ಬೆಂಗಳೂರು : ಉದ್ಯೋಗಿಗಳಿಗೆ ಯೋಗಕ್ಷೇಮ ಒದಗಿಸಿ, ಸಾಮಾಜಿಕ ಬೆಳವಣಿಗೆಗೆ ಒತ್ತು ನೀಡಿ ಮತ್ತು ಆ ಮೂಲಕ ಕಂಪನಿಯ ಒಟ್ಟು ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 2024ರ ಜುಲೈ 24ರಂದು ತನ್ನ ನೌಕರರ ಒಕ್ಕೂಟದೊಂದಿಗೆ ಮೆಮೊರಾಂಡಮ್ ಆಫ್ ಸೆಟ್ಲ್ಮೆಂಟ್ (ಎಂಓಎಸ್)ಗೆ ಸಹಿ ಹಾಕಿದೆ. “ಪರಸ್ಪರ ನಂಬಿಕೆ ಮತ್ತು ಗೌರವ” ಎಂಬ ಕಂಪನಿಯ ತತ್ವಕ್ಕೆ ಅನುಗುಣವಾಗಿ ಸಕಾರಾತ್ಮಕ ಕೆಲಸದ ವಾತಾವರಣವನ್ನು ಉಂಟು ಮಾಡುವ ಉದ್ದೇಶದಿಂದ ಈ ಒಪ್ಪಂದ ಮಾಡಲಾಗಿದೆ.
2024-2026ರ ಆರ್ಥಿಕ ವರ್ಷಗಳ ಬೇಡಿಕೆಯ ಪಟ್ಟಿಯಲ್ಲಿ ತಿಳಿಸಿರುವ ಸಮಸ್ಯೆಗಳನ್ನು ಒಳಗೊಂಡಿರುವ ಎಂಓಎಸ್ ಅನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಮಂಜುನಾಥ್ ಜಿ, ಹಿರಿಯ ಟಿಕೆಎಂ ಆಡಳಿತಾಧಿಕಾರಿಗಳು ಮತ್ತು ಟಿಕೆಎಂ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಮುಂದೆ ಔಪಚಾರಿಕವಾಗಿ ಅನುಮೋದಿಸಲಾಯಿತು.
ಟೊಯೋಟಾ ಕಂಪನಿಯ ಮೌಲ್ಯಗಳು ಮತ್ತು ತತ್ವಗಳಿಗೆ ಅನುಗಣವಾಗಿ ಹೊಂದಾಣಿಕೆ, ಉತ್ಪಾದಕತೆ, ಕೆಲಸ-ಬದುಕಿನ ಉತ್ತಮ ಸಮತೋಲನ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸರ್ವೀಸ್ ಒದಗಿಸುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ಆಧಾರದ ಮೇಲೆ ಕೆಲಸ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದವು.
ಈ ಒಪ್ಪಂದದ ಮುಖ್ಯಾಂಶಗಳು ಇಲ್ಲಿವೆ:
ಮಧ್ಯಮ-ಬ್ಯಾಚಿನ ಸದಸ್ಯರಿಗೆ ನೇರ ವೇತನ ರೂ.16,000/- (2 ವರ್ಷಗಳಿಗೆ)ಕ್ಕೆ ಹೆಚ್ಚಳ. ಇದರ ಪರಿಣಾಮವಾಗಿ ಎರಡು ವರ್ಷಗಳ ಅವಧಿಗೆ ಕಾಸ್ಟ್ ಟು ಕಂಪನಿ (ಸಿಟಿಸಿ) ರೂ.19,500ಕ್ಕೆ ಹೆಚ್ಚಳ.
ವಾರ್ಷಿಕ ಒಟ್ಟು ಸಂಬಳದ 25% (90 ದಿನಗಳು)ನಷ್ಟು ಎಕ್ಸ್-ಗ್ರೇಷಿಯಾ/ಬೋನಸ್.
ಉದ್ಯೋಗಿಗಳು ಮತ್ತು ಅವರ ಕುಟುಂಬದ ಅವಲಂಬಿತರಿಗೆ ವೈದ್ಯಕೀಯ ವಿಮೆ ಕವರೇಜ್ ವಿಸ್ತರಣೆ.
ಇತರ ಪ್ರಯೋಜನಗಳ ಜೊತೆಗೆ ಕಾರು ಖರೀದಿಗೆ ರೂ.8 ಲಕ್ಷಗಳ ಬಡ್ಡಿ ರಹಿತ ಸಾಲ.
