ಮಂಗಳೂರು: “ಗ್ರಾಹಕರು ಮಾರ್ಕೆಟಿನಲ್ಲಿ ರಾಜರಂತೆ,ಅವರು ತಪ್ಪು ಮಾಡುವುದಿಲ್ಲ ” ಆದುದರಿಂದ ಅವರಿಗೆ ಬೇಕಾದುದು ಕೊಡಲೇಬೇಕು; ಎಂದು ಜೇಸಿ ವಲಯದ ಹಿರಿಯ ತರಬೇತುದಾರ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಮಂಗಳೂರು ಸೈಂಟ್ ಅಲೋಶಿಯಸ್ ಐಟಿಐ ಇದರ ತರಬೇತಿ ಪಡೆದು ಹೊರ ಹೋಗುವ ವಿದ್ಯಾರ್ಥಿಗಳಿಗೆ ಜನಸಂಪರ್ಕ ಹೇಗೆ ಮಾಡುವುದು ಎಂದು ತರಬೇತಿಯನ್ನು ನೀಡಿದ್ದರು.
ಮೂಡುಬಿದಿರೆ ತ್ರಿಭುವನ್ ಜೇಸಿಸ್ ಪರವಾಗಿ ಹಮ್ಮಿಕೊಂಡ ಜೆಸಿಐ ‘ಲೀಡಿಂಗ್ ಚೇಂಜ್’ ತರಬೇತಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ರೋಶನ್ ಡಿಸೋಜ ದೀಪ ಬೆಳಗಿಸಿ ತರಬೇತಿಗೆ ಚಾಲನೆ ನೀಡಿ ಶುಭಹಾರೈಸಿದರು.
ಜೇಸಿ ಅಧ್ಯಕ್ಷರಾದ ಪ್ರದೀಪ್ ಅವರು ಅಧ್ಯಕ್ಷತೆಯನ್ನು ವಹಿಸಿ ಟಿವಿ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮದರ್ ಬೋರ್ಡ್ ಸರ್ವಿಸಸ್ ಬಗ್ಗೆ ಸಂಜೆಯವರೆಗೆ ಒಂದು ದಿನದ ಮಾಹಿತಿ ಹಾಗೂ ಹೊಸ ಆವಿಷ್ಕಾರದ ಪ್ರಾತ್ಯಕ್ಷಿಕೆ ನೀಡಿದರು.
ಉಪ ಪ್ರಾಂಶುಪಾಲರಾದ ಆಲ್ವಿನ್ ಮೆನೆಜಸ್, ತರಬೇತಿ ವಿಭಾಗದ ಹಿರಿಯರಾದ ನೋಯೆಲ್ ಲೋಬೊ, ವಿದ್ಯಾರ್ಥಿ ಲಿಯಾನ ವೇದಿಕೆಯಲ್ಲಿ ಇದ್ದರು. ತರಬೇತಿ ವಿಭಾಗದ ಹಿರಿಯರಾದ ಉಮೇಶ್ ಜೆ ಎ ನಿರೂಪಣೆ ಮಾಡಿದರು.