ಬೆಂಗಳೂರು : ಭಾರತದ ಅತಿದೊಡ್ಡ ಡಿಜಿಟಲ್ ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳ ವೇದಿಕೆಗಳ1 ಪೈಕಿ ಒಂದಾದ ಮೊಬಿಕ್ವಿಕ್(MobiKwik (ONE MOBIKWIK SYSTEMS LIMITED), 2024ರ ಏಪ್ರಿಲ್ ಮತ್ತು ಮೇ ತಿಂಗಳುಗಳಿಗಾಗಿ, ಮೌಲ್ಯದಲ್ಲಿ, PPI ವಾಲೆಟ್ ವ್ಯವಹಾರಗಳ ಅತಿದೊಡ್ಡ ಸಂಖ್ಯೆಯನ್ನು ದಾಖಲಿಸುವ ಮೂಲಕ ಒಂದು ಮಹತ್ತರವಾದ ಮೈಲಿಗಲ್ಲು ಸಾಧಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಕಟಿಸಿರುವ ಡೇಟಾ ಪ್ರಕಾರ, ಮೊಬಿಕ್ವಿಕ್, ವಸ್ತುಗಳು ಮತ್ತು ಸೇವೆಗಳ ಖರೀದಿಗಾಗಿ ಮಾತ್ರವಲ್ಲದೆ, ನಿಧಿ ವರ್ಗಾವಣೆಗಳಿಗೂ PPI ವಾಲೆಟ್ ಮೂಲಕ ನಡೆಸಲಾದ ಹಣಕಾಸು ವ್ಯವಹಾರಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಸಾಧಿಸಿದೆ. ಮಾರ್ಚ್ 2024ದ 11%ನಿಂದ ಏಪ್ರಿಲ್ 2024ನಲ್ಲಿ 20% ಮತ್ತು ಮೇದಲ್ಲಿ 23%ಗೆ, ಸಂಸ್ಥೆಯು ತನ್ನ ಮಾರುಕಟ್ಟೆ ಪಾಲು ಮೌಲ್ಯದಲ್ಲಿ1 ಬೆಳವಣಿಗೆಯನ್ನು ಕಂಡಿದೆ.
ಮೊಬಿಕ್ವಿಕ್ನ ಹೊಸ ಉತ್ಪನ್ನವಾದ ಪಾಕೆಟ್ ಯುಪಿಐ(Pocket UPI), ಅದರ ತಲುಪುವಿಕೆಯನ್ನು ವಿಸ್ತರಿಸುವಲ್ಲಿ ಮತ್ತು ಬಳಕೆದಾರರಿಗೆ ಪಾವತಿಯ ಸುಲಭ ವಿಧಾನವನ್ನು ತರುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ಪಾಕೆಟ್ ಯುಪಿಐ, ಬಳಕೆದಾರರು, ತಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಗೊಳಿಸದೆ ಯುಪಿಐ ಕಾರ್ಯಜಾಲದಾದ್ಯಂತ ತಮ್ಮ ವಾಲೆಟ್ಗಳ ಮೂಲಕ ತಕ್ಷಣದ ಪಾವತಿಗಳನ್ನು ಮಾಡುವುದಕ್ಕೆ ಒಂದು ಅಡಚಣೆರಹಿತ ವಿಧಾನವನ್ನು ಒದಗಿಸುವ ಮೂಲಕ ಅವರು ತಮ್ಮ ಹಣಕಾಸುಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ನೆರವಾಗಿದೆ.
ಹೆಚ್ಚುವರಿಯಾಗಿ, ಸಂಸ್ಥೆಯು, 2ನೆ ಮತ್ತು 3ನೆ ದರ್ಜೆ ನಗರಗಳಲ್ಲಿ ತನ್ನ ವೇದಿಕೆಯ ವ್ಯಾಪಕ ಅಳವಡಿಕೆಗೆ ಈ ಬೆಳವಣಿಗೆಯನ್ನು ಕಾರಣಗೊಳಿಸಿದೆ. ಇದರ ಬಳಕೆದಾರ-ಸ್ನೇಹಿ ಆಪ್ ಹಾಗೂ ವ್ಯವಹಾರದ ಭದ್ರತಾ ಕ್ರಮಗಳು ಗ್ರಾಹಕರು ಹಾಗೂ ವರ್ತಕರಿಬ್ಬರಿಗೂ ನೆರವಾಗುವ ರೀತಿಯಲ್ಲಿ ವಿನ್ಯಾಸಗೊಂಡಿವೆ.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡುತ್ತಾ, ಮೊಬಿಕ್ವಿಕ್ನ ಸಹಸ್ಥಾಪಕಿ ಮತ್ತು ಸಿಎಫ್ಒ ಉಪಾಸನಾ ಟಾಕು, “PPI ವಾಲೆಟ್ ಮಾರುಕಟ್ಟೆ ಪಾಲಿನಲ್ಲಿ ಸಂಸ್ಥೆಯ ಬೆಳವಣಿಗೆಯು, ಮಾರುಕಟ್ಟೆಗೆ ವಿನೂತನವಾದ, ಸುಭದ್ರವಾದ ಹಾಗೂ ಬಳಕೆದಾರ-ಕೇಂದ್ರಿತ ಹಣಕಾಸು ಉತ್ಪನ್ನಗಳನ್ನು ತರುವುದರ ಮೇಲಿನ ನಮ್ಮ ಗಮನಕೇಂದ್ರೀಕರಣಕ್ಕೆ ಪುರಾವೆಯಾಗಿದೆ. ತಂತ್ರಜ್ಞಾನ-ನಿರ್ದೇಶಿತ ಪರಿಹಾರಗಳ ಮೂಲಕ ಹಣಕಾಸು ಒಳಗೊಳ್ಳುವಿಕೆಯ ನಮ್ಮ ಧ್ಯೇಯೋದ್ದೇಶಕ್ಕೆ ನಾವು ಬದ್ಧರಾಗಿ ಇರುತ್ತೇವೆ.” ಎಂದು ಹೇಳಿದರು.
