂಡಿಯನ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಮುರಳಿ ಹೊಸಮಜಲು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಸಿ. ಬಿ. ಶಶಿಧರ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಇತ್ತಿಚಿಗೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇಮಕಾತಿಯ ಆದೇಶದ ಪ್ರತಿಯನ್ನು ವಿಸ್ತರಿಸಿದರು.
ಮುರಳಿ ಅವರು ೩೦ ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ಹಾಗು ಸೃಜನಶೀಲರಾಗಿ ತೊಡಗಿಸಿ ಕೊಂಡಿದ್ದಾರೆ. ಅದಲ್ಲದೆ ಅವರು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ಮಂಗಳೂರು ವಿಭಾಗದ ಅಧ್ಯಕ್ಷರಾಗಿಯು, ರೋಟರಿ ಕ್ಲಬ್ ದಕ್ಷಿಣ ವಿಭಾಗ ಇದರ ಸದಸ್ಯರಾಗಿಯು, ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯು ಮತ್ತು ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.
ಬಿಜೆಪಿ ಪ್ರಕೋಷ್ಠದ ರಾಜ್ಯ ಸಮಿತಿಯ ಸಂಯೋಜಕರಾದ ಎಸ್. ದತ್ತಾತ್ರಿ, ಸಹ ಸಂಯೋಜಕರಾದ ಫಣೀಷ್, ವಿಧಾನ ಪರಿಷತ್ ಸದಸ್ಯರಾದ ರವಿ ಕುಮಾರ, ಶಿಕ್ಷಣ ಪ್ರಕೋಷ್ಠದ ಸಂಚಾಲಕರಾದ ಡಾ. ಸಿ. ಬಿ. ಶಶಿಧರ, ಸಹ ಸಂಚಾಲಕರಾದ ಎಮ್. ಜಿ. ಭಟ್ ಕುಮ್ಟ ಅವರು ಉಪಸ್ಥಿತರಿದ್ದರು.