ಮಂಗಳೂರು : ಮಂಜೇಶ್ವರದ ಸ್ನೇಹಾಲಯವು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾಯಿತು.ಆರು ವರ್ಷದ ಹಿಂದೆ ಕಾಣೆಯಾಗಿದ್ದ ಮಂಟು ಸಿಂಗ್ ಪುನಃ ಕುಟುಂಬಸ್ತರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು.
26.10.2020 ಫರಂಗಿಪೇಟೆ ಬಳಿಯ ಬಸ್ಸು ನಿಲ್ದಾಣದಲ್ಲಿ ತುಂಬಾ ದಿನಗಳಿಂದ ಮಲಗಿದ್ದ ಆತನನ್ನು, ಸ್ಥಳೀಯ ರಿಕ್ಷಾ ಚಾಲಕರು ನೀಡಿದ ಮಾಹಿತಿಯ ಮೇರೆಗೆ ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರಾವರು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು.ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿಪಾತ್ರನಾಗಿದ್ದ,ಆತ ಕಿವುಡ ಮತ್ತು ಮೂಖನಾಗಿದ್ದ ಕಾರಣ ಆತನ ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚವುದು ಸ್ನೇಹಾಲಯ ತಂಡಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸ್ನೇಹಾಲಯದಲ್ಲಿ ಆತನಿಗೆ ರಮೇಶ್ ಎಂಬ ಹೆಸರನ್ನು ಇಡಲಾಯಿತು, ಸಂಕೇತ ಭಾಷಾ ವ್ಯಾಖ್ಯಾನಕಾರರುನ್ನು ತಂದು ವಿಳಾಸ ಪತ್ತೆಹಚ್ಚುವ ಪ್ರಯತ್ನ ಮಾಡಲಾಗಿತ್ತು ಆದರೂ ಯಾವುದೆ ಫಲ ಸಿಗಲಿಲ್ಲ. ಇನ್ನೊಂದೆಡೆ ಆತನ ಕುಟುಂಬದವರು ಆತನನ್ನು ಹುಡುಕಾಡಿ ಬೆಸತ್ತು ಆತ ಮೃತಪಟ್ಟಿರಬಹುದೆಂದು ಊಹಿಸಿದ್ದರು.
ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು 36 ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು.ಅಧಾರ್ ಕಾರ್ಡಿನಲ್ಲಿ ಇದ್ದ ರಮೇಶನ ವಿಳಾಸ ಸಿಕ್ಕಿದ ತಕ್ಷಣ ಸ್ನೇಹಾಲಯದ ಸಮಾಜ ಕಾರ್ಯ ವಿಭಾಗದ ಸಿಬ್ಬಂಧಿಗಳು ಆತನ ಗ್ರಾಮದ ಮುಖ್ಯಸ್ತರನ್ನು ಸಂಪರ್ಕಿಸಿತು, ‘ಸರಪಂಚ್’ಆತನ ಸಂಭಂದಿಕನಾದ ಕಾರಣ ತಕ್ಷಣ ವಿಡಿಯೂ ಕಾಲ್ ಮಾಡಿ ಆತನ ಗುರುತನ್ನು ಧ್ರಡಪಡಿಸಿದನು ಮಾತ್ತು ಅದಷ್ಟು ಬೇಗ ಸ್ನೇಹಾಲಯಕ್ಕೆ ಬರುವ ಭರವಸೆಯನ್ನು ಕೊಟ್ಟರು.
ದಿನಾಂಕ 29.7.2024 ಆತನ ಸೋದರ ಸಂಬಂಧಿಗಳಾದ ಮನೀಶ್ ಕುಮಾರ್ ಸಿಂಗ್ ಮತ್ತು ಪಂಕಜ್ ಸಿಂಗ್ ದೂರದ ಬಿಹಾರದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದರು.ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪುನರ್ಮಿಲನ ಕಾರ್ಯ ನಡೆಯಿತು. ಆತನ ಕುಟುಂಬದವರ ಪ್ರಕಾರ ಆತನ ನಿಜ ಹೆಸರು ಮಂಟು ಸಿಂಗ್, ಆತ ಕಳೆದ 6 ವರ್ಷಗಳಿಂದ ನಾಪತ್ತೆಯಾಗಿದ್ದ, ತನ್ನ ಊರಾದ ಬಿಹಾರದ ಸಿಮಾರಿಯಾದಲ್ಲಿ ಕೃಷಿ ಮಾಡಿ ಮತ್ತು ಜೆ.ಸಿ.ಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ ಗಾಂಜಾ ಸೇವನೆಯ ಪರಿಣಾಮವಾಗಿ ಮಾನಸಿಕ ಅಸ್ವಸ್ಥತೆಗೆ ತುತ್ತಾಗುತ್ತಾನೆ. ಹೀಗೆ ಒಂದು ದಿನ ಹೇಳದೆ ಮನೆಯಿಂದ ನಾಪತ್ತೆಯಾಗುತ್ತಾನೆ.
ಈ ಕಾರ್ಯಕ್ಕೆ ಸಹಕರಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯ ಕೃತಜ್ನತೆಗಳನ್ನು ಸಲ್ಲಿಸಿದರು ಅಂತೆಯೆ ಮುಂಬರವ ದಿನಗಳಲ್ಲಿ ಆತನ ಆರೈಕೆ ಮತ್ತು ಚಿಕಿತ್ಸೆಯನ್ನು ಸರಿಯಾಗಿ ಮಾಡುವ ಭರವಸೆಯನ್ನು ನೀಡಿದರು.