ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಫ್55 5ಜಿ ಅನ್ನು ಬಿಡುಗಡೆ ಮಾಡಿದೆ. ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಫ್55 5ಜಿ ಸೂಪರ್ ಅಮೋಲ್ಡ್+ ಡಿಸ್ಪ್ಲೇ, ಶಕ್ತಿಶಾಲಿ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್, 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್, 4 ಜನರೇಷನ್ ಆಂಡ್ರಾಯ್ಡ್ ಅಪ್ ಡೇಟ್ ಗಳು ಮತ್ತು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳಂತಹ ವಿಭಾಗ-ಶ್ರೇಷ್ಠ ಫೀಚರ್ ಗಳನ್ನು ಹೊಂದಿದ್ದು, ಬಳಕೆದಾರರು ಮುಂದಿನ ಹಲವು ವರ್ಷಗಳ ಕಾಲ ಹೊಸ ಫೀಚರ್ ಮತ್ತು ಹೆಚ್ಚಿನ ಭದ್ರತೆಯನ್ನು ಹೊಂದಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ರಾಜು ಪುಲ್ಲನ್, “ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿಯೇ ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ ಮಾದರಿಯ ಕ್ಲಾಸಿ ವೀಗನ್ ಲೆದರ್ ವಿನ್ಯಾಸವನ್ನು ನೀಡಲಾಗುತ್ತಿದೆ. ಸ್ಯಾಡಲ್ ಸ್ಟಿಚ್ ಪ್ಯಾಟರ್ನ್ ಜೊತೆಗೆ ಕ್ಲಾಸಿ ವೀಗನ್ ಲೆದರ್ ಬ್ಯಾಕ್ ಪ್ಯಾನೆಲ್ ಮತ್ತು ಗೋಲ್ಡನ್ ಹ್ಯೂನಲ್ಲಿರುವ ಕ್ಯಾಮೆರಾ ಡೆಕೋ ಈ ಫೋನ್ ಅನ್ನು ಅತ್ಯಪೂರ್ವವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಕ್ ಎಂಬ ಎರಡು ಆಕರ್ಷಕರ ಬಣ್ಣಗಳಲ್ಲಿ ಬರಲಿದೆ. ಇದರ ಜೊತೆಗೆ, ಸೂಪರ್ ಅಮೋಲ್ಡ್+ 120ಹರ್ಟ್ಜ್ ಡಿಸ್ಪ್ಲೇ, ಶಕ್ತಿಯುತ ಸ್ನಾಪ್ಡ್ರಾಗನ್ ಪ್ರೊಸೆಸರ್ ಹಾಗೂ 4 ಜನರೇಷನ್ ಗಳ ಓಎಸ್ ಅಪ್ ಡೇಟ್ ಗಳು, ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಮತ್ತು ನಾಕ್ಸ್ ಸೆಕ್ಯೂರಿಟಿ ಫೀಚರ್ ಗಳನ್ನು ಹೊಂದಿದೆ. ಈ ಮೂಲಕ ಸ್ಯಾಮ್ಸಂಗ್ ತನ್ನ ಗ್ರಾಹಕರಿಗೆ ಉನ್ನತ-ಶ್ರೇಣಿಯ ಅನುಭವಗಳನ್ನು ಒದಗಿಸಲಿದೆ” ಎಂದು ಹೇಳಿದರು.
