ಬೆಂಗಳೂರು : ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ತನ್ನ ಮುಂದಿನ ಹಂತದ ಅನುಭವಗಳನ್ನು ಒದಗಿಸುವ ಮತ್ತು ಎಐ ಸಾಮರ್ಥ್ಯ ಗಳನ್ನು1 ಹೊಂದಿರುವ 2024ನೇ ಸಾಲಿನ ಹೊಸ ಒಡಿಸ್ಸಿ ಓಎಲ್ಇಡಿ ಗೇಮಿಂಗ್ ಮಾನಿಟರ್, ಸ್ಮಾರ್ಟ್ ಮಾನಿಟರ್ಗಳು ಮತ್ತು ವ್ಯೂಫಿನಿಟಿ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಒಡಿಸ್ಸಿ ಓಎಲ್ಇಡಿ ಜಿ6 ಮತ್ತು ಸ್ಮಾರ್ಟ್ ಮಾನಿಟರ್ ಶ್ರೇಣಿಯು ಹೆಚ್ಚಿನ ಮನರಂಜನಾ ಫೀಚರ್ ಗಳೊಂದಿಗೆ ದೊರೆಯುತ್ತಿದ್ದು, ಗ್ರಾಹಕರ ಸಂತೋಷವನ್ನು ಹೆಚ್ಚಿಸಲಿದೆ. ಎಐ ಮತ್ತು ವ್ಯೂಫಿನಿಟಿ ಮಾಡೆಲ್ ಗಳಾದ ಸ್ಮಾರ್ಟ್ ಮಾನಿಟರ್ ಎಂ8 ಅತ್ಯುನ್ನತ ಕನೆಕ್ಟಿವಿಟಿ ಹೊಂದಿದ್ದು, ಸಂಪೂರ್ಣ ಉತ್ತಮ ವರ್ಕ್ ಸ್ಟೇಷನ್ ಅನ್ನು ಒದಗಿಸುತ್ತದೆ.
ಈ ಕುರಿತು ಮಾತನಾಡಿದ ಸ್ಯಾಮ್ಸಂಗ್ ಇಂಡಿಯಾದ ಗ್ರಾಹಕ ಎಲೆಕ್ಟ್ರಾನಿಕ್ಸ್ ಎಂಟರ್ಪ್ರೈಸ್ ಬ್ಯುಸಿನೆಸ್ನ ಉಪಾಧ್ಯಕ್ಷ ಶ್ರೀ ಪುನೀತ್ ಸೇಥಿ, “ನಮ್ಮ 2024ರ ಒಡಿಸ್ಸಿ ಓಎಲ್ಇಡಿ ಗೇಮಿಂಗ್ ಮಾನಿಟರ್, ವ್ಯೂಫಿನಿಟಿ ಮತ್ತು ಸ್ಮಾರ್ಟ್ ಮಾನಿಟರ್ಗಳನ್ನು ಬಿಡುಗಡೆ ಮಾಡುವ ಮೂಲಕ ನಾವು ಗ್ರಾಹಕರಿಗೆ ಉತ್ತಮ ಅನುಭವಗಳನ್ನು ಒದಗಿಸಲು ಬಯಸಿದ್ದೇವೆ. ಅದ್ಭುತವಾದ ಐ ತಂತ್ರಜ್ಞಾನಗಳು ಮತ್ತು ಮಲ್ಟಿ-ಡಿವೈಸ್ ಅನುಭವದಿಂದ ನಡೆಸಲ್ಪಡುವ ಒಡಿಸ್ಸಿ ಓಎಲ್ಇಡಿ ಗೇಮಿಂಗ್ ಮಾನಿಟರ್ ಮತ್ತು ಸ್ಮಾರ್ಟ್ ಮಾನಿಟರ್ಗಳು ಕ್ರಮವಾಗಿ ಶ್ರೇಷ್ಠ ದೃಶ್ಯಗಳನ್ನು ನೀಡುತ್ತವೆ ಮತ್ತು ಸೃಜನಶೀಲತೆಯನ್ನು ಮರುವ್ಯಾಖ್ಯಾನಿಸುತ್ತವೆ. ಕಂಪನಿ ಸ್ವಾಮ್ಯದ ವಿಶ್ವದ ಮೊದಲ ಬರ್ನ್-ಇನ್ ಪ್ರೊಟೆಕ್ಷನ್ ತಂತ್ರಜ್ಞಾನವಾದ ಓಎಲ್ಇಡಿ ಸೇಫ್ಗಾರ್ಡ್+ ಹೊಂದಿದ್ದು, ಓಎಲ್ಇಡಿ ಗೇಮಿಂಗ್ ಮಾನಿಟರ್ ಪಲ್ಸೇಟಿಂಗ್ ಹೀಟ್ ಪೈಪ್ ಅನ್ನು ಅನ್ವಯಿಸುವ ಮೂಲಕ ಇಮೇಜ್ ಬರ್ನಿಂಗ್ ಅನ್ನು ತಡೆಯುತ್ತದೆ” ಎಂದು ಹೇಳಿದರು.
ಒಡಿಸ್ಸಿ ಓಎಲ್ಇಡಿ ಸರಣಿ: ಹೊಸ ಬರ್ನ್-ಇನ್ ಪ್ರಿವೆನ್ಶನ್ ಫೀಚರ್ ಜೊತೆಗೆ ಉತ್ಕೃಷ್ಟ ದೃಶ್ಯ ಪ್ರದರ್ಶನ
ಒಡಿಸ್ಸಿ ಓಎಲ್ಇಡಿ ಜಿ6 27″ ಕ್ಯೂಎಚ್ಡಿ (2560 x 1440) ರೆಸೆಲ್ಯೂಶನ್ ಮಾನಿಟರ್ ಆಗಿದ್ದು, ಇದು 16:9 ಆಕಾರ ರೇಶಿಯೋ ಹೊಂದಿದೆ. ಇದರ 360Hz ರಿಫ್ರೆಶ್ ರೇಟ್ ಮತ್ತು 0.03ಎಂಎಸ್ ಜಿಟಿಜಿ ರೆಸ್ಪಾನ್ಸ್ ಟೈಮ್ ನಿಂದಾಗಿ ವೇಗವಾಗಿ ಆಟವಾಡಲು ಬಯಸುವ ಗೇಮರುಗಳಿಗೆ ಸುಲಭವಾಗಿಸುತ್ತದೆ, ಅತ್ಯುನ್ನತ ಅನುಭವ ಒದಗಿಸುತ್ತದೆ.
ಹೊಸ ಒಡಿಸ್ಸಿ ಓಎಲ್ಇಡಿ ಮಾಡೆಲ್ ಸ್ಯಾಮ್ಸಂಗ್ ಓಎಲ್ಇಡಿ ಸೇಫ್ಗಾರ್ಡ್+ ಅನ್ನು ಹೊಂದಿದ್ದು, ಇದು ಕಂಪನಿ ಸ್ವಾಮ್ಯದ ಹೊಸ ಬರ್ನ್-ಇನ್ ಪ್ರೊಟೆಕ್ಷನ್ ತಂತ್ರಜ್ಞಾನವಾಗಿದೆ. ಮಾನಿಟರ್ಗೆ ಪಲ್ಸೇಟಿಂಗ್ ಹೀಟ್ ಪೈಪ್ ಅನ್ನು ಅನ್ವಯಿಸುವ ಮೂಲಕ ಬರ್ನ್-ಇನ್ ಅನ್ನು ತಡೆಯುವ ಈ ತಂತ್ರಜ್ಞಾನವು ಪ್ರಪಂಚದಲ್ಲಿಯೇ ಮೊದಲನೆಯದಾಗಿದೆ. ಹೆಚ್ಚುವರಿಯಾಗಿ ಇದರಲ್ಲಿರುವ ಡೈನಾಮಿಕ್ ಕೂಲಿಂಗ್ ಸಿಸ್ಟಮ್ ಶಾಖವನ್ನು ಕಡಿಮೆ ಮಾಡಲು ಕೂಲೆಂಟ್ ಅನ್ನು ಆವಿಯಾಗಿಸುತ್ತದೆ ಮತ್ತು ಘನೀಕರಿಸುತ್ತದೆ, ಇದು ಹಳೆಯ ಗ್ರ್ಯಾಫೈಟ್ ಶೀಟ್ ವಿಧಾನಕ್ಕಿಂತ ಐದು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ತಾಪಮಾನವನ್ನು ಕಡಿಮೆ ಮಾಡುವ ಮೂಲಕ ಬರ್ನ್-ಇನ್ ಅನ್ನು ತಡೆಯುತ್ತದೆ. ಮಾನಿಟರ್ ಲೋಗೊಗಳು ಮತ್ತು ಟಾಸ್ಕ್ ಬಾರ್ಗಳಂತಹ ಸ್ಥಿರ ಚಿತ್ರಗಳನ್ನು ಸಹ ಪತ್ತೆ ಮಾಡುತ್ತದೆ, ಅಟೋಮ್ಯಾಟಿಕ್ ಆಗಿ ಬರ್ನ್-ಇನ್ ತಡೆಗಟ್ಟುವಿಕೆಯ2 ಇನ್ನೊಂದು ವಿಧಾನದ ಮೂಲಕ ಅದರ ಬ್ರೈಟ್ ನೆಸ್ ಅನ್ನು ಕಡಿಮೆ ಮಾಡುತ್ತದೆ.
