ಬೆಂಗಳೂರು : ಸ್ಯಾಮ್ಸಂಗ್ ಇಂದು ಪ್ಯಾರಿಸ್ನಲ್ಲಿ ನಡೆದ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಕಾರ್ಯಕ್ರಮದಲ್ಲಿ ತನ್ನ ಹೊಚ್ಚ ಹೊಸ ಫೋಲ್ಡೇಬಲ್ ಫೋನ್ ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6, ಗ್ಯಾಲಕ್ಸಿ ಝಡ್ ಫ್ಲಿಪ್6 ಮತ್ತು ಅದರ ಜೊತೆಗೆ ಗ್ಯಾಲಕ್ಸಿ ಬಡ್ಸ್3 ಮತ್ತು ಗ್ಯಾಲಕ್ಸಿ ಬಡ್ಸ್3 ಪ್ರೊ ಅನ್ನು ಬಿಡುಗಡೆ ಮಾಡಿದೆ. ಹೊಸ ಗ್ಯಾಲಕ್ಸಿ ಝಡ್ ಸರಣಿಯನ್ನು ಬಿಡುಗಡೆ ಮಾಡುವ ಮೂಲಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎಐಯ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಹೊಸ ಗ್ಯಾಲಕ್ಸಿ ಎಐ ಅನ್ನು ಬಹುಮುಖವಾದ ಮತ್ತು ಹೊಂದಿಕೊಳ್ಳುವ ಗುಣವನ್ನು ಬಳಸಿಕೊಂಡುವಿನ್ಯಾಸಗೊಳಿಸಿರುವುದರಿಂದ ಗ್ರಾಹಕರಿಗೆ ವಿಶಿಷ್ಟವಾದ ಮೊಬೈಲ್ ಅನುಭವವನ್ನು ಒದಗಿಸಲಿದೆ. ಗ್ಯಾಲಕ್ಸಿ ಎಐ ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ತೀವ್ರಗೊಳಿಸಲು ಮತ್ತು ವೇಗಗೊಳಿಸಲು ಶಕ್ತಿಯುತವಾದ, ಬುದ್ಧಿವಂತ ಮತ್ತು ಬಾಳಿಕೆ ಬರುವ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಅನುಭವವನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ಅಧ್ಯಕ್ಷ ಮತ್ತು ಮೊಬೈಲ್ ಎಕ್ಸ್ ಪೀರಿಯನ್ಸ್ ಬ್ಯುಸಿನೆಸ್ ಮುಖ್ಯಸ್ಥ ಟಿಎಂ ರೋಹ್, “ಸ್ಯಾಮ್ ಸಂಗ್ ನ ಬಹುಕಾಲದ ನಾವೀನ್ಯತಾ ಇತಿಹಾಸವು ನಮಗೆ ಫೋಲ್ಡೇಬಲ್ ಸಾಮರ್ಥ್ಯವನ್ನು (ಫಾರ್ಮ್ ಫ್ಯಾಕ್ಟರ್) ಒದಗಿಸಿ ಮೊಬೈಲ್ ಎಐಯ ಹೊಸ ಅಧ್ಯಾಯವನ್ನು ಆರಂಭಿಸಲು ಅನುವು ಮಾಡಿಕೊಡುವ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರಸ್ತುತ ಈ ಎರಡು ಪೂರಕ ತಂತ್ರಜ್ಞಾನಗಳನ್ನು ಸಂಯೋಜಿಸಲು ಮತ್ತು ಪ್ರಪಂಚದಾದ್ಯಂತ ಇರುವ ಬಳಕೆದಾರರಿಗೆ ಹೊಸ ಸಾಧ್ಯತೆಗಳನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು. ಮಾತು ಮುಂದುವರಿಸುತ್ತಾ ಅವರು, “ನಮ್ಮ ಫೋಲ್ಡೇಬಲ್ ಫೋನ್ ಗಳು ಪ್ರತಿಯೊಬ್ಬ ಬಳಕೆದಾರರ ವಿಭಿನ್ನ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಈಗ ಗ್ಯಾಲಕ್ಸಿ ಎಐ ಶಕ್ತಿಯಿಂದ ಮತ್ತಷ್ಟು ಶಕ್ತಿಯುತವಾಗಿದ್ದು, ಸ್ಯಾಮ್ ಸಂಗ್ ಹಿಂದೆಂದೂ ಇಲ್ಲದ ಹೊಸ ರೀತಿಯ ಅನುಭವವನ್ನು ನೀಡುತ್ತದೆ” ಎಂದು ಹೇಳಿದರು.