ಮಂಗಳೂರು: ಬಿಜೆಪಿಯಿಂದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ.ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ದ ಮಂಗಳೂರಿನಲ್ಲೂ ಭುಗಿಲೆದ್ದ ಆಕ್ರೋಶ.
ನಗರ ದಕ್ಷಿಣ ಬಿಜೆಪಿ ವತಿಯಿಂದ ಪ್ರತಿಭಟನೆ.ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಕಣ್ಣೂರು ಭಾಗಿಯಾಗಿದ್ದರು.
ನೂರಾರು ಬಿಜೆಪಿ ಕಾರ್ಯಕರ್ತರಿಂದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆ. ಮಾನವ ಸರಪಳಿ ನಿರ್ಮಿಸಿ ಪಿವಿಎಸ್ ವೃತ್ತ ಸಂಪೂರ್ಣ ಬಂದ್
ಪೆಟ್ರೋಲ್ ಟ್ಯಾಂಕರ್ ಮೇಲೆ ಹತ್ತಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.
ಭಾರೀ ಸಂಖ್ಯೆಯಲ್ಲಿ ಜಮಾಯಿಸಿರೋ ಪ್ರತಿಭಟನಾಕಾರರು ರಸ್ತೆ ತಡೆ ಮದ್ಯೆ ಚಲಿಸಲು ಯತ್ನಿಸಿದ ಕಾರಿಗೆ ಮುತ್ತಿಗೆ ಹಾಕಿ ಕಾರಿನ ಮುಂಭಾಗಕ್ಕೆ ಬಡಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಮುಂದಾದ ಪೊಲೀಸರು.ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ನೂಕಾಟ ತಳ್ಳಾಟ, ನಿಯಂತ್ರಿಸಲು ಪೊಲೀಸರ ಹರ ಸಾಹಸ ನಡೆಸಿದರು.ರಸ್ತೆ ಮೇಲೆ ಅಡ್ಡಲಾಗಿ ಮಲಗಲು ಯತ್ನಿಸಿದ ಕಾರ್ಯಕರ್ತರು.
ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ವಶಕ್ಕೆ ಪಡೆದ ಪೊಲೀಸರು.ರಸ್ತೆ ತಡೆ ನಡೆಸಿದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ.
ಪ್ರತಿಭಟನಾಕಾರರನ್ನು ಖಾಸಗಿ ಬಸ್ಸಿನಲ್ಲಿ ತುಂಬಿಸಿ ಕರೆದೊಯ್ದ ಪೊಲೀಸರು ಸದ್ಯ ಎಲ್ಲರನ್ನೂ ವಶಕ್ಕೆ ಪಡೆದು ಟ್ರಾಪಿಕ್ ಕ್ಲಿಯರ್ ಮಾಡಿದ ಪೊಲೀಸರು.