ಉದ್ಯೋಗಿಗಳ ಸುರಕ್ಷತೆ ಮತ್ತು ಕೆಲಸದ ತಿಳುವಳಿಕೆಗೆ ಸಂಬಂಧಿಸಿದ ವೈಜ್ಞಾನಿಕ ಶಿಸ್ತು ಹೆಚ್ಚಿಸಲು ಕೆಲಸದ ಸ್ಥಳದಲ್ಲಿನ ನಿರಂತರ ಸುಧಾರಣೆ.
ಆಟೋಮೊಬೈಲ್ ಉದ್ಯಮದಲ್ಲಿ ಯಶಸ್ಸಿಗೆ ಅಗತ್ಯವಾದ ಹೊಂದಾಣಿಕೆ ಮತ್ತು ಉತ್ಪಾದಕತೆಯ ಸುಧಾರಣೆಗಾಗಿ ಒಕ್ಕೂಟ ಮತ್ತು ತಂಡದ ಸದಸ್ಯರಿಂದ ನಿರಂತರ ಪ್ರಯತ್ನಗಳು.
ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಮಿಕ ಇಲಾಖೆ ಆಯುಕ್ತ ಡಾ. ಜಿ ಮಂಜುನಾಥ್, “ಪರಸ್ಪರ ಪ್ರಯೋಜನ ಆಗುವ ಒಪ್ಪಂದ ಮಾಡಿಕೊಂಡ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ನೌಕರರ ಸಂಘಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಎರಡೂ ಪಕ್ಷಗಳ ಸಮನ್ವಯತೆ ಕರ್ನಾಟಕ ರಾಜ್ಯದ ಕೈಗಾರಿಕಾ ಸಂಬಂಧಗಳಿಗೆ ಅಗತ್ಯವಾಗಿ ಬೇಕಾಗಿರುವ ಉತ್ತಮ ಉದಾಹರಣೆಯಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಟೊಯೋಟಾದ ಪರಸ್ಪರ ನಂಬಿಕೆ ಮತ್ತು ಗೌರವ ಎಂಬ ಫಿಲಾಸಫಿಯನ್ನು ಶ್ಲಾಘಿಸುತ್ತಾ, “ಈ ಸಿದ್ಧಾಂತವು ನೌಕರರ ಕೊಡುಗೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ ಮತ್ತು ಆ ಮೂಲಕ ಯಶಸ್ವೀ ಫಲಿತಾಂಶಗಳನ್ನು ದೊರಕುವಂತೆ ಮಾಡಿ ಮ್ಯಾನೇಜ್ಮೆಂಟ್ನಿಂದ ಗುರುತಿಸಲ್ಪಟ್ಟು ಸೂಕ್ತ ಪ್ರಯೋಜನಗಳನ್ನು ಪಡೆಯುವ ಬದ್ಧತೆ ಪ್ರದರ್ಶಿಸಬಹುದಾಗಿದೆ. ನಾವು ಟಿಕೆಎಂ ಮತ್ತು ಅದರ ನೌಕರರ ಸಂಘವು ಉತ್ಕೃಷ್ಟತೆ ಸಾಧಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿ ಕರ್ನಾಟಕದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಬೇಕೆಂದು ಒತ್ತಾಯಿಸುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಜಿ.ಶಂಕರ್ ಮತ್ತು ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಬಿ ಪದ್ಮನಾಭ ಅವರು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಸಕಾರಾತ್ಮಕ ಕೆಲಸದ ವಾತಾವರಣವನ್ನು ಸೃಷ್ಟಿಸಲು ಮತ್ತು ಆ ಮೂಲಕ ಉತ್ತಮ ಕೆಲಸ ಹಾಗೂ ಬದುಕಿನ ಮಧ್ಯದ ಸಮತೋಲನ ಹೆಚ್ಚಿಸಲು, ಉದ್ಯೋಗಿಗಳ ಯೋಗಕ್ಷೇಮ ಕಾಪಾಡಿಕೊಂಡು ಅವರು ಬೆಳವಣಿಗೆ ಹೊಂದುವಂತೆ ಮಾಡಲು ಬದ್ಧವಾಗಿದೆ ಎಂದು ಹೇಳಿದರು.
ದೇಶದಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳ ಕಾಲ ಉಪಸ್ಥಿತಿ ಹೊಂದಿರುವ ಕಂಪನಿಯು, ಈ ಅವಧಿಯಲ್ಲಿ ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯ ಮತ್ತು ಕೊಡುಗೆಗೆ ಸೂಕ್ತ ಮೌಲ್ಯ ಮತ್ತು ಗೌರವ ಸಿಗುವಂತೆ ಮಾಡಲು ಕೆಲಸ ಮಾಡಿದೆ. “ಎಲ್ಲರಿಗೂ ಸಾಮೂಹಿಕ ಸಂತೋಷವನ್ನು ಒದಗಿಸುವ” ಕಂಪನಿಯ ದೂರದೃಷ್ಟಿಗೆ ಅನುಗುಣವಾಗಿ ಅಭಿವೃದ್ಧಿ ಸಾಧಿಸುವ ಜೊತೆಗೆ ಸಮತೋಲಿತವಾದ ಸ್ಥಿರ ಮತ್ತು ವಿಶ್ವ ದರ್ಜೆಯ ಕೆಲಸದ ವಾತಾವರಣಗಳನ್ನು ಒದಗಿಸುತ್ತಿರುವ ಕಂಪನಿಗೆ ಅದರ ಜನಗಳೇ ಮೌಲ್ಯಯುತ ಆಸ್ತಿ. ಒಕ್ಕೂಟ ಮತ್ತು ಮ್ಯಾನೇಜ್ಮೆಂಟ್ ನಡುವಿನ ಜಂಟಿ ಪ್ರಯತ್ನಗಳ ಫಲವಾಗಿ ಅದೇ ಕ್ಯಾಂಪಸ್ನಲ್ಲಿ ಹೊಸ ಘಟಕ (ಪ್ಲಾಂಟ್-3)ವನ್ನು ಆರಂಭಿಸುವ ಮೂಲಕ ಟಿಕೆಎಂ ದೊಡ್ಡ ಬೆಳವಣಿಗೆಯ ಹಾದಿಗೆ ಹೊರಳಿಕೊಂಡಿದೆ. ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತ ಬೆಳೆಯಲು ಮತ್ತು ಭಾರತದೊಂದಿಗೆ ರಾಜ್ಯವೂ ಬೆಳೆಯಲು ಅನುವು ಮಾಡಿಕೊಡುತ್ತದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ದೀಪಕ್ ಮತ್ತು ಪ್ರಧಾನ ಕಾರ್ಯದರ್ಶಿ ರವಿ ಆರ್ ಅವರು ಕಂಪನಿ ಜೊತೆಗೆ ಮೆಮೊರಾಂಡಮ್ ಆಫ್ ಸೆಟಲ್ಮೆಂಟ್ ಗೆ ಸಹಿ ಹಾಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಜನಕೇಂದ್ರಿತ ಕಂಪನಿಯಾಗಿರುವ ಟಿಕೆಎಂ ಯಾವಾಗಲೂ ತನ್ನ ಉದ್ಯೋಗಿಗಳ ಕಲ್ಯಾಣ ಮತ್ತು ಬೆಳವಣಿಗೆಗೆ ಆದ್ಯತೆ ನೀಡಿದೆ. ಒಕ್ಕೂಟ ಮತ್ತು ಮ್ಯಾನೇಜ್ಮೆಂಟ್ನ ಜಂಟಿ ಪ್ರಯತ್ನಗಳ ಮೂಲಕ ಟಿಕೆಎಂನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೇವಲ 3 ತಿಂಗಳ ವೇಗದ ಅವಧಿಯಲ್ಲಿ ಅತ್ಯುತ್ತಮ ಸೆಟಲ್ಮೆಂಟ್ ಮಾಡಿದ ದಾಖಲೆ ಮಾಡಲಾಗಿದೆ. 90 ದಿನಗಳ ಬೋನಸ್ (ವಾರ್ಷಿಕ ಒಟ್ಟು ಸಂಬಳದ 25% ವೇತನ) ಘೋಷಿಸುವ ಮೂಲಕ ಉದ್ಯೋಗಿಗಳ ಶ್ರಮವನ್ನು ಮ್ಯಾನೇಜ್ಮೆಂಟ್ ಗುರುತಿಸಿದೆ ಮತ್ತು ಇದರಿಂದ ಉದ್ಯೋಗಿಗಳು ಹೆಚ್ಚು ಶ್ರಮದಿಂದ ಕೆಲಸ ಮಾಡಲು ಪ್ರೇರೇಪಣೆ ಸಿಗಲಿದೆ. ಜೊತೆಗೆ ಕಂಪನಿ ಮತ್ತು ಅದರ ಉದ್ಯೋಗಿಗಳಗೆ ಸಾಮರಸ್ಯದ ಕೆಲಸದ ವಾತಾವರಣ ಉಂಟಾ ಮಾಡಿ ಪ್ರಗತಿಗೆ ಕೊಡುಗೆ ನೀಡಲು ಒಕ್ಕೂಟಕ್ಕೆ ಸಹಾಯ ಮಾಡುತ್ತದೆ.