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್5 ಗಳು ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದ್ದು, ಆರಾಮವಾಗಿ ಕೊಂಡೊಯ್ಯಲು ಸಾಧ್ಯವಾಗುವಂತೆ ರೂಪುಗೊಳಿಸಲಾಗಿದೆ. ಸಿಮ್ಮೆಟ್ರಿಕಲ್ (ಎರಡು ಭಾಗಗಳಿದ್ದು, ಎರಡೂ ಒಂದೇ ಥರ ಇರುತ್ತವೆ) ವಿನ್ಯಾಸವನ್ನು ಹೊಂದಿರುವ, ನೇರವಾದ ಎಡ್ಜ್ ಅನ್ನು ಹೊಂದಿರುವ ಈ ಫೋನ್ ಗಳು ಕಲಾತ್ಮಕವಾಗಿ ನಯವಾದ ಫಿನಿಶಿಂಗ್ ಹೊಂದಿವೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಹೊಸತಾದ ಸ್ವಲ್ಪ ಹೆಚ್ಚು ಕವರ್ ಸ್ಕ್ರೀನ್ ನ ರೇಶಿಯೋ ಹೊಂದಿದ್ದು, ಹೆಚ್ಚು ನೈಸರ್ಗಿಕವಾದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ನಿಮ್ಮ ಮಾನಸಿಕ ನೆಮ್ಮದಿಗಾದಿ ಹೊಸ ಗ್ಯಾಲಕ್ಸಿ ಝಡ್ ಸರಣಿಯು ಹೆಚ್ಚು ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ. ಆದ್ದರಿಂದ ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಎರಡನ್ನೂ ಗ್ಯಾಲಕ್ಸಿ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್ಫಾರ್ಮ್ ಬಳಸಿಕೊಂಡು ಸಜ್ಜುಗೊಳಿಸಲಾಗಿದೆ. ಇದು ಇನ್ನೂ ಅತ್ಯಾಧುನಿಕ ಸ್ನಾಪ್ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮ ಕ್ಲಾಸ್ ಇನ್ ಸಿಪಿಯು, ಜಿಪಿಯು ಮತ್ತು ಎನ್ ಪಿ ಯು ಕಾರ್ಯಕ್ಷಮತೆ ಒದಗಿಸುತ್ದ. ಗ್ಯಾಲಕ್ಸಿ ಝಡ್ ಫೋಲ್ಡ್6 ಫೋನ್ ನೋಟ್ ಅಸಿಸ್ಟ್, ಪಿಡಿಎಫ್ ಓವರ್ಲೇ ಟ್ರಾನ್ಸ್ ಲೇಷನ್, ಕಂಪೋಸರ್, ಸ್ಕೆಚ್ ಟು ಇಮೇಜ್ ಮತ್ತು ಇಂಟರ್ ಪ್ರಿಟರ್ ಮುಂತಾದ ಎಐ- ಚಾಲಿತ ಫೀಚರ್ ಗಳು ಮತ್ತು ಟೂಲ್ ಗಳ ಶ್ರೇಣಿಯನ್ನು ಒದಗಿಸುತ್ತದೆ. ಅಲ್ಲದೇ ಲಾರ್ಜ್ ಸ್ಕ್ರೀನ್ ಅನ್ನು ಹೊಂದಿದ್ದು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಅಪ್ಗ್ರೇಡ್ ಮಾಡಿದ ತೀವ್ರ ಥರದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಅದರ ಶಕ್ತಿಯುತ ಚಿಪ್ಸೆಟ್ ಮತ್ತು 1.6x ದೊಡ್ಡ ವೇಪರ್ ಚೇಂಬರ್ ಕಾರಣದಿಂದಾಗಿ ಇನ್ನೂ ಹೆಚ್ಚಿ ಕಾರ್ಯಕ್ಷಮತೆಯನ್ನು ಒದಗಿಸಿ ಹೆಚ್ಚು ಕಾಲ ಆಟವಾಡುವ ಸಾಮರ್ಥ್ಯವನ್ನು ಹೊಂದಿದೆ.
