ಬೆಂಗಳೂರು : ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮುಂದಾಳು ಸಂಸ್ಥೆಯಾದ ಮೆಡ್ಟ್ರಾನಿಕ್, ಹೈದರಾಬಾದಿನಲ್ಲಿರುವ ಮೆಡ್ಟ್ರಾನಿಕ್ ಇಂಜಿನಿಯರಿಂಗ್ ಅಂಡ್ ಇನೋವೇಶನ್ ಸೆಂಟರ್ ನಲ್ಲಿ(MEIC) ತನ್ನ ಹೊಸ ಗ್ಲೋಬಲ್ ಐಟಿ(GIT) ಕೇಂದ್ರವನ್ನು ಇಂದು ಉದ್ಘಾಟಿಸಿತು. ಉದ್ಘಾಟನೆಯಲ್ಲಿ ತೆಲಂಗಾಣ ಸರ್ಕಾರದ ಐಟಿ, ಕೈಗಾರಿಕೆಗಳು ಹಾಗೂ ವಾಣಿಜ್ಯದ ಸನ್ಮಾನ್ಯ ಸಚಿವ ಶ್ರೀ ಡಿ. ಶ್ರೀಧರ್ ಬಾಬು, ಯುಎಸ್ ಕಾನ್ಸಲ್ ಜನರಲ್ ಮಿಸ್ ಜಿನ್ನೆಫರ್ ಲಾರ್ಸನ್, ಮೆಡ್ಟ್ರಾನಿಕ್ನ ಎಸ್ವಿಪಿ ಮತ್ತು ಸಿಐಒ ಗ್ಲೋಬಲ್ ಮಿಸ್ ರಶ್ಮಿ ಕುಮಾರ್ ಮತ್ತು MEIC ದ ಉಪಾಧ್ಯಕ್ಷ ಹಾಗೂ ಸೈಟ್ ಮುಖ್ಯಸ್ಥ ಶ್ರೀ ದಿವ್ಯಪ್ರಕಾಶ್ ಜೋಶಿ ಒಳಗೊಂಡಂತೆ, ಮೆಡ್ಟ್ರಾನಿಕ್ನ ಹಿರಿಯ ನಾಯಕರುಗಳು ಭಾಗವಹಿಸಿದ್ದರು.
ಗ್ಲೋಬಲ್ ಐಟಿ ಸೆಂಟರ್ (GIT), ಯುಎಸ್ ಆಚೆಗಿನ ಮೆಡ್ಟ್ರಾನಿಕ್ನ ಪ್ರಪ್ರಥಮ ದೊಡ್ಡ ಪ್ರಮಾಣದ ಐಟಿ ಸಾಮರ್ಥ್ಯ ಕೇಂದ್ರವಾಗಿದೆ. ಮುಂದಿನ 3-5 ವರ್ಷಗಳಲ್ಲಿ 300 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗುವಂತೆ ಸಂಸ್ಥೆಯು $60 ದಶಲಕ್ಷ ಹೂಡಿಕೆ ಮಾಡಲಿದೆ. ಕ್ಲೌಡ್ ಇಂಜಿನಿಯರಿಂಗ್, ಡೇಟಾ ವೇದಿಕೆಗಳು, ಡಿಜಿಟಲ್ ಆರೋಗ್ಯ ಅಪ್ಲಿಕೇಶನ್, ಹೈಪರ್ ಆಟೋಮೇಶನ್ ಮತ್ತು AI/ML ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಜಿಐಟಿ ಗಮನ ಕೇಂದ್ರೀಕರಿಸಲಿದೆ. ಪ್ರತಿಭಾ ಸಾಮರ್ಥ್ಯಗಳು, ಕ್ಲೌಡ್ ಮತ್ತು DevOps, ಅತ್ಯಾಧುನಿಕ ವಿಶ್ಲೇಷಣೆ ಮತ್ತು ದೃಶ್ಯೀಕರಣ, ಸಂಯೋಜನೆ ಮತ್ತು ಮಿಡಲ್ ವೇರ್, ಫುಲ್ ಸ್ಟ್ಯಾಕ್ ಇಂಜಿನಿಯರಿಂಗ್, ರೊಬೋಟಿಕ್ ಪ್ರಾಸೆಸ್ ಆಟೋಮೇಶನ್, ಪ್ರಾಸೆಸ್ ಅಂಡ್ ಡೇಟಾ ಮೈನಿಂಗ್, ಎಜೈಲ್ ಪ್ರೊಗ್ರಾಮ್ ಮ್ಯಾನೇಜ್ಮೆಂಟ್, ಪ್ರಾಸೆಸ್ ಎಕ್ಸೆಲೆನ್ಸ್ ಮತ್ತು ಬಿಜಿನೆಸ್ ಅನಾಲಿಸಿಸ್ ಮುಂತಾದವುಗಳ ಜೊತೆಗೆ ಐಟಿ ಭದ್ರತೆ ಮತ್ತು ಅನುಸರಣೆಯನ್ನು ಒಳಗೊಂಡಿರುತ್ತದೆ. ಈ ಸಾಮರ್ಥ್ಯಗಳ ಮೂಲಕ, ಹೊಸ ಜಿಐಟಿ ಕೇಂದ್ರವು, ಆರೋಗ್ಯಶುಶ್ರೂಷಾ ತಂತ್ರಜ್ಞಾನದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಿ, ಅಪಾಯಗಳನ್ನು ನಿರ್ವಹಿಸಿ ಬೆಳವಣಿಗೆಯನ್ನು ಮುನ್ನಡೆಸಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, ತೆಲಂಗಾಣ ಸರ್ಕಾರದ ಐಟಿ, ಕೈಗಾರಿಕೆಗಳು ಹಾಗೂ ವಾಣಿಜ್ಯದ ಸನ್ಮಾನ್ಯ ಸಚಿವ ಶ್ರೀ ಡಿ. ಶ್ರೀಧರ್ ಬಾಬು, “Iಮೆಡ್ಟ್ರಾನಿಕ್ ಹೈದರಾಬಾದಿನಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ನನಗೆ ಸಂತೋಷ ತಂದಿದೆ. ಈ ವರ್ಷದ ಫೆಬ್ರವರಿಯಲ್ಲಿ MEICದ ವಿಸ್ತರಿತ R&D ಘಟಕವನ್ನು ಉದ್ಘಾಟಿಸುವ ಆನಂದ ನನಗೆ ಸಿಕ್ಕಿತ್ತು ಮತ್ತು ಈ ಸಮಯದಲ್ಲಿ ನಾನು ಇತರ ಹಲವಾರು ಅವಕಾಶಗಳ ಬಗ್ಗೆ ಚರ್ಚಿಸಿದ್ದೆ. ಸುಮಾರು 5 ತಿಂಗಳ ಅವಧಿಯಲ್ಲಿ. ಮೆಡ್ಟ್ರಾನಿಕ್ನ ಹೊಸ ಜಾಗತಿಕ ಐಟಿ ಕೇಂದ್ರವನ್ನು ಪ್ರಾರಂಭಿಸಲು ನಾವಿಲ್ಲಿ ಬಂದಿದ್ದೇವೆ. ಮೆಡ್ಟ್ರಾನಿಕ್ನಂತಹ ಸುಪ್ರಸಿದ್ಧ ಸಂಸ್ಥೆಗಳು ತೆಲಂಗಾಣದಲ್ಲಿ ತಮ್ಮ ಪ್ರಸ್ತುತದ ಹೂಡಿಕೆಗಳನ್ನು ದ್ವಿಗುಣಗೊಳಿಸಲು ಆಯ್ಕೆ ಮಾಡುತ್ತಿರುವುದು, ಇಲ್ಲಿ ಬೆಳೆಸಲಾಗುತ್ತಿರುವ ಉಜ್ವಲ ಆವಿಷ್ಕಾರ ಪರಿಸರವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರದ ಪ್ರಗತಿಪರ ನೀತಿಗಳಿಗೆ ಇದೊಂದು ಉಜ್ವಲ ಪುರಾವೆಯಾಗಿದೆ. ವೈದ್ಯಕೀಯ ತಂತ್ರಜ್ಞಾನಗಳ ಕ್ಷೇತ್ರದ ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ ಮತ್ತು ಸರ್ಕಾರದಿಂದ ಪ್ರತಿಯೊಂದು ರೀತಿಯ ಬೆಂಬಲವನ್ನೂ ನಾವು ವಿಸ್ತರಿಸುತ್ತೇವೆ.” ಎಂದು ಹೇಳಿದರು.
ಮೆಡ್ಟ್ರಾನಿಕ್ನ ಎಸ್ವಿಪಿ ಮತ್ತು ಸಿಐಒ ರಶ್ಮಿ ಕುಮಾರ್, “ಆವಿಷ್ಕಾರವು, ಮೆಡ್ಟ್ರಾನಿಕ್ನ ಪ್ರತಿಯೊಂದು ಪರಿವರ್ತನಾತ್ಮಕ ತಂತ್ರಜ್ಞಾನದ ಹೃದ್ಭಾಗದಲ್ಲಿದೆ. ಭಾರತದಲ್ಲಿ ನಮ್ಮ ಗ್ಲೋಬಲ್ ಐಟಿ ಕೇಂದ್ರದ ಉದ್ಘಾಟನೆ, ಜಾಗತಿಕ ತಂತ್ರಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸಬೇಕೆನ್ನುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದ್. ಉಜ್ವಲವಾದ ಆವಿಷ್ಕಾರ ಪರಿಸರವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ನಾವು ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಈ ಕೇಂದ್ರದ ಪ್ರಾರಂಭವು, ಭಾರತೀಯ ಮಾರುಕಟ್ಟೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿ, ಹೆಚ್ಚು ರೋಗಿ ಜೀವನಗಳ ಮೇಲೆ ಪ್ರಭಾವ ಬೀರಲು ಮತ್ತು ಆರೋಗ್ಯಶುಶ್ರೂಷಾ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಲು ನಮ್ಮ ಮುನ್ನಡೆಸುತ್ತದೆ. ಭಾರತವು ಅತ್ಯುತ್ತಮವಾದ ಪ್ರತಿಭಾ ಸಮೂಹಗಳನ್ನು ಒದಗಿಸುತ್ತದೆ. ಆರೋಗ್ಯಶುಶ್ರೂಷಾ ತಂತ್ರಜ್ಞಾನದ ಬೆಳವಣಿಗೆಯನ್ನು ಬೆಂಬಲಿಸಿ ಆ ಮೂಲಕ ರೋಗಿ ಜೀವನಗಳ ಮೇಲೆ ಪ್ರಭಾವ ಬೀರುವ ಕೌಶಲ್ಯಗಳನ್ನು ವರ್ಧಿಸಲು ನಾವು ಎದುರುನೋಡುತ್ತಿದ್ದೇವೆ.” ಎಂದರು.
