ಬೆಂಗಳೂರು : ಸಾವಯವ ಗ್ರೀನ್ ನೊಂದಿಗೆ ಸೇವನೆಗೆ ಸಿದ್ಧವಾಗಿರುವ ಪೇಯಗಳನ್ನು ಸಿದ್ಧಪಡಿಸುವ ಹಾನೆಸ್ಟ್ ಟೀ ಇದೀಗ ಲೇಖಕಿ, ಅಂಕಣಕಾರ್ತಿ ಮತ್ತು ಯೋಗಕ್ಷೇಮ ಉತ್ಸಾಹಿಯಾಗಿರುವ ಟ್ವಿಂಕಲ್ ಖನ್ನಾ ಅವರ ಸಹಭಾಗಿತ್ವದಲ್ಲಿ ತನ್ನ ಹೊಚ್ಚ ಹೊಸದಾದ #FindYourGood ಎಂಬ ಅಭಿಯಾನವನ್ನು ಆರಂಭಿಸಿದೆ. ಈ ಜಾಹೀರಾತು ಅಭಿಯಾನದ ಚಿತ್ರವು ಟ್ವಿಂಕಲ್ ಖನ್ನಾ ಅವರ ದೈನಂದಿನ ಜಂಜಾಟದ ಜೀವನದ ನಡುವೆ ಶಾಂತಚಿತ್ತತೆಯನ್ನು ಕಂಡುಕೊಳ್ಳುವ ಕಥನವನ್ನು ಬಿಂಬಿಸುತ್ತದೆ. ಪ್ರಸಿದ್ಧವಾದ ಮಕೈಬಾರಿ ಚಹಾ ತೋಟದಿಂದ ಸಂಗ್ರಹಿಸಿದ ಸಾವಯವ ಹಸಿರು ಚಹಾದಿಂದ ಈ #ಹಾನೆಸ್ಟ್ ಚಹಾವನ್ನು ಸಿದ್ಧಪಡಿಸಲಾಗುತ್ತಿರುವುದನ್ನು ತೋರಿಸುತ್ತದೆ.
ಸಾಮಾಜಿಕ ನಿರೀಕ್ಷೆಗಳಿಂದ ತುಂಬಿದ ಈ ಜಗತ್ತಿನಲ್ಲಿ ಪ್ರಾಮಾಣಿಕವಾದ ಚಹಾ ಅಭಿಯಾನವು ಜನರು ತಮ್ಮದೇ ಆದ ವಿಶ್ರಾಂತಿ ಸಮಯವನ್ನು ಅತ್ಯುತ್ತಮ ಸ್ವಾದದ ಚಹಾವನ್ನು ಸವಿಯುವ ಮೂಲಕ ವ್ಯಾಖ್ಯಾನಿಸಲು ಪ್ರೇರೇಪಣೆ ನೀಡುತ್ತದೆ. ಇದನ್ನು ಮತ್ತಷ್ಟು ಸ್ವಾದಿಷ್ಟಗೊಳಿಸುವ ಉದ್ದೇಶದಿಂದ ಬ್ರ್ಯಾಂಡ್ ನಿಂಬೆ-ತುಳಸಿ ಮತ್ತು ಮಾವಿನಹಣ್ಣಿನ ಎರಡು ಉತ್ತಮ ರುಚಿಯ ಸುವಾಸನೆಗಳ ಚಹಾವನ್ನು ಗ್ರಾಹಕರ ಕೈಗಿಡುತ್ತಿದೆ.
ಈ ನೂತನ ಅಭಿಯಾನವನ್ನು ಆರಂಭಿಸಲು ಹಾನೆಸ್ಟ್ ಟೀ ಸಾಮಾಜಿಕ ಚಲನಚಿತ್ರಗಳು ಮತ್ತು ಡಿಜಿಟಲ್ ಆ್ಯಕ್ಟಿವೇಶನ್ ಗಳ ಸರಣಿಗಳನ್ನು ಹೊರತರುತ್ತಿದೆ. ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಗ್ರಾಹಕರೊಂದಿಗೆ ತನ್ನನ್ನು ತೊಡಗಿಸಿಕೊಳ್ಳಲಿದೆ. ಈ ಅಭಿಯಾನದ ಪರಿಕಲ್ಪನೆಯನ್ನು WPP Open X ಸಿದ್ಧಪಡಿಸಿದ್ದು, ಟ್ವಿಂಕಲ್ ಖನ್ನಾ ತನ್ನ ದಿನನಿತ್ಯದ ಮಾಡಬೇಕಾದ ಕೆಲಸಗಳನ್ನು ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಸಂದರ್ಭವನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಅವರು ವಿಶ್ರಾಂತಿ ಪಡೆಯಲು ಕುಳಿತ್ತಿದ್ದಾಗ ಹಾನೆಸ್ಟ್ ಟೀಯನ್ನು ಗುಟುಕರಿಸುತ್ತಾ ಚಹಾದ ಸ್ವಾದವನ್ನು ಆನಂದಿಸುತ್ತಾರೆ ಮತ್ತು ನಿಮಗೆ ಯಾವುದು ಒಳ್ಳೆಯದು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮದು ಎನ್ನುತ್ತಾರೆ.