ಒಡಿಸ್ಸಿ ಓಎಲ್ಇಡಿ ಜಿ6 ಅಪೂರ್ವವಾದ ಓಎಲ್ಇಡಿ ಪಿಚ್ಚರ್ ಕ್ವಾಲಿಟಿ ಅನ್ನು 250 nits (ಟೈಪ್) ಬ್ರೈಟ್ ನೆಸ್ ಅಲ್ಲಿ ನೀಡುತ್ತದೆ. ಜೊತೆಗೆ ಫ್ರೀಸಿಂಕ್ ಪ್ರೀಮಿಯಂ ಪ್ರೊ, ಜಿಪಿಯು ಮತ್ತು ಡಿಸ್ಪ್ಲೇ ಪ್ಯಾನೆಲ್ ಅನ್ನು ಸಿಂಕ್ ಮಾಡಿ ಅಸ್ಥಿರತೆ, ಸ್ಕ್ರೀನ್ ನಿಧಾನ ಅಥವಾ ಲ್ಯಾಗ್ ಆಗುವುದು ಮತ್ತು ಸ್ಕ್ರೀನ್ ಟಿಯರ್ ಅಥವಾ ಹರಿದು ಹೋಗುವುದನ್ನು ತಡೆಯುತ್ತದೆ.
ಸ್ಯಾಮ್ಸಂಗ್ನ ಹೊಸ ಓಎಲ್ಇಡಿ ಗ್ಲೇರ್ ಫ್ರೀ ಟೆಕ್ನಾಲಜಿ3 ನಿಖರವಾದ ಬಣ್ಣ ಸಂಯೋಜನೆಯನ್ನು ಒದಸುತ್ತದೆ ಮತ್ತು ಹಗಲು ಹೊತ್ತಿನಲ್ಲಿಯೂ ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ಒದಗಿಸಲು ಚಿತ್ರದ ತೀಕ್ಷ್ಣತೆಯನ್ನು ನಿರ್ವಹಣೆ ಮಾಡುತ್ತಿರುವಾಗ ರಿಫ್ಲೆಕ್ಷನ್ ಅಥವಾ ಪ್ರತಿಫಲನಗಳನ್ನು ಕಡಿಮೆ ಮಾಡುತ್ತದೆ. ಓಎಲ್ಇಡಿ-ಆಪ್ಟಿಮೈಸ್ಡ್, ಲೋ-ರಿಫ್ಲೆಕ್ಷನ್ ಕೋಟಿಂಗ್ ವಿಶೇಷವಾಗಿ ಹಾರ್ಡ್-ಕೋಟಿಂಗ್ ಲೇಯರ್ ಮತ್ತು ಸರ್ಫೇಸ್ ಕೋಟಿಂಗ್ ಪ್ಯಾಟರ್ನ್ ಹೊಂದಿದ್ದು, ಹೊಳಪು ಮತ್ತು ರಿಫ್ಲೆಕ್ಷನ್ ನಡುವೆ ಹೊಂದಾಣಿಕೆ ಮಾಡಿಸುತ್ತದೆ.
ಮಾನಿಟರ್ ಸೂಪರ್ ಸ್ಲಿಮ್ ಮೆಟಲ್ ವಿನ್ಯಾಸವನ್ನು ಹೊಂದಿದೆ. ಅದರಿಂದ ಮಾನಿಟರ್ ವಿಶಿಷ್ಟವಾದ ಅಸ್ಮಿತೆಯನ್ನು ಗಳಿಸಿದೆ. ಕೋರ್ ಲೈಟಿಂಗ್+ ಫೀಚರ್ ಸ್ಕ್ರೀನ್ ಜೊತೆಗೆ ವಾತಾವರಣದ ಲೈಟ್ ಅನ್ನು ಒಂದಕ್ಕೊಂದು ಸರಿಗೂಡಿಸುವ ಮೂಲಕ ಉತ್ಕೃಷ್ಟ ಮನರಂಜನೆ ಮತ್ತು ಗೇಮಿಂಗ್ ಅನುಭವಗಳನ್ನು ಒದಗಿಸುತ್ತದೆ. ಎರ್ಗಾನಾಮಿಕ್ ಸ್ಟ್ಯಾಂಡ್ ಎತ್ತರವನ್ನು ಅಡ್ಜಸ್ಟ್ ಮಾಡಬಹುದಾಗಿರುವುದರಿಂದ, ಜೊತೆಗೆ ಟಿಲ್ಟ್ ಮತ್ತು ಸ್ವಿವೆಲ್ ಬೆಂಬಲ ಇರುವುದರಿಂದ ದೀರ್ಘ ಕಾಲದವರೆಗೆ ಆರಾಮದಾಯಕವಾಗಿ ಈ ಮಾನಿಟರ್ ಬಳಸಬಹುದಾಗಿದೆ.