ಕ್ಲಾಸಿ ವೀಗನ್ ಲೆದರ್ ಡಿಸೈನ್
ಈ ವಿಭಾಗದಲ್ಲಿಯೇ ಇರುವ ಅತಿ ಸಪೂರ ಮತ್ತು ವೀಗನ್ ಲೆದರ್ ಸ್ಮಾರ್ಟ್ಫೋನ್ಗಳಲ್ಲಿ ಗ್ಯಾಲಕ್ಸಿ ಎಫ್55 5ಜಿ ಒಂದಾಗಲಿದೆ. ಮಂತ್ರಮುಗ್ಧಗೊಳಿಸುವಂತೆ ವಿನ್ಯಾಸಗೊಳಿಸಲಾಗಿರುವ ಗ್ಯಾಲಕ್ಸಿ ಎಫ್55 5ಜಿ ವಿಶಿಷ್ಟವಾದ ಸ್ಯಾಡಲ್ ಸ್ಟಿಚ್ ಮಾದರಿ ಜೊತೆಗೆ ಕ್ಲಾಸಿ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಹೊಂದಿದೆ. ಕ್ಯಾಮೆರಾ ಡೆಕೊ ಗೋಲ್ಡನ್ ಬಣ್ಣದಲ್ಲಿ ಬರುತ್ತದೆ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಂಕ್ ಎಂಬ ಎರಡು ಮನಮೋಹಕ ಬಣ್ಣಗಳ ಆಯ್ಕೆಗಳು ಲಭ್ಯವಿದೆ. ಸ್ಮಾರ್ಟ್ಫೋನ್ ಕೇವಲ 180 ಗ್ರಾಂ ತೂಗುತ್ತದೆ ಮತ್ತು 7.8ಎಂಎಂ ಅಗಲ ಹೊಂದಿದ್ದು, ನಯವಾಗಿದೆ ಹಾಗೂ ಬಳಸುವಾಗ ಅದ್ಭುತ ಅನುಭವ ಉಂಟು ಮಾಡಲಿದೆ.
ಅತ್ಯಪೂರ್ವ ಡಿಸ್ಪ್ಲೇ
6.7″ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್+ ಡಿಸ್ಪ್ಲೇ ಹೊಂದಿರುವ ಗ್ಯಾಲಕ್ಸಿ ಎಫ್55 5ಜಿ ಗ್ರಾಹಕರಿಗೆ ಅತ್ಯದ್ಭುತ ದೃಶ್ಯ ವೈಭವ ಮತ್ತು ಸೊಗಸಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ದೊಡ್ಡ ಡಿಸ್ಪ್ಲೇಯು 1000 ನಿಟ್ಗಳ ಸಾಮರ್ಥ್ಯದ ಹೆಚ್ಚಿನ ಬ್ರೈಟ್ನೆಸ್ ಹೊಂದಿದೆ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಬಳಕೆದಾರರು ತಮ್ಮ ಮೊಬೈಲ್ ಅನ್ನು ಅಡೆತಡೆಯಿಲ್ಲದೆ ವೀಕ್ಷಣೆ ಮಾಡಬಹುದಾಗಿದೆ. 120ಹರ್ಟ್ಜ್ ರಿಫ್ರೆಶ್ ದರ ಹೊಂದಿದ್ದು, ಟೆಕ್ ಸ್ಯಾವಿ ಜೆನ್-ಝಡ್ ಮತ್ತು ಮಿಲೇನಿಯಲ್ ಗ್ರಾಹಕರು ಸುಲಭವಾಗಿ ಆಹ್ಲಾದಕರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೋಲಿಂಗ್ ಮಾಡಬಹುದಾಗಿದೆ.
ಶಕ್ತಿಯುತ ಪ್ರೊಸೆಸರ್
ಗ್ಯಾಲಕ್ಸಿ ಎಫ್55 5ಜಿ 4ಎನ್ಎಂ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್ ಹೊಂದಿದ್ದು, ಬಳಕೆದಾರರಿಗೆ ನಿರರ್ಗಳವಾಗಿ ಮಲ್ಟಿ ಟಾಸ್ಕಿಂಗ್ ಮಾಡುವ ಅವಕಾಶ ಒದಗಿಸುತ್ತದೆ. 5ಜಿಯ ಅಪ್ರತಿಮ ವೇಗ ಮತ್ತು ಸಂಪರ್ಕ ಇರುವ ಕಾರಣ ಬಳಕೆದಾರರು ಎಲ್ಲಿಗೆ ಹೋದರೂ ಕನೆಕ್ಟೆಡ್ ಆಗಿರಬಹುದು ಮತ್ತು ಸಂಪರ್ಕದಲ್ಲಿರಬಹುದು. ವೇಗವಾಗಿ ಡೌನ್ಲೋಡ್, ಸುಗಮ ಸ್ಟ್ರೀಮಿಂಗ್ ಮತ್ತು ನಿರರ್ಗಳವಾಗಿ ಬ್ರೌಸಿಂಗ್ ಮಾಡಬಹುದು. ಪ್ರೊಸೆಸರ್ ಉತ್ತಮ ಗುಣಮಟ್ಟದ ಆಡಿಯೋ ಮತ್ತು ದೃಶ್ಯಗಳನ್ನು ನೀಡುವುದರ ಜೊತೆಗೆ ಹೈಸ್ಪೀಡ್ ಕನೆಕ್ಟಿವಿಟಿ ಹೊಂದಿದ್ದು, ಸೊಗಸಾದ ಮೊಬೈಲ್ ಗೇಮಿಂಗ್ ಅನುಭವವನ್ನು ನೀಡುತ್ತದೆ.