ಹಾನೆಸ್ಟ್ ಟೀ ಜೊತೆಗಿನ ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಟ್ವಿಂಕಲ್ ಖನ್ನಾ, “ಹಾನೆಸ್ಟ್ ಟೀಯ #FindYourGood ಅಭಿಯಾನದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಅತೀವ ಸಂತಸವೆನಿಸುತ್ತಿದೆ. ಈ ಅಭಿಯಾನವು ಉತ್ತಮ, ಸಮಗ್ರ ಜೀವನದ ನನ್ನ ಮಂತ್ರಕ್ಕೆ ತುಂಬಾ ಹತ್ತಿರವಾಗಿದ್ದು, ದೈನಂದಿನ ಜೀವನದಲ್ಲಿ ಸಂತೋಷ ಮತ್ತು ಸಮತೋಲನವನ್ನು ಕಂಡುಕೊಳ್ಳುವ ಪ್ರಾಮುಖ್ಯತೆಯನ್ನು ಹೇಳುತ್ತದೆ. ಹಾನೆಸ್ಟ್ ಟೀಯ ಅಭಿಯಾನವು ಆಧುನಿಕ ಮಹಿಳೆಯ ಯೋಗಕ್ಷೇಮದಲ್ಲಿ ಧನಾತ್ಮಕವಾದ ರೂಪಾಂತರವನ್ನು ತರುವ ನಿಟ್ಟಿನಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ’’ ಎಂದರು.
ಈ ಹೊಸ ಅಭಿಯಾನದ ಆರಂಭದ ಬಗ್ಗೆ ಮಾತನಾಡಿದ ಕೋಕಾಕೋಲಾ ಕಂಪನಿಯ ಇಂಡಿಯಾ ಮತ್ತು ಸೌತ್-ವೆಸ್ಟ್ ಏಷ್ಯಾ ಆಪರೇಟಿಂಗ್ ಯುನಿಟ್ ನ ಮಾರುಕಟ್ಟೆ ಹಿರಿಯ ನಿರ್ದೇಶಕರಾದ ರುಚಿರಾ ಭಟ್ಟಾಚಾರ್ಯ ಅವರು, “#FindYourGood ಅಭಿಯಾನವನ್ನು ಆರಂಭಿಸುತ್ತಿರುವುದಕ್ಕೆ ಹಾನೆಸ್ಟ್ ಟೀಗೆ ಅತ್ಯಂತ ಸಂತಸವೆನಿಸುತ್ತಿದೆ. ಈ ಅಭಿಯಾನವು ನಿಮ್ಮ ದೈನಂದಿನ ಜಂಜಾಟದ ಜೀವನದಲ್ಲಿ ಶಾಂತಿ ಮತ್ತು ಸುಂದರವಾದ ಕ್ಷಣಗಳನ್ನು ಆಚರಿಸಲು ಸಹಕಾರಿಯಾಗುತ್ತದೆ. ಟ್ವಿಂಕಲ್ ಖನ್ನಾ ಅವರೊಂದಿಗೆ ಸಹಭಾಗಿತ್ವ ಮಾಡಿಕೊಂಡಿರುವುದು ಈ ವೇಗದ ಜಗತ್ತಿನಲ್ಲಿ ಸಮತೋಲನ ಮತ್ತು ಕ್ಷೇಮದ ವೈಯಕ್ತಿಕ ಕಲ್ಪನೆಯನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿದೆ’’ ಎಂದು ಹೇಳಿದರು.
ಈ ಹೊಚ್ಚ ಹೊಸ ಅಭಿಯಾನದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿರುವ WPP Open X ನ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಮುಕುಂದ್ ಒಲೆಟಿ ಅವರು, “ನಮ್ಮ ಇತ್ತೀಚಿನ ಅಭಿಯಾನವಾಗಿರುವ #FindYourGood ನಮ್ಮಲ್ಲಿ ಅನೇಕರು ಆಗಾಗ್ಗೆ ಮರೆತುಬಿಡುವ ಒಂದು ಪ್ರಮುಖ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಇದು ನಮ್ಮ ದಿನನಿತ್ಯದ ಜೀವನದಲ್ಲಿ ಶಾಂತಿ ಮತ್ತು ಸಂತೋಷದ ಸಣ್ಣ ಸಣ್ಣ ಕ್ಷಣಗಳಿಗೆ ಸಮಯವನ್ನು ನೀಡುತ್ತದೆ. ಟ್ವಿಂಕಲ್ ಖನ್ನಾ ಅವರ ಸಹಭಾಗಿತ್ವ ಹೊಂದಿರುವುದು ನಿಜಕ್ಕೂ ಸಂತೋಷದಾಯಕ ವಿಚಾರವಾಗಿದೆ. ಮಹಿಳೆಯರ ಯೋಗಕ್ಷೇಮದ ಪ್ರತಿಪಾದಕರಾಗಿರುವ ಟ್ವಿಂಕಲ್ ಅವರು ಈ ಅಭಿಯಾನದ ಮೂಲಕ ನಾವು ಸಂವಹನ ನಡೆಸಲು ಬಯಸುವ ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳನ್ನೂ ಜನರಿಗೆ ಅವರು ಸ್ವಾಭಾವಿಕವಾಗಿ ತಿಳಿಸುವ ಜಾಣ್ಮೆಯನ್ನು ಹೊಂದಿದ್ದಾರೆ’’ ಎಂದು ತಿಳಿಸಿದರು.
ಹಾನೆಸ್ಟ್ ಟೀ ಪ್ರಸ್ತುತ ಬೆಂಗಳೂರು, ಮುಂಬೈ, ಹೈದ್ರಾಬಾದ್, ಚೆನ್ನೈ, ಪುಣೆ ಮತ್ತು ಗುರ್ಗಾಂವ್ ನಗರಗಳಲ್ಲಿ ಎಲ್ಲಾ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ. ಇದರ ಬೆಲೆ 60 ರೂಪಾಯಿ ಆಗಿದೆ. ಹಾನೆಸ್ಟ್ ಟೀ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇನ್ ಸ್ಟಾಗ್ರಾಂ ಪೇಜ್ @honestteaindia ಗೆ ಭೇಟಿ ನೀಡಿ.
Campaign film: https://www.youtube.com/watch?v=6IScKb3ZUg4