ಗ್ಯಾಲಕ್ಸಿ ಝಡ್ ಫ್ಲಿಪ್6 ಕೇವಲ ಕೊಂಡೊಯ್ಯಲು ಸುಲಭವಾಗುವಂತೆ ಮಾತ್ರ ರೂಪಿಸಿಲ್ಲ, ಜೊತೆಗೆ ಇದು ಹೊಸ ಕಸ್ಟಮೈಸ್ ಮಾಡಿದ ಮತ್ತು ಸೃಜನಶೀಲ ಫೀಚರ್ ಗಳ ಶ್ರೇಣಿಯನ್ನು ನೀಡುತ್ತದೆ. ಆದ್ದರಿಂದ ಈ ಫೋನ್ ಮೂಲಕ ನೀವು ಪ್ರತಿ ಕ್ಷಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು.
3.4-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್ ವಿಂಡೋ ಅನ್ನು ಇನ್ನೂ ಹೆಚ್ಚಳಗೊಳಿಸಲಾಗಿದೆ. ಆ ಮೂಲಕ ಮೊಬೈಲನ್ನು ತೆರೆಯುವ ಅಗತ್ಯವಿಲ್ಲದೆಯೇ ಎಐ ಅಸಿಸ್ಟೆಡ್ ಅಂದ್ರೆ ಎಐ ನೆರವಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಜೊತೆಗೆ, ಫ್ಲೆಕ್ಸ್ ವಿಂಡೋ ಎಂದಿಗಿಂತಲೂ ಹೆಚ್ಚಿನ ವಿಜೆಟ್ಗಳನ್ನು ನೀಡುತ್ತದೆ ಮತ್ತು ಏಕಕಾಲದಲ್ಲಿ ಬಹು ವಿಜೆಟ್ಗಳಿಂದ ಮಾಹಿತಿಯನ್ನು ಪರಿಶೀಲಿಸಲು ನಿಮಗೆ ಅನುವು ಮಾಡಿ ಕೊಡುತ್ತದೆ.
ಫ್ಲೆಕ್ಸ್ ಕ್ಯಾಮ್ ಬಹುಮುಖ ಕ್ಯಾಮರಾ ಅನುಭವವನ್ನು ನೀಡಲಿದೆ ಮತ್ತು ಹೊಸ ಸೃಜನಶೀಲ ಆಯ್ಕೆಗಳನ್ನು ಒದಗಿಸಲಿದೆ. ಹೊಸ ಫೀಚರ್ ಆದ ಅಟೋ ಜೂಮ್ ಮೂಲಕ ಫ್ಲೆಕ್ಸ್ ಕ್ಯಾಮ್, ಯಾವುದೇ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೊದಲೇ ಫೋಟೋ ತೆಗೆಯುವ ಸಬ್ಜೆಕ್ಟ್ (ವಸ್ತು) ಅನ್ನು ಪತ್ತೆಹಚ್ಚುವ ಮತ್ತು ಜೂಮ್ ಇನ್ ಮತ್ತು ಔಟ್ ಮಾಡುವ ಮೂಲಕ ಅಟೋಮ್ಯಾಟಿಕ್ ಆಗಿ ನಿಮ್ಮ ಶಾಟ್ಗೆ ಉತ್ತಮವಾದ ಫ್ರೇಮ್ ಅನ್ನು ಒದಗಿಸುತ್ತದೆ. ಆ ರೀತಿಯಲ್ಲಿ, ನಿಮ್ಮ ಸ್ನೇಹಿತರು ಅಥವಾ ಅದ್ಭುತವಾದ ಹಿನ್ನೆಲೆ ಈ ಎರಡರಲ್ಲಿ ಆಯ್ಕೆ ಮಾಡಲು ನೀವೇ ಶ್ರಮಿಸಬೇಕಾಗಿಲ್ಲ, ಬದಲಿಗೆ ನೀವು ಅಟೋಮ್ಯಾಟಿಕ್ ಆಗಿ ಸೊಗಸಾದ ಫೋಟೋ ತೆಗೆಯುವ ಅವಕಾಶ ಒದಗಿಸುತ್ತದೆ.