ಉಪಾಧ್ಯಕ್ಷ ಮತ್ತು ಮೆಡ್ಟ್ರಾನಿಕ್ನ MEIC ಸೈಟ್ ಮುಖ್ಯಸ್ಥ ದಿವ್ಯಜೋಶಿ, “ಹೈದರಾಬಾದಿನ MEIC ಘಟಕದಲ್ಲಿ ಜಿಐಟಿ ಕೇಂದ್ರದ ಉದ್ಘಾಟನೆ, ಮೆಡ್ಟ್ರಾನಿಕ್ಗೆ ಒಂದು ಪರಿವರ್ತನಾತ್ಮಕ ಹೆಜ್ಜೆಯಾಗಿದೆ. ಯುಎಸ್ ಆಚೆ ನಮ್ಮ ಪ್ರಪ್ರಥಮ ಬೃಹತ್ ಪ್ರಮಾಣದ ಐಟಿ ಸಾಮರ್ಥ್ಯ ಕೇಂದ್ರ ಸ್ಥಾಪಿಸುವ ಮೂಲಕ, ನಾವು ತಂತ್ರಜ್ಞಾನಗಳನ್ನು ವರ್ಧಿಸುವುದಕ್ಕೆ ಮಾತ್ರವಲ್ಲದೆ ಭಾರತವು ಒದಗಿಸುವ ಪ್ರತಿಭಾ ಸಮೂಹದಲ್ಲೂ ಹೂಡಿಕೆ ಮಾಡುತ್ತಿದ್ದೇವೆ. ಈ ಹೊಸ ಕೇಂದ್ರವು, ಆವಿಷ್ಕಾರಗಳನ್ನು ಬೆಂಬಲಿಸಿ, ನಮ್ಮ ಜಾಗತಿಕ ಐಟಿ ಸಾಮರ್ಥ್ಯಗಳನ್ನು ವರ್ಧಿಸಿ, ಅತ್ಯಾಧುನಿಕವಾದ ತಂತ್ರಜ್ಞಾನ-ಚಾಲಿತ ಆರೋಗ್ಯಶುಶ್ರೂಷಾ ಪರಿಹಾರಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೈದರಾಬಾದಿನ ಕ್ರಿಯಾಶೀಲ ತಂತ್ರಜ್ಞಾನ ಪರಿಸರವ್ಯವಸ್ಥೆಗೆ ಕೊಡುಗೆ ಸಲ್ಲಿಸುವುದಕ್ಕೆ ನಾವು ಕಾತರರಾಗಿದ್ದೇವೆ.” ಎಂದು ಹೇಳಿದರು.
ಪ್ರತಿಭೆಯ ಮೇಲೆ ಬಲವಾದ ಒತ್ತು ನೀಡಲಿರುವ ಕೇಂದ್ರವು, ಕೌಶಲ್ಯ ವರ್ಧನೆ, ಒಳಗೊಳ್ಳುಯ್ವಿಕೆ ಮತ್ತು ಕಾರ್ಯಪಡೆ ವೈವಿಧ್ಯತೆಯ ಮೇಲೆ ಗಮನ ಕೇಂದ್ರೀಕರಿಸಲಿದೆ. ವಿಮೆನ್ ಇನ್ ಐಟಿ(WIIT) ಮುಂತಾದ ಉಪಕ್ರಮಗಳು, ತಾಂತ್ರಿಕ ಸ್ಥಾನಗಳಲ್ಲಿ ಮಹಿಳೆಯರಿಗೆ ಬೆಂಬಲ ಒದಗಿಸಿ ಅವರಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ವಿನ್ಯಾಸಗೊಂಡಿದ್ದರೆ, ಉದ್ಯೋಗಿ ಸಂಪನ್ಮೂಲ ಗುಂಪುಗಳು(ERGs) ವೃತ್ತಿಪರ ಅಭಿವೃದ್ಧಿ, ನೆಟ್ವರ್ಕಿಂಗ್ ಮತ್ತು ತೊಡಗಿಕೊಳ್ಳುವಿಕೆಗಾಗಿ ಅವಕಾಶಗಳನ್ನು ಒದಗಿಸಲಿದೆ.