ಮಾರುಕಟ್ಟೆ ಪಾಲು ಕುರಿತು ವಿವರ ಒದಗಿಸುತ್ತಾ ಅವರು, “ಮೊಬಿಕ್ವಿಕ್ FASTag ನೀಡುವ ವ್ಯವಹಾರದಲ್ಲಿಲ್ಲ. FASTag –ಸಂಬಂಧಿತ ವ್ಯವಹಾರ ಮೌಲ್ಯವನ್ನು ಹೊರತುಪಡಿಸಿದ ಬಳಿಕ, ಮೇ 2024ದಲ್ಲಿ ಮೌಲ್ಯದ ಮೂಲಕ PPI ವಾಲೆಟ್ ವ್ಯವಹಾರಗಳಿಗಾಗಿ ಮೊಬಿಕ್ವಿಕ್ 48% ಮಾರುಕಟ್ಟೆ ಪಾಲು ಸಾಧಿಸಿದೆ” ಎಂದು ಸೇರಿಸಿದರು.
ಒಂದು ತಂತ್ರಗಾರಿಕೆ ಸಮಾಲೋಚನಾ ಸಂಸ್ಥೆಯಾದ RedSeer ಪ್ರಕಾರ, “ಒಂದು ಸಮಾನ ಹೋಲಿಕೆಯಲ್ಲಿ, ಮೇ 2024ದಲ್ಲಿ ಮೊಬಿಕ್ವಿಕ್ PPI ವಾಲೆಟ್ GMVದ ~48% ಪಾಲು ಹೊಂದಿದೆ. ಮೊಬಿಕ್ವಿಕ್ FASTag ಸೇವೆಗಳನ್ನು ಒದಗಿಸುವುದಿಲ್ಲ. ಪರಿಣಾಮವಾಗಿ, NETC FASTagದ GMV ಯನ್ನು ಹೋಲಿಸಿ ನೋಡಿದಾಗ, ಒಟ್ಟೂ PPI ವಾಲೆಟ್ GMVದಿಂದ ಹೊರತುಪಡಿಸಲಾಗಿದೆ. ಏಕೆಂದರೆ, ಬಹುತೇಕ ಬ್ಯಾಂಕ್ಗಳ PPI ವಾಲೆಟ್ಗಳನ್ನು ಪ್ರಧಾನವಾಗಿ, FASTag ವ್ಯವಹಾರಗಳಿಗೆ ಬಳಸಲಾಗುತ್ತದೆ. ಈ ವಿಶ್ಲೇಷಣೆಯಲ್ಲಿ, NETCದಲ್ಲಿ ದಾಖಲಾದ ಎಲ್ಲಾ FASTag ವ್ಯವಹಾರಗಳನ್ನು ಕೇವಲ ವಾಲೆಟ್ಗಳ ಮೂಲಕ ಪ್ರಕ್ರಿಯೆಗೊಳಪಡಿಸಲಾಗಿದೆ ಎಂದು ಪರಿಗಣಿಸಲಾಗಿದೆ.”
ಡಿಜಿಟಲ್ ಭಾರತ ಚಿತ್ರಣವು ವಿಕಸನಗೊಳ್ಳುತ್ತಿರುವಂತಹ ಸಂದರ್ಭದಲ್ಲಿ, ತನ್ನ ಮಾರುಕಟ್ಟೆ ಸ್ಥಾನವನ್ನು ಉಳಿಸಿಕೊಳ್ಳುವ ಮತ್ತು ಭಾರತದಲ್ಲಿ ಡಿಜಿಟಲ್ ಹಣಕಾಸಿನ ಭವಿಷ್ಯತ್ತಿಗೆ ನೆರವಾಗುವ ಗುರಿಯನ್ನು ಮೊಬಿಕ್ವಿಕ್ ಹೊಂದಿದೆ.