ಹೊಸ 50ಎಂಪಿ ವೈಡ್ ಮತ್ತು 12ಎಂಪಿ ಅಲ್ಟ್ರಾ ವೈಡ್ ಸೆನ್ಸರ್ ಗಳು ಸ್ಪಷ್ಟವಾದ ಮತ್ತು ಸೊಗಸಾದ ವಿವರಗಳನ್ನು ಕಾಣಿಸುವ ಅಪ್ ಗ್ರೇಡೆಡ್ ಕ್ಯಾಮೆರಾ ಅನುಭವ ಒದಗಿಸುತ್ತದೆ. 50ಎಂಪಿ ಸೆನ್ಸರ್ ನಾಯ್ಸ್ ಫ್ರೀ ಫೋಟೋ ಅಂದ್ರೆ ಸ್ಪಷ್ಟವಾದ ಫೋಟೋಗಾಗಿ 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. ಅತ್ಯಾಧುನಿಕ ಶೂಟಿಂಗ್ ಅನುಭವ ಪಡೆಯಲು 10x ಜೂಮ್ ಮೂಲಕ ಎಐ ಜೂಮ್ ಕೂಡ ಲಭ್ಯವಿದೆ.
ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ಕಾರಣದಿಂದ ಬ್ಯಾಟರಿ ಬಾಳಿಕೆಯ ಬಗ್ಗೆ ಚಿಂತಿಸದೆ ನೀವು ದೀರ್ಘಾವಧಿಯ ಸಮಯದ ವರೆಗೆ ಈ ಗ್ಯಾಲಕ್ಸಿ ಝಡ್ ಫ್ಲಿಪ್6ನ ಎಲ್ಲಾ ಸೃಜನಾತ್ಮಕ ಮತ್ತು ಕಸ್ಟಮೈಸ್ ಮಾಡಬಹುದಾದ ಫೀಚರ್ ಗಳನ್ನು ಬಳಸುವುದನ್ನು ಮುಂದುವರಿಸಬಹುದಾಗಿದೆ
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಅನ್ನು ಸ್ಯಾಮ್ ಸಂಗ್ ನಾಕ್ಸ್ ಮೂಲಕ ಸುರಕ್ಷಿತಗೊಳಿಸಲಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿಯ ಡಿಫೆನ್ಸ್-ಗ್ರೇಡ್, ಬಹು- ಪದರದ ಭದ್ರತಾ ಪ್ಲಾಟ್ಫಾರ್ಮ್ ಬಹುಮುಖ್ಯ ಮಾಹಿತಿಗಳನ್ನು ರಕ್ಷಿಸಲು ಮತ್ತು ಎಂಡ್-ಟು-ಎಂಡ್ ಹಾರ್ಡ್ವೇರ್, ನೈಜ-ಸಮಯದ ಥ್ರೆಟ್ ಡಿಟೆಕ್ಷನ್ ಮತ್ತು ಸಹಯೋಗದ ರಕ್ಷಣೆ ಒದಗಿಸುವುದರ ಮೂಲಕ ಎಲ್ಲಾ ರೀತಿಯ ರಕ್ಷಣೆ ಒದಗಿಸುವಂತೆ ನಿರ್ಮಿತಗೊಂಡಿದೆ.