ನೈಟೋಗ್ರಫಿ ಕ್ಯಾಮೆರಾ
ಗ್ಯಾಲಕ್ಸಿ ಎಫ್55 5ಜಿ ಹೆಚ್ಚಿನ ರೆಸೆಲ್ಯೂಶನ್ ಹೊಂದಿರುವ ಮತ್ತು ಶೇಕ್-ಫ್ರೀ ಅಂದ್ರೆ ಕೈಅಲುಗಾಡಿದರೂ ಸ್ಪಷ್ಟವಾದ ವೀಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಬಹುದಾದ 50 ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಕೈ ನಡುಕ ಅಥವಾ ಆಕಸ್ಮಿಕ ಅಲುಗಾಟಗಳಿಂದ ಉಂಟಾಗುವ ಮಸುಕುತನವನ್ನು ತೊಡೆಯುತ್ತದೆ. ಕ್ಯಾಮೆರಾ ಸೆಟಪ್ 8ಎಂಪಿ ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ವಿಶೇಷವಾಗಿ ಗ್ಯಾಲಕ್ಸಿ ಎಫ್55 5ಜಿ ನೈಟೋಗ್ರಫಿ ಫೀಚರ್ ಜೊತೆಗೆ ಬರುತ್ತದೆ, ಈ ಫೀಚರ್ ಕಡಿಮೆ-ಬೆಳಕಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ವಿವರವಾದ, ತೀಕ್ಷ್ಣವಾದ ಸೆಲ್ಫಿ ತೆಗೆಯಲು 50ಎಂಪಿ ಸಾಮರ್ಥ್ಯದ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಸೂಪರ್-ಫಾಸ್ಟ್ ಚಾರ್ಜಿಂಗ್
ಗ್ಯಾಲಕ್ಸಿ ಎಫ್55 5ಜಿ ಪ್ಯಾಕ್ಗಳು 5000ಎಂಎಎಚ್ ಬ್ಯಾಟರಿ ಹೊಂದಿದೆ. ಅದರಿಂದ ದೀರ್ಘ ಕಾಲ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆ ಮಾಡಬಹುದಾಗಿದೆ. ಗ್ಯಾಲಕ್ಸಿ ಎಫ್55 5ಜಿ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಆರಾಮಾಗಿ ಮೊಬೈಲ್ ಬಳಸಲು, ಸಂಪರ್ಕದಲ್ಲಿರಲು, ಮನರಂಜನೆ ನೀಡಲು ಮತ್ತು ಉತ್ಪಾದಕತೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.
ಗ್ಯಾಲಕ್ಸಿ ಅನುಭವ
ಗ್ಯಾಲಕ್ಸಿ ಎಫ್55 5ಜಿ ಅತ್ಯುತ್ತಮ ದರ್ಜೆಯ, ರಕ್ಷಣಾ ವ್ಯವಸ್ಥೆಯಾದ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಬರುತ್ತದೆ. ಹಾಗಾಗಿ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನ ಗೌಪ್ಯತೆ ಮತ್ತು ಸುರಕ್ಷತೆಗೆ ಬಂದಾಗ ಚಿಂತೆ-ಮುಕ್ತವಾಗಿ ಇರಬಹುದಾಗಿದೆ. ಗ್ಯಾಲಕ್ಸಿ ಎಫ್55 5ಜಿ ಸ್ಯಾಮ್ಸಂಗ್ನ ಅತ್ಯಂತ ನವೀನ ಸೆಕ್ಯೂರಿಟಿ ಫೀಚರ್ ಗಳಲ್ಲಿ ಒಂದಾದ ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಅನ್ನು ಹೊಂದಿದ್ದು, ಈ ಹಾರ್ಡ್ವೇರ್ ಆಧರಿತ ಭದ್ರತಾ ವ್ಯವಸ್ಥೆಯು ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ.
ಗ್ಯಾಲಕ್ಸಿ ಎಫ್55 5ಜಿ, ಹಲವಾರು ಹೊಸ ಆವಿಷ್ಕಾರಗಳನ್ನು ಹೊಂದಿದೆ. ಇದರ ವಾಯ್ಸ್ ಫೋಕಸ್ ಫೀಚರ್ ವಾತಾವರಣದಲ್ಲಿನ ಶಬ್ದವನ್ನು ಕಡಿತಗೊಳಿಸಿ ಅದ್ಭುತ ಕರೆ ಅನುಭವ ನೀಡುತ್ತದೆ ಮತ್ತು ಆ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲಿದೆ. ಕ್ವಿಕ್ ಶೇರ್ ವೈಶಿಷ್ಟ್ಯವು ಬಳಕೆದಾರರಿಗೆ ಫೈಲ್ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್ಗಳನ್ನು ನಿಮ್ಮ ಲ್ಯಾಪ್ಟಾಪ್ ಮತ್ತು ಟ್ಯಾಬ್ ಸೇರಿದಂತೆ ಯಾವುದೇ ಸಾಧನ ಅದು ದೂರದಲ್ಲಿದ್ದರೂ ಕೂಡ ತ್ವರಿತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್55 5ಜಿ ನೊಂದಿಗೆ ನಾಲ್ಕು ಜನರೇಷನ್ ಗಳ ಓಎಸ್ ಅಪ್ ಡೇಟ್ ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳನ್ನು ಒದಗಿಸುತ್ತಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚಿನ ಭದ್ರತೆಯನ್ನು ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.
ಮೆಮೊರಿ ವೇರಿಯಂಟ್ ಗಳು, ಬೆಲೆ, ಲಭ್ಯತೆ
ಗ್ಯಾಲಕ್ಸಿ ಎಫ್55 5ಜಿ ಫ್ಲಿಪ್ ಕಾರ್ಟ್, Samsung.com ಮತ್ತು ಆಯ್ದ ರಿಟೇಲ್ ಅಂಗಡಿಗಳಲ್ಲಿ 3 ಸ್ಟೋರೇಜ್ ವೇರಿಯಂಟ್ ಗಳಲ್ಲಿ ಲಭ್ಯವಿರುತ್ತದೆ.
ಉತ್ಪನ್ನ ವೇರಿಯಂಟ್ ಗಳು ಬೆಲೆ ಆಫರ್ ಗಳು ನಿವ್ವಳ ಪರಿಣಾಮಕಾರಿ ಬೆಲೆ
ಗ್ಯಾಲಕ್ಸಿ ಎಫ್55 5ಜಿ 8GB+128GB ರೂ. 26999 ಬಹು ಬ್ಯಾಂಕ್ ಕಾರ್ಡ್ಗಳ ಮೇಲೆ ರೂ. 2000 ತ್ವರಿತ ರಿಯಾಯಿತಿ [ಎಚ್ ಡಿ ಎಫ್ ಸಿ ಬ್ಯಾಂಕ್ / ರೂ. 24999 ಆಕ್ಸಿಸ್ ಬ್ಯಾಂಕ್ / ಐಸಿಐಸಿಐ ಬ್ಯಾಂಕ್]
8GB+256GB ರೂ. 29999 ರೂ. 27999
12GB+256GB ರೂ. 32999 ರೂ. 30999
ಹೆಚ್ಚುವರಿಯಾಗಿ, ಸೀಮಿತ ಅವಧಿಯ ಕೊಡುಗೆಯಾಗಿ, ಗ್ರಾಹಕರು ಕೇವಲ ರೂ. 499ಕ್ಕೆ 45ಡಬ್ಲ್ಯೂ ಸ್ಯಾಮ್ ಸಂಗ್ ಟ್ರಾವೆಲ್ ಅಡಾಪ್ಟರ್ ಅಥವಾ ಕೇವಲ ರೂ. 1999 ನಲ್ಲಿ ಗ್ಯಾಲಕ್ಸಿ ಫಿಟ್3 ಅನ್ನು ಪಡೆಯಬಹುದು. ಗ್ಯಾಲಕ್ಸಿ ಎಫ್55 5ಜಿ ಮೇ 27ರ ಸಂಜೆ 7ಗಂಟೆ ನಂತರ ಆರಂಭಿಕ ಮಾರಾಟಕ್ಕೆ ಲಭ್ಯವಿರುತ್ತದೆ.