ಹೊಸ ಒಡಿಸ್ಸಿ ಓಎಲ್ಇಡಿ ಮಾನಿಟರ್ ಸ್ಯಾಮ್ಸಂಗ್ನ ಓಎಲ್ಇಡಿ ಮಾನಿಟರ್ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸಲು ಸಿದ್ಧವಾಗಿದೆ. ಸ್ಯಾಮ್ಸಂಗ್ ಮೊದಲ ಓಎಲ್ಇಡಿ ಮಾಡೆಲ್4 ಅನ್ನು ಅನಾವರಣ ಮಾಡಿದ ಕೇವಲ ಒಂದು ವರ್ಷದೊಳಗೆ ಓಎಲ್ಇಡಿ ಮಾನಿಟರ್ ಮಾರುಕಟ್ಟೆಯಲ್ಲಿ ಜಾಗತಿಕ ಮಾರಾಟದಲ್ಲಿ ಟಾಪ್ ಸ್ಥಾನವನ್ನು ಗಳಿಸಿತ್ತು, ಇದು ಆ ಬಳಿಕ ಬರುತ್ತಿರುವ ಮೊದಲ ಓಎಲ್ಇಡಿ ಮಾನಿಟರ್ ಆಗಿದೆ. ಈ ಸಾಧನೆಯು ಓಎಲ್ಇಡಿ ಮಾನಿಟರ್ಗಳ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಸ್ಯಾಮ್ಸಂಗ್ನ ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅದರ ಗೇಮಿಂಗ್ ಮಾನಿಟರ್ ಶ್ರೇಣಿಯನ್ನು ಕಂಪನಿ ಸ್ವಾಮ್ಯದ ಓಎಲ್ಇಡಿ ತಂತ್ರಜ್ಞಾನದ ಜೊತೆಗೆ ಒದಗಿಸುವ ಮಾಡೆಲ್ ಗಳನ್ನು ನೀಡುವ ಮೂಲಕ ಕಂಪನಿಯು ವೈವಿಧ್ಯಮಯ ಉತ್ಪನ್ನ ಒದಗಿಸುವ ತನ್ನ ಬದ್ಧತೆಯನ್ನು ಸಾರಿದೆ.
ಸ್ಮಾರ್ಟ್ ಮಾನಿಟರ್ ಎಂ8: ಎಐ ಸಾಮರ್ಥ್ಯಗಳನ್ನು ಬಳಸಿಕೊಂಡು ಕ್ರಿಸ್ಟಲ್ ಕ್ಲಿಯರ್ ವೀಡಿಯೊ ಮತ್ತು ಆಡಿಯೋ
ನವೀಕರಿಸಿದ ಈ ಸ್ಮಾರ್ಟ್ ಮಾನಿಟರ್ ಶ್ರೇಣಿಯು ಉತ್ತಮ ಮನರಂಜನೆ ಮತ್ತು ಹೆಚ್ಚಿನ ಉತ್ಪಾದಕತೆ ಒದಗಿಸಲು ಸಂಪೂರ್ಣ ಮಲ್ಟಿ-ಡಿವೈಸ್ ಅನುಭವವನ್ನು ಒಂದು ಹಬ್ ಆಗಿ ಒಂದೆಡೆ ಸೇರಿಸುತ್ತದೆ. ನವೀಕರಿಸಿದ 2024ರ ಮಾಡೆಲ್ ಗಳಲ್ಲಿ ಎಂ8 (ಎಂ80ಡಿ ಮಾಡೆಲ್), ಎಂ7 (ಎಂ70ಡಿ ಮಾಡೆಲ್) ಮತ್ತು ಎಂ5 (ಎಂ50ಡಿ ಮಾಡೆಲ್)ಗಳು ಸೇರಿವೆ.
ಅಪ್ಗ್ರೇಡ್ ಮಾಡಲಾದ 32” 4ಕೆ ಯುಎಚ್ಡಿ ಸ್ಮಾರ್ಟ್ ಮಾನಿಟರ್ ಆದ ಎಂ8, ಎನ್ಕ್ಯೂಎಂ ಎಐ ಪ್ರೊಸೆಸರ್ ಹೊಂದಿದ್ದು, ಎಐ ಚಾಲಿತ ಅನೇಕ ಹೊಸ ಫೀಚರ್ ಗಳನ್ನು ಒದಗಿಸುತ್ತದೆ. ಮೂಲಕ ಮನರಂಜನೆಯ ಅನುಭವಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಎಐ ಸಾಮರ್ಥ್ಯದಿಂದಾಗಿ ಕಡಿಮೆ ರೆಸಲ್ಯೂಶನ್ ಇರುವ ದೃಶ್ಯ ಕೂಡ 4ಕೆ5 ಸಮೀಪದ ಗುಣಮಟ್ಟದಲ್ಲಿ ನೋಡಬಹುದಾಗಿದೆ. ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊ ಎಐ ಅನ್ನು ಬಳಸಿಕೊಂಡು ಬಳಕೆದಾರರ ವಾತಾವರಣದಲ್ಲಿರುವ ಹಿನ್ನೆಲೆ ಶಬ್ದವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಸಂವಾದವನ್ನು ಅತ್ಯುತ್ತಮಗೊಳಿಸುತ್ತದೆ6. 360 ಆಡಿಯೊ ಮೋಡ್7 ಎಂ8 ನಲ್ಲಿ ಲಭ್ಯವಿದ್ದು, ಇದು ಗ್ಯಾಲಕ್ಸಿ ಬಡ್ಸ್ ಜೊತೆ ಅತ್ಯುತ್ತಮವಾಗಿ ಹೊಂದಿಕೊಂಡು ಅದ್ಭುತವಾದ ಆಡಿಯೋ ಸೌಕರ್ಯವನ್ನು ಒದಗಿಸುತ್ತದೆ. ಅಂತರ್ನಿರ್ಮಿತವಾದ ಸ್ಲಿಮ್ ಫಿಟ್ ಕ್ಯಾಮೆರಾ ಮೂಲಕ ಸ್ಯಾಮ್ ಸಂಗ್ ಡೆಕ್ಸ್8 ಮೊಬೈಲ್ ಆಪ್ ಬಳಸಿಕೊಂಡು ಸುಲಭವಾಗಿ ಮತ್ತು ಸ್ಪಷ್ಟವಾಗಿ ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.
ಈ ಹೊಸ ಫೀಚರ್ ಗಳು ಈಗಾಗಲೇ ಉತ್ಕೃಷ್ಟವಾಗಿರುವ ಸ್ಮಾರ್ಟ್ ಮಾನಿಟರ್ ಕಾರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪಿಸಿ ಜೊತೆ ಬೂಟ್ ಮಾಡುವ ಅಥವಾ ಇತರ ಸಾಧನಗಳ10 ಜೊತೆ ಸಂಪರ್ಕಿಸುವ ಅಗತ್ಯವಿಲ್ಲದೆಯೇ ಸ್ಮಾರ್ಟ್ ಟಿವಿ ಆಪ್ ಗಳು ಮತ್ತು ಸ್ಯಾಮ್ ಸಂಗ್ ಟಿವಿ ಪ್ಲಸ್9 ಮೂಲಕ ವ್ಯಾಪಕ ಶ್ರೇಣಿಯ ಸ್ಟ್ರೀಮಿಂಗ್ ಸೇವೆಗಳು ಮತ್ತು ಲೈವ್ ವಿಷಯಗಳ ಪ್ರಸಾರವನ್ನು ನೋಡಬಹುದಾಗಿದೆ.
ಎಂ7 32″ ಮತ್ತು 43″ ನಲ್ಲಿ ಲಭ್ಯವಿದ್ದು, 4ಕೆ ಯುಎಚ್ಡಿ (3840 x 2160) ರೆಸಲ್ಯೂಶನ್, 300 nits (ಟೈಪ್) ಬ್ರೈಟ್ನೆಸ್ ಮತ್ತು 4ಎಂಎಸ್ ನಷ್ಟು ಗ್ರೇ ಟು ಗ್ರೇ (ಜಿಟಿಜಿ) ರೆಸ್ಪಾನ್ಸ್ ಟೈಮ್ ಹೊಂದಿದೆ. ಎಂ5, ಎಫ್ಎಚ್ಡಿ ರೆಸಲ್ಯೂಶನ್ (1920 x 1080), 250 nits (ಟೈಪ್) ಮತ್ತು 4ಎಂಎಸ್ ನ ಜಿಟಿಜಿ ರೆಸ್ಪಾನ್ಸ್ ಟೈಮ್ ಹೊಂದಿದ್ದು, 27″ ಮತ್ತು 32″ ನಲ್ಲಿ ಲಭ್ಯವಿದೆ.
