ಮಂಗಳೂರು : ನೀರಿನ ಬೆಲೆಯೂ ಲೀಟರ್ ಗೆ 25 ರೂ ಆಗಿದೆ. ಹಾಲಿನ ಬೆಲೆ ಜಾಸ್ತಿ ಮಾಡಬೇಕೆಂದು ರೈತರ ಒತ್ತಡವಿತ್ತು ರೈತರ ಒತ್ತಡದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿ ಹಾಲಿನ ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್.
ಕುಟುಂಬ ಸಮೇತೆ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ್ದೇನೆ, ದೇವರ ದರ್ಶನ ಮಾಡಿದ್ದೇನೆ.ರಾಜ್ಯಕ್ಕೆ ಮತ್ತು ಜನರಿಗೆ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ.ನನಗೂ ದೇವರು ಒಳ್ಳೆದು ಮಾಡಲಿ ಪ್ರಾರ್ಥಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು .