ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ, ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್ ಗಳನ್ನು ಘೋಷಿಸಿದೆ. ಟಿ20 ಕ್ರಿಕೆಟ್ ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯುವ ಸಲುವಾಗಿ ‘ಬಿಗ್ ಟಿವಿ ಡೇಸ್’ ಮಾರಾಟ ಪರಿಚಯಿಸಲಾಗಿದೆ.
‘ಬಿಗ್ ಟಿವಿ ಡೇಸ್’ ಆಫರ್ ಸಮಯದಲ್ಲಿ ಸ್ಯಾಮ್ಸಂಗ್ ಟಿವಿಗಳನ್ನು ಖರೀದಿಸುವ ಗ್ರಾಹಕರು ಅವರು ಖರೀದಿಸಿದ ಟಿವಿಯನ್ನು ಅವಲಂಬಿಸಿ ರೂ. 89990 ಮೌಲ್ಯದ ಸೆರಿಫ್ ಟಿವಿ ಅಥವಾ ರೂ.79990 ಮೌಲ್ಯದ ಸೌಂಡ್ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಗ್ರಾಹಕರು ರೂ.2990ದಿಂದ ಆರಂಭವಾಗುವ ಸುಲಭ ಇಎಂಐ ಸೌಲಭ್ಯವನ್ನು ಪಡೆಯಬಹುದು ಮತ್ತು 20%ವರೆಗಿನ ಕ್ಯಾಶ್ಬ್ಯಾಕ್ ಅನ್ನು ಕೂಡ ಪಡೆಯಬಹುದು. ಈ ಆಫರ್ ಗಳು Samsung.com, ಪ್ರಮುಖ ರಿಟೇಲ್ ಅಂಗಡಿಗಳು ಮತ್ತು ಹಲವಾರು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುತ್ತವೆ. ರಾಷ್ಟ್ರವ್ಯಾಪಿ ಇರುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಫರ್ಗಳು ಜೂನ್ 1 ರಿಂದ ಆರಂಭವಾಗುತ್ತದೆ ಮತ್ತು ಜೂನ್ 30, 2024ಕ್ಕೆ ಕೊನೆಗೊಳ್ಳಲಿದೆ. ಆಫರ್ಗಳು 98″/85″/83″/77″/75″ ಗಾತ್ರಗಳ ನಿಯೋ ಕ್ಯೂಎಲ್ಇಡಿ, ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಶ್ರೇಣಿಯ ಆಯ್ದ ಮಾಡೆಲ್ಗಳ ಮೇಲೆ ಲಭ್ಯವಿದೆ.
ಸ್ಯಾಮ್ಸಂಗ್ ಗ್ರಾಹಕರ ಟಿವಿ ವೀಕ್ಷಣೆ ಅನುಭವವನ್ನು ಅತ್ಯುನ್ನತಗೊಳಿಸಲು ಮತ್ತು ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ಒದಗಿಸಲು ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕ್ರಾಂತಿಕಾರಕ ಶಕ್ತಿಯನ್ನು ಪರಿಚಯಿಸಿದೆ. ಈ ಟೆಲಿವಿಷನ್ಗಳು ಎಐ ಬಳಕೆಯ ಮೂಲಕ ಮನೆಯ ಮನರಂಜನಾ ಅನುಭವಕ್ಕೆ ಹೊಸ ರೂಪ ನೀಡಲಿದೆ. ಸುಸ್ಥಿರತೆ ಮತ್ತು ಹೆಚ್ಚಿನ ಭದ್ರತೆ ಒದಗಿಸುತ್ತದೆ.