ವ್ಯೂಫಿನಿಟಿ ಸೀರೀಸ್: ಗರಿಷ್ಠ ಸೃಜನಶೀಲತೆ ಮತ್ತು ಬಳಸಲು ಸುಲಭ
ಕ್ರಿಯೇಟರ್ ಗಳು ಮತ್ತು ವೃತ್ತಿಪರರಿಗಾಗಿ ಸಿದ್ಧಗೊಳಿಸಲಾಗಿದೆ ಮತ್ತು ಜವಾಬ್ದಾರಿಯುತ ಅಭ್ಯಾಸಗಳೊಂದಿಗೆ ನಿರ್ಮಿಸಲಾಗಿದೆ. ಹೊಚ್ಚ ಹೊಸ ವ್ಯೂಫಿನಿಟಿ ಶ್ರೇಣಿಯು ವ್ಯೂಫಿನಿಟಿ ಎಸ್8 (ಎಸ್80ಯುಡಿ ಮತ್ತು ಎಸ್80ಡಿ ಮಾಡೆಲ್ ಗಳು), ವ್ಯೂಫಿನಿಟಿ ಎಸ್7 (ಎಸ್70ಡಿ ಮಾಡೆಲ್) ಮತ್ತು ವ್ಯೂಫಿನಿಟಿ ಎಸ್6 (ಎಸ್60ಯುಡಿ ಮತ್ತು ಎಸ್60ಡಿ ಮಾಡೆಲ್ ಗಳು) ಅನ್ನು ಒಳಗೊಂಡಿದೆ.
ನವೀಕರಿಸಿದ 2024ರ ವ್ಯೂಫಿನಿಟಿ ಮಾನಿಟರ್ ಗಳು11 ಮರುಬಳಕೆಯ ಪ್ರಯತ್ನಗಳಿಗೆ ಪೂರಕವಾಗಿ ಸಿದ್ಧಗೊಂಡಿದೆ. ಈ ಮಾನಿಟರ್ ಗಳನ್ನು ಕನಿಷ್ಠ 10% ಮರುಬಳಕೆಯ ಪ್ಲಾಸ್ಟಿಕ್ನೊಂದಿಗೆ ಮತ್ತು ಪ್ಲಾಸ್ಟಿಕ್ ಘಟಕಗಳ ಮೇಲೆ ಯಾವುದೇ ರಾಸಾಯನಿಕ ಸ್ಪ್ರೇ ಬಳಸದೆ ಸಿದ್ಧಗೊಳಿಸಲಾಗುತ್ತದೆ. ಸುಲಭವಾಗಿ ಡಿಸ್ಅಸೆಂಬಲ್ ಮಾಡಲು ಪ್ಯಾಕೇಜಿಂಗ್ ಸ್ಟೇಪಲ್ಸ್ ಬದಲಿಗೆ ಅಂಟು ಬಳಸಲಾಗುತ್ತದೆ.
ಈಸಿ ಸೆಟಪ್ ಸ್ಟ್ಯಾಂಡ್ ಅನ್ನು ಒಂದು ಸುಲಭವಾದ ಕ್ಲಿಕ್ನಲ್ಲಿ ಜೋಡಿಸಲಾಗಿದೆ. ಯಾವುದೇ ಪರಿಕರಗಳು ಅಥವಾ ಸ್ಕ್ರೂಗಳ ಅಗತ್ಯವಿಲ್ಲದೆ ಜೋಡಿಸಬಹುದಾಗಿದೆ. ಆ ಮೂಲಕ ವೇಗವಾಗಿ ಮತ್ತು ಸುಲಭವಾಗಿ ಹೊಂದಿಸಿ ವ್ಯೂಫಿನಿಟಿ ಮಾನಿಟರ್ ನ ರೋಮಾಂಚಕ ಗುಣಮಟ್ಟವನ್ನು ಆನಂದಿಸುವಂತೆ ಮಾಡುತ್ತದೆ. ಪ್ರತಿ 2024ರ ವ್ಯೂಫಿನಿಟಿ ಮಾನಿಟರ್ ಎಚ್ಡಿಆರ್10 ಸಪೋರ್ಟ್ ಮಾಡುತ್ತದೆ ಮತ್ತು 1 ಬಿಲಿಯನ್ ಬಣ್ಣಗಳನ್ನು ಬೆಂಬಲಿಸುತ್ತದೆ. ಆ ಮೂಲಕ ನಿಖರವಾದ ಬಣ್ಣ ಸಂಯೋಜನೆಗಲನ್ನು ಒದಗಿಸುತ್ತದೆ. ಹಾಗೆಯೇ ಟಿಯುವಿ-ರೆಇನ್ ಲ್ಯಾಂಡ್-ಪ್ರಮಾಣೀಕೃತ ಇಂಟೆಲಿಜೆಂಟ್ ಐ ಕೇರ್ ಫೀಚರ್ ಗಳನ್ನು ಹೊಂದಿದ್ದು, ಅದು ದೀರ್ಘಾವಧಿಯ ಕೆಲಸದ ಅವಧಿಯಲ್ಲಿ ಕಣ್ಣಿಗೆ ಆಯಾಸವಾಗದಿರುವಂತೆ ನೋಡಿಕೊಳ್ಳುತ್ತದೆ.
ವ್ಯೂಫಿನಿಟಿ ಎಸ್8 27″ ಮತ್ತು 32″ ಸ್ಕ್ರೀನ್ ಆಯ್ಕೆಗಳನ್ನು ನೀಡುತ್ತದೆ. ಪ್ರತಿಯೊಂದೂ 4ಕೆ ಯುಎಚ್ಡಿ (3840 x 2160) ರೆಸಲ್ಯೂಶನ್, 60Hz ನ ರಿಫ್ರೆಶ್ ರೇಟ್ ಮತ್ತು 350 nits (ಟೈಪ್.) ಬ್ರೈಟ್ ನೆಸ್ ಹೊಂದಿದೆ. ಸುಲಭ ಸಂಪರ್ಕ ಅಥವಾ ಕನೆಕ್ಟಿವಿಟಿಗಾಗಿ ಯು ಎಸ್ ಬಿ ಹಬ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಸ್ಟ್ಯಾಂಡ್ ಅನ್ನು ಸಹ ಅವು ಒಳಗೊಂಡಿರುತ್ತವೆ. ಎಸ್80 ಯುಡಿ ಮಾಡೆಲ್ ಹೊಸ ಕೆವಿಎಂ ಸ್ವಿಚ್ ಅನ್ನು ಹೊಂದಿದ್ದು, ಅದು ಎರಡು ವಿಭಿನ್ನ ಇನ್ಪುಟ್ ಸಾಧನಗಳ ನಡುವೆ ಸುಲಭವಾದ ಸಂಪರ್ಕ ಸಾಧಿಸಲು ಮತ್ತು ಬದಲಿಸಿಕೊಳ್ಳುವ ಸೌಕರ್ಯ ನೀಡುತ್ತದೆ. ಹಾಗೆಯೇ ಯು ಎಸ್ ಬಿ ಪೋರ್ಟ್ 90 ಡಬ್ಲ್ಯೂವರೆಗಿನ ಶಕ್ತಿಯ ಸಾಧನಗಳನ್ನು ಬಳಸಿಕೊಂಡು ಚಾರ್ಜ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.