ಗ್ಯಾಲಕ್ಸಿ ಬಡ್ಸ್3 ಸರಣಿ: ಗ್ಯಾಲಕ್ಸಿ ಎಐ ಮೂಲಕ ಕನೆಕ್ಟೆಡ್ ಅನುಭವ ಮತ್ತಷ್ಟು ತೀವ್ರ ಗ್ಯಾಲಕ್ಸಿ ಎಐ ಶಕ್ತಿಯನ್ನು ಹೊಂದಿರುವ ಗ್ಯಾಲಕ್ಸಿ ಬಡ್ಸ್3 ಸರಣಿಯು ಹೊಸ ರೀತಿಯ ಸಂವಹನ ಅನುಭವವನ್ನು ಒದಗಿಸುತ್ತದೆ. ಗ್ಯಾಲಕ್ಸಿ ಬಡ್ಸ್3 ಸರಣಿಯು ಆರಾಮದಾಯಕವಾಗಿ ಫಿಟ್ ಆಗುವ ಸಂತೋಷದಾಯಕವಾದ ಹೊಸ ಕಂಪ್ಯೂಟೇಶನಲ್ ವಿನ್ಯಾಸದೊಂದಿಗೆ ಬರುತ್ತದೆ. ಪ್ರೀಮಿಯಂ ಬ್ಲೇಡ್ ವಿನ್ಯಾಸವು ಬ್ಲೇಡ್ ಲೈಟ್ಗಳ ಜೊತೆಗೆ ಪೂರಕವಾದ ಅಲ್ಟ್ರಾ-ಸ್ಲೀಕ್ ಮತ್ತು ಆಧುನಿಕ ಶೈಲಿಯೊಂದಿಗೆ ಸ್ಟೈಲ್ ಅನ್ನು ಮೆಚ್ಚುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ರೂಪುಗೊಂಡಿದೆ. ಈ ಹೊಸ ವಿನ್ಯಾಸವು ಬ್ಲೇಡ್ನ ಮೇಲೆ ಸರಳವಾಗಿ ಪಿಂಚ್ ಮಾಡುವ ಅಥವಾ ಸ್ವೈಪ್ ಮಾಡುವ ಮೂಲಕ ಅಥವಾ ಸ್ವೈಪ್ ಮಾಡುವ ಮೂಲಕ ಸಾಧನವನ್ನು ನಿಯಂತ್ರಿಸಲು ನಿಮಗೆ ಅನುಮತಿಸುವ ಮೂಲಕ ಹೆಚ್ಚು ಚಂದದ, ಸೊಗಸಾದ ಅನುಭವವನ್ನು ನೀಡುತ್ತದೆ. ಇದರಿಂದಾಗಿ ಅದೇ ಸಮಯದಲ್ಲಿ ಅನುಕೂಲಕರ ಮತ್ತು ಆಹ್ಲಾದಕರ ಸೌಂದರ್ಯವನ್ನು ಹೊಂದಿದೆ. ಗ್ಯಾಲಕ್ಸಿ ಬಡ್ಸ್3 ಮತ್ತು ಬಡ್ಸ್3 ಪ್ರೊ ಈ ಎರಡೂ ಉದ್ದೇಶ- ನಿರ್ಮಿತ ವಿನ್ಯಾಸ ಆಯ್ಕೆಗಳನ್ನು ನೀಡುತ್ತವೆ. ಗ್ಯಾಲಕ್ಸಿ ಬಡ್ಸ್3 ಪ್ರೊ ತೀವ್ರಥರವಾದ ಸೌಂಡ್ ಆಪ್ಷನ್ ಅನ್ನು ಹುಡುಕುತ್ತಿರುವವರಿಗೆ ಕೆನಾಲ್ ಟೈಪ್ ಆಗಿದ್ದು, ಬಡ್ಸ್ 3 ದೀರ್ಘಕಾಲದವರೆಗೆ ಸಾಧನವನ್ನು ವಿವಿಧ ಸಂದರ್ಭಗಳಲ್ಲಿ ಬಳಸಲು ಆದ್ಯತೆ ನೀಡುವ ಜನರಿಗೆ ಓಪನ್ ಟೈಪ್ ಆಗಿದೆ.