ಈ ಕುರಿತು ಸ್ಯಾಮ್ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬ್ಯುಸಿನೆಸ್ನ ಹಿರಿಯ ಉಪಾಧ್ಯಕ್ಷ ಮೋಹನ್ದೀಪ್ ಸಿಂಗ್, “ಟಿ20 ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ದೊಡ್ಡ ಗಾತ್ರದ ಪರದೆ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವಕ್ಕೆ ಬೇಡಿಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ‘ಬಿಗ್ ಟಿವಿ ಡೇಸ್’ ಮಾರಾಟವನ್ನು ಸೂಕ್ತವಾಗಿ ಆಯೋಜಿಸಲಾಗಿದೆ. ನಿಯೋ ಕ್ಯೂಎಲ್ಇಡಿ, ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿಗಳು ಸೇರಿದಂತೆ ನಮ್ಮ ಅಲ್ಟ್ರಾ-ಪ್ರೀಮಿಯಂ ಶ್ರೇಣಿಯ ಟಿವಿಗಳನ್ನು ಅತ್ಯಾಕರ್ಷಕ ಕೊಡುಗೆಗಳ ಜೊತೆಗೆ ನೀಡುವ ಮೂಲಕ ನಮ್ಮ ಗ್ರಾಹಕರಿಗೆ ತಮ್ಮ ಮನೆಗಳಲ್ಲಿ ನೇರವಾಗಿ ಕ್ರೀಡಾಂಗಣದಲ್ಲಿಯೇ ಕ್ರಿಕೆಟ್ ನೋಡುವಂತೆ ಅನ್ನಿಸುವ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಅತ್ಯಾಧುನಿಕ ಎಐ-ಚಾಲಿತ ಟೆಲಿವಿಷನ್ಗಳಲ್ಲಿ ನಮ್ಮ ಗ್ರಾಹಕರು ಅಸಾಧಾರಣ ದೃಶ್ಯ ಗುಣಮಟ್ಟ, ಅಪೂರ್ವ ಆಡಿಯೋ ಮತ್ತು ಸಪೂರ ವಿನ್ಯಾಸಗಳನ್ನು ನಿರೀಕ್ಷೆ ಮಾಡಬಹುದು. ಇದಲ್ಲದೆ ಎಐ ಬಳಕೆಯಿಂದ 8ಕೆ ಎಐ ಅಪ್ಸ್ಕೇಲಿಂಗ್ ಮತ್ತು ಎಐ ಮೋಷನ್ ಎನ್ ಹ್ಯಾನ್ಸರ್ ಪ್ರೊ ನಂತಹ ಫೀಚರ್ ಗಳು ಕ್ರಿಕೆಟ್ ನೇರಪ್ರಸಾರದ ಸಂದರ್ಭದಲ್ಲಿ ಬಾಲ್ ಅನ್ನು ಸ್ಪಷ್ಟವಾಗಿ ಕಾಣಿಸುವ ಮೂಲಕ ಗ್ರಾಹಕರಿಗೆ ಅದ್ಭುತ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ” ಎಂದು ಹೇಳಿದರು.
ಸ್ಯಾಮ್ಸಂಗ್ ಕಂಪನಿಯು ಭಾರತೀಯ ಗ್ರಾಹಕರಿಗಾಗಿಯೇ ಪ್ರಾದೇಶಿಕವಾಗಿ ಸಿದ್ಧಗೊಳಿಸಲಾದ ಸ್ಮಾರ್ಟ್ ಅನುಭವಗಳನ್ನು ನೀಡಲು ಈ ಟಿವಿಗಳಲ್ಲಿ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್ನೆಸ್ನಂತಹ ಸೌಲಭ್ಯಗಳನ್ನು ಒದಗಿಸಿದೆ. ಕ್ಲೌಡ್ ಗೇಮಿಂಗ್ ಸೇವೆಯು ಬಳಕೆದಾರರಿಗೆ ಯಾವುದೇ ಕನ್ಸೋಲ್ ಅಥವಾ ಪಿಸಿ ಅಗತ್ಯವಿಲ್ಲದೆಯೇ ಎಎಎ ಗೇಮ್ ಗಳನ್ನು ಪ್ಲಗ್ ಮತ್ತು ಪ್ಲೇ ಮೂಲಕ ಆಡಲು ಅನುವು ಮಾಡಿಕೊಡುತ್ತದೆ. ಸ್ಯಾಮ್ಸಂಗ್ ಎಜುಕೇಶನ್ ಹಬ್ ಬಳಕೆದಾರರಿಗೆ ಲೈವ್ ತರಗತಿಗಳ ಜೊತೆಗೆ ದೊಡ್ಡ ಪರದೆಯ ಕಲಿಕೆಯನ್ನು ಒದಗಿಸುತ್ತಿದ್ದು, ನಿಮ್ಮ ಮಕ್ಕಳಿಗೆ ಹೆಚ್ಚು ಸಂವಾದಾತ್ಮಕ ಮತ್ತು ಖುಷಿದಾಯ ಕಲಿಕೆಯ ಸೌಲಭ್ಯ ಒದಗಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟಿವಿ ಕೀ ಕ್ಲೌಡ್ ಸೇವೆಯ ಮೂಲಕ ಕ್ಲೌಡ್ ಮೂಲಕ ವಿಷಯದ ನೇರ ಪ್ರಸಾರವನ್ನು ಒದಗಿಸುವುದರಿಂದ ಗ್ರಾಹಕರಿಗೆ ಇನ್ನು ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯ ಇರುವುದಿಲ್ಲ. ಸ್ಯಾಮ್ಸಂಗ್ ಟಿವಿ ಪ್ಲಸ್ ಫೀಚರ್ ಸುದ್ದಿ, ಚಲನಚಿತ್ರಗಳು, ಮನರಂಜನೆ ಮತ್ತು ಇತ್ಯಾದಿಗಳನ್ನು ವೀಕ್ಷಿಸಲು 100+ ಚಾನಲ್ಗಳನ್ನು ಉಚಿತವಾಗಿ ಒದಗಿಸುತ್ತದೆ.
ನಿಯೋ ಕ್ಯೂಎಲ್ಇಡಿ 8ಕೆ
ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಎನ್ಕ್ಯೂ8 ಎಐ ಜೆನ್2 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸುತ್ತದೆ. ಅದು ಎಐ-ಆಧರಿತ ಅನುಭವವನ್ನು ಒದಗಿಸುತ್ತದೆ ಮತ್ತು ಜೀವನದಷ್ಟೇ ಸ್ಪಷ್ಟವಾಗಿರುವ ಚಿತ್ರ ಗುಣಮಟ್ಟವನ್ನು ನಿಡುತ್ತದೆ. ಎನ್ಕ್ಯೂ8 ಎಐ ಜೆನ್2 ಪ್ರೊಸೆಸರ್, 256 ಎಐ ನ್ಯೂರಲ್ ನೆಟ್ವರ್ಕ್ಗಳಿಂದ ಚಾಲಿತವಾಗಿದ್ದು, ನೀವು ಓಟಿಟಿ ನೋಡುತ್ತಿರಲಿ, ನಿಮ್ಮ ಮೆಚ್ಚಿನ ವೀಡಿಯೊ ಗೇಮ್ ಗಳನ್ನು ಆಡುತ್ತಿರಲಿ ಅಥವಾ ಲೈವ್ ಕ್ರೀಡೆಗಳನ್ನು ವೀಕ್ಷಿಸುತ್ತಿರಲಿ ಎಲ್ಲಾ ಸಂದರ್ಭಗಳಲ್ಲೂ 8ಕೆ ಅನುಭವವನ್ನು ನೀಡುವಂತಹ ದೃಶ್ಯ ಮತ್ತು ಆಡಿಯೋ ಎರಡನ್ನೂ ಒದಗಿಸಲು ಸಹಾಯ ಮಾಡುತ್ತದೆ. ಸ್ಯಾಮ್ಸಂಗ್ ನ ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಮೋಷನ್ ಆಕ್ಸಲೇಟರ್ ಟರ್ಬೋ ಪ್ರೋ ಫೀಚರ್ ಹೊಂದಿದ್ದು, ಅದು ಹೆಚ್ಚಿನ ವೇಗದ ಗೇಮಿಂಗ್ ಆಡುವ ಸಂದರ್ಭದಲ್ಲಿ ದೃಶ್ಯಗಳನ್ನು ಸ್ಥಿರವಾಗಿ ಕಾಣಿಸುತ್ತದೆ ಮತ್ತು ಅಪೂರ್ವ ವೇಗವನ್ನು ಒದಗಿಸುತ್ತದೆ.