ವ್ಯೂಫಿನಿಟಿ ಎಸ್7 27″ ಮತ್ತು 32″ ಆಯ್ಕೆಗಳಲ್ಲಿ ಲಭ್ಯವಿದೆ. ಪ್ರತಿಯೊಂದೂ ಯುಎಚ್ಡಿ 4ಕೆ (3840 x 2160) ರೆಸಲ್ಯೂಶನ್, 350 nits ನ ಬ್ರೈಟ್ ನೆಸ್ (ಟೈಪ್.) ಮತ್ತು 60Hz ನ ರಿಫ್ರೆಶ್ ರೇಟ್ ಹೊಂದಿದೆ. ವ್ಯೂಫಿನಿಟಿ ಎಸ್6, 24″, 27″ ಮತ್ತು 32″ ಆಯ್ಕೆಗಳಲ್ಲಿ ಲಭ್ಯವಿದ್ದು, ಪ್ರತಿಯೊಂದೂ ಕ್ಯೂಎಚ್ಡಿ (2560 x 1440) ರೆಸಲ್ಯೂಶನ್, 100Hz ನ ರಿಫ್ರೆಶ್ ರೇಟ್ ಮತ್ತು 350 nits (ಟೈಪ್.) ಬ್ರೈಟ್ ನೆಸ್, ಯು ಎಸ್ ಬಿ ಹಬ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಸ್ಟ್ಯಾಂಡ್ ಹೊಂದಿದೆ. ಎಸ್60 ಯುಡಿ ಮಾಡೆಲ್ ಅಂತರ್ನಿರ್ಮಿತ ಕೆವಿಎಂ ಸ್ವಿಚ್ ಮತ್ತು ಯು ಎಸ್ ಬಿ-ಸಿ ಪೋರ್ಟ್ ಅನ್ನು ಸಹ ಒಳಗೊಂಡಿದೆ. (90 ಡಬ್ಲ್ಯೂ ವರೆಗೆ ಚಾರ್ಜಿಂಗ್ ಮಾಡಬಹುದಾಗಿದೆ)
ಬೆಲೆ ಮತ್ತು ಲಭ್ಯತೆ
• ಕಪ್ಪು ಬಣ್ಣದಲ್ಲಿ ಲಭ್ಯವಿರುವ ಒಡಿಸ್ಸಿ ಓಎಲ್ಇಡಿ ಜಿ6 ಆರಂಭಿಕ ಬೆಲೆ ರೂ.92399ರಲ್ಲಿ ಲಭ್ಯವಿರುತ್ತದೆ
• ಸ್ಮಾರ್ಟ್ ಮಾನಿಟರ್ ಸರಣಿಯು ಆರಂಭಿಕ ಬೆಲೆ ರೂ.15399 ರಲ್ಲಿ ಲಭ್ಯವಿರುತ್ತದೆ
• ವ್ಯೂಫಿನಿಟಿ ಶ್ರೇಣಿಯ ಮಾನಿಟರ್ಗಳು ಆರಂಭಿಕ ಬೆಲೆ ರೂ. 21449 ರಲ್ಲಿ ಲಭ್ಯವಿರುತ್ತದೆ
ಸ್ಯಾಮ್ ಸಂಗ್ ಇ-ಮಳಿಗೆಯಲ್ಲಿ ಈ ಎಲ್ಲಾ ಮಾನಿಟರ್ ಗಳು ಜೂನ್ 5, 2024ರಿಂದ ಲಭ್ಯವಿರುತ್ತವೆ.
ಗ್ರಾಹಕರು ಸ್ಯಾಮ್ಸಂಗ್ನ ಅಧಿಕೃತ ಆನ್ಲೈನ್ ಸ್ಟೋರ್ ಸ್ಯಾಮ್ ಸಂಗ್ ಶಾಪ್, ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಎಲ್ಲಾ ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ಮಾನಿಟರ್ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು https://www.samsung.com/in/monitors/gaming/ ಗೆ ಭೇಟಿ ನೀಡಿ
ಆಫರ್ ಗಳು
ಒಡಿಸ್ಸಿ ಓಎಲ್ಇಡಿ ಜಿ6 ಮತ್ತು ಸ್ಮಾರ್ಟ್ ಮಾನಿಟರ್ ಸರಣಿಗಳನ್ನು ಸ್ಯಾಮ್ಸಂಗ್ ಇ-ಸ್ಟೋರ್ನಿಂದ ಜೂನ್ 5 ಮತ್ತು ಜೂನ್ 11 ರ ನಡುವೆ ಖರೀದಿಸಿದರೆ ರೂ. 2750 ರವರೆಗಿನ ತ್ವರಿತ ಕಾರ್ಟ್ ರಿಯಾಯಿತಿ ಜೊತೆಗೆ ನೋ-ಕಾಸ್ಟ್ ಇಎಂಐ ಲಭ್ಯವಿರುತ್ತದೆ. ಸ್ಯಾಮ್ ಸಂಗ್ ನ ಇ-ಸ್ಟೋರ್ನಿಂದ ಸ್ಮಾರ್ಟ್ ಮಾನಿಟರ್ ಎಂ8 ಅನ್ನು ಖರೀದಿಸಿದರೆ, ಗ್ರಾಹಕರು ಸ್ಯಾಮ್ ಸಂಗ್ ಸೌಂಡ್ ಬಾರ್ ಅನ್ನು ಪಡೆಯುತ್ತಾರೆ ಮತ್ತು ಓಎಲ್ಇಡಿ ಜಿ6 ಜೊತೆಗೆ, ಗ್ರಾಹಕರು ಸ್ಯಾಮ್ ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಪಡೆಯುತ್ತಾರೆ.
ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಈ ಮಾಡೆಲ್ ಗಳ ಮೇಲೆ ರೂ. 11100 ವರೆಗಿನ ರಿಯಾಯಿತಿ ಇದೆ.