ನಿಯೋ ಕ್ಯೂಎಲ್ಇಡಿ 4ಕೆ 2024
ನಿಯೋ ಕ್ಯೂಎಲ್ಇಡಿ 4ಕೆ ಉತ್ಪನ್ನ ಶ್ರೇಣಿಯು ಎನ್ಕ್ಯೂ4 ಎಐ ಜೆನ್2 ಪ್ರೊಸೆಸರ್ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಪ್ರೊಸೆಸರ್ ಯಾವುದೇ ವಿಷಯವನ್ನು ಅದ್ಭುತವಾದ 4ಕೆ ದೃಶ್ಯಾವಳಿಯಲ್ಲಿ ತೋರಿಸುತ್ತದೆ ಮತ್ತು ಪ್ರತೀ ದೃಶ್ಯಕ್ಕೂ ಜೀವ ತುಂಬುತ್ತದೆ. ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಮತ್ತಷ್ಟು ಶಕ್ತಿ ತುಂಬಲ್ಪಟ್ಟಿದ್ದು, ಸಂಕೀರಣ ದೃಶ್ಯಗಳಲ್ಲಿಯೂ ಅತ್ಯುತ್ತಮ ದೃಶ್ಯ ವೈಭವವನ್ನು ಒದಗಿಸುತ್ತದೆ. ವಿಶ್ವದ ಮೊದಲ ಪ್ಯಾನ್ ಟೋನ್ ಮೌಲ್ಯೀಕರಿಸಿದ ಡೌಸ್ ಪ್ಲೇ ಅದ್ಭುತವಾಗಿ ಸ್ಪಷ್ಟವಾಗಿ ಬಣ್ಣಗಳನ್ನು ಕಾಣಿಸುತ್ತದೆ. ಆಡಿಯೋ ಅನುಭವ ಉನ್ನತೀಕರಿಸಲು ಡಾಲ್ಬಿ ಅಟ್ಮೋಸ್ ವ್ಯಸ್ಥೆ ಇದೆ. ಒಟ್ಟಾರೆ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಗಳು ಅತ್ಯಪೂರ್ವ 4ಕೆ ಅನುಭವ ನೀಡುತ್ತವೆ.
ಕ್ಯೂಎಲ್ಇಡಿ ಟಿವಿ
ಸ್ಯಾಮ್ಸಂಗ್ನ ಕ್ಯೂಎಲ್ಇಡಿ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅತ್ಯದ್ಭುತ ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. 100% ಬಣ್ಣ ಸ್ಪಷ್ಟತೆ ಹೊಂದಿರುವುದರಿಂದ ಈ ಟಿವಿ, ಎಷ್ಟೇ ಬ್ರೈಟ್ ನೆಸ್ ಇದ್ದರೂ ಜಾಸ್ತಿ ಮಾಡಿದರೂ ಕಡಿಮೆ ಇದ್ದರೂ ಸೂಕ್ತವಾದ ಬಣ್ಣಗಳನ್ನೇ ಕಾಣಿಸುತ್ತವೆ. ಇದರ ಅಲ್ಟ್ರಾ-ಸ್ಲಿಮ್ ವಿನ್ಯಾಸವು ಯಾವುದೇ ರೀತಿ ಮನೆಯೊಳಗೆ ಸುಂದರವಾಗಿ ಕಾಣಿಸುತ್ತದೆ. ನೀವು ವಾಸಿಸುವ ಸ್ಥಳದ ಸೊಬಗನ್ನು ಹೆಚ್ಚಿಸುತ್ತದೆ.
ಓಎಲ್ಇಡಿ ಟಿವಿ
ಪ್ರಪಂಚದ ಮೊದಲ ಗ್ಲೇರ್-ಫ್ರೀ ಓಎಲ್ಇಡಿ ಟಿವಿ ಯಾವುದೇ ರೀತಿಯ ಬೆಳಕು ಇದ್ದರೂ ಗಾಢ ಕಪ್ಪು ಮತ್ತು ಸ್ಪಷ್ಟ ದೃಶ್ಯಗಳನ್ನು ಪ್ರಸಾರ ಮಾಡುವಾದ ಯಾವುದೇ ರೀತಿಯ ಅನಗತ್ಯ ರಿಫ್ಲೆಕ್ಷನ್ ಗಳನ್ನು (ಪ್ರತಿಬಿಂಬ) ಕಾಣಿಸುವುದಿಲ್ಲ. ಈ ಟಿವಿಗಳೂ ಅದೇ ಅಸಾಧಾರಣ ಎನ್ಕ್ಯೂ4 ಎಐ ಜೆನ್2 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಸ್ಯಾಮ್ಸಂಗ್ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್ಹಾನ್ಸರ್ ಮತ್ತು ಓಎಲ್ಇಡಿ ಎಚ್ ಡಿ ಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರಿಂದ ದೃಶ್ಯದ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುತ್ತದೆ. ಜೊತೆಗೆ ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ಫೀಚರ್ ಸುಗಮ ಚಲನೆ ಮತ್ತು ವೇಗದ ತ್ವರಿತ ಪ್ರತಿಕ್ರಿಯೆ ಸೌಲಭ್ಯ ಒದಗಿಸುತ್ತಿದ್ದು, ಆದ್ದರಿಂದಲೇ ಸ್ಯಾಮ್ ಓಎಲ್ಇಡಿ ಗೇಮಿಂಗ್ಗೆ ಸೂಕ್ತ ಆಯ್ಕೆಯಾಗಿದೆ. ಸಪೂರವಾದ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ಮನೆಯಲ್ಲಿ ಎಲ್ಲಿ ಟಿವಿ ಇಟ್ಟಿದ್ದೀರೋ ಆ ಸ್ಥಳದ ಸೊಬಗು ಹೆಚ್ಚಿಸುತ್ತದೆ.
ಯುಎಚ್ಡಿ ಟಿವಿ
ಸ್ಯಾಮ್ಸಂಗ್ನ ಯುಎಚ್ಡಿ ಟಿವಿ ವಿಶಿಷ್ಟವಾದ ಕ್ರಿಸ್ಟಲ್ ಕಲರ್ ತಂತ್ರಜ್ಞಾನ ಹೊಂದಿದ್ದು, ಬಣ್ಣಗಳಿಗೆ ಜೀವ ತುಂಬುತ್ತದೆ, ಪ್ರತಿ ಛಾಯೆಯಲ್ಲೂ ಸೂಕ್ಷ್ಮ ವಿವರಗಳನ್ನು ಕಾಣಿಸುತ್ತದೆ ಮತ್ತು ಜೀವನದಂತೆಯೇ ಏರಿಳಿತಗಳನ್ನು ಒದಗಿಸುತ್ತದೆ. ಮೋಷನ್ ಆಕ್ಸಲೇಟರ್ ಫೀಚರ್ ವೇಗವಾಗಿ ಚಲಿಸುವ ದೃಶ್ಯಗಳನ್ನು ಸುಗಮವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿ ಗೇಮ್, ಚಲನಚಿತ್ರ ಅಥವಾ ಯಾವುದೋ ಶೋ ಅನ್ನು ಹೆಚ್ಚು ಸೊಗಸಾಗಿ ಕಾಣಿಸುತ್ತದೆ ಮತ್ತು ಆನಂದಿಸುವಂತೆ ಮಾಡುತ